ಚೇಳು ಕಡಿದ ರಾತ್ರಿ
ಇಂಗ್ಲೀಷ್ ಮೂಲ:ನಿಸ್ಸಿಮ್ ಏಜೇಕಿಲ್
ಕನ್ನಡಕ್ಕೆ: ಕಮಲಾಕರ ಕಡವೆ
ನೆನಪಾಗುತ್ತದೆ ನನಗೆ ಒಂದು ಚೇಳು
ನನ್ನ ಅಮ್ಮನ ಕಡಿದ ರಾತ್ರಿ. ಹತ್ತು ತಾಸುಗಳ
ಕಾಲ ಜಡಿದ ಸುರಿಮಳೆ ಆ ಚೇಳನ್ನು
ಅಕ್ಕಿ ಮೂಟೆಯಡಿ ಓಡಿಸಿತ್ತು.
ವಿಷ ಕಾರಿ ಅದು – ಅಂಧಕಾರ ತುಂಬಿದ
ಕೋಣೆಯಲ್ಲಿ ಫಕ್ಕನೆ ಕುಣಿದ ಕುಟಿಲ ಬಾಲ –
ಮತ್ತೆ ಮಳೆಯಲ್ಲಿ ಮರೆಯಾಯಿತು.
ನೊಣಗಳ ಹಿಂಡಿನಂತೆ ಬಂದರು ರೈತರು
ಮಣಮಣಿಸುತ್ತ ನೂರು ಸಲ ದೇವರ ನಾಮ
ಕೇಡು ಕಳೆಯಲಿ ಎಂದು ಕೇಳಿಕೊಳ್ಳುತ್ತ.
ಮೊಂಬತ್ತಿ, ಲಾಟೀನುಗಳ ಹಿಡಿದು
ಮಣ್ಣ ಗೋಡೆಗಳ ಮೇಲೆ
ದೈತ್ಯ ಜೇಡನಂತ ನೆರಳುಗಳ ಮೂಡಿಸುತ್ತ
ಅವರು ಹುಡುಕಿದರು ಅದರ. ಕಾಣಲಿಲ್ಲ ಎಲ್ಲಿಯೂ.
ಲೊಚಗುಟ್ಟಿದರು ಅವರು.
ಚೇಳಿನ ಪ್ರತಿ ಚಲನೆಯ ಜೊತೆ
ಅಮ್ಮನ ದೇಹದಲ್ಲಿ ವಿಷ ಹರಿಯುತ್ತದೆ, ಅವರೆಂದರು
ಅದು ಸುಮ್ಮನೆ ಕೂರುವಂತಾಗಲಿ, ಅವರೆಂದರು
ಹಿಂದಿನ ಜನ್ಮದ ಪಾಪಗಳೆಲ್ಲ ಈ ರಾತ್ರಿ
ಉರಿದು ಹೋಗಲಿ, ಅವರೆಂದರು
ನಿನ್ನ ಈ ಸಂಕಟ ಮುಂದಿನ ಜನ್ಮದ ದುರ್ಭಾಗ್ಯಗಳನ್ನು
ಕಡಿಮೆಯಾಗಿಸಲಿ, ಅವರೆಂದರು
ಈ ಕ್ಷಣಿಕ ಜಗತ್ತಿನ ಎಲ್ಲ ಕೆಡುಕುಗಳ ಮೊತ್ತ
ಒಳಿತುಗಳ ಮೊತ್ತಕ್ಕೆ ಸರಿಹೊಂದಿಸಿ
ನಿನ್ನ ನೋವನ್ನು ಕ್ಷೀಣಿಸಲಿ.
ವಿಷವು ನಿನ್ನ ದೈಹಿಕ ಬಯಕೆಗಳನ್ನು
ಮತ್ತು ನಿನ್ನ ಮಹತ್ವಾಕಾಂಕ್ಷೆಗಳನ್ನು ಶುದ್ಧೀಕರಿಸಲಿ
ಅವರೆಂದರು, ಮತ್ತೂ ನನ್ನ ಅಮ್ಮನ ಸುತ್ತಲೂ
ಅವರು ನೆಲದ ಮೇಲೆ ಕುಳಿತುಕೊಂಡರು
ಮುಖದಲ್ಲಿ ಪೂರ್ಣ ಅರಿವಿನ ಶಾಂತಿ ಹೊತ್ತು.
