ಅಡ್ಡಾಡಬೇಡ ಒಬ್ಬಳೇ!
ಅಡ್ಡಾಡಬೇಡ ಒಬ್ಬಳೇ!
ಅದರಲ್ಲೂ ಮಳೆಗಾಲ!
ಇರುಳಿಡೀ ಸುರಿದ ಜಡಿಮಳೆಗೆ
ತೊಯ್ದು ತೊಪ್ಪೆಯಾದವಳು
ಜಗುಲಿಯೊಳಗೆ ಕಾದು ಕೂತಳು
ಹಗಲ ಸೂರ್ಯನ!
ನೆಂದದ್ದೆಲ್ಲ ಒಣಗಬೇಕು
ಇಲ್ಲ
ಫಲವತ್ತಾದ ನೆಲದೊಳಗೆ ಮೊಳಕೆಯೊಡೆಯಲು
ಬೇಕು ಒಂದಿಷ್ಟು ಶಾಖ ಬೆಳಕು
ಎಷ್ಟು ಹೊತ್ತಾದರು ಬಾರದ ಸೂರ್ಯನೊ
ಬಿದ್ದ ಮಳೆಗೆ ಕಾರಣ ತಾನಲ್ಲ
ಮೊಳಕೆಯೊಡೆವ ಬೀಜವೂ ತನ್ನದಲ್ಲವೆಂಬಂತೆ
ಬರಲೇ ಇಲ್ಲ
ಕಾದು ಕುಂತವಳ ಕಾಲುಗಳು ಬೇರುಬಿಟ್ಟು
ಮನುಜರ ಕಾಡಿನಲಿ ತನ್ನದೇ ಗೂಡು
ಕಟ್ಟಿದಳು ಒಂಟಿಯಾಗಿ
ಈಗವಳು ಮಗಳ ಕೂರಿಸಿಕೊಂಡು ಕತೆ ಹೇಳುತ್ತಾಳೆ
ಜೊತೆಗಷ್ಟು ಬುದ್ದಿ ಮಾತನು
ಇರುಳಲ್ಲಿ ಅಡ್ಡಾಡಬೇಡ ಒಬ್ಬಳೇ!
ಕು.ಸ.ಮಧುಸೂದನ ರಂಗೇನಹಳ್ಳಿ
ವಾವ್ ಚೆಂದದ ಕವಿತೆ ಸರ್
ತಮ್ಮ ಓದು ಅನಿಸಿಕೆಗೆ ಥ್ಯಾಂಕ್ಸ್ ಮೇಡಂ
ದನ್ಯವಾದಗಳು
ಚಂದ ಇದೆ ಕವಿತೆ ಸರ್
ದನ್ಯವಾದಗಳು
Super..
Super