Category: ಗಝಲ್

ಗಜಲ್

ಗಾಯವಿನ್ನೂ ಹಾಗೇ ಇದೆ ಮತ್ತೇಕೆ ಬರೆ ಎಳೆವೆ
ದಯೆ ತೋರುವ ಒಲುಮೆಯನ್ನೇ ಮರೆಯುತ್ತಿರುವೆಯಾ ದೇವಾ

ಗಜಲ್

ಭೋಜರಾಜ ಕಾಳಿದಾಸನಿಂದ ಶ್ರದ್ದಾಂಜಲಿ ಕೇಳಿ ಖುಷಿ ಪಟ್ಟು ಜೀವ ಬಿಟ್ಟಿದ್ದನಂತೆ ಆಗ
ಬದುಕಿನ ಅವಿಸ್ಮರಣೀಯ ಘಟನೆ ನೆನಪಿಸಿ ಆ ಜೀವಗಳಿಗೆ ಖುಷಿ ಕೊಡಬಹುದು ಈಗ

ಗಜಲ್

ಗಜಲ್ ಎ . ಹೇಮಗಂಗಾ ರೋಗಿಗಳ ಶುಶ್ರೂಷೆಯಲಿ ನಿರತರಾಗಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟುನಿರೋಗಿಯಾಗಲೆಂದು ಶ್ರಮಿಸುತ್ತಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟು ನಮಗೂ ಬದುಕಿದೆ ಎಂಬುದನೇ ಮರೆತು ಬದುಕಬೇಕಿದೆ ಇಂದುಹಗಲಿರುಳು ನಿರುತ ದುಡಿಯುತ್ತಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟು ಕಡುವೈರಿ ವೈರಾಣು ಮಹಾಮಾರಿಯಾಗಿ ಪಂಥಾಹ್ವಾನ ನೀಡಿದೆರಣಕಲಿಯಂತೆ ಹೋರಾಡುತ್ತಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟು ಸಾವಿನ ಕಬಂಧಬಾಹು ಉಸಿರುಗಟ್ಟಿಸಿದೆ ವಯೋಭೇದವಿಲ್ಲದೇಪಾರಾಗುವ ದಾರಿಯ ಅರಸುತ್ತಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟು ತೂಗುಗತ್ತಿ ಎಂದು ಬೀಳುವುದೋ ಭಯ ಬೇರೂರಿದೆ ಎದೆಯಲ್ಲಿಜೀವಗಳ ಉಳಿಸಲು ಪಣ ತೊಟ್ಟಿದ್ಧೇವೆ ಪ್ರಾಣವನ್ನು ಪಣಕ್ಕಿಟ್ಟು **************************

ಗಜಲ್

ಗಜಲ್ ಸಿದ್ಧರಾಮ ಹೊನ್ಕಲ್ ಏಳು ದಶಕಗಳೇ ಕಳೆದವು ಹೊಸ ಮಳೆಯು ಸುರಿಯಲಿಲ್ಲ ನೋಡು ಸಾಕಿಭೂತಾಯಿ ಮಕ್ಕಳ ಬಂಜೆತನ ಹಿಂಗಲೇಯಿಲ್ಲ ನೋಡು ಸಾಕಿ ದುಡಿ ದುಡಿದು ನೊಂದ ರೈತನ ಮುಖದಲ್ಲಿ ನಗೆಯು ಅರಳಲಿಲ್ಲಜಗಕೆ ಅನ್ನ ಹಾಕುವವರ ಬಾಯಿಯೇ ಸಿಹಿಯಾಗಲಿಲ್ಲ ನೋಡು ಸಾಕಿ ಗಾಂಧಿ ಕಂಡ ಗ್ರಾಮೀಣ ಭಾರತದ ಕನಸುಗಳೆಲ್ಲ ಜಾರಿ ಕಡಲ ಪಾಲಾದವು ಈ ಮಣ್ಣಲಿಹಳ್ಳಿ ಹಳ್ಳಿಗಳೆಲ್ಲ ಗುಳೇ ಎದ್ದು ಹೋಗಿ ಸುಖವೆಂಬುದೇ ಸುಳಿಯಲಿಲ್ಲ ನೋಡು ಸಾಕಿ ಕುರ್ಚಿಯ ಕನಸಿನಲಿ ಸ್ವಾರ್ಥದ ಸೆಳವಿನಲಿ ದೇಶ ನಮ್ಮ ನಮ್ಮವರಲ್ಲಿಯೇಹರಾಜಾಯಿತುಅಧಿಕಾರದ ಅಮಲಿನಲ್ಲಿ […]

