ಗಝಲ್
ಮಾಲತಿ ಹೆಗಡೆ ಚಿಕ ಚಿಂವ್, ಕುಹೂ ಕುಹೂ,ಪೆಕ್ ಪೆಕ್ ನಿತ್ಯವೂ ಕೂಗುತ್ತವೆ ಹಕ್ಕಿಗಳು ಪೆಕ್ ಪೆಕ್, ಟುವ್ವಿಟುವ್ವಿ ಕಂಠ ಸೋಲುವವರೆಗೂ ಹಾಡುತ್ತವೆ ಹಕ್ಕಿಗಳು ಹುಳ-ಹುಪ್ಪಡಿ ಹುಡುಕುತ್ತಲೇ ವಿಹಾರವನ್ನೂ ಮಾಡಿಬಿಡುತ್ತವೆ! ಆಗಸದೆತ್ತರಕ್ಕೆ ಹಾರುತ್ತ, ತೇಲುತ್ತ ಬೆರಗ ಮೂಡಿಸುತ್ತವೆ ಹಕ್ಕಿಗಳು ಈ ಅಲ್ಪಾಯುಷಿ ಅನಂತಸುಖಿಗಳಿಗೆ ರಂಗುರಂಗಿನ ಬೆಡಗು ಕಸ ಕಡ್ಡಿ ಸೇರಿಸಿ ಕೌಶಲವ ಬೆರೆಸಿ ಗೂಡು ಕಟ್ಟುತ್ತವೆ ಹಕ್ಕಿಗಳು ಸಂತಾನೋತ್ಪತ್ತಿಗಾಗಿ ಸಾವಿರಾರು ಮೈಲಿ ಕ್ರಮಿಸುವುದೂ ಉಂಟು! ಕಾಳ ಹೆಕ್ಕಿ, ತುತ್ತನಿಕ್ಕಿ ಮರಿಗಳ ಜೋಪಾನವಾಗಿ ಬೆಳೆಸುತ್ತವೆ ಹಕ್ಕಿಗಳು ಹೂವು ಹಣ್ಣುಗಳನು ಕುಕ್ಕಿ, […]
ಅವನಿ
ನಾಗಲಕ್ಷ್ಮೀ ಕಡೂರು ರಾಸಾಯನಿಕ ಗೊಬ್ಬರಗಳಿಂದ ಬೆಂದು ಬಸವಳಿದ ವೃದ್ಧೆಯಂತಾಗುತ್ತಿದ್ದಾಳೆ… ಬಹುಮಹಡಿ ಕಟ್ಟಡಗಳ ಭರಾಟೆಯಲ್ಲಿ ಭೂರಮೆಯ ಹಸಿರುಡುಗೆ ಹರಿದಂತೆ ಆ ವಸತಿಗಳಿಗೆ ನೀರುಪೂರೈಸುವಲ್ಲಿ ಭೂತಾಯಿಯೊಡಲಿಗೇ ಕನ್ನಹಾಕಿದಂತೆ 🙁 ಮನುಜರ ದಾಹಕ್ಕೆ ಕೊನೆಮೊದದಿಲ್ಲ ಅಂತರ್ಜಲ ಅಭಿವೃದ್ಧಿ ಮರೆತಿಹೆವಲ್ಲ ವೃಕ್ಷಗಳನ್ನು ಧರಾಶಾಯಿಯನ್ನಾಗಿಸುವುದೇ ನಿತ್ಯದ ಕಾಯಕ ಕಿತ್ತುಹೋಗಿರುವ ರಸ್ತೆಗಳ ಅಗಲಮಾಡೋದಕ್ಕ… ಕಾಡುಗಳೆಲ್ಲ ನಾಡಾಗುತ್ತಿದೆ ನೋಡ ಅದಕಂಡು ಓಟಕಿತ್ತಿದೆ ಕಾರ್ಮೋಡ ನಡೆದರೆ ತಾಯಿಗೆ ನೋವಾದೀತೆಂದು ಕ್ಷಮೆಯಾಚಿಸುತ್ತಿದ್ದರು ಹಿರಿಯರು ಐಷಾರಾಮಿ ಬದುಕಿನಲ್ಲಿ ಅವಳನ್ನು ಮರೆತೇಬಿಟ್ಟಿದ್ದಾರೆ ಈಗಿನವರು! ಬೆಟ್ಟಕಡಿದು ಇಲಿಹಿಡಿದಂತೆ ನಮ್ಮ ಪ್ರಯತ್ನ ಪ್ರಕೃತಿಯ ಮುಂದೆ ಎಂದಿಗೂ […]
