ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಒಲವಿನ ಭೇಟಿ

ಆಸೀಫಾ

asifa

white and yellow daisies

ಮಂದಹಾಸದ ಮುಖವೇನೋ ಶಾಂತವಿತ್ತು
ಕಂಗಳು ಸಾವಿರಸಾವಿರ ಮಾತು ಹೇಳುತ್ತಿತ್ತು
ಮನದ ತಲ್ಲಣಗಳು ಮುಖವಾಡ ಧರಿಸಿತ್ತು
ಅಸಹಾಯಕತೆ ನನ್ನಲಿ ತಾಂಡವಾಡುತಿತ್ತು

ಪರಿಚಿತ ಸ್ಪರ್ಷವೊಂದು ನನ್ನ ಕರೆದಂತಿತ್ತು
ಅಧರದ ಸಕ್ಕರೆ ಸವಿವ ಬಯಕೆಯು
ಇರಿದಿರಿದು ತಿವಿದು ಕೊಲ್ಲುವಂತಿತ್ತು
ಮತ್ತದೇ ಅಸಹಾಯಕತೆ ಕಾಡುತಿತ್ತು

ನೋಡಿದಷ್ಟೂ ನೋಡಬೇಕೆನಿಸುವ ನೋಟ
ಕಣ್ಣುಕಣ್ಣಲ್ಲೇ ಸಂಭಾಷಣೆಯ ಸವಿಯೂಟ
ಸನಿಹ ಸರಿದುಹೋದಾಗ ಹೆಚ್ಚಿದ ಪುಳಕ
ಜಗಕೆ ಕಾಣದು ಪ್ರೇಮದ ವಿಚಿತ್ರ ಹೋರಾಟ

ಬಹುದಿನಗಳ ನಂತರದ ಮುಖಾಮುಖಿ ಭೇಟಿ
ಹಸಿರಾಗಿಸಿತು ಕಳೆದ ಕ್ಷಣಗಳ ಅಮೃತ ಸ್ಮೃತಿ
ತಣಿಯಿತು ಅವನ ಕೊರಗಿನ ಹಂಬಲದ ಸ್ಥಿತಿ
ಅಂತೂ ಒಲವಿಗೆ ಆಯಿತು ಒಲವಿನ ಭೇಟಿ

**********

About The Author

1 thought on “ಒಲವಿನ ಭೇಟಿ”

Leave a Reply

You cannot copy content of this page

Scroll to Top