ಗಝಲ್

ಮಾಲತಿ ಹೆಗಡೆ

ಚಿಕ ಚಿಂವ್, ಕುಹೂ ಕುಹೂ,ಪೆಕ್ ಪೆಕ್ ನಿತ್ಯವೂ ಕೂಗುತ್ತವೆ ಹಕ್ಕಿಗಳು
ಪೆಕ್ ಪೆಕ್, ಟುವ್ವಿಟುವ್ವಿ ಕಂಠ ಸೋಲುವವರೆಗೂ ಹಾಡುತ್ತವೆ ಹಕ್ಕಿಗಳು

ಹುಳ-ಹುಪ್ಪಡಿ ಹುಡುಕುತ್ತಲೇ ವಿಹಾರವನ್ನೂ ಮಾಡಿಬಿಡುತ್ತವೆ!
ಆಗಸದೆತ್ತರಕ್ಕೆ ಹಾರುತ್ತ, ತೇಲುತ್ತ ಬೆರಗ ಮೂಡಿಸುತ್ತವೆ ಹಕ್ಕಿಗಳು

ಈ ಅಲ್ಪಾಯುಷಿ ಅನಂತಸುಖಿಗಳಿಗೆ ರಂಗುರಂಗಿನ ಬೆಡಗು
ಕಸ ಕಡ್ಡಿ ಸೇರಿಸಿ ಕೌಶಲವ ಬೆರೆಸಿ ಗೂಡು ಕಟ್ಟುತ್ತವೆ ಹಕ್ಕಿಗಳು

ಸಂತಾನೋತ್ಪತ್ತಿಗಾಗಿ ಸಾವಿರಾರು ಮೈಲಿ ಕ್ರಮಿಸುವುದೂ ಉಂಟು!
ಕಾಳ ಹೆಕ್ಕಿ, ತುತ್ತನಿಕ್ಕಿ ಮರಿಗಳ ಜೋಪಾನವಾಗಿ ಬೆಳೆಸುತ್ತವೆ ಹಕ್ಕಿಗಳು

ಹೂವು ಹಣ್ಣುಗಳನು ಕುಕ್ಕಿ, ಬೀಜವಗಳನು ಕಕ್ಕಿ ಕಾಡನ್ನುಳಿಸುತ್ತವೆ
ಪ್ರಕೃತಿಯಲ್ಲಿ ಎಲ್ಲವೂ ಮುಖ್ಯವೆಂಬ ಸಂದೇಶ ಸಾರುತ್ತವೆ ಹಕ್ಕಿಗಳು

*********

**********

3 thoughts on “ಗಝಲ್

  1. “ಅಲ್ಪಾಯುಷಿ. . ‌ . .
    ಅನಂತ ಸುಖಿ” ಸಾಲು
    ಅಪ್ಪಟ ಸತ್ಯದ ನುಡಿ
    ಕಲಿಯಬೇಕಿದೆ ಹಕ್ಕಿಗಳಿಂದ
    ಸರಳ ಸುಂದರ ಬದುಕನು
    ತುಂಬಾ ಇಷ್ಟವಾಯಿತು ಮೇಡಮ್
    ಅಭಿನಂದನೆಗಳು

Leave a Reply

Back To Top