ಇವತ್ತು ನವೆಂಬರ್ ಹದಿನಾಲ್ಕು ಮಕ್ಕಳದಿನಾಚರಣೆ. ಯಾರ ನೆನಪಿನಲ್ಲಿ ಆಚರಿಸುತ್ತಿದ್ದೇವೆ ಅನ್ನುವುದಕ್ಕಿಂತ, ಹೇಗೆ ಮತ್ತು ಯಾವ ಉದ್ದೇಶಗಳನ್ನು ಇಟ್ಟುಕೊಂಡು ಆಚರಿಸುತ್ತಿದ್ದೇವೆಂಬುದು ಮಾತ್ರ ನಮಗೆ ಮುಖ್ಯವಾಗಬೇಕಿದೆ. ಮಕ್ಕಳ ದಿನದಂದು ಮಕ್ಕಳಿಂದ ನೃತ್ಯ ಮಾಡಿಸಿ, ಆಟ ಆಡಿಸಿ, ಸಿಹಿ ಹಂಚಿ ಮಕ್ಕಳ ಬಗ್ಗೆ ಉದ್ದನೆಯ ಬಾಷಣಗಳನ್ನು ಬಿಗಿಯುವಷ್ಟಕ್ಕೆ ಈ ಆಚರಣೆಯನ್ನು ಮುಗಿಸಲಾಗುತ್ತಿದೆ.
ಆದರೆ ಮಕ್ಕಳದಿನದಂದು ಮಾತ್ರವಲ್ಲದೆ ಪ್ರತಿನಿತ್ಯವು ನಮಗೆ ಮಕ್ಕಳ ಬಗ್ಗೆ ಕಾಳಜಿ-ಪ್ರೀತಿಯಿರಬೇಕು. ಯಾಕೆಂದರೆ ಯಾವುದೇ ನಾಡಿನ ಭವಿಷ್ಯ ನಿಂತಿರುವುದು ಆ ನಾಡಿನ ಮಕ್ಕಳು ಹೇಗೆ ಪಾಲಿಸಲ್ಪಡುತ್ತಿದ್ದಾರೆ-ಬೆಳೆಸಲ್ಪಡುತ್ತಿದ್ದಾರೆ ಎನ್ನುವುದರ ಮೇಲೆ.
ಹಾಗಾಗಿ ನಾವು ಪ್ರತಿ ಮಗುವಿನ ಹಕ್ಕನ್ನು ಗೌರವಿಸುತ್ತ, ಅದರ ಹಕ್ಕನ್ನು ರಕ್ಷಿಸಬೇಕು, ಇದು ದೊಡ್ಡವರಾದ ನಮ್ಮ ಕರ್ತವ್ಯವೂ ಹೌದು.ಪೌಷ್ಠಿಕ ಆಹಾರ, ಬದುಕನ್ನುಅರ್ಥ ಮಾಡಿಸುವ ಮಾನವೀಯ ಶಿಕ್ಷಣ ಪ್ರತಿ ಮಗುವಿನ ಹಕ್ಕು ಈ ಹಕ್ಕುಗಳನ್ನು ಸಂರಕ್ಷಿಸಬೇಕಾಗಿರುವುದು, ನಾನುಮೊದಲೇ ಹೇಳಿದಂತೆ ನಮ್ಮೆಲ್ಲರಕರ್ತವ್ಯ! ಆದರೆ ಒಂದು ನಾಗರೀಕ ಸಮಾಜವಾಗಿಮಕ್ಕಳ ಈ ಹಕ್ಕುಗಳನ್ನು ಕಾಪಾಡುತ್ತಿದ್ದೇವೆಯೇ ಎನ್ನುವ ಪ್ರಶ್ನೆ ಕೇಳಿಕೊಂಡರೆ ಸಿಗುವ ಉತ್ತರ ಮಾತ್ರ ನಿರಾಶಾದಾಯಕ.
ಇದುವರೆಗು ಈನಾಡಿನಲ್ಲಿನಡೆದ ಯಾವುದೇ ಸಾರ್ವತ್ರಿಕ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳಲ್ಲಿ ಮಕ್ಕಳ ಹಕ್ಕುಗಳಬಗ್ಗೆ ಪ್ರಸ್ತಾಪವೇ ಆಗಿಲ್ಲವೆಂಬುದು ಮಕ್ಕಳನ್ನುನಾವೆಷ್ಟು ನಿರ್ಲಕ್ಷಿಸುತ್ತಿದ್ದೇವೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಇನ್ನಾದರೂ ನಾವು ನಮ್ಮ ಮಕ್ಕಳ ಹಕ್ಕುಗಳನ್ನುಗೌರವಿಸುತ್ತ, ಭವಿತವ್ಯದಲ್ಲಿ ಅವರ ಹಕ್ಕುಗಳನ್ನುಸಂರಕ್ಷಿಸಲು ಹೆಜ್ಜೆಇಡೋಣ.
ಕೊನೆಯದಾಗಿ:
ಈ ಭೂಮಿಯಲ್ಲಿ ಹುಟ್ಟುವ ಪ್ರತಿ ಮಗುವಿಗೂ,ಸೂಕ್ತ ಆಹಾರ, ಆಶ್ರಯ, ಆರೋಗ್ಯ, ಶಿಕ್ಷಣ, ಪ್ರೀತಿ,ಮಮತೆ ದೊರಕಲೆಂದುಹಾರೈಸುತ್ತೇನೆ.
ನಿಮ್ಮಸಂಗಾತಿ,
ಕು.ಸ.ಮಧುಸೂದನ ರಂಗೇನಹಳ್ಳಿ