ನನ್ನ ಇಷ್ಟದ ಕವಿತೆ
ನನ್ನ ಇಷ್ಟದ ಕವಿತೆ ದ.ರಾ.ಬೇಂದ್ರೆ ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ ವಾರದಾಗ ಮೂರಸರತಿ ಬಂದು ಹೋದಾಂವಾ ||ಪಲ್ಲ ೧) ಭಾರಿ ಜರದ ವಾರಿ ರುಮ್ಮಾಲಾ ಸುತ್ತಿಕೊಂಡಾಂವಾ ತುಂಬು-ಮೀಸಿ ತೀಡಿಕೋತ ಹುಬ್ಬು ಹಾರಸಾಂವಾ ಮಾತು ಮಾತಿಗೆ ನಕ್ಕ ನಗಿಸಿ ಆಡಿಸ್ಯಾಡಾಂವಾ ಏನೋ ಅಂದರ ಏನೋ ಕಟ್ಟಿ ಹಾಡ ಹಾಡಾಂವಾ ಇನ್ನೂ ಯಾಕ………. ೨) ತಾಳೀಮಣೀಗೆ ಬ್ಯಾಳಿಮಣಿ ನಿನಗ ಬೇಕೆನಂದಾಂವಾ ಬಂಗಾರ-ಹುಡೀಲೇ ಭಂಡಾರಾನ ಬೆಳೆಸೇನಂದಾಂವಾ ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ ಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾ […]
ಹಿರಿಯ ಕವಿಗಳಹಳೆಯ ಕವಿತೆಗಳು
ಇತರೆ ಹಿರಿಯ ಕವಿಗಳಹಳೆಯ ಕವಿತೆಗಳು ಡಾ.ಎಂ.ಗೋಪಾಲಕೃಷ್ಣ ಅಡಿಗ ಪ್ರಾರ್ಥನೆ ಪ್ರಭೂ,ಪರಾಕುಪಂಪನ್ನೊತ್ತಿಯೊತ್ತಿ ನಡ ಬಗ್ಗಿರುವಬೊಗಳುಸನ್ನಿಯ ಹೊಗಳುಭಟ್ಟ ಖಂಡಿತ ಅಲ್ಲ;ಬಾಲವಾಡಿಸಿ ಹೊಸೆದು ಹೊಟ್ಟಿ ಡೊಗ್ಗುಸಲಾಮುಬಗ್ಗಿ ಮಿಡುಕುವ ಸಂಧಿವಾತ ಪೀಡಿತನಲ್ಲ;ತನ್ನ ಮೋಂಬತ್ತಿ ನಂದಿಸಿ ಸಂದಿಬೆಳಕಲ್ಲಿಜುಮ್ಮನರಸುವ ಷಂಡ ಜಿಗಣೆಯಲ್ಲ;ಕಾಲಪುಷ್ಟರ ಪೃಷ್ಠಕೊಡ್ಡಿ ಬೆನ್ನ, ಕಠಾರಿಒರೆಗೆ ತುರುಕಿರುವ ಹೆಂಬೇಡಿಯಲ್ಲ. ಈ ಸಣ್ಣ ದೊಂದಿಯನ್ನೆತ್ತಿ ಹೊತ್ತಿನ ಮುಖಕ್ಕೆಬೆಳಕು ಹರಿದದ್ದು ತನ್ನಿಂದಲೇ ಎಂದು ತನ್ನೊಳಗೆಮುಖ ಕಿರಿವ, ನೆಣ ಬಿರಿವ, ಬಗ್ಗಲಾರದ ಬೊಜ್ಜ,ಕೋಲುನಡಿಗೆಕವಾತು ಕಲಿತ ಕೊಬ್ಬಿದ ಹುಂಜ:ವಾಸಿಮಾಡಯ್ಯ ಈ ಜಲೋದರದ ಭಾರದ ಜಡ್ಡ.ಕುಮರುತೇಗಿನ ಕಪಿಲೆಹೊಡೆದು ಹಗಲೂ ಇರುಳುತೇಗಿಗೊಂದು ಅಮೋಘ ಸ್ಫೂರ್ತಿಗೀತವ […]
