ಗಜಲ್
ಸರೋಜಾ ಶ್ರೀಕಾಂತ ಅಮಾತಿ


ಗೌಜು ಗದ್ದಲವೇ ಇಲ್ಲದಂತಾಗಿದೆ ನೋಡುತ್ತಿರುವೆಯಾ ದೇವಾ
ಗಾಢ ನಿಶ್ಶಬ್ಧತೆಯಲ್ಲಿ ಪ್ರಕೃತಿಯ ಮಾತನ್ನು ಆಲಿಸುತ್ತಿರುವೆಯಾ ದೇವಾ
ಗಾಯವಿನ್ನೂ ಹಾಗೇ ಇದೆ ಮತ್ತೇಕೆ ಬರೆ ಎಳೆವೆ
ದಯೆ ತೋರುವ ಒಲುಮೆಯನ್ನೇ ಮರೆಯುತ್ತಿರುವೆಯಾ ದೇವಾ
ಕಾಣದ ಕ್ರಿಮಿ ಮಸಣವನ್ನಾಗಿಸಿ ಅಳಿಸುತ್ತಿದೆ ವಿಶ್ವವನ್ನೇ
ಕೋಪ ಶಾಪದ ಆಪಾದನೆಯನ್ನೂ ಸ್ವೀಕರಿಸುತ್ತಿರುವೆಯಾ ದೇವಾ
ಮುನಿಸೊಮ್ಮೆ ಸರಿಸಿ ಕ್ಷಮಿಸು ಸಾಕಿನ್ನು ಸ್ವಾಮಿ
ಹಸನಾದ ಮನಸ್ಸುಗಳನ್ನಿನ್ನೂ ಪರೀಕ್ಷಿಸುತ್ತಿರುವೆಯಾ ದೇವಾ
‘ಸರೋಜೆ’ಯ ಭಕ್ತಿಯು ಸಾಸಿವೆಯಷ್ಟೇ ಹರಸು ತಂದೆ
ಸರ್ವಶಕ್ತ ನೀನಾದರೂ ಬದಲಾವಣೆಯ ದಾರಿ ಕಾಯುತ್ತಿರುವೆಯಾ ದೇವಾ
*******