ಗಜಲ್

ಗಜಲ್ ಅರುಣಾ ನರೇಂದ್ರ ಇಲ್ಲಿ ಉಸಿರಿಗಾಗಿ ಒದ್ದಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿಅಲ್ಲಿ ಬದುಕಿಗಾಗಿ ಹುಡುಕಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಚಂದ್ರಮನ ಮುಖ ನೋಡಿ ತಿಂಗಳ ಪೂರ್ತಿ ರೋಜಾ ಮಾಡಿರುವೆಇವರು ನೋಟುಗಳ ಮುದ್ದಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಶಹರಿ ಹೊತ್ತಲ್ಲಿ ಸತ್ತವರು ನೆನಪಾಗಿ ಕಣ್ಣು ತುಂಬಿಕೊಳ್ಳುತ್ತವೆಇಫ್ತಾರ್ ಮಾಡುತ್ತ ಮಿಡುಕಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಹಗಲೆನ್ನದೆ ಇರುಳೆನ್ನದೆ ನಮಾಜು ಮಾಡಿ ದುವಾ ಬೇಡಿದ್ದೇನೆದೇಶದ ದಳ್ಳುರಿ ತಣ್ಣಗಾಗದೆ ತಡಕಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಕೆಂಪಾದ ಮೆಹಂದಿಯ ರಂಗು ಕಣ್ಣ ಸುರುಮಾವನ್ನೇ ಇರಿಯುತ್ತಿದೆಕಾಣದ […]

ಗಜಲ್

ನಿರ್ಭಯದಿ ಉಸಿರಾಡುವ ದಿನಗಳು ಸೇರಿಹೋಗಿವೆ ಭೂತಕ್ಕೆ
ಕಾಲನ ತುಳಿತಕೆ ಸತ್ತವನೂ ಅರಸಲೇಬೇಕಿದೆ ಮಸಣದಿ ತಾವು

ಗಜಲ್

ಗಜಲ್ ಡಾ.ರೇಣುಕ ಅರುಣಕುಮಾರ ಕಠಾರಿ ಹಣೆ ಬರಹವೆಂದು ಕೈ ಕಟ್ಟಿ ಮಾತಿದ್ದೂ ಸುಮ್ಮನೆ ಕೂಡಬೇಕೆ ಈ ಲೋಕದೆದುರುಒಳಮನೆಯ ಹೊಸ್ತಿಲಳೊಗೆ ಮೈಲಿಗೆಂದು ಕುದಿಯಬೇಕೆ ಈ ಲೋಕದೆದುರು ಮಡಿ ಮೈಲಿಗೆಯ ಮನದೆದುರು ಬೆತ್ತಲೆ ಒಂದಾಗಿದೆ ಬದುಕುಮನಸಿಗೆ ಮೈಲಿಗೆ ಇಲ್ಲವೆಂದು ತಿಳಿದರು ದೂರವಾಗಬೇಕೆ ಈ ಲೋಕದೆದುರು ಮೂರರೊಳಗೆ ಬಂಧನ ಮೂರರೊಳಗೆ ಬೆಂದೇನಾ ಧರ್ಮದೆದುರುಹೆಣ್ಣನೇ ದೇವರು ಮಾಡಿದ ಬದುಕಿನೊಳಗೆ ಮಾತನು ಅಡವಿಡಬೇಕೆ ಈ ಲೋಕದೆದುರು ಬೆಂಕಿಗೆ ಹಾರಿದವಳೊಬ್ಬಳು ಬೆನ್ನು ಹತ್ತಿದವಳೊಬ್ಬಳು ಕಲ್ಲಾಗಿ ಕಾದವಳೊಬ್ಬಳು ಚರಿತ್ರೆಯೇ ಹೀಗೆಗಾದೆಯೊಳಗೆ ನೇಣು ಬಿಗಿದರೂ ನಮ್ಮ ಕುಲವನು ಕುರುಡಾಗಬೇಕೆ […]

