ಗಜಲ್
ಪ್ರಕಾಶಸಿಂಗ್ ರಜಪೂತ
ನಿನ್ನ ಪ್ರೀತಿ ಬಿಟ್ಟರೆ ಬೇರೆ ಏನು ಬಯಸಲಿ
ನಿನ್ನ ಸಂಗ ಪಡೆಯುವಲ್ಲಿ ನನ್ನ ಉಸಿರು ದಯೀಸಲಿ
ನಾ ಪ್ರವಾಸಿ ನೀನು ಮಾರ್ಗ ನಿಲ್ಲ ದಿರಲಿ ನಮ್ಮ ಪಯಣ
ಏನೇ ಸಿಗಲಿ ಪ್ರೀತಿಯಲ್ಲಿ ಎಲ್ಲವೂ ಮನ ಸಹಿಸಲಿ
ಶೈತ್ಯ ಚಂದ್ರದ ಬಾಳು ಬಯಕೆ ಕುಣಿಯ ಬಹುದು ನಿನ್ನ ಲಯಕೆ
ಗೊತ್ತು ರವಿಯ ತಾಪ ನನಗೆ ದಹಿಸೋದಾದರೆ ದಹಿಸಲಿ
ನಾನು ದೇಹಾ ನೀನು ಜೀವಾ ನನ್ನ ಗರ್ಭದಿ ನೀ ಶಿವಾ
ನಮ್ಮ ಮಿಲನದ ಭಾರ ಇನ್ನು ಈ ನಿಸರ್ಗಾ ವಹಿಸಲಿ
ಸೋಲುಗೆಲುವಿನ ಬಾಳಿನಲ್ಲಿ ನಡೆಯ ಬೇಕಿದೆ ತಾಳಿನಲ್ಲಿ
ಬಯಸುವದು ನಿನ್ನ ಈ”ಪ್ರಕಾಶ್”ನಮ್ಮ ಪ್ರೀತಿಯು ಜಯೀಸಲಿ
****