ನೆನೆವರಾರು ನಿನ್ನ
ಮಧು ವಸ್ತ್ರದ್ ಮುಂಬಯಿ
ಓ ಅಂಬಿಗಾ..ಬೇಗ ಬೇಗನೆ ಮುನ್ನೆಡೆಸು ದೋಣಿಯ..
ತೀರದಾಚೆಯ ಹಳ್ಳಿ ಹೊಲದಲಿ ಕಾಯುತಿಹನು ನನ್ನಿನಿಯ..
ಅಂಬಿಗಣ್ಣಾ ಶಾಲೆಯ ಸಮಯ ಆಯ್ತು ನಡೆ ಬೇಗ..
ಎಲವೋ ಅಂಬಿಗ ದಡದಾಚೆಯ ಜನರ ಓಟುಬೇಕು ನಡೆ ಈಗ..
ತಮ್ಮ ತಮ್ಮದೇ ಲೋಕದಲಿ ವಿಹರಿಸುತಿಹರು ಎಲ್ಲರು..
ಹೊಳೆಯ ದಾಟಿದ ನಂತರ ಬಡ ಅಂಬಿಗನ ನೆನೆವರಾರು..
ಬಿಸಿಲು ಮಳೆ ಗುಡುಗುಸಿಡಿಲು ಕತ್ತಲಾದರೆ ಸುತ್ತಲು..
ಈಜುಬಾರದವರಿಗೆಲ್ಲ ಆಧಾರ ನೀನೆ ಗುರಿ ಮುಟ್ಟಲು..
ಶಾಂತಚಿತ್ತದಿ ಹೊಣೆಯ ಹೊತ್ತಿದೆ ನಿನ್ನಯ ಬಾಗಿದ ಹೆಗಲು..
ಕಾಯಕ ಯೋಗಿಯತ್ತ ಗಮನ ಕೊಡಲುವೇಳೆಯಿಲ್ಲ ಯಾರಲು..
ತಂತ್ರಜ್ಞಾನ ಬೆಳೆದಂತೆ ದೋಣಿ, ಅಂಬಿಗನ ಮರೆವರೆಲ್ಲ..
ಭವ ಸಾಗರ ದಾಟಲು ಕಾಣದ ದೇವರ ಬೇಡುವರೆಲ್ಲ..
********