ಅಮ್ಮನಿಗೊಂದು ಗಜಲ್

ಅಮ್ಮನಿಗೊಂದು ಗಜಲ್ ಸುಜಾತಾ ರವೀಶ್ ಅಣುರೂಪದಲಿಂದ ಅಸುವ ತುಂಬಿ ಪೊರೆದ ಚೈತನ್ಯಧಾಯಿ ಅಮ್ಮ ಭ್ರೂಣವಾದಾಗಿನಿಂದ ಕಸುವ ನೀಡಿ ಸಾಕಿದ ಜೀವನಧಾಯಿ ಅಮ್ಮ ನವಮಾಸಗಳು ಒಡಲಲ್ಲಿ ಕಂದನ ಭಾರ ಹೊತ್ತು ಸಲಹಿದೆಯಲ್ಲಮ್ಮ ತನ್ನ ಜೀವವನೆ ಒತ್ತೆಯಿಟ್ಟು ಭುವಿಗೆ ತಂದ ಮಮತಾಮಯಿ ಅಮ್ಮ ಅಮೃತಸದೃಶ ಎದೆ ಹಾಲೂಡಿಸಿ ಶಕ್ತಿ ತುಂಬಿಸಿದೆಯಲ್ಲಮ್ಮ ಅನೃತವಾಡದೆ ಬದುಕು ನಡೆಸ ಕಲಿಸಿದ ವಾತ್ಸಲ್ಯಮಯಿ ಅಮ್ಮ  ಕೆಟ್ಟ ಮಕ್ಕಳಿರಬಹುದು ಎಂದೂ  ಕುಮಾತೆಯರು ಲೋಕದಲ್ಲುಂಟೇನಮ್ಮ? ಸಿಟ್ಟು ಮಾಡಿಕೊಳ್ಳದೇ ಯಶಸ್ಸಿನ ದಾರಿ ತೋರಿದ ಸಹನಾಮಯಿ ಅಮ್ಮ   ವಿಜಯ ಪಥದಿ ಸಾಧನೆಯ ಕಾಣಲು ದಾರಿದೀಪ ನೀನೇನಮ್ಮ ಸುಜಿಯ ರಥದ […]

ಗಜಲ್

ಗಜಲ್ ಪ್ರತಿಮಾ ಕೋಮಾರ ಹರಿಯುವ ನದಿಯೂ ಸ್ತಬ್ಧವಾದಂತೆ ಕಾಣುತ್ತಿದೆ ಇಂದುಮಾತಾಡುವ ಮನವೆಲ್ಲಾ ಮೌನ ಹೊದ್ದು ನಡೆಯುತ್ತಿದೆ ಇಂದು ಸೂರ್ಯಚಂದ್ರರ ಆಗಮನವೆಲ್ಲ ನಿಯಮ ಬದ್ಧವಾಗೇ ಇದೆಜಗವು ಮಾತ್ರ ಕತ್ತಲ ಕೂಪದಲ್ಲಿ ಮುಳುಗುತ್ತಿದೆ ಇಂದು ನಿನ್ನೆವರೆಗೂ ಹೂ ಮೊಗದಲ್ಲೆಲ್ಲ ಪ್ರೀತಿ ,ಚೆಲುವು ನಗುತ್ತಿತ್ತು ಎಲ್ಲರ ಒಳಹೊರಗೆ ಬರೀ ಆಕ್ರಂದನವೇ ಕೇಳಿ ಬರುತ್ತಿದೆ ಇಂದು ಭರವಸೆಯ ಬೆಳಕು ನೋವ ಜಡವ ಹತ್ತಿಯಾಗಿಸುವುದು  ನಡುಗುವ ಭಯವೇ ಎಲ್ಲೆಲ್ಲೂ ಸುಳಿದಾಡುತ್ತಿದೆ ಇಂದು ಯಾರದೋ ಹನಿ ಕಣ್ಣೀರು “ಪ್ರತಿ”ಯ ವಿಲವಿಲ ಅನ್ನಿಸುತ್ತಿತ್ತುನಮ್ಮವರ  ಸಾವಿಗೂ ಸ್ಪಂದಿಸಲಾಗದೆ ಎದೆಯು ಕಲ್ಲಾಗುತ್ತಿದೆ […]

Back To Top