ಗಜಲ್
ಹೆಗಲ ಮೇಲೆ ತಲೆಯಿಟ್ಟು ಅತ್ತಾದರೂ ಒಮ್ಮೆ ಎಲ್ಲ ಹೇಳಿ ಹಗುರಾಗಬಾರದೇನೆ ಸಖಿ
ಕಣ್ಣೀರುಣ್ಣುತ್ತಾ ನಗುವ ನಾಟಕದಿ ಕಾಲದೂಡಿ ನೊಂದುಕೊಂಡು ನೀ ಬಳಲಬೇಡ
ಗಜಲ್
ಬೆಳಕಿನ ಬದಿಯಲ್ಲಿ ಪ್ರೇಮದ ದೀಪ ಹಚ್ಚಿಟ್ಟೆ ನಿನ್ನಿಂದ
“ಇನಿ”ಯೊಳಗಣ ಮಾಧುರ್ಯ ದಕ್ಕಿದ್ದೆ ನಿನ್ನಿಂದ
ಗಜಲ್
ಕಲ್ಲು ಹಾಸಿನ ಮೇಲೂ ಚಲನೆ ಸಾಗಿದೆ ನೋಡು
ನದಿಯ ನಡಿಗೆಗೆ ದಿಕ್ಕು ಸಿಕ್ಕಿದ್ದೇ ನಿನ್ನಿಂದ
ಗಜಲ್
ಗಜಲ್ ಪ್ರಭಾವತಿ ಎಸ್ ದೇಸಾಯಿ ಮಂಗಳಕೆ ಇಟ್ಟ ಕಾಲು ಅಂಗಳಕೆ ಇಡಲು ಹಿಂಜರಿಯುತಿದೆಒಲವ ಕೊಟ್ಟ ಹೆಗಲಿಗೆ ಇಂದು ಹೆಗಲು ಕೊಡಲು ಹಿಂಜರಿಯುತಿದೆ ಅನುರಾಗದಲಿ ಹೆತ್ತು ಹೊತ್ತ ಉಸಿರುಗಳು ಅನಾಥವಾಗಿವೆಒಡಲಲಿ ಹೊರಳಾಡಿದ ಜೀವ ಮಣ್ಣು ಹಾಕಲು ಹಿಂಜರಿಯುತಿದೆ ಮುದ್ದಾಡಿ ಚಂದಿರ ತೋರಿಸಿದ ಲಾಲಿ ಹಾಡು ಮೂಕವಾಗಿದೆಕೈತುತ್ತು ಉಣಿಸಿದ ಕೈಗೆ ಮುತ್ತು ನೀಡಲು ಹಿಂಜರಿಯುತಿದೆ ಕುಸುಮಗಳು ನಲಿಯುತಿದ್ದವು ಸೋದರ ಜೊತೆ ಈಗ ಮಂಕಾಗಿವೆದುಂಬಿಯು ಬಿರಿದ ಸುಮದ ಮಕರಂದ ಹೀರಲು ಹಿಂಜರಿಯುತಿದೆ ವಿಶ್ವವೇ ಮೌನವಾಗಿದೆ ಇದೆಂತಹ ದುರಿತಕಾಲ “ಪ್ರಭೆ”ಬೌದ್ಧ ಪೌರ್ಣಮಿ ಕಿರಣಕೆ […]
ಈ ವಾರದಿಂದ ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ
ಗಜಲ್
ಗಜಲ್ ಪ್ರಭಾವತಿ ಎಸ್ ದೇಸಾಯಿ ಬಾನಲಿ ಹಾರುವ ಪತಂಗದ ನೂಲು ಕೆಳಗಿಟ್ಟಿರುವೆ ಶಿವಾತೊಗಲು ಗೊಂಬೆಗಳ ಆಡಿಸುವ ಸೂತ್ರ ಮೇಲಿಟ್ಟಿರುವೆ ಶಿವಾ ಕುರುಡು ಕಾಂಚಾಣವು ತಿಪ್ಪೆಯಲಿ ಬಿದ್ದು ಒದ್ದಾಡುತಿದೆಹಸಿವು ಇಂಗಿಸುವ ಆ ಶಕ್ತಿ ನೇಗಿಲಿಗೆ ಕೊಟ್ಟಿರುವೆ ಶಿವಾ ಸಂತೆಯಲಿ ಜೀವಾನಿಲ ಸಿಗದೆ ಪ್ರಾಣಪಕ್ಷಿ ಬಿಕ್ಕುತಿದೆಪ್ರಕೃತಿಯ ಒಡಲಲಿ ಪ್ರಾಣವಾಯು ಮುಚ್ಚಿಟ್ಟಿರುವೆ ಶಿವಾ ಅವನಿಯ ಹುಳು ಹೆಮ್ಮೆಯಲಿ ಶಶಿ ಅಂಗಳದಲಿ ತೆವಳುತಿದೆಇಳೆಯ ನಂದನವನ ನಾಶ ಮಾಡಿ ಮಸಣ ಕಟ್ಟಿರುವೆ ಶಿವಾ ಜಗದ ಸೃಷ್ಟಿಯ ಸೊಬಗು ಕಾಣದೆ “ಪ್ರಭೆ” ಯ ಮನ ನರಳುತಿದೆಮುಗ್ಧ […]
ಗಜಲ್
ಮಣಭಾರ ತಲೆಯಲ್ಲಿ ತೋಲನ ತಪ್ಪದೆ
ಪಾದಗಳ ಇಟ್ಟು ಸೊರಗುತಿದೆ ನೋಡಿ||
ಗಜಲ್
ಅರಿಷಡ್ವರ್ಗಗಳಿಗೆ ಅಂಕುಶ ಹಾಕಿ ನೀ ವಿಶ್ವ ಮಾನವನಾಗು ಅಬಾಟೇ
ಪಂಚ ಭೂತಗಳ ಮುನಿಸಿನ ಕೈ ವಶವಾಗುತ್ತಿರುವೆ ಇದು ನಿನ್ನ ಕರ್ಮಫಲ
ಗಜಲ್
ತುತ್ತು ಕೂಳಿಗೂ ಪರದಾಡುವ ಪರಿಸ್ಥಿತಿ
ಬೇತಾಳದಂತೆ ಬೆನ್ನುಹತ್ತಿದೆಯಲ್ಲ|
ಮುಳ್ಳುಕಂಟಿಯಲಿ ಸಾವಿನ ಸೋಪಾನವ
ತುಳಿಯುತ್ತಿದೆ ಈ ಬಾಲೆ||
ಗಜಲ್
ಈ ದೇಹಕೆ ಅವಳೇ ಉಸಿರೆಂಬ ಭ್ರಮೆಯಲಿ ಮುಳುಗಿದ್ದೆ
ಒಲವ ರಸಪಾಕ ಉಣಿಸಿದರೂ ಪ್ರೀತಿಸಲಿಲ್ಲ ಅವಳು