ಲೇಖನ
ಮನಸ್ಸು ಎಂಬ ಮನುಷ್ಯನ ತಲ್ಲಣ
ವಿ ಎಸ್ ಶಾನ್ ಭಾಗ್
ಕೋರೋನ ಎಂಬ ಮಹಾಮಾರಿ ರೋಗ ಜಗತ್ತನ್ನು ಕಾಡುತ್ತಿದೆ. ಎಲ್ಲ ದೇಶಗಳ ಜನರ ನಾಲಿಗೆಯ ಮೇಲೆ ಒಂದೇ ಹೆಸರು ಕೊರೊನ ಅಂದರೆ ಕೋವಿಡ್-೧೯ ಎಲ್ಲರ ಭಾವನೆ ,ಒಂದೇ ಅದೆಂದರೆ ಅನಿಶ್ಚಿತತೆ ಮತ್ತು ಅಸಹಾಯಕತೆ,ತನ್ನ ಆತ್ಮೀಯರನ್ನು ಕಳೆದುಕೊಳ್ಳುವ ಭೀತಿ ಒಂದಾದರೆ ಆಯಾ ದೇಶದ ಜನರಿಗೆ ವಿಧಿಸಿದ ಕೆಲವು ನಿಬಂದನೆಗಳು ಮನೋಕ್ಲೇಶವನ್ನು ಉಂಟುಮಾಡಿದೆ..ಕೋವಿಡ್_೧೯ ಮನುಷ್ಯನ ಜೀವನ ಮತ್ತು ಮರಣದ ನಡುವೆ ನಿಂತಿದೆ. ನಮ್ಮ ದೇಶದಲ್ಲಿ ಸ್ವಾತಂತ್ರ‍್ಯ ನಂತರ ಹುಟ್ಟಿದವರಿಗೆ ಇದು ಹೊಸತೊಂದು ಅನುಭವದ ಪ್ರಪಂಚ ತೆರೆದುಕೊಟ್ಟಿದೆ. ಕೊರೋನ ಎಂಬ ಮಹಾರೋಗಕ್ಕೆ ಔಷದ ಇಲ್ಲದ ಕಾರಣ ಭೀತಿ ಜನರನ್ನು ಕಾಡುತ್ತದೆ, ಹಲವು ಉತ್ಪೀಡಿತ ಅನುಭವಗಳನ್ನೆಲ್ಲ ಪುಸ್ತಕರೂಪದಲ್ಲಿ ತರಲು ಲೇಖಕರು ಬರೆಯುತ್ತಿದ್ದಾರೆ.. ರೋಗದ ಬಗ್ಗೆ ಹಾಗೂ,ಅದನ್ನು ಎದುರಿಸುವ ಬಗ್ಗೆ,ತೆಗೆದುಕೋಳ್ಳಬೇಕಾದ ಔಷದಗಳ ಬಗ್ಗೆ ಮಾಹಿತಿಕೊಡುವ ಲೇಖಕರಲ್ಲಿ ಹೆಚ್ಚಾಗಿ ಡಾಕ್ಟರರು .ಸಮಯದ ವಿರುದ್ದ ಹೋರಾಡುವವರು ಆದರೆ ಈಗ ರೋಗದ ನಂತರ ಗುಣಮುಖರಾದವರಲ್ಲಿ ಹಲವರು ಬದುಕಿನಲ್ಲಿ ಮಾನಸಿಕ ರೋಗಕ್ಕೆ ತುತ್ತಾದವರು.ಇವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ . ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ದಿನಾ ಭೇಟಿಯಾಗುತ್ತಿದ್ದವರು. ಸಾವಿಗೆ ತುತ್ತಾದನ್ನು ನೋಡಿ ತನ್ನ ಜೀವನದ ಬಗ್ಗೆ ಕಳೆದುಕೊಳ್ಳುವ ಭರವಸೆ,, ,ಭವಿಷ್ಯದ ಬಗ್ಗೆ ಚಿಂತೆ,, ಬಾಸ್ನ ಅನುಚಿತ ವರ್ತನೆ, ಆಫೀಸಿನ ರಾಜಕೀಯ,ಗುಂಪುಗಾರಿಕೆ ಇವೆಲ್ಲದರ ಮೂಲಕ ಅನುಭವಿಸುವ ಮಾನಸಿಕ ಒತ್ತಡ, ಅನಿಶ್ಚಿತತೆ ನಿರಾಸೆಗಳಿಂದ ಜಗ್ಗಿಹೋಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಗಮನಕ್ಕೆ ಬಂದಿವೆ. ಕರೋನ ಶಾರೀರಿಕವಾಗಿಯೂ,ಮಾನಸಿಕವಾಗಿಯೂ ಹಲವು ಯುವಕರನ್ನು ಮತ್ತು ಹಿರಿಯ ನಾಗರಿಕರನ್ನು ಬಲಿ ತೆಗೆದುಕೊಂಡಿದೆ. ಇತ್ತೀಚೆಗೆ ಹಿರಿಯ ನಾಗರಿಕರೊಬ್ಬರು ಹಳೆಯ ಮನೆಯೊಂದರಿಂದ ಹೊಸಮನೆಗೆ ಬಂದರು.ಆದು ೧೫ನೆಯ ಮಾಳಿಗೆಯಲ್ಲಿತ್ತು ಅವರಿಗೆ ಚಾಳಿನಲ್ಲಿರುವ ಮಗಳ ಮನೆಗೆ ಕಳಿಸೆಂದು ತಂದೆ ಒತ್ತಾಯ ಮಾಡಿದಾಗ ಮಗ ಕೇಳಲಿಲ್ಲ೧೫ನೇ ಮಾಳಿಗೆ ಮನೆ ಅಪ್ಪನಿಗೆ ಬಂಧೀಖಾನೆಯಾಯಿತು.ಆದರೆ ಅಪ್ಪನ ಈ ಬಾವನೆಯನ್ನು ಅರಿಯದೇ ಅಪ್ಪನನ್ನು ಕಳೆದುಕೊಂಡ ಬಗ್ಗೆ ಅವನ ಕಥೆ ಪ್ರಮುಖ ಚಾನೆಲ್ಗಳಲ್ಲಿ ಬಿತ್ತರವಾಯಿತು .ಹೀಗೆ ಸಾಮಾಜಿಕವಾಗಿ ಮನುಷ್ಯನ ಸಂವೇದನೆ, ಇತರರೊಂದಿಗೆ ಹೊಂದಿರುವ ಸಂಬಂಧ ಇವು ಇನ್ನೊಮ್ಮೆ ಸಾವಿನ ಬಗ್ಗೆ ಚಿಂತಿಸುವಂತೆ ಮಾಡಿವೆ ಮಾನಸಿಕ ರೋಗಕ್ಕೆ ತುತ್ತಾಗಿದ್ದ ಉದ್ಯೋಗದಲ್ಲಿರುವ ೨೬ ವರ‍್ಷದ ಯುವಕನೊಬ್ಬ ಕರೋನದ ಸಂಧರ‍್ಭದಲ್ಲಿ ತೀರಿಕೊಂಡ ತಂದೆಯ.. ಹೆಣದ ಅಂತ್ಯಸಂಸ್ಕಾರ ದ ಕೊನೆಯ ವಿಧಿವಿಧಾನವನ್ನು ರೋಡಿನಲ್ಲಿ ಮುಗಿಸಿ ದೇಹಕ್ಕೆ ಅಗ್ನಿಕೊಟ್ಟ. ನಂತರ ಮನೆಯಿಂದ ಹೊರಗೆ ಹೋಗಲಿಲ್ಲ ಕಾರಣ ಅಕ್ಕ ಪಕ್ಕದವರ ನಡತೆ…ಮನಸ್ಸನ್ನು ಘಾಸಿಗೊಳಿಸಿತ್ತು ಇವು ಹೊಸತೇನು ಅಲ್ಲ. .