ಜಾತಿ ಬೇಡ

Image result for photos of mahatmagandhi

ನಿರ್ಮಲಾ ಆರ್.

ಜಾತಿ ಬೇಡ”

ಮಡಿ ಮಡಿ ಅಂತ
ಮೂರು ಮಾರು ಸರಿಯುವಿರಲ್ಲ
ಮೈಲಿಗೆಯಲ್ಲೆ ಬಂತು ಈ ಜೀವ
ಎನ್ನುವುದ ಮರೆತಿರಲ್ಲ

ಜಾತಿ ಬೇಡ,ಜಾತಿ ಬೇಡ
ಎಂದು ಬೊಬ್ಬೆ ಹೊಡೆಯುವಿರಲ್ಲ
ಜಾತಿ ಬೇಡ ಎಂದ ಮಹಾತ್ಮರನ್ನೆ
ಜಾತಿಗೆ ಸೇರಿಸಿ ಮೆರೆಸುತಿರುವಿರಲ್ಲ

ಪವಿತ್ರವಾದ ಜ್ಞಾನ ದೇಗುಲಗಳಲ್ಲಿ
ಜಾತಿ ರಾಜಕೀಯ ಮೀಲಾಯಿಸುವಿರಲ್ಲ
ಜಾತಿ ಕಾರ್ಯಗಳಿಗೆ ಮುಗ್ದ ಮನಸುಗಳ ಬಳಸಿ
ಜಾತಿಯ ವಿಷಬೀಜ ಬಿತ್ತುತಿರುವಿರಲ್ಲ.

ಜಾತಿ ಬೇಡ ಜಾತಿ ಬೇಡ ಎಂದು
ಜಾತಿ ಗಣನೆ ಮಾಡಿಸಿ
ಧರ್ಮದ ಹೆಸರಲಿ ವೋಟ್ ಬ್ಯಾಂಕಿನ ಬೇಳೆ ಬೇಯಿಸಿಕೊಳ್ಳುವಿರಲ್ಲ
ಜಾತ್ಯಾತೀತ ರಾಷ್ಟ್ರದ ಕಲ್ಪನೆಯ ಬಗೆಗೆ
ಗಂಟೆಗಟ್ಟಲೆ ಭಾಷಣ ಬಿಗಿಯುವಿರಲ್ಲ

ಬಾಪೂ ಅಂದು ಗುಂಡಿಕ್ಕಿ
ಮಾಡಿದರು ನಿನ್ನ ಹತ್ಯೆ
ಇಂದು ಮಾಡುತಿಹರು ನಿನ್ನ ರಾಮರಾಜ್ಯದ ಕಲ್ಪನೆಯ ಹತ್ಯೆ

ಕ್ಷಮಿಸಿಬಿಡು ಮಹಾತ್ಮ
ಬಹುಶಃ ನೊಂದು ಕೊಳ್ಳುತ್ತಿರಬಹುದು ನಿನ್ನಾತ್ಮ.

*******

One thought on “ಜಾತಿ ಬೇಡ

Leave a Reply

Back To Top