ಗಝಲ್
ಆಸೀಫಾ
ಬೇವು ಬೆಲ್ಲದೊಳಿಟ್ಟು ಕಷ್ಟ ಸುಖದ ಸಾಂಗತ್ಯ ಸಾರುತಿದೆ ಯುಗಾದಿ
ಅಭ್ಯಂಜನವ ಮಾಡಿಸಿ ನವಚೈತನ್ಯ ಚೆಲ್ಲುತಿದೆ ಯುಗಾದಿ.
ಹೊಸ ಚಿಗುರಿನ ಹೊದಿಕೆಯಲಿ ಕಂಗೊಳಿಸುತಿವೆ ಗಿಡಮರಗಳು
ಯುಗದ ಆದಿಯ ನೆನಪಿಸಿ ಹರ್ಷ ಹಂಚುತಿದೆ ಯುಗಾದಿ
ಮೈಮರೆತ ದುಂಬಿಗಳ ಝೇಂಕಾರ ಹೊಂಗೆ ಬೇವು ಮಾಮರದ ತುಂಬಾ
ಸವಿಜೇನಿನೊಲವು ಮನದ ಗೂಡುಗಳಲಿ ತುಂಬುತಿದೆ ಯುಗಾದಿ
ತಳಿರು ತೋರಣ ಚೈತ್ರದಾಗಮನಕೆ ಸೂಚನೆಯನಿತ್ತು ನಗುತಿದೆ
ಬ್ರಹ್ಮ ಸೃಷ್ಟಿಗೆ ಶಿರಬಾಗಿ ಶತಕೋಟಿ ನಮನ ಹೇಳುತಿದೆ ಯುಗಾದಿ
ಹಳೆಯ ಹಗೆಯ ಕಳಚಿ ನಿಲ್ಲೋಣ ವಸಂತನಾಗಮನಕೆ ಎಲ್ಲಾ
ಹೊಸ ವರುಷಕೆ ಕೈಬೀಸಿ ಆಸೀಯ ಕರೆಯುತಿದೆ ಯುಗಾದಿ
********************************
ಚಂದವಾದ ಕವಿತೆ
ಚೆಂದದ ಗಜಲ್ ಮೇಡಂ