ಆದರೆ ಕರೋನ ಬರಿಯ ದೇಹಕ್ಕೆ ರೋಗವಾಗಿ ಬರದೆ ನಮ್ಮ ಯೋಚನೆ,,ಸಂಬಂಧ, ಆಚಾರ ವಿಚಾರಗಳನ್ನು ಪ್ರಶ್ನಿಸಿದಂತೆ ಮತ್ತು ನಮ್ಮ ನಡುವಳಿಕೆಗಳಲ್ಲಿ ಆದ ಸ್ತಿತ್ಯಂತರವು ಮಾನಸಿಕ ರೋಗಕ್ಕೆ ಬಲಿಯಾಗುವಂತೆ ಕಾಡಿದೆ..ಕರೋನ ಆರುತಿಂಗಳಿಂದ ಬಂದಿದ್ದು ಅದು ನಮ್ಮೊಂದಿಗೆ ಸ್ವಲ್ಪಕಾಲ ಉಳಿಯುವುದು ಖಂಡಿತ ಕರೋನ ಬರುವ ಮೊದಲೇ ಶೇಖಡ ೧೦(೧೦%) ಮನೋರೋಗಿಗಳು ನಮ್ಮ ದೇಶದಲ್ಲಿದ್ದಾರೆ.ಜೀವಮಾನದಲಿ ಒಮ್ಮೆಯಾದರೂ ಮಾನಸಿಕ ರೋಗಕ್ಕೆ ತುತ್ತಾಗದೇ ಇರಲು ಸಾದ್ಯವಿಲ್ಲ.ಕರೋನ ಕೇವಲ ದುರ‍್ಬಲರನ್ನ ವಿಶೇಷವಾಗಿ ಕಾಡುತ್ತದೆ ಮನಸ್ಸು ತಲ್ಲಣ ಗೊಳಿಸುವ ಕೆಲವು ಸಂಗತಿಗಳನ್ನ ನೋಡೋಣ:
ಬ್ಯ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಹಿರಿಯ ಕರ್ಮಚಾರಿಯನ್ನು ಯಾವುದೇ ಸೂಚನೆ ಕೊಡದೇ ಒಂದು ವಿಭಾಗದಿಂದ ಅಷ್ಟೆನೂ ಕ್ಷಮತೆ ಬೇಡದ ಹೊಸ ನೌಕರರಿಗೆ ಕೊಡುವ ಟಪಾಲು ವಿಭಾಗಕ್ಕೆ ವರ್ಗಾಯಿಸಿದಾಗ ಅವರು ಮಾನಸಿಕ ಖಿನ್ನತೆಗೆ ಒಳಗಾದರು. ಇದನ್ನೇ ಒಂದು ದೊಡ್ಡ ದು ಮಾಡಿ ಅವನಿಗೆ ಯಾವ ಕೆಲಸ ಕೊಡದೇ ಒಂದು ಬದಿಯಲ್ಲಿ ಕೂರಿಸಲಾಯಿತು. ಇನ್ನೊಂದು ಚಿತ್ರ ನೋಡಿ. ಸ್ಕೂಲಿಗೆ ನಿಯಮಿತವಾಗಿ ಹೋಗುವ ಹುಡುಗಿಯೊಬ್ಬಳು ಅಚಾನಕ್ ಸ್ಕೂಲಿಗೆ ಹೋಗುವುದನ್ನೇ ಬಿಟ್ಟಳು. ತಂದೆ ತಾಯಿಯರು ಅವಳನ್ನು ಡಾಕ್ಟರಿಗೆ ತೋರಿಸಿದಾಗ ಅವಳಿಗೆ ಮಾನಸಿಕ ಒತ್ತಡ ಉಂಟಾಗಿದೆ ಎಂದೂ, ಅವಳ ದಷ್ಟಪುಷ್ಟ ದೇಹ ಹುಡುಗರ ಹಾಸ್ಯಕ್ಕೆ ಒಳಪಟ್ಟಿದ್ದು ಅವಳನ್ನು ಶಾಲೆಯ ಅನುಮತಿ ಪಡೆದು ಮನೆಯಲ್ಲೇ ಟ್ಯೂಷನ್ ಪಡೆದು ಹತ್ತನೆ ತರಗತಿ ಉತ್ತೀರ್ಣಳಾದಳು.
ಈ ಎರಡು ಘಟನೆಗಳು ಒಂದಕ್ಕೊಂದು ಸಂಬಂಧ ವಿರದ ಉದಾಹರಣೆಗಳು ಎಂದೆನಿಸಬಹುದುʼಮುಂಬಯಿಯ ದೊಡ್ಡ ಪಟ್ಟಣದಲ್ಲಿ ಮಾತ್ರ ಸೀಮಿತವಲ್ಲ. ಇದು ಚಿಕ್ಕ ಚಿಕ್ಕ ಶಹರಗಳಲ್ಲಿಯೂ ಕಾಣುವಂತಹವು. ಮೇಲಿನ ಎರಡೂ ಉದಾಹರಣೆಗಳು ರೋಗಿಯನ್ನು ನೋಡಿಕೊಳ್ಳುವ ರೀತಿಯಲ್ಲಿ ಇರುವ ವ್ಯತ್ಯಾಸ ನಮ್ಮೆದುರು ಬಂದು ನಿಲ್ಲುತ್ತದೆ. ಪ್ರಖ್ಯಾತ ಬಾಲಿವುಡ್ ನಟಿ ಮಾನಸಿಕ ಕುಸಿತದ ಲಕ್ಷಣಗಳನ್ನು ತನ್ನ ವ್ಯಕ್ತಿತ್ವದಲ್ಲಿ ಕಂಡಿದ್ದೇನೆ ಎಂದು ಸಾರ್ವಜನಿಕವಾಗಿ ಹೇಳಿ ಎಲ್ಲರಿಗೂ ಆಶ್ಚರ್ಯ ಉಂಟುಮಾಡಿದರು. ಮಾನಸಿಕ ಖಿನ್ನತೆ ತಮ್ಮ ವ್ಯಕ್ತಿತ್ವದಲ್ಲಿ ಪರಿಣಾಮ ಬೀರುವುದಲ್ಲದೇ ಮನುಷ್ಯ ಸಂಬಂಧಗಳು ಶಿಥಿಲಗೊಳ್ಳುವ ಸಾಧ್ಯತೆ ಇದೆ. ಮಾನಸಿಕ ರೋಗ ಈಗಲೂ ಸಾಮಾಜಿಕ ವಾಗಿ ಅಬಿ಼ಶಾಪ, ಮತ್ತು ವ್ಯಕ್ತಿತ್ವದ ಮೇಲಿನ ಕಲೆ ಎಂದು ೨೦ ೨೦ರಲ್ಲಿಯೂ ಚಾಲ್ತಿಯಲ್ಲಿಇರುವುದು ದುರಂತ .ಮಾನವ ಸಂಪನ್ಮೂಲ ವಿಭಾಗ ಇರುವುದು ಇದೇ ಕಾರಣಕ್ಕಾಗಿ ಅಲ್ಲವೇ?
