ಕವಿತೆ
ಕನಸುಗಳ ಕಮರಿಸುವವರಿಗೆ
ಡಾ.ಸುರೇಖಾ ರಾಠೋಡ
ಕೊಡಬೇಡಿ ಮಗಳ
ಹಣವ ಕೇಳುವ
ಹಣವಂತರಿಗೆ…
ಕೊಡಬೇಡಿ
ಬಂಗಾರದಂತಹ ಮಗಳ
ಬಂಗಾರವ ಕೇಳುವವರಿಗೆ…
ಕೊಡಬೇಡಿ
ಅಧಿಕಾರಿಯಾಗುವ ಮಗಳ ;
ಅಧಿಕಾರಿಗಳಾದವರಿಗೆ ಕೊಟ್ಟು ,
ಅವಳು ಅಧಿಕಾರಿಯಾಗುವ
ಅವಕಾಶವನ್ನೆ
ಕಿತ್ತುಕೊಳ್ಳುವವರಿಗೆ….
ಕೊಡಬೇಡಿ
ಶಿಕ್ಷಣ ಪಡೆಯುವ ಮಗಳನ್ನು ;
ಅವಳಿಗೆ ಶಿಕ್ಷಣವನ್ನು ನೀಡಲು
ನಿರಾಕರಿಸುವವರಿಗೆ….
ಕೊಡಬೇಡಿ
ಕನಸು ಕಾಣುವ ನಿಮ್ಮ ಮಗಳನ್ನು ;
ಅವಳ ಕನಸುಗಳನ್ನೆ
ಕಮರಿಸುವವರಿಗೆ ….
ಕೊಡಬೇಡಿ
ಹಕ್ಕಿಯಂತೆ ಹಾರ ಬಯಸುವ ಮಗಳನ್ನು ;
ಅವಳ ರಕ್ಕೆಯನ್ನೆ
ಕತ್ತರಿಸುವವರಿಗೆ…
ಕೊಡಬೇಡಿ
ಜನ್ಮ ನೀಡುವ ಮಗಳನ್ನು ;
ಅವಳ ಜೀವವನ್ನೇ
ತಗೆಯುವವರಿಗೆ….
ಕೊಡಬೇಡಿ
ಜಗವ ರಕ್ಷಿಸುವ ಮಗಳಿಗೆ
ಅವಳ ಜಗತ್ತನ್ನೇ
ಕಸಿದುಕೊಳ್ಳುವವರಿಗೆ…
ಕೊಡಬೇಡಿ
ನಿಮ್ಮ ಗೌರವ,ಅಂತಸ್ತಿಗೆ
ದಕ್ಕೆ ತರುವವರಿಗೆ
ಹಾಗೂ
ಅವಳ ಗೌರವವನ್ನೇ
ನಾಶಪಡಿಸುವವರಿಗೆ…
ಕೊಡಬೇಡಿ ಮಗಳಿಗೆ
ವಿವಾಹದ ಹೆಸರಿನಲ್ಲಿ
ಬೇರೆಯವರಿಗೆ
ಮಾರುವವರಿಗೆ….
*************************************
ಎಂಥ ಮನಸ್ಸನ್ನಾದರೂ ಒಮ್ಮೆಲೇ ಕಲಕಿಬಿಡುವ ಆರ್ತ ಕವಿತೆ. ಇಂಥ ಕವನ ಹೆಣೆದು ನೀಡಿದ ನಿಮಗೆ ನನ್ನ ಮನದಾಳದ ಧನ್ಯವಾದಗಳು.