ಗಜಲ್
ಶೋಭಾ ನಾಯ್ಕ ಹಿರೇಕೈ
ಕತ್ತಲೋಡಿದೆ ಬೆಳಕು ಹರಿದಿದ್ದೆ ನಿನ್ನಿಂದ
ಹೂವು ಅರಳಿತು ಗಿಡವು ಚಿಗುರಿದ್ದೆ ನಿನ್ನಿಂದ
ಬಯಲ ಗಾಳಿಯು ತಂದ ರಾಗ ಆಲಿಸಿ ಕೇಳು
ಹಕ್ಕಿ ಕೊರಳಲಿ ಒಲವು ಜಿನುಗಿದ್ದೇ ನಿನ್ನಿಂದ
ಕಲ್ಲು ಹಾಸಿನ ಮೇಲೂ ಚಲನೆ ಸಾಗಿದೆ ನೋಡು
ನದಿಯ ನಡಿಗೆಗೆ ದಿಕ್ಕು ಸಿಕ್ಕಿದ್ದೇ ನಿನ್ನಿಂದ
ಕಡಲ ಹನಿ ಹನಿಯೆಲ್ಲ ಮುಗಿಲ ಸೇರಿತು ಹೇಗೆ?
ಗರ್ಭ ಕಟ್ಟಿದ ಮೋಡ ಹೆತ್ತಿದ್ದೇ ನಿನ್ನಿಂದ
ಸೃಷ್ಟಿ ಬೆರಗನು ಕುರುಡಿ ಕಂಡಿದ್ದೇ ನಿನ್ನಿಂದ
“ಶೋಭೆ” ಯೊಳಗಿನ ಕವಿತೆ ಬದುಕಿದ್ದೇ ನಿನ್ನಿಂದ
********************
ಚೆನ್ನಾಗಿದೆ…
ತುಂಬಾ ಚೆಂದ ಇದೆ ಶೋಭಾ
ನದಿಯ ನಡಿಗೆಗೆ ದಿಕ್ಕು ಸಿಕ್ಕಿದ್ದೇ ನಿನ್ನಿಂದ
ಸೃಷ್ಟಿ ಬೆರಗನು ಕರುಡಿ ಕಂಡದ್ದೇ ನಿನ್ನಿಂದ
…….ಅದ್ಭುತ ಸಾಲುಗಳು. ಶೋಭಾ ಪ್ರತಿಭಾನ್ವಿತೆ ಕವಯಿತ್ರಿ . ಕವಿತೆ ಮಾತ್ರವಲ್ಲ, ಕತೆ, ಪ್ರಬಂಧ, ಲಹರಿ ಬರೆಯ ಬಲ್ಲರು. ಬರೆದಿದ್ದಾರೆ. ವಿಮರ್ಶೆಯನ್ನು ಸಹ. ಈಗ ಗಜಲ್….
ಈ ಬಹುಮುಖ ಪ್ರತಿಭೆ ಬೆಳೆಯಲಿ…..
ಚೆನ್ನಾಗಿದೆ. ಶೋಭೆ ಪದ ಸಮಂಜಸವಾಗಿ ಗಝಲ್ ಗೆ ಒಪ್ಪಿ ಬಂದಿದೆ.
ಸುಂದರ, ಸೊಗಸಾದ ಗಜಲ್. ತುಂಬಾ ದಿನಗಳ ನಂತರ ಉಣಿಸಿದ ಗಜಲ್ ಕವನ.
ಚಂದವಿದೆ ಗಝಲ್