ಇತ್ತೀಚೆಗೆ ಮುಂಬಯಿಯಲ್ಲಿ ನೆಲೆಸಿರುವ ಪಂಜಾಬಿನ ಯುವಕನೊಬ್ಬ ಬೆಳಿಗ್ಗೆ ಎದ್ದಾಗ ಉಸಿರಾಡಲು) ಕಷ್ಟವಾಗುತ್ತಿದ್ದು ಕೆಲಸಕ್ಕೆ ಹೋಗದೇ ತನಗೆ ಏನೋ ಆಗಿದೆಯೆಂದು ಸಂಶಯ ಬಂದು ಡಾಕ್ಟರರ ಹತ್ತಿರ ಹೋಗಿ ತೋರಿಸಿದ. ಇದನ್ನು ತನ್ನ ಬಾಸ್‌ಗೆ (ಮೇಲಧಿಕಾರಿಗೆ) ತಿಳಿಸಲಿಲ್ಲ. ತನ್ನ ಸಹೋದ್ಯೋಗಿಗಳಿಗೆ ಹೇಳಿ ವಿಷಯವನ್ನು ಮುಚ್ಚಿಡಲಾಯಿತು. ಡಾಕ್ಟರು ಹೇಳಿದಂತೆ ಅವನ ಸ್ನೇಹಿತರು ಅವನ ಮೇಲಧಿಕಾರಿಗೆ ತಿಳಿಸಿ ಅವನನ್ನು ಒಂದೆರಡು ತಿಂಗಳ ಮಟ್ಟಿಗೆ ರಜೆನೀಡಿ ಸಲಹಬೇಕೆಂದು ವಿನಂತಿಸಿಕೊಂಡರು. ಅವನು ಕೆಲಸದಲ್ಲಿ ನಿಪುಣತೆ ಪಡೆದು ಒಬ್ಬ ಒಳ್ಳೆಯ ಅಧಿಕಾರಿ ಎಂದು ಕರೆಸಿಕೊಂಡಿದ್ದರಿಂದ ಅವನ ಮೇಲಧಿಕಾರಿಯನ್ನು ಒಪ್ಪುವಂತೆ ಮಾಡಿ ಎರಡು ತಿಂಗಳು ರಜೆ ಸಿಕ್ಕು ಆರೋಗ್ಯ ಸುಧಾರಣೆ ಕಂಡಿತು. ಐಸಿಎಂಆರ್(ಇಂಡಿಯನ ಕೌನ್ಸಿಲ್ ಆಫ್ ಮೆಡಿಕಲ್ ರೀಸರ‍್ಚ) ಪ್ರಕಾರ ಆ ಪಂಜಾಬಿ ಯುವಕ ವ್ಯಾಕುಲತೆ, ಚಿತ್ತಕ್ಷೋಭೆ ಯ ಜೊತೆಗೆ ಮನಸ್ಸಿನ ಅಲ್ಲೋಲ ಕಲ್ಲೋಲತೆ ಚಿಂತೆ, ಯೋಚನೆಗೆ ಒಳಗಾಗಿದ್ದ.
ಇತ್ತೀಚಿನ ದಿನಗಳಲ್ಲಿ ಜಾಗತೀಕರಣದಿಂದಾಗಿ ಹೊಸ ಸಾಧ್ಯತೆಗಳು ತೆರೆದುಕೊಂಡಂತೆ ಹೊಸ ಸವಾಲುಗಳು ಮತ್ತು ಆ ಸವಾಲುಗಳನ್ನು ಎದುರಿಸುವ ಮಾನಸಿಕತೆ (ಮಾನಸಿಕ ಸ್ಥಿತಿ)ಅಗತ್ಯವಿದೆ. ಆದ್ದರಿಂದ ಯುವಕರು, ಮಧ್ಯ ವಯಸ್ಕರು ಮತ್ತು ವಿದ್ಯಾರ್ಥಿಗಳು ಮನೋಚಿಕಿತ್ಸಕರ ಹತ್ತಿರ ಮಾನಸಿಕ ಸ್ವಾಸ್ಥ್ಯಕ್ಕೆ ಚಿಕಿತ್ಸೆ ಪಡೆಯುವುದು ಸಂಖ್ಯೆಯ ದೃಷ್ಟಿಯಿಂದ ಬಹಳ ಹೆಚ್ಚುವರಿ ಕಂಡಿದೆ. ಕುಟುಂಬದಲ್ಲಿ ಒಬ್ಬ ವ್ಯಕ್ತಿ ಶಿಕ್ಷಿತನಾಗಿ ಇದ್ದರೆ, ಭೂತ ಪ್ರೇತಗಳ ಮೊರೆಹೋಗುವ ತಂದೆ ತಾಯಿಗಳ ಯೋಚನೆಯನ್ನು ಬದಲಿಸುವುದರ ಸಾಧ್ಯತೆ ಜೊತೆಗೆ ಮನೋ ಚಿಕಿತ್ಸೆಗಾಗಿ ಸರಿಯಾದ ಡಾಕ್ಟರು ಸಿಗುತ್ತಾರೆ ಎನ್ನುವ ಮೂಲ ಮಾಹಿತಿ ಈಗ ಲಭ್ಯವಾಗ್ತಿದೆ.