ಲಲಿತ ಪ್ರಬಂಧ
ಲಲಿತ ಪ್ರಬಂಧ ನನ್ನ ಲಿಯೋ ಸಮತಾ ಆರ್. ಒಂದು ದಿನ ಎಂದಿನಂತೆ ಶಾಲೆಗೆ ಹೊರಟು ಸಿದ್ದಳಾಗಿ ಹೊರಬಂದು ಕಣ್ಣಾಡಿಸಿದರೆ, ಲಿಯೋ ಅವನಿರುವ ಜಾಗದಲ್ಲಿ ಇಲ್ಲ!”ಲಿಯೋ ರೆಡಿ ಏನೋ, ಎಲ್ಲಿದ್ದೀಯೋ’?”ಎಂದಾಕ್ಷಣ”ನಾನಾಗಲೇ ರೆಡಿಯಾಗಿ ನಿಂತಿದ್ದೀನಿ ಬಾರಕ್ಕ”ಎಂಬ ಉತ್ತರ ಕೇಳಿಸಿತು, ಆದರೆ ಕಾಣಲಿಲ್ಲ. “ಲೋ, ಎಲ್ಲೋ ಇದಿಯಾ, ಇರೋ ಜಾಗದಲ್ಲಿರೋಕೆ ನಿಂಗೇನೋ ಕಾಯಿಲೆ! ಈಗ್ಲೇ ಲೇಟಾಗಿದೆ ,ಇನ್ನು ನಿನ್ನನ್ನು ಹುಡುಕಿಕೊಂಡು ಬೇರೆ ಸಾಯ್ಬೇಕು” ಎಂದು ಸಿಟ್ಟಿನಿಂದ ಕಿರುಚಿದಾಗ,” ಅಕ್ಕ ಒಂಚೂರು ಈ ಕಡೆ ನೋಡು”ಎಂದು ನನ್ನ ಬಲಬದಿಯ ಹತ್ತು ಮಾರು […]
ನನ್ನ ತಂದೆ, ನನ್ನ ಹೆಮ್ಮೆ
ನೆನಪು ಶ್ರೀನಿವಾಸ ಖರೀದಿ ತಂದೆಯವರ ಹೆಸರು: ಶ್ರೀ ಕೆ.ಎನ್. ಶ್ರೀಧರಮೂರ್ತಿ ಭದ್ರಾವತಿ ಹುಟ್ಟಿ ಬೆಳೆದದ್ದು : ತರೀಕೆರೆ / ರಂಗೇನಹಳ್ಳಿ ವ್ಯವಹಾರ ಸ್ಥಳ : ಭದ್ರಾವತಿ ಸ್ವಾತಂತ್ರಕ್ಕಾಗಿ ಬ್ರಿಟೀಷರ ವಿರುದ್ದದ ಹೋರಾಟದಲ್ಲಿ ಭಾಗಿಯಾಗಿದ್ದ ನನ್ನ ತಂದೆ ಭದ್ರಾವತಿಯ ದಿವಂಗತ ಶ್ರೀ ಕೆ. ಎನ್.ಶ್ರೀಧರಮೂರ್ತಿ ಯವರು. 1931ರಲ್ಲಿ ಜನಿಸಿದ ಇವರು, ತಮ್ಮ ಹತ್ತನೇ ವಯಸ್ಸಿನಲ್ಲಿ ಮಹಾತ್ಮ ಗಾಂಧೀಜಿ ರವರ ಪಾದಗಳ ಸ್ಪರ್ಷಿಸುವ ಮೂಲಕ ತನ್ನಲ್ಲಿ ಸ್ವಾತಂತ್ರ ಹೋರಾಟದ ಕಿಚ್ಚು ರೂಡಿಸಿಕೊಂಡವರು. ಚಿಕ್ಕಂದಿನಲ್ಲೇ ನಾಯಕತ್ವಗುಣಗಳನ್ನು ಬೆಳೆಸಿಕೊಂಡಿದ ಇವರು, ತರೀಕೆರೆಯಲ್ಲಿ ತನ್ನ […]