ಗಝಲ್
ರತ್ನರಾಯ ಮಲ್ಲ ನಿನ್ನ ಆಶೀರ್ವಾದದಿಂದಲೇ ಸಂಪತ್ತನ್ನು ಗಳಿಸಿದೆ ಮಾ ಆ ದುಡ್ಡು ನನ್ನೆಲ್ಲ ಮನದ ಶಾಂತಿಯನ್ನು ಕಳೆದಿದೆ ಮಾ ಹಣದ ಮುಂದೆ ಪ್ರೀತಿ-ಪ್ರೇಮಗಳು ಗೌಣವಾಗಿದ್ದವು ಅಂದು ಜೇಬು ಭಾರವಾಗಿದ್ದರೂ ಇಂದು ನೆಮ್ಮದಿ ಗತಿಸಿ ಹೋಗಿದೆ ಮಾ ಸಾವಿನ ಸುದ್ದಿಯು ನನ್ನನ್ನು ಮತಿಭ್ರಮಣೆಗೆ ನೂಕುತ್ತಿದೆ ಕಣ್ಮುಂದಿನ ಅಂತರದಿಂದ ಹೃದಯಬಡಿತ ನಿಂತಿದೆ ಮಾ ಕರೆಗಳ ಕರತಾಡನ ನನ್ನ ಕರುಳನ್ನು ಕಿತ್ತು ತಿನ್ನುತಿದೆ ದೃಶ್ಯ ಕರೆಯಲ್ಲಿ ದರುಶನವ ಪಡೆದ ಪಾಪಿ ನಾನು ಹುಚ್ಚಾದೆ ಮಾ ವಾಹನಗಳ ಸಂಖ್ಯೆಗೆ ಮಿತಿಯಿಲ್ಲ ಮನೆಯ ಆವರಣದಲ್ಲಿ […]
ಗಝಲ್
ಎ.ಹೇಮಗಂಗಾ ಸ್ವಾರ್ಥದ ಭದ್ರಕೋಟೆಯಿಂದ ಎಂದೂ ಹೊರಗೆ ಬರಲಿಲ್ಲ ನೀನು ಅನರ್ಥಕೆ ಎಡೆ ಮಾಡಿದ ನಡೆಗೆ ಎಂದೂ ಪರಿತಪಿಸಲಿಲ್ಲ ನೀನು ಒಂಟಿ ಪಥಿಕಳ ಪಯಣಕೆ ಕೊನೆತನಕ ಜೊತೆ ನೀನೆಂದೆಣಿಸಿದ್ದೆ ಜನ್ಮ ಕೊಟ್ಟ ಜೀವಕೆ ಬೊಗಸೆಯಷ್ಟೂ ಪ್ರೀತಿ ನೀಡಲಿಲ್ಲ ನೀನು ಹಮ್ಮು ಬಿಮ್ಮಿನ ನಿನ್ನ ಅಧೀನದಿ ನೋವ ಸಹಿಸಿದ್ದು ಅದೆಷ್ಟು ಬಾರಿ ಕಟುವರ್ತನೆಗೆ ಕರುಳು ಕೊರಗಿದುದನು ಅರಿಯಲಿಲ್ಲ ನೀನು ತಾಯ್ತನದ ಬಳ್ಳಿಯಲಿ ಹೂವಿಗಿಂತ ಮುಳ್ಳುಗಳೇ ಹೆಚ್ಚಾದವೇಕೆ ಸಾಂಗತ್ಯ ಬೇಡಿ ಹರಿಸಿದ ಕಂಬನಿಧಾರೆಗೂ ಕರಗಲಿಲ್ಲ ನೀನು ಮಾತಿನ ಕೂರಂಬುಗಳ ಕ್ರೂರ ಇರಿತಕೆ […]
