ಅನುವಾದ ಸಂಗಾತಿ

ಈಜಿಪ್ಟಿನ ಮಹಾರಾಜ

ಮೂಲ: Ozymandias of Egypt: By P.B.Shelly

ಕನ್ನಡಕ್ಕೆ:ವಿ.ಗಣೇಶ್

ವಿ.ಗಣೇಶ್

ಅನತಿಕಾಲದಿಂದಲೂ ಪಾಳುಬಿದ್ದಾ ಭೂಮಿಯಲಿ
ನಾನೊಬ್ಬ ಪಯಣಿಗನ ಭೇಟಿಯಾದೆನು ಅಂದು
ಮುರಿದೆರಡು ಕಾಲುಗಳ ಬರಿ ಪ್ರತಿಮೆಯದಾಗಿತ್ತು
ಆರ್ಧ ದೇಹವು ಕಂತಿತ್ತು ಆ ಮರಳಿನ ರಾಶಿಯಲಿ

ಸುಕ್ಕಾದ ಹೊರ ತೊಗಲು, ಗಂಟು ಮೋರೆಯ ನೋಟ
ಕೆತ್ತಿದಾ ಶಿಲ್ಪಿಯ ಕೈಚಳಕವ  ತೋರುತಲಿತ್ತು
ಊಟ ವಸತಿಯ ಕೊಟ್ಟು ಸಾಕಿಸಲಹಿದ ರಾಜನ
ದುಷ್ಟತನದ ಕಳೆಯ ತುಂಬಿದ್ದನಾ ವದನದಲಿ.

ಪ್ರತಿಮೆಯಾ ಪೀಠವದು ಮರಳಲ್ಲಿ ಮುಳುಗಿದರು
ರಾಜನ ಕಡು ದರ್ಪವ ಎತ್ತಿ ತೋರಿಸುತಲಿತ್ತು
“ನನ್ನ ಹೆಸರು ಓಜಿಮಾಂಡಿಯಾಸ್, ರಾಜರ ಮಹಾರಾಜ
ನನ್ನ ಸಾಧನೆಯ ನೋಡಿ! ಅದೆಷ್ಟು ಭಯಂಕರ”

ಆ ಸುಡುಗಾಡಿನಲಿ ಸರ್ವನಾಶದ ಹೊರತಾಗಿ
ರಾಜನ ಸಾಧನೆಗಳ ಅವಶೇಷವಿನಿತಿರಲಿಲ್ಲ
ಮುರಿದು ನಿಂತಿಹ ಕಾಲುಗಳ ಇಕ್ಕೆಡೆಗಳಲ್ಲಿಯೂ
ಹಬ್ಬಿತ್ತು ಮರಳಿನ ರಾಶಿ, ದೃಷ್ಟಿ ಹರಿಯುವತನಕ.

**********


One thought on “ಅನುವಾದ ಸಂಗಾತಿ

  1. ಈ‌ ಕವಿತೆ ದ್ವಿತೀಯ ಪಿಯುಸಿ ಇಂಗ್ಲೀಷ್‌ನ ಪಠ್ಯದ ಓದಿಗಿದೆ
    ತುಂಬಾ ಮಾರ್ಮಿಕವಾಗಿ ಅನುವಾದಿಸಿದ್ದೀರಿ ಸರ್.
    ನನ್ನ ಬೋಧನೆಗೆ ಸಹಕಾರಿಯಾಯಿತು
    ಧನ್ಯವಾದಗಳೊಂದಿಗೆ
    ಅಭಿನಂದನೆಗಳು

Leave a Reply

Back To Top