ಗಜಲ್
ಎ . ಹೇಮಗಂಗಾ
ರೋಗಿಗಳ ಶುಶ್ರೂಷೆಯಲಿ ನಿರತರಾಗಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟು
ನಿರೋಗಿಯಾಗಲೆಂದು ಶ್ರಮಿಸುತ್ತಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟು
ನಮಗೂ ಬದುಕಿದೆ ಎಂಬುದನೇ ಮರೆತು ಬದುಕಬೇಕಿದೆ ಇಂದು
ಹಗಲಿರುಳು ನಿರುತ ದುಡಿಯುತ್ತಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟು
ಕಡುವೈರಿ ವೈರಾಣು ಮಹಾಮಾರಿಯಾಗಿ ಪಂಥಾಹ್ವಾನ ನೀಡಿದೆ
ರಣಕಲಿಯಂತೆ ಹೋರಾಡುತ್ತಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟು
ಸಾವಿನ ಕಬಂಧಬಾಹು ಉಸಿರುಗಟ್ಟಿಸಿದೆ ವಯೋಭೇದವಿಲ್ಲದೇ
ಪಾರಾಗುವ ದಾರಿಯ ಅರಸುತ್ತಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟು
ತೂಗುಗತ್ತಿ ಎಂದು ಬೀಳುವುದೋ ಭಯ ಬೇರೂರಿದೆ ಎದೆಯಲ್ಲಿ
ಜೀವಗಳ ಉಳಿಸಲು ಪಣ ತೊಟ್ಟಿದ್ಧೇವೆ ಪ್ರಾಣವನ್ನು ಪಣಕ್ಕಿಟ್ಟು
**************************
ಸಕಾಲಿಕ , ಚೆಂದದ ಗಜಲ್ ಮೇಡಂ..
ಅಬಾಟೇ.
ಪ್ರಸ್ತುತ ಪರಿಸ್ಥಿತಿ ಯಲ್ಲಿ ಜೀವ ಉಳಿಸುವ ಸಲುವಾಗಿ ತಮ್ಮ ಜೀವ ಒತ್ತೆ ಇಟ್ಟು ಕೆಲಸ ಮಾಡುತ್ತಿರುವ ದಾದಿಯರ ಮನದ ತುಮುಲ ಚೆನ್ನಾಗಿ ಚಿತ್ರಿಸಿದ್ದೀರಿ
ತುಂಬಾನೇ ಚೆನ್ನಾಗಿ ಬರೆಯುತ್ತೀರಾ ಮೆಡಮ್ ತುಂಬಾನೇ ಖುಷಿಯಾಯಿತು