ಮುಂಬಯಿಯಂತಹ ಶಹರಗಳಲ್ಲಿಯೂ ಹಲವು ಸಂಘ ಸಂಸ್ಥೆಗಳು, ಆರ್ಥಿಕವಾಗಿ ಮನೋರೋಗಕ್ಕೆ ತುತ್ತಾದ ವ್ಯಕ್ತಿಯ ಶುಶ್ರೂಷೆಯ ಅಗತ್ಯವನ್ನು ಕಾಣುತ್ತಾರೆ. ಮನೋರೋಗಕ್ಕೆ ತುತ್ತಾದ ವ್ಯಕ್ತಿಯನ್ನು ಈ ಆರ್ಥಿಕ, ಕೈಗಾರಿಕ ಸಂಸ್ಥೆಗಳು ನೋಡಿಕೊಳ್ಳುವ ರೀತಿಯ ಮೇಲೆ ಆ ರೋಗಿಯ ಮನೋಬಲ ಅಡಗಿದೆ.ಪಡೆದುಕೊಂಡ ಸಾಲ ತೀರಿಸಲಾಗದೆ ಹತಾಶನಾದ ವ್ಯಕ್ತಿಯ ಬಗ್ಗೆ ಈ ಸಂಸ್ಥೆಗಳು ಮಾನಸಿಕವಾಗಿ ಬೆಂಬಲಕ್ಕೆ ನಿಲ್ಲುತ್ತಾರೆ
ಅತ್ಯಂತ ಒಳ್ಳೆಯ ನೌಕರ ಅಥವ ಅಧಿಕಾರಿ ತನ್ನ ೧೦-೧೨ ವರ್ಷದ ಸೇವೆಯಲ್ಲಿ ಮನೋರೋಗಕ್ಕೆ ಅಂದರೆ ಮಾನಸಿಕ ತಳಮಳ, ತಗ್ಗುವಿಕೆ, ಇತರರೊಂದಿಗೆ ಬೆರೆಯುವಿಕೆ ಮುಂತಾದ ಸಂದರ್ಭದಲ್ಲಿ ಕಾಣುವ ಬದಲಾವಣೆಯನ್ನು ಮಾನವೀಯತೆಯಿಂದ ನೋಡಿದರೆ ರೋಗ ಉಲ್ಬಣಿಸದೇ ಪೂರ್ಣ ಗುಣಮುಖವಾಗುವ ಸಾಧ್ಯತೆ ಇದೆ. ಈ ಲೇಖನದ ಮೊದಲು ಕೊಟ್ಟ ಉದಾಹರಣೆಯಲ್ಲಿ ಹಿರಿಯ ಕರ್ಮಚಾರಿಯನ್ನು ಟಪ್ಪಾಲು ವಿಭಾಗಕ್ಕೆ ಹಾಕಿದ ಆ ನಿರ್ಣಯವೇ ಅಘಾತಕಾರಿಯಾಗಿ ಪರಿಣಮಿಸಿ ಅವನು ಹೃದಯಾಘಾತಕ್ಕೆ ಒಳಗಾಗಿದ್ದು ನಂತರ ಚೇತರಿಸಲಿಲ್ಲ. ಹಲವು ನೌಕರರು, ಅಧಿಕಾರಿ ವರ್ಗದವರು ತಮ್ಮ ಮನಸ್ಸಿನ ಸ್ವಾಸ್ಥ್ಯದ ಬಗ್ಗೆ ತಮ್ಮ ಮುಂದಿನ ಅಧಿಕಾರಿಗಳೊಂದಿಗೆ ಏನೂ ಹೇಳಿಕೊಳ್ಳುವುದಿಲ್ಲ. ಕಾರಣ ಈಗಲೂ ಉನ್ನತ ಶಿಕ್ಷಣ ಪಡೆದ ಕಂಪೆನಿಯ ನಿರ್ದೇಶಕರುಗಳಿಗೂ ಸಹ ಚಿತ್ತ ಕ್ಲೇಷ, ಚಿತ್ತ ಗ್ಲಾನಿಯನ್ನು ಸರಿಯಾದ ಚಿಕಿತ್ಸೆ ಮೂಲಕ ಸರಿಪಡಿಸಬಹುದು ಎಂದು ಗೊತ್ತಿದ್ದರೂ ಮಾನವೀಯತೆಯ ಕೊರತೆಯಿಂದ ಆ ಮನೋರೋಗಿಗೆ ಭವಿಷ್ಯವೇ ಇಲ್ಲದ ಹಾಗೆ ಕರಾಳ ಸತ್ಯಕ್ಕೆ ತೆರೆದುಕೊಳ್ಳುತ್ತದೆ. ಕೆಲಕಾಲವಷ್ಟೇ ಇರುವ ಈ ಮಾನಸಿಕ ತಳಮಳದ ಈ ಜೀವನವನ್ನು ಇಡೀ ಜೀವಮಾನದ ಕೊರತೆ ಎಂದು ಕಾಣುವುದು ವಿಪರ‍್ಯಾಸ., ಹೆಚ್ಚಾಗಿ ನೌಕರ ವರ್ಗಕ್ಕೆ ಒಂದು ದೊಡ್ಡ ಆತಂಕ.
ಮನೋವಿಜ್ಞಾನದಲ್ಲಿ ಚಿತ್ತಕ್ಷೋಭೆ/ಕ್ಲೇಷ ಮತ್ತು ವ್ಯಾಕುಲತೆ (anxiety) ವಿಜ್ಞಾನದ ಬೇರೆ ಬೇರೆ ಭಾಗಗಳಾಗಿ ಡಾಕ್ಟರರು ಅದಕ್ಕೆ ಬೇಕಾದ ಚಿಕಿತ್ಸೆಯನ್ನು ನೀಡುತ್ತಾರೆ. ಸಾಮಾನ್ಯವಾಗಿ ಎರಡೂ ಸ್ಥಿತಿಗಳು ತೋರಿಕೆಗೆ ಒಂದೇ ಆದರೂ ಮನೋರೋಗದ ಲಕ್ಷಣಗಳು.ಬೇರೆಬೇರೆ ಚಿತ್ತ ಕ್ಲೇಶ, ಚಿತ್ತ ಅಸ್ವಾಸ್ಥ್ಯ ಎರಡೂ ಒಂದಾದರೊಂದಂತೆ ಮರುಕಳಿಸಬಹುದು. ಚಿತ್ತ ಕ್ಲೇಶದಲ್ಲಿ ಸದಾ ಯೋಚಿಸುವುದು, ತಳಮಳ, ಮನಸ್ಸಿನ ಚಂಚಲತೆ, ನೆನಪಿನ ಕೊರಗು, ನಿದ್ದೆಯ ಕೊರತೆ ಇವೆಲ್ಲ ಒಂದಕ್ಕಿಂತ ಹೆಚ್ಚು ಕಾರಣಗಳನ್ನು ಕಾಣಬಹುದು. ಇದು ಮಾನಸಿಕ ರೋಗ ಬಹು ಸಮಯ ತೆಗೆದುಕೊಳ್ಳುವ ಮನಸ್ಸಿನ ಸ್ಥಿತಿಯದು. ಆದರೆ ಚಿತ್ತ ಅಸ್ವಸ್ಥತೆ ಅಥವಾ ಗ್ಲಾನಿ ಒಂದು ಸಂಧರ್ಭ ಅಥವಾ ಘಟನೆಗಳಿಂದ ಆಗುವಂತಹುದು. ಎನ್ನುವ ಪದವನ್ನು ಬಹುಬಾರಿ ಬಳಸುತ್ತೇವೆ. ಯಾವುದಾದರೂ ಘಟನೆ ಎದುರಾದಾಗ ಉಂಟಾದ ಹೆದರಿಕೆ ಅಥವಾ ಇಂಟರ್ ವ್ಯೂನಲ್ಲಿ ಆಗುತ್ತಿರುವ ನಡುಕ ಇವೆಲ್ಲ ಚಿತ್ತ ಅಸ್ವಸ್ಥತೆ (anxiety) ಗೆ ಸಂಬಂಧ ಪಟ್ಟವು
ಇತ್ತೀಚಿನ ವರದಿ ಪ್ರಕಾರ ಚಿತ್ತಕ್ಲೇಶ ಮತ್ತು ಚಿತ್ತ ಅಸ್ವಾಸ್ಟ್ಯ ಸಂಯುಕ್ತ ಗ್ರೇಟ್ ಬ್ರಿಟನ್ನಿನಲ್ಲಿ ಪ್ರತಿ ನಾಲ್ಕು ಜನರಲ್ಲಿ ಒಬ್ಬರು ಮಾನಸಿಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ಚಿತ್ತಕ್ಲೇಶ ಹಲವು ಜನರಿಗೆ ಹಲವು ರೀತಿಯಲ್ಲಿ ,ಹಲವಾರು ರೋಗ ಲಕ್ಷಣಗಳು ಕಂಡರೆ ಚಿತ್ತ ಅಸ್ವಸ್ಥತೆಯಲ್ಲಿ ಯಾವುದಾದರೂ ಒಂದು ರೋಗದ ಲಕ್ಷಣ ಕಾಣಬಹುದು. ಚಿತ್ತ ಅಸ್ವಸ್ಥತೆ ಹೆಚ್ಚಾಗಿ ಹೆದರಿಕೆ, ಸಂದೇಹ, ಹೊಸ ಜನರೊಂದಿಗೆ ಬೆರೆಯುವ ಚಿಂತೆ, ಏಕತಾನತೆಯ ಲಕ್ಷಣಗಳು ಕಾಣಬಹುದು. ಇದು ಭಾರತೀಯರು ಅನುಭವಿಸುತ್ತಿರುವ ಸಾಮಾನ್ಯ ಲಕ್ಷಣಗಳು. ಇತ್ತೀಚಿನ ವರದಿ ಪ್ರಕಾರ ಯೋ ಯೋ ಹನಿಸಿಂಗ್ (ಗಾಯಕ) ಅನುಷ್ಕಾ ಶರ್ಮ (ನಟಿ), ಕ್ಯಾಥರಿನ್ ಚೇಟಾ, ರ‍್ಯಾನ್ ರೊನಾಲ್ಟಸ್, ಲೇಡಿ ಗಾಗಾ(ಹಾಲಿವುಡ್ ನಟರು) ಮುಂತಾದವರು ಚಿತ್ತಕ್ಲೇಶ ಅಥವಾ ಚಿತ್ತ ಅಸ್ವಸ್ಥತೆಯ ರೋಗಿಗಳು.