ಮತ್ತಷ್ಟು ಮೊಂಬತ್ತಿಗಳು, ಮತ್ತಷ್ಟು ಲಾಟೀನುಗಳು, ಮತ್ತಷ್ಟು ನೆರೆಯವರು
ಮತ್ತಷ್ಟು ಕೀಟಗಳು, ಮತ್ತೂ ಕೊನೆಯಿರದ ಮಳೆ.
ನನ್ನ ಅಮ್ಮ ಚಾಪೆಯ ಮೇಲೆ
ಉರುಳುತ್ತ ನರಳುತ್ತ ಸಂಕಟ ಪಟ್ಟಳು.
ಅಪ್ಪ, ಸಂದೇಹಿ, ತರ್ಕವಾದಿ,
ವರ, ಶಾಪ, ಪುಡಿ, ಮಿಶ್ರಣ, ನಾರುಬೇರು
ಎಲ್ಲವನ್ನೂ ಪ್ರಯತ್ನಿಸುತ್ತಿದ್ದ
ಚೇಳು ಕಚ್ಚಿದ ಜಾಗಕ್ಕೆ ಸ್ವಲ್ಪ ಪೇರಫಿನ್ ಸುರಿದು
ಕಡ್ಡಿಯನ್ನೂ ಗೀರಿದ.
ಅದರ ಬೆಂಕಿಯಲ್ಲಿ ಅಮ್ಮ ಜ್ವಲಿಸುವುದ ನೋಡಿದೆ.
ಪೂಜಾರಿಯೊಬ್ಬ ಮಂತ್ರ ಪಠಿಸಿ ವಿಷವ ತಡೆಯಲು ಮಾಡುತ್ತಿದ್ದ ಆಚರಣೆ ನೋಡಿದೆ.
ಇಪ್ಪತ್ತು ತಾಸುಗಳ ನಂತರ
ಕಡಿತದ ವಿಷ ಹೋಯಿತು.
ಅಮ್ಮ ಮಾತ್ರ ಇಷ್ಟೇ ಹೇಳಿದಳು
ದೇವರ ದಯದಿಂದ ಚೇಳು ನನ್ನ ಕಡಿಯಿತು
ಮಕ್ಕಳನ್ನಲ್ಲ.
*******
The Night of the Scorpion”
I remember the night my mother
was stung by a scorpion. Ten hours
of steady rain had driven him
to crawl beneath a sack of rice.
Parting with his poison – flash
of diabolic tail in the dark room –
he risked the rain again.
The peasants came like swarms of flies
and buzzed the name of God a hundred times
to paralyse the Evil One.
With candles and with lanterns
throwing giant scorpion shadows
on the mud-baked walls
they searched for him: he was not found.
They clicked their tongues.
With every movement that the scorpion made his poison moved in Mother’s blood, they said.
May he sit still, they said
May the sins of your previous birth
be burned away tonight, they said.
May your suffering decrease
the misfortunes of your next birth, they said.
May the sum of all evil
balanced in this unreal world
against the sum of good
become diminished by your pain.
May the poison purify your flesh
of desire, and your spirit of ambition,
they said, and they sat around
on the floor with my mother in the centre,
the peace of understanding on each face.
More candles, more lanterns, more neighbours,
more insects, and the endless rain.
My mother twisted through and through,
groaning on a mat.
My father, sceptic, rationalist,
trying every curse and blessing,
powder, mixture, herb and hybrid.
He even poured a little paraffin
upon the bitten toe and put a match to it.
I watched the flame feeding on my mother.
I watched the holy man perform his rites to tame the poison with an incantation.
After twenty hours
it lost its sting.
My mother only said
Thank God the scorpion picked on me
And spared my children.
— Nissim Ezekiel
*********