ಕಾವ್ಯಯಾನ

ಪ್ರೀತಿ ಸಾಗರದಲಿ

ಅವ್ಯಕ್ತ

ಕಂಡೆನಾ ಸಿರಿಯ ಅಯ್ಸಿರಿಯ ಮಾಲೆ ,
ಮುದುಡಿದ ಮನದ ಅಂಗಳ ಅರಳುತಲಿ…

ಹಚ್ಚಹಸಿರ ಹಾಸಿಗೆಯ ಮೇಲೆ ,
ಹೊಸದಾಗಿ ಹಾಸಿದ ಬಿಳಿ ಮೋಡಗಳ ಸಾಲೆ.
ಅಲ್ಲೊಂದು ಇಲ್ಲೊಂದು ನಿಂತಿರುವ ತಲೆಗಳು,
ಕಣ್ಣಾಮುಚ್ಚಾಲೆ ಆಡುತ್ತಾ ನಲಿವ ಕಿರಣಗಳು. ||೧||

ಕೈ ಚಾಚಿ ,ಆಲಂಗಿಸಿ ಕರೆಯುತಲಿ,
ಹೇಳಿತೇನೋ ಪಿಸು ಮಾತುಗಳಲಿ,
ಎಲ್ಲೆಲ್ಲೂ ನಾನಿರುವೆ ಹಂಚುತ ಸವಿಗಳ,
ಪ್ರೀತಿ, ನೆಮ್ಮದಿ, ಸುಖಸಂತೋಷಗಳ. ||೨||

ನನ್ನಲ್ಲಿ ನೀನಿರಲು, ನಿನ್ನಲ್ಲಿ ನಾನಿರಲು
ಮಿಡಿಯುವ ಕಂಗಳು, ಮನದಾಳದ ಮಾತುಗಳು,
ಪೃಕ್ರತಿಯ ಪ್ರಕೃತಿ ನನ್ನೊಳಗೆ ಹರಿದಿರಲು
ಶಾಂತವಾಯಿತು ಪುಟ್ಟ ಮಗುವಿನಂತೆ ಕರುಳು.||೩||

ಹರಸುತ ಹಾರೈಸುತ ಹಗಲಿರುಳು
ಕಳೆವೆನು ಓಂದಾಗುತಾ ಪ್ರೀತಿಯ ಸಾಗರದಲಿ…..

*******

Leave a Reply

Back To Top