ಮಧ್ಯಮ ವರ್ಗದ ಹೆಚ್ಚು ಹೆಚ್ಚು ಜನರು ಉದ್ಯೋಗದಲ್ಲಿದ್ದು, ಜೀವನವನ್ನು ಸುಖಿಯಾಗಿಡುವ ನಿಟ್ಟಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಹಣ ಒಂದು ಆಕರ್ಷಣೆಯಾದರೆ, ತನ್ನ ಕರ್ತೃತ್ವ ಶಕ್ತಿಯ ಮೂಲಕ ಯಾರೂ ಗಳಿಸದ ಸ್ಥಾನವನ್ನು ಪಡೆಯುವ ಹಂಬಲವೂ ಕಾರಣವಾಗಿದೆ.. ಅಂದರೆ ಒಂದು ರೀತಿಯ ಸ್ಪರ್ಧಾತ್ಮಕತೆ, ಮಾನಸಿಕ ಆರೋಗ್ಯವನ್ನು ಕೆಡಿಸುವ ಬಹುಮುಖ್ಯ ಕಾರಣವಾಗಿದೆ. ಐಸಿಎಂಆರ್ ಪ್ರಕಾರ ಪ್ರತಿ ಏಳು ಭಾರತೀಯರಲ್ಲಿ ಒಬ್ಬರು ಮನೋರೋಗದ ಶಿಕಾರಿಯಾಗುತ್ತಿದ್ದಾನೆ. ಮಹಾರಾಷ್ಟ ರಾಜ್ಯದಲ್ಲಿ ಪ್ರತಿ ಲಕ್ಷ ಜನರಲ್ಲಿ ಸುಮಾರು ಹತ್ತು ಸಾವಿರ ಜನ ಮಾನಸಿಕ ರೋಗದಿಂದ ಬಳಲುತ್ತಿದ್ದಾರೆ. ಅದರಲ್ಲಿ ಮಾನಸಿಕ ಅಸ್ವಸ್ಥತೆ ೪೦೦೦, ಚಿತ್ತ ಕ್ಲೇಷದಿಂದ ೪೦೦೦, ಕೆಲಸ ಅರ್ಥ ಮಾಡಿಕೊಳ್ಳಲಾಗದ ವiನಸ್ಸಿನ ಕುಗ್ಗುವಿಕೆ ೩,೫೦೦ ಮತ್ತು ವರ್ತನೆಯಲ್ಲಿ ಉಂಟಾಗುವ ಲಕ್ಷಣಗಳು ೮೦೦. ಹೀಗೆ ಜನರು ಮಾನಸಿಕ ಸ್ವಾಸ್ಥ್ಯಕ್ಕಾಗಿ ಹಾತೊರೆಯುತ್ತಿದ್ದಾರೆ. ಆದ್ದರಿಂದ ಚಿತ್ತಕ್ಲೇಷದಂತಹ ಮನೋರೋಗಗಳು ಹೆಚ್ಚುತ್ತಿದ್ದು ಅದರ ಅರಿವು ಹಲವು ಜನರಿಗೆ ಅರಿವಿಲ್ಲದೇ, ಭೂತದ ಆರಾಧನೆ, ಕುರಿಬಲಿ, ಪೂಜೆ ಪುನಸ್ಕಾರಗಳ ಹಾದಿಯಲ್ಲಿ ಈಗಲೂ ನಡೆಯುತ್ತಿದೆ.. ಆದ್ದರಿಂದ ಮನೋರೋಗದ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ತಮ್ಮ ಈ ಅನಾರೋಗ್ಯದ ವಿವರಗಳನ್ನು ಆಡಳಿತ ಮಂಡಳಿಯವರಿಗೆ ಕೊಡುವುದಿಲ್ಲ. ಒಬ್ಬ ಎಂಜಿನಿಯರ್‌ಗೆ ತನ್ನ ವೈವಾಹಿಕ ಜೀವನದಲ್ಲಿ ಆದ ಕ್ಲೇಷಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದ. ಕೆಲಸದಲ್ಲಿ ಮತ್ತು ಜನರೊಂದಿಗೆ ಮಾತನಾಡುವಾಗ ತಕ್ಷಣ ಉತ್ತರಿಸಲು ಸಮಯ ತೆಗೆದುಕೊಳ್ಳುತ್ತಿದ್ದ. ಒಬ್ಬ ಕಂಪನಿಯ ನಿರ್ದೇಶಕರು ಅವನನ್ನು ಕರೆದು ‘ತುಂಬಾ ಡಲ್’ ಇದ್ದೀಯಾ ಎಂದು ಕೇಳಿದಾಗ ತನ್ನ ಎಲ್ಲಾ ರೋಗಗಳ ಲಕ್ಷಣಗಳನ್ನು ಹೇಳಿದ. ಕಂಪನಿಯ ನಿರ್ದೇಶಕರು ಮಾನವೀಯತೆಯನ್ನೂ ತೋರದೇ ತಕ್ಷಣ ಅವನನ್ನು ಕೆಲಸದಿಂದ ತೆಗೆದುಹಾಕುವಂತೆ ಮಾನವ ಸಂಪನ್ಮೂಲ ವಿಭಾಗಕ್ಕೆ ಆದೇಶ ಕೊಟ್ಟರು. ಹೆದರಿಕೆ ಹುಟ್ಟಿಸಿ ಅವನಿಂದ ರಾಜಿನಾಮೆಯನ್ನು ಪಡೆದರು. ಮಾನಸಿಕ ಕ್ಲೇಶ, ಗ್ಲಾನಿ ಅಥವಾ ಸ್ಥಿರತೆಯ ಕೊರತೆ ಇವು ಮನುಷ್ಯನ ಭಾವನಾ ಪ್ರಪಂಚಕ್ಕೆ ಸಂಬಧಿಸುವಂತಹವುಗಳು. ಇವೆಲ್ಲ ಬದುಕಿನ- ದೈನಂದಿನ ಕೆಲಸಗಳಲ್ಲಿ ಮುಳುಗಿಬಿಟ್ಟಾಗ ಅದರಿಂದ ಬರುವ ಹೆದರಿಕೆ, ಸೋಲಿನ ಭೀತಿ, ಇಲ್ಲದ ಘಟನೆಗಳ ಆಧಾರದಲ್ಲಿ ಮಾಡಿದ ಆರೋಪ ಮತ್ತು ನಿಜಕ್ಕೂ ಇರದ ವಿಷಯಗಳ ಬಗ್ಗೆ ಯೋಚಿಸುವುದು ಹೆಚ್ಚಾಗುತ್ತದೆ. ಆದ್ದರಿಂದ ಅನಿರ್ಧಾರಿತ ಘಟನೆಗಳು ಮಾನಸಿಕ ರೋಗದ ಲಕ್ಷಣಗಳನ್ನು ಮತ್ತಷ್ಟು ಉಲ್ಬಣಗೊಳಿಸಬಲ್ಲವು.