ಕಾವ್ಯಯಾನ
ಮುಂಗಾರು ಆಲಿಂಗನ… ಬಾಲಕೃಷ್ಣ ದೇವನಮನೆ ಮುಂಗಾರು ಸುರಿದಂತೆ ಸಣ್ಣಗೆಕೊರೆಯುತಿದೆ ಚಳಿ ಹೊರಗೂ ಒಳಗೂ…ಬಾಚಿ ತಬ್ಬಿದ ಮಳೆಯ ತೋಳುಇಳೆಯ ತೆಕ್ಕೆಯಲಿಕವಿದ ಮೋಡದ ನಡುವೆ ಚಂದ್ರ ತಾರೆಯ ಬೆಳಕಅರಸುತಿವೆ ಇರುಳ ಆಲಿಂಗನದಲ್ಲಿ… ಕಪ್ಪಾನೆಕಪ್ಪು ಮೋಡಗಳು ಸುರಿಯುತಿವೆಗವ್ವನೆಯ ಇರುಳ ಮೌನ ಸೀಳಿಮಾತಿಗಿಳಿದಿವೆ ಹನಿಯ ಜೊತೆ ಜೀರುಂಡೆ ಕ್ರಿಮಿ ಕೀಟಇಳೆಯ ಬಿಸಿ ಉಸಿರ ಸದ್ದನು ಮೀರಿ… ನಾಚಿ ಪುಳಕಿತಗೊಂಡ ನವ ವಧುವಿನಂತ ಇಳೆಮೊರೆಯುತಿದೆ ಹುಣ್ಣಿಮೆ ಕಡಲಂತೆಹನಿಯ ಬೆರಳು ಇಟ್ಟಂತೆ ಕಚಗುಳಿಇಳೆಯ ಮೈಯ ತುಂಬಾಮೊಳೆಯುತಿದೆ ಗರ್ಭದೊಡಲಲಿ ಹಸಿರು ಸಂತೆ… ರಮಿಸುತಿದೆ ಮಳೆಯ ತೋಳು ಇಳೆಯ […]
ಕಾವ್ಯಯಾನ
ಗಝಲ್ ಡಾ.ಗೋವಿಂದ ಹೆಗಡೆ ಹೊರಟು ನಿಂತವಳು ತಿರುಗೊಮ್ಮೆ ನೋಡಿಬಿಡು ಕಟ್ಟಿದ ಗಂಟಲಲ್ಲಿ ಒಮ್ಮೆ ದನಿಯೆತ್ತಿ ಹಾಡಿಬಿಡು ಸಂಜೆ ಕವಿಯುತ್ತಿದೆ ಉಳಿದಿಲ್ಲ ಬಹಳ ವೇಳೆ ವಿದಾಯದ ಈ ಹೊತ್ತು ಅಲೆಯೊಂದ ಹಾಯಬಿಡು ಬೆನ್ನಿಗೇಕೆ ಬೇಕು ಹೇಳು ಈ ಬೇಗುದಿ ಭಾರ ಮಂಕಾದ ಮುಖದಲ್ಲು ಒಮ್ಮೆ ನಕ್ಕು ನಡೆದುಬಿಡು ಮಾಯುತ್ತಿರುವ ಎದೆಗಾಯ ಮತ್ತೆ ಕೆಂಪಾಗಿದೆ ಸಾಧ್ಯವಾದರೆ ಒಮ್ಮೆ ಬೆರಳಿಂದ ಸವರಿಬಿಡು ನನ್ನ ಕನಸೊಂದು ಬಿಡದೆ ನಿನ್ನ ಹಿಂಬಾಲಿಸಿದೆ ಈಸು ಬೀಳುವ ಮುನ್ನ ಒಮ್ಮೆ ಮುದ್ದಿಸಿಬಿಡು ಮರುಳಿನಲಿ ಅಲೆವ ‘ಜಂಗಮ’ಗೆ ಏನು […]
