ಗಜಲ್
ಸುಜಾತ ಲಕ್ಷ್ಮೀಪುರ.
ಕಳಚಿಕೊಂಡು ಸೋಗು ಅಹಂಕಾರ ಮಗುವಾಗಿದ್ದರೂ ನನ್ನ ಬಳಿ ಬರಲಿಲ್ಲ ನನ್ನ ದೇವರು
ಮನದಲಿ ಭಯ ಆತಂಕ ನೋವು ಪರಿತಾಪವಿದ್ದರೂನನ್ನ ಬಳಿ ಬರಲಿಲ್ಲ ನನ್ನ ದೇವರು
ಮಂಜಾನೆ ನೇಸರ ಇರುಳು ಚುಕ್ಕಿ ಚಂದ್ರಮ ನಡುವೆ ಬೀಸುವಗಾಳಿಯೂ ಅವನ ನೆನಪಿಸಿದೆ
ಹಸಿವು ನಿದಿರೆ ಸನಿಹ ಸುಳಿಯದೆ ಧ್ಯಾನದಲ್ಲಿದ್ದರೂ ನನ್ನ ಬಳಿ ಬರಲಿಲ್ಲ ನನ್ನ ದೇವರು
ಋತುಮಾನಗಳು ಉರುಳುತ್ತಿವೆ ಚಳಿಗೆ ಚಳಿ ಕಾಣದೆ ಬೇಸಿಗೆ ಸುಡುದೆ ಕೊರಡಾಗಿದೆ ಬದುಕು
ಕಾಯ ಕರಗಿ ಚಿತ್ತ ಮಾಗಿ ತಾನಳಿದು ಶೂನ್ಯವಾದರೂನನ್ನ ಬಳಿ ಬರಲಿಲ್ಲ ನನ್ನ ದೇವರು
ಅವನ ಕಾಣುವುದು ಆಸೆಯೋ ಪಾಶವೋ ಬಾಳಿನ ಗುರಿಯೋ ಅರಿಯದಾಗಿದೆ ಮನಕೆ
ಕಣ್ಣಿನಲಿ ದೀಪ ಉರಿಸಿ,ಮೌನದ ವ್ರತ ತೊಟ್ಟಿದ್ದರೂ ನನ್ನ ಬಳಿ ಬರಲಿಲ್ಲ ನನ್ನ ದೇವರು
ಶಿವೆ,ಒಮ್ಮೆ ದರುಶನವಾದರೆ ಸಾಕುಕಣ್ತುಂಬಿಕೊಂಡುನಿನ್ನನ್ನುಸಂತಸದಿಎವೆಮುಚ್ಚಿಬಿಡುವೆ
ಕ್ಷಣ ಕ್ಷಣವು ಕಣಕಣವು ಆರಾಧಿಸಿ ಪೂಜಿಸುತ್ತಿದ್ದರೂ ನನ್ನ ಬಳಿ ಬರಲಿಲ್ಲ ನನ್ನ ದೇವರು.
……….
ಧನ್ಯವಾದಗಳು ಸರ್..