ಪ್ರಸಿದ್ದ ಡಾ|| ಸೊನಾಲಿ ಗುಪ್ತ ಎಂಬ ಮನಶಾಸ್ತ್ರಜ್ಞೆ ಹೇಳುವಂತೆ ಪ್ರತಿದಿನ ಬರುವ ೩೦ ರೋಗಿಗಳಲ್ಲಿ ೨೦-೨೫ ರೋಗಿಗಳು ಚಿತ್ತಕ್ಲೇಶದ ಲಕ್ಷಣಗಳನ್ನು ಹೊಂದಿರುತ್ತಾರೆ. ಹಲವು ವಿವಿಧ ಲಕ್ಷಣಗಳಲ್ಲಿ ಕಾಣಿಸಿಕೊಳ್ಳುವ ಚಿತ್ತ ಕ್ಲೇಶ ಮನಸ್ಸಿನೊಳಗಯೇ ಆಗುವ ನಿರಂತರ ವೈರುಧ್ಯ ಭಾವನೆಗಳು, ನಿದ್ರಾಹೀನತೆ, ಮುಂತಾದವುಗಳು ರೋಗಿಯು ತನ್ನ ಮನಸ್ಸಿನೊಳಗಾಗುವ ವ್ಯಾಕುಲತೆಯನ್ನು ಅವನ ನಡುವಳಿಕೆಯಲ್ಲಿ ಕಾಣಬಹುದು . ರೋಗಿ ಆರಂಭದಲ್ಲಿ ತಣ್ಣಗೆ ಶಾಂತವಾಗಿ ,ಮೊಗದಲ್ಲಿ ಮಂದಹಾಸ ತಂದು, ನಿಯಂತ್ರಿಸಬಹುದು. ಆಗ ಈ ವ್ಯಾಕುಲತೆಯ ಲಕ್ಷಣಗಳು ಯಾರ ಅರಿವಿಗೂ ಬರುವುದಿಲ್ಲ. ನೀವು ನಿಮ್ಮ ಕಾರ್ಯಕ್ಕೆ ತೆರಳಬಹುದು. ಆದ್ದರಿಂದ ಆಂತರಿಕವಾದ ತಳಮಳ ಮತ್ತು ಬಾಹ್ಯವಾಗಿ ತಳಮಳವನ್ನು ಶಾಂತಚಿತ್ತರಾಗಿ ಎದುರಿಸಿದರೆ ನಿಮ್ಮ ಚಿತ್ತ ಕ್ಲೇಶ ನಿಮ್ಮ ಇತರ ಸಹಯೋಗಿಗಳಿಗೆ ತಿಳಿದುಬರುವುದಿಲ್ಲ. ಹಾಗೆಯೇ ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ಡಾಕ್ಟರರು ಕೊಡುವ ಔಷಧಿಗಳನ್ನು ರೋಗ ಮುಕ್ತರಾಗುವವರೆಗೂ ಸಮಯಾನುಸಾರ ತೆಗೆದುಕೊಳ್ಳಬೇಕು. ಡಾ||ಸೀಮಾ ಗುಪ್ತರ ಅಭಿಪ್ರಾಯದ ಪ್ರಕಾರ ಈ ಚಿತ್ತ ಕ್ಲೇಶದ ಹಿಂದೆ ನಡೆಯುವ ಅಸ್ವಸ್ಥತೆ ಅನಿರ್ಧಾರಿತ ಘಟನೆಗಳು ಅಸ್ವಸ್ಥತೆಯ ವಾತಾವರಣ ಕ್ಕೆ ಕಾರಣವೆನ್ನುತ್ತಾರೆ. ಇದು ರಾಜಕೀಯ ಅಸ್ಥಿರತೆ ಆಫೀಸಿನ ರಾಜಕೀಯ ಮತ್ತು ಶಾಸಕೀಯ ನಿರ್ಧಾರಗಳೂ ಒಮ್ಮೊಮ್ಮೆ ಯುವಕರ, ವಿದ್ಯಾರ್ಥಿಗಳ, ಮಧ್ಯಮ ವರ್ಗದವರ ಹಾಗೆಯೇ ಪ್ರಸಿದ್ಧ ವ್ಯಕ್ತಿಗಳ ಜೀವನ, ಮತ್ತು ಅವರ ಮೇಲಾಗುವಂತಹ ಪರಿಣಾಮಗಳು ಚಿತ್ತಕ್ಲೇಶಕ್ಕೆ ಒಳಗಾಗುವಂತೆ ಮಾಡುತ್ತದೆ. ಒಂದು ಉದಾಹರಣೆ ನೋಡಿ. ಒಬ್ಬ ಸಂಸ್ಥೆಯ ಮಾಲಿಕ ದಿನಾ ಮಧ್ಯ ಸೇವನೆಯನ್ನು ಮಾಡುತ್ತಾನೆ. ಅವನೊಟ್ಟಿಗೆ ಕುಡಿಯುವ ಇತರರು ಸ್ನೇಹಿತರಾಗಿ ಪರಿವರ್ತಿತರಾಗುತ್ತಾರೆ. ಒಂದು ಅನಿರ್ಧಾರಿತ ರಕ್ತ ಪರೀಕ್ಷೆಯಲ್ಲಿ ಮಧ್ಯ ಸೇವನೆಯನ್ನು ವರ್ಜಿಸುವುದು ಮುಂದಿನ ಬದುಕಿಗೆ ಅವಶ್ಯಕವೆಂದು ಡಾಕ್ಟರ್ ರು ಹೇಳಿದ್ದರಿಂದ ಅನಿವಾರ್ಯವಾಗಿ ಮಧ್ಯ ಸೇವನೆಯನ್ನು ನಿಲ್ಲಿಸಬೇಕಾಗುತ್ತದೆ. ಇದರಿಂದ ಅವನ ಮನಸ್ಸಿಗೆ ಘಾಸಿಯಾಗಿ ಚಿತ್ತ ಅಸ್ವಸ್ಥತೆ ಅಥವಾ ಚಿತ್ತ ಕ್ಲೇಶಕ್ಕೆ ಎಡೆಮಾಡಿಕೊಡುತ್ತದೆ. ಎಲ್ಲರೊಂದಿಗೆ ಬೆರೆಯುವ ಆ ಮನುಷ್ಯ ಬೆರೆಯದೇ ಅಂತರ್ಮುಖಿಯಾಗುತ್ತಾನೆ. ಅವನು ಉದ್ಯೋಗಿಯಾಗಿದ್ದರೆ, ಅವನ ಕಂಪನಿಯ ಆಡಳಿತ ಮಂಡಳಿ ಅವನ ಈ ಸ್ಥಿತಿಗೆ ಕಾರಣ ಹುಡುಕಿ ಅವನನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡರೆ ಐದಾರು ತಿಂಗಳಿನಲ್ಲಿ ಸ್ಥಿತಿ ಸಾಮಾನ್ಯವಾಗಿ ಹಿಂದಿನಂತೆ ಆ ಉದ್ಯೋಗಿ ಒಳ್ಳೆಯ ಉದ್ಯೋಗಿಯಾಗಿ ಹೊರಹೊಮ್ಮಬಲ್ಲ. ಇಲ್ಲದಿದ್ದರೆ ಮನಸ್ಸಿನಲ್ಲಿ ಕೊರಗಿ ಆತ್ಮಹತ್ಯೆಯ ಕಡೆಗೆ ತುಡಿಯುವ ಮನಸ್ಥಿತಿಯೂ ಬರಬಹುದು. ಅದೇ ರೀತಿಯ ಒಂದು ಉದಾಹರಣೆಯಲ್ಲಿ ಒಬ್ಬ ಮನಸ್ಸಿನ ರೋಗಿಗೆ ಯಾವುದರಿಂದ ಎದೆನೋವು ಕಾಡಿಸುತ್ತದೆ ಎನ್ನುವುದನ್ನೇ ಕಂಡುಹಿಡಿಯಲು ಒಂದೂವರೇ ವರ್ಷ ತಗುಲಿತು. ಹಲವು ಡಾಕ್ಟರರು ಪ್ರಯತ್ನಪಟ್ಟರು. ಆದರೆ ಫಲಕಾರಿಯಾಗಿರಲಿಲ್ಲ. ಆದರೆ ಒಬ್ಬ ಪ್ರಸಿದ್ಧ ಮನೋವಿಕಾಸದ ಡಾಕ್ಟರೊಬ್ಬರು ಅವನ ಆಂತರಿಕ ಭಾವನೆಗಳನ್ನು ಘಾಸಿಗೊಳಿಸಿದ್ದು ಅವನ ಭಾವನೆಯಲ್ಲಿ ಗಟ್ಟಿಯಾಗಿ ಕುಳಿತ ‘ಸಂಶಯ ಮತ್ತು ಉದ್ಯೋಗದಲ್ಲಿ ಕಾಡುವ ಅನಿಶ್ಚಿತತೆ’ ಇವು ಗಂಡಸರಲ್ಲೂ, ಹೆಂಗಸರಲ್ಲೂ ಒಂದೇ ವಿಧವಾಗಿ ಕಾಡಬಹುದು. ಆ ಉದ್ಯೋಗಿಗೆ ನಂತರ ಕೌನ್ಸೆಲಿಂಗ್‌ಗೆ ಒಳಪಡಿಸಿ ಅವನ ತಾನೇ ಸೃಷ್ಟಿಸಿದ ಪ್ರಪಂಚವನ್ನು ತೊಡೆದುಹಾಕಿ ಮುಂದೆ ಅವನು ಹಿಂದಿನ ಅತ್ಯುತ್ತಮ ಅಧಿಕಾರಿಯಾಗಿ ಬಡ್ತಿ ಪಡೆದ.
ಕರೋನ ಮಹಾಮಾರಿಯ ವೈರಸ ಕೋವಿದ್ ೧೯ ಹಲವು ಪಾಠಗಳನ್ನು ಕಲಿಸಿದೆ..ವಿಶ್ವವೇ ಒಂದು ಕುಟುಂಬದಂತೆ ಒಂದುಗೂಡಿದ್ದು ಇದೇ ಪ್ರಥಮ . ಉದ್ದೇಶ, ನಿಲುವು,/ಪರಸ್ಪರ ಅರಿವು ಮತ್ತು ಸಹಾಯ ಮತ್ತು ಬಂಧು ಪೃೇಮ ಇವೆಲ್ಲದರ ಅಗತ್ಯವನ್ನು ದುಷ್ಟ ಕರೋನ ನಮಗೇ ಗೊತ್ತಿಲ್ಲದಂತೆ ಕಲಿಸಿದೆ.ಆದರೂ ಕೆಲವು ಯುವಕರ ಮನೋಭಾವ ಮತ್ತು ಬೇಜವಾಬ್ದಾರಿಯುತ ಮಕ್ಕಳ ಬುದ್ದಿಯ ನಾಗರೀಕರ ಮತ್ತು ಕೆಲವು ಯಜಮಾನರಿಗೆ ಪೋಲೀಸರ ಲಾಟಿಯ ಹೊಡೆತ ತಕ್ಕ ಮಟ್ಟಿಗೆ ಪಾಠ ಕಲಿಸಿದೆ. ಇಂಥವರು ಯಾವುದೇ ಕಾರಣಕ್ಕೂ ಪರಿಸ್ಥಿತಿಗೆ ಅನುಗುಣವಾಗಿ ವರ‍್ತಿಸುವುದಿಲ್ಲ.ಇವರಿಗೆ ದೊಣ್ಣೆಯ ಬಾಷೆಯೊಂದೇ ಆರ‍್ಥವಾಗುವ ಮಾಧ್ಯಮ..ಆದ್ದರಿಂದ ಕರೋನ ವನ್ನು ಮುಖಾಮುಖೀ ಯಾಗುವ ಮತ್ತು ನಮ್ಮನ್ನು ನಾವು ರೋಗ ತಗುಲದಂತೆ ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಸರಕಾರ ಕೊಟ್ಟ ನಿಯಮಾವಳಿಯನ್ನು ಪಾಲಿಸುವುದು ನಮ್ಮ ಉಳಿವಿನ ದೃಷ್ಟಿಯಿಂದ ಅಗತ್ಯ.ಕೆಲವು ಜನರಿಗೆ ಜವಾಬ್ಧಾರಿ ಇಲ್ಲದಿದ್ರೆ ಅಂತಹವರ ಅಗತ್ಯ ಕರೋನಕ್ಕೆ ಇದೆ.ಅಂತಹವರಿಗೆ ಯಮ ಬಸ್ಸು ಕಳಿಸಬಹುದು.
