ಗಜಲ್
ನಾಗರಾಜ್ .ಎಚ್ .ಮೈದೂರು
ಕತ್ತಲಲ್ಲಿ ಬೆಳಕಿದೆ ಎಂದು ಮೊಟ್ಟ ಮೊದಲಿಗೆ ತಿಳಿದದ್ದು ನಿನ್ನಿಂದ
ಇರುಳ ದೀಪ ಹೊಸ ಭಾಷೆ ಕಲಿಸಿದ್ದು ನಿನ್ನಿಂದ
ಕಡಲು ಸೇರಿದ ನದಿಗಳ ದನಿ ಆಲಿಸುವುದ ಕಲಿತೆ ನಿನ್ನಿಂದ
ದಂಡೆಯ ಪಿಸುಮಾತಿಗೆ ಪ್ರೇಮದ ಭಾಷೆಯ ಉತ್ಕಟತೆ ಸಿಕ್ಕಿದ್ದು ನಿನ್ನಿಂದ
ಬದುಕಿನ ಕಲ್ಲು ಹೃದಯದ ಹಾದಿಯಲ್ಲಿ ತಾಯ್ತನದ ಸ್ಪರ್ಶ ದಕ್ಕಿದ್ದು ನಿನ್ನಿಂದ
ದ್ವೇಷ ಕುಹಕ ತಂತ್ರಗಳ ಜಾಡಿನಲ್ಲಿ ಒಲವು ಕಾಪಾಡುವುದ ಕಲಿತೆ ನಿನ್ನಿಂದ
ಹಗಲಲ್ಲಿ ಸುಳಿವ ಗಾಳಿಯಲಿ ತೇಲಿ ಬರುವ ಸಾಂತ್ವಾನದ ನುಡಿಗಳ ನುಡಿಸುವುದ ಕಲಿತೆ ನಿನ್ನಿಂದ
ಉರಿ ಬಿಸಿಲ ಬದುಕಿನಲಿ ನಗುನಗುತ ದಾರಿ ಹೋಕರಿಗೆ ಹಿಗ್ಗು ಹಂಚಿದೆ ನಿನ್ನಿಂದ
ಬೆಳಕಿನ ಬದಿಯಲ್ಲಿ ಪ್ರೇಮದ ದೀಪ ಹಚ್ಚಿಟ್ಟೆ ನಿನ್ನಿಂದ
“ಇನಿ”ಯೊಳಗಣ ಮಾಧುರ್ಯ ದಕ್ಕಿದ್ದೆ ನಿನ್ನಿಂದ
******************
ಪ್ರೀತಿ ಸತ್ಯವಾಗಿದ್ದರೆ ಅದರ ಉತ್ಕಟತೆ ಎಂತಹ ಕುಹಕ ದ್ವೇಷವನ್ನು ಜಯಿಸಬಲ್ಲದು.ದೀಪ ಹಚ್ಚುವುದರ ಮೂಲಕ ದಹಿಸಬಲ್ಲದು!!
ಎಂಬುದು ಈ ಗಜಲ್ ಹೆಗ್ಗಳಿಕೆ..
ಥ್ಯಾಂಕ್ಸ ಗೆಳೆಯ