ಡಾ ಡೋ ನಾ ವೆಂಕಟೇಶ-Metamorphosis

ಕಾವ್ಯ ಸಂಗಾತಿ

Metamorphosis

ಡಾ ಡೋ ನಾ ವೆಂಕಟೇಶ

ಕಡು ಕಪ್ಪು ಕಂಬಳಿ ಹುಳ
ನೋಡ ನೋಡುತ್ತಾ ಬಣ್ಣ
ಬಣ್ಣದ ಚಿಟ್ಟೆ
ಬೆಳೆಯುತ್ತ ಬೆಳೆಯುತ್ತಾ
ಕನಸಿನ ಕನ್ಯೆ
ಮನದನ್ನೆ ಮುತ್ತು ಮತ್ತಿನ
ಚನ್ನೆ
ಕಣ್ಣು ಮೂಗು ಬಾಯಿ
ಮುತ್ತಿನ ತುತ್ತು
ಎಲ್ಲಿ ಕಳೆಯಿತೇ ಹೊಳಪು
ಆ ಝಲಕು

ಕಾಲ ಸರಿದಂತೆ
ಯೌವನ ಮುಂದುವರೆದಂತೆ
ಪ್ರಿಯೆ ಎಂದು ಕರೆಯದಂತೆ
ಮತ್ತೇನೆಂದು ಭ್ರಮಿಸಲಿ ನಿನ್ನ!

ಓ ನನ್ನ ಮಾಜಿ ಚಿನ್ನ
ಒರೆ ಹಾಕಿದರೆ
ಜ್ವಾಲಾಮುಖಿಯ
ತಾಪ
ಹುಸಿ ಕೋಪ

ಪಶ್ಚಾತ್ತಾಪದಾಕ್ರೋಶ
ಪದೋನ್ನತಿ ನಿರಂತರ
ಮುಂದಿನ ದಿನ ವಾರ ವರ್ಷ

ಅಲ್ಲಿ ಅಜ್ಜಿ
ಇಲ್ಲೊಬ್ಬ ಅಜ್ಜ
ಮುಂದಿನ ದಿನ ವರ್ಷ ಕಾಲ
ಪದೋನ್ನತಿ –
ಉತ್ಕರ್ಷ !


2 thoughts on “ಡಾ ಡೋ ನಾ ವೆಂಕಟೇಶ-Metamorphosis

  1. ವಯಸ್ಸೆಂಬುದು ಬರಿ ಸಂಖ್ಯೇ ಕಾಣಾಣ್ಣ ,
    ಮನಕ್ಕೆ ಮುಪ್ಪಿಲ್ಲ ಇದುವೇ ಜೀವನ ನೋಡಣ್ಣ.
    ( ನನಗೆ ನಿಮ್ಮ ಕವನ ಹೇಳಿದ್ದು)

Leave a Reply

Back To Top