ಪುಸ್ತಕ ಸಂಗಾತಿ
ಬರ್ಫದ ಬೆಂಕಿ ಬರ್ಫದ ಬೆಂಕಿ ಕವನ ಸಂಕಲನ ಲೇಖಕರು- ನಾಗರೇಖಾ ಗಾಂವ್ಕರ್ ಸಾಧನ ಪಬ್ಲಿಕೇಷನ್ ದಾಂಡೇಲಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿಯಾಗಿರುವ ನಾಗರೇಖಾ ಗಾಂವ್ಕರ್ ಅವರ ಮೂರನೇ ಕವನ ಸಂಕಲನವಿದು. ಏಣಿ ಎಂಬ ಪ್ರಥಮ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ದೊರೆತಿದೆ. ಇನ್ನೊಂದು ಪದಗಳೊಂದಿಗೆ ನಾನು ಎಂಬ ಕವನ ಸಂಕಲನ. ಪಾಶ್ಚಿಮಾತ್ಯ ಸಾಹಿತ್ಯ ಲೋಕ ಭಾಗ-೧ ಮತ್ತು ಆಂಗ್ಲ ಸಾಹಿತ್ಯ ಲೋಕ ಭಾಗ -೨ ಎಂಬ ಎರಡು ವಿಮರ್ಶಾತ್ಮಕ ಕೃತಿಗಳನ್ನು ಇವರು […]
ಅನುವಾದ ಸಂಗಾತಿ
ಈಜಿಪ್ಟಿನ ಮಹಾರಾಜ ಮೂಲ: Ozymandias of Egypt: By P.B.Shelly ಕನ್ನಡಕ್ಕೆ:ವಿ.ಗಣೇಶ್ ವಿ.ಗಣೇಶ್ ಅನತಿಕಾಲದಿಂದಲೂ ಪಾಳುಬಿದ್ದಾ ಭೂಮಿಯಲಿನಾನೊಬ್ಬ ಪಯಣಿಗನ ಭೇಟಿಯಾದೆನು ಅಂದುಮುರಿದೆರಡು ಕಾಲುಗಳ ಬರಿ ಪ್ರತಿಮೆಯದಾಗಿತ್ತುಆರ್ಧ ದೇಹವು ಕಂತಿತ್ತು ಆ ಮರಳಿನ ರಾಶಿಯಲಿ ಸುಕ್ಕಾದ ಹೊರ ತೊಗಲು, ಗಂಟು ಮೋರೆಯ ನೋಟಕೆತ್ತಿದಾ ಶಿಲ್ಪಿಯ ಕೈಚಳಕವ ತೋರುತಲಿತ್ತುಊಟ ವಸತಿಯ ಕೊಟ್ಟು ಸಾಕಿಸಲಹಿದ ರಾಜನದುಷ್ಟತನದ ಕಳೆಯ ತುಂಬಿದ್ದನಾ ವದನದಲಿ. ಪ್ರತಿಮೆಯಾ ಪೀಠವದು ಮರಳಲ್ಲಿ ಮುಳುಗಿದರುರಾಜನ ಕಡು ದರ್ಪವ ಎತ್ತಿ ತೋರಿಸುತಲಿತ್ತು“ನನ್ನ ಹೆಸರು ಓಜಿಮಾಂಡಿಯಾಸ್, ರಾಜರ ಮಹಾರಾಜನನ್ನ ಸಾಧನೆಯ ನೋಡಿ! ಅದೆಷ್ಟು […]