ಮಕ್ಕಳ ವಿಭಾಗ
ಬಾವುಟ ಪದ್ಯ ಮಲಿಕಜಾನ ಶೇಖ ಅತ್ತ ನೋಡು ಇತ್ತ ನೋಡು ಸುತ್ತ ನೋಡು ಎತ್ತ ನೋಡುಬೀದಿ ನೋಡು ಕೇರಿ ನೋಡುನೋಡು ನೀನು ಬಾವುಟ ಮಾಡು ನೀನು ಸೆಲ್ಯೂಟ್… ಕೆಸರಿ ಬಿಳಿ ಹಸಿರು ಮೂರು ಬಣ್ಣ ನಡುವೆ ಚಕ್ರ ಒಂದು ನೀಲಿ ನೋಡು ಸತ್ಯ ಶಾಂತಿ ನ್ಯಾಯ ಪ್ರೀತಿತ್ಯಾಗ ಶೌರ್ಯ ನೀತಿ ಮೌಲ್ಯಐಕ್ಯ ಒಂದು ಪ್ರತೀಕ ನೋಡು ಪರತಂತ್ರವ ಕಳಚಿ ಬಿಟ್ಟುಸ್ವಾತಂತ್ರವ ಮೆರೆಸಿ ಕೊಟ್ಟುದೇಶದೊಂದು ಪ್ರತೀಕ ನೋಡು ಮೆಡಂ ಕಾಮಾ ಹಾರಿಸಿದಭಗತ ಗುರು ಪ್ರೇಮಿಸಿದಗಾಂಧೀನೆಹರು ಪ್ರೀತಿಸಿದ ಪ್ರತೀಕ ನೋಡು ಹಲವು ಭಾವ ಹಲವು ಭಾಷೆಹಲವು […]
ಸ್ವಾತಂತ್ರ್ರ್ಯೋತ್ಸವ ಆಚರಿಸುವ ಹೊತ್ತಿನಲ್ಲಿ.
ಲೇಖನ ಸ್ವಾತಂತ್ರ್ರ್ಯೋತ್ಸವ ಆಚರಿಸುವ ಹೊತ್ತಿನಲ್ಲಿ. ಸುನೀತಾ ಕುಶಾಲನಗರ ಶಾಲೆ ಸೇರಿದಾಗಿನಿಂದ ಈವರೆಗೂ ಪ್ರತಿವರ್ಷ ಆಗಸ್ಟ್ ಬಂತೆಂದರೆ ಅದೇನೋ ಸಂಭ್ರಮ.ವಿದ್ಯಾರ್ಥಿ ಜೀವನದಲ್ಲಿ ಅನುಭವಿಸಿದ ಸ್ವಾತಂತ್ರೋತ್ಸವದ ಸಡಗರ ಅದು ಹಾಗೆಯೇ ಉಳಿಯಲು ಮತ್ತು ಬೆಳೆಸಲು ಶಿಕ್ಷಕ ವೃತ್ತಿಯಲ್ಲಿರುವುದರಿಂದ ಮತ್ತಷ್ಟು ಉತ್ಸಾಹಿಯಾಗಿ ನಿರ್ವಹಿಸುವ ಅವಕಾಶ. ವಿದ್ಯಾರ್ಥಿಗಳಾಗಿದ್ದಾಗ ದೇಶಭಕ್ತಿ ಮೈಗೂಡಿಸುವ ಭಾಷಣದ ಬಾಯಿಪಾಠ,ದೇಶಭಕ್ತಿ ಗೀತೆ ಹಾಡಿ ನಲಿದು ಶಿಕ್ಷಕರು ಕೊಡುವ ಮಿಠಾಯಿ ಚೀಪುತ್ತಾ ಕೇಕೆ ಹಾಕಿ ಆ ದಿನ ಸವಿದ ಖುಷಿಯನ್ನು ಮೆಲುಕಿಸುತ್ತಾ ಮನೆಗೆ ತೆರಳುತಿದ್ದ ನೆನಪು ಮೊನ್ನೆ ಮೊನ್ನೆಯೆಂಬಂತೆ. ಸ್ವತಃ ಶಿಕ್ಷಕಿಯಾಗಿರುವುದರಿಂದ […]
ಸ್ವಾತಂತ್ರೋತ್ಸವದ ವಿಶೇಷ
ಸಂವಿಧಾನ ಮತ್ತು ಮಹಿಳೆ. ನೂತನ ದೋಶೆಟ್ಟಿ 1) ಅವಳು 23ರ ಹುಡುಗಿ. ಆಗಲೇ ಮದುವೆಯಾಗಿ ಎರಡು ಮಕ್ಕಳು. ಅಂದು ಮನೆಕೆಲಸಕ್ಕೆ ಬಂದಾಗ ಬಹಳ ಸಪ್ಪಗಿದ್ದಳು. ಬಾಯಿಯ ಹತ್ತಿರ ರಕ್ತ ಕರೆಗಟ್ಟಿತ್ತು.ಏನೆಂದು ಕೇಳುವುದು? ಇದೇನು ಹೊಸದಲ್ಲ. ಅವಳ ಕುಡುಕ ಗಂಡ ಹೊಡೆಯುತ್ತಾನೆ. ತನ್ನ ಕುಡಿತದ ದುಡ್ಡಿಗೆ ಅವಳನ್ನೇ ಪೀಡಿಸುತ್ತಾನೆ. ಪುಟ್ಟ ಇಬ್ಬರು ಮಕ್ಕಳ ಜೊತೆ ನಾಲ್ವರ ಸಂಸಾರದ ಹೊಣೆ ಅವಳ ಮೇಲಿದೆ. ವಾರದಲ್ಲಿ ಎರಡು ದಿನ ಗಂಡನಿಂದ ಹೊಡೆಸಿಕೊಂಡು ಬರುತ್ತಿದ್ದವಳು ಈಗ ದಿನವೂ ಬಡಿಸಿಕೊಳ್ಳುತ್ತಿದ್ದಾಳೆ. ಅವಳ ನೋವು ನೋಡಲಾಗದೆ, […]
ಹೊಸ ಶಿಕ್ಷಣ ನೀತಿ
ಚರ್ಚೆ ಕಠಿಣ ಕಾಯಿದೆ ಅತ್ಯಗತ್ಯ ಡಿ.ಎಸ್.ರಾಮಸ್ವಾಮಿ ಮೆಕಾಲೆ ಪ್ರಣೀತ ಶಿಕ್ಷಣ ವ್ಯವಸ್ಥೆಯನ್ನು ಅಷ್ಟು ಸುಲಭದಲ್ಲಿ ಬದಲಿಸುವುದು ಅಸಾಧ್ಯದ ಕೆಲಸ. ಮೂಲತಃ ವರ್ಣವ್ಯವಸ್ಥೆಯೇ ಪುರಾತನ ಭಾರತೀಯ ಸಮಾಜದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸೇತುವಾಗಿತ್ತು. ಬ್ರಿಟಿಷರ ಅಪಭ್ರಂಶ ಅರ್ಥಾಂತರವೇ ಇವತ್ತಿನ ಜಾತಿ ಪದ್ಧತಿಯಾಗಿ ಬದಲಾಗಿ ಶ್ರೇಣೀಕೃತ ಸಮಾಜವನ್ನು ಜಾತಿ ಮೂಲಕ ಕಾಣಹೊರಟದ್ದೇ ಸದ್ಯದ ದುರಂತ. ಪುರಾತನ ಶಿಕ್ಷಣ ಗುರುಕುಲಗಳಲ್ಲಿ ಆಯಾ ವರ್ಣದ ಕಸುಬು ಮತ್ತು ಜೀವನ ನಿರ್ವಹಣೆಯ ಗುರಿಯಾಗಿ ರೂಪುಗೊಳ್ಳುತ್ತಿತ್ತು. ಪರಸ್ಪರ ಅವಲಂಬನೆ ಇದ್ದ ಕಾಲದಲ್ಲಿ ಪರಸ್ಪರ ಗೌರವ […]
ಮನಸ್ಸು ಎಂಬ ಮನುಷ್ಯನ ತಲ್ಲಣ
ಲೇಖನ ಮನಸ್ಸು ಎಂಬ ಮನುಷ್ಯನ ತಲ್ಲಣ ವಿ ಎಸ್ ಶಾನ್ ಭಾಗ್ ಕೋರೋನ ಎಂಬ ಮಹಾಮಾರಿ ರೋಗ ಜಗತ್ತನ್ನು ಕಾಡುತ್ತಿದೆ. ಎಲ್ಲ ದೇಶಗಳ ಜನರ ನಾಲಿಗೆಯ ಮೇಲೆ ಒಂದೇ ಹೆಸರು ಕೊರೊನ ಅಂದರೆ ಕೋವಿಡ್-೧೯ ಎಲ್ಲರ ಭಾವನೆ ,ಒಂದೇ ಅದೆಂದರೆ ಅನಿಶ್ಚಿತತೆ ಮತ್ತು ಅಸಹಾಯಕತೆ,ತನ್ನ ಆತ್ಮೀಯರನ್ನು ಕಳೆದುಕೊಳ್ಳುವ ಭೀತಿ ಒಂದಾದರೆ ಆಯಾ ದೇಶದ ಜನರಿಗೆ ವಿಧಿಸಿದ ಕೆಲವು ನಿಬಂದನೆಗಳು ಮನೋಕ್ಲೇಶವನ್ನು ಉಂಟುಮಾಡಿದೆ..ಕೋವಿಡ್_೧೯ ಮನುಷ್ಯನ ಜೀವನ ಮತ್ತು ಮರಣದ ನಡುವೆ ನಿಂತಿದೆ. ನಮ್ಮ ದೇಶದಲ್ಲಿ ಸ್ವಾತಂತ್ರ್ಯ ನಂತರ ಹುಟ್ಟಿದವರಿಗೆ […]
ಹೊಸ ಶಿಕ್ಷಣ ನೀತಿ
ಅನುಷ್ಠಾನವಾದೀತೇ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦? ಗಣೇಶ್ ಭಟ್ ಶಿರಸಿ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆ ನೀಡಿದ ಬೆನ್ನಲ್ಲೇ ಈ ನೀತಿಯ ಪರ ಮತ್ತು ವಿರೋಧಿ ಹೇಳಿಕೆಗಳು, ಲೇಖನಗಳು ಪ್ರಕಟವಾಗುತ್ತಿವೆ. ಹೊಸ ಶಿಕ್ಷಣ ನೀತಿಯು ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸುವುದರ ಜೊತೆಗೆ ಇಡೀ ರಾಷ್ಟ್ರವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆಯೆಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ.ಈ ಶಿಕ್ಷಣ ನೀತಿಯನ್ನು ಹೊಸ ಅವಿಷ್ಕಾರ, ಹೊಸ ಮನ್ವಂತರದ ಹರಿಕಾರ ನೀತಿ ಮುಂತಾಗಿ ಬಿಂಬಿಸಲಾಗುತ್ತಿದೆ. ಲಭ್ಯತೆ, ಸಮಾನತೆ, ಗುಣಮಟ್ಟ, […]