ಇಂದಿನ ವರ್ತಮಾನ ಕ್ಲೇಶಭರಿತ, ಮಾನಸಿಕ ವೇದನೆಯ ಕಾಲವಾಗಿದ್ದು ನಮಗೆ ಮನೋರೋಗಿಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಅವನೊಂದಿಗೆ ಸ್ನೇಹಪರತೆಯ ನಡತೆಯನ್ನು ಹೊಂದುವ ಅವಕಾಶವಿದ್ದು, ನಮ್ಮ ಮನೋಭಾವನೆಯಲ್ಲಿ ಬದಲಾವಣೆ ಮಾಡಿಕೊಂದು ಮಾನವೀಯ ನೆಲೆಯಲ್ಲಿ ಇದನ್ನು ಎದುರಿಸಬೇಕಾಗಿದೆ. ಕೆಲ್ಸ ಮಾಢುವ ಅಧಿಕಾರಿ ವರ್ಗ, ಕಾರ‍್ಖಾನೆಯಲ್ಲಿ ಕೆಲಸ ಮಾಡುವ ಶ್ರಮಿಕ ವರ‍್ಗ ದ ನೌಕರರು ಆಡಳಿತ ಮಂಡಲಿಗೆ ‘ಮಾನವ ಸಂಪನ್ಮೂಲ’ ವಾಗುವುದು ಇಂತಹ ಮಾನವೀಯತೆಯನ್ನು ತಮ್ಮ ಮನೋಭಾವದಲ್ಲಿ ಉಳಿಸಿಕೊಂಡಾಗ ಮಾತ್ರ. ಮಾನವ ಸಂಪನ್ಮೂಲ ಅಭಿವೃದ್ಧಿ ಎಂದರೆ ಒಂದು ಒಳ್ಳೆಯ ದಷ್ಟ ಪುಷ್ಟ ದನವನ್ನು ಹಾಲಿಗಾಗಿ ತಂದು ಕಟ್ಟಿಹಾಕಿ ಮೇವನ್ನು ಕೊಟ್ಟು/ ಆರೋಗ್ಯ ಕ್ಷೀಣಿಸಿದಾಗ ಅದನ್ನು ದೂರದಲಿರುವ ಕಸಾಯಿಖಾನೆಗೆ ಬಿಟ್ಟು ಬರುವುದು ಧರ್ಮ ಅಲ್ಲವೆಂದು ನಮಗೆ ಅರಿವಿದೆ.ಚಿತ್ತಕ್ಲೇಷ ಮತ್ತು ಮಾನಸಿಕ ಅಸ್ವಸ್ಥತೆ ನಡುವಿನ ಸಾಧಾರಣ ಗುಣಗಳು ಹೀಗಿವೆ
ಚಿತ್ತಕ್ಲೇಶ ಅಸ್ವಸ್ಥತೆ
ಬಹುಮುಖೀ ಮಾನಸಿಕ ಸ್ಥಿತಿ. ಒಂದು ರೀತಿಯ ಮಾನಸಿಕ ಸ್ಥಿತಿ
ಹಲವು ರೀತಿಯ ಮನಸ್ಸಿನ ಕ್ಲೇಶದ ತಗ್ಗಿದ ಮನಸ್ಥಿತಿ, ಹೆದರಿಕೆ,
ರೂಪವನ್ನ್ಲು ಕಾಣಬಹುದು. ಅಸಹಾಯಕತೆ, ಸಾವಿನ ಇಚ್ಚೆ .
ಲಕ್ಷಣಗಳು
ಆತ್ಮ ಗೌರವದ ಕೊರತೆ, ಅನಾಥ
ಕುಳಿತ ಕಡೆ ನಿದ್ದೆ, ಹೊಟ್ಟೆಯಲ್ಲಿ ಸುಸ್ತು ತಳಮಳ ಹೃದಯದಲ್ಲಿ ನೋವು, ಎದೆ ಬಡಿತ ಮೈಕೈ ನೋವು ಉಸಿತಾಟದಲ್ಲಿ ಏರಿಳಿಕೆ
ಉಸಿರಾಟದಲ್ಲಿ ವೇಗ ಶಾಂತವಾಗಿ ಕುಳಿತುಕೊಳ್ಳಲಾಗದ ಸ್ಥಿತಿ ನಿದ್ದೆಯ ಕೊರತೆ. ಹಠಾತ್ತಾಗಿ ತೂಕದಲ್ಲಿ ಏರಿಳಿತ ಚಿತ್ತ ಕ್ಲೇಶ ಮತ್ತು ಚಿತ್ತ ಅಸ್ವಸ್ಥತೆ ಎರಡೂ ಒಮ್ಮೊಮ್ಮೆ ಒಂದರ ಹಾಗೆ ಇನ್ನೊಂದು ಕಾಣುವುದು ಇದೆ. ಆದರೆ ಡಾಕ್ಟರು ನಿಮ್ಮ ಮನೋರೋಗವನ್ನು ಸರಿಯಾಗಿ ಪರೀಕ್ಷಿಸಿ ಔಷಧಗಳನ್ನು ಕೊಟ್ಟು ರೋಗಿ ಆರೋಗ್ಯವಂತ ಮನಸ್ಸನ್ನು ಹೊಂದಬಹುದು. ಮನಸ್ಸಿನ ಅಸ್ವಸ್ಥತೆ ತಾತ್ಕಾಲಿಕವಾಗಿ ಕಾಡಿದರೆ, ಚಿತ್ತಕ್ಲೇಶ ನಾಲ್ಕೈದು ತಿಂಗಳು ಇರಬಹುದು. ಒಂದು ಸಾರಿ ಈ ಮನೋರೋಗದಿಂದ ಹೊರಗೆ ಬಂದವರು ತಮ್ಮ ಮನಸ್ಸಿನ ಮೇಲೆ ಸರಿಯಾದ ನಿಯಂತ್ರಣ ಇಡಬೇಕು. ಹೆಚ್ಚಾಗಿ ಸಿನೇಮಾ ಕಲಾವಿದರು ಇಂತಹ ಮನಸ್ಸಿನ ರೋಗಿಗಳು ಜಾಸ್ತಿ. ಆದರೆ ಈಗಿನ ಈ ದಶಕ ಚಿತ್ತ ಕ್ಲೇಶ ಕೊಡಮಾಡುವ ಸವಾಲುಗಳ ದಶಕವಿದು. ಮನೋರೋಗ ಈಗ ಅನಿವಾರ್ಯದಂತೆ ಭಾರತೀಯರಲ್ಲಿ ಬಂದಿದೆ. ಇದು ದಶಕದ ತುಂಬಾ ಹಬ್ಬಲಿದೆ. ಡಾಕ್ಟರರ ಹತ್ತಿರ ಹೋಗಲು ಹಿಂಜರಿಕೆಯೇ ಕಾರಣ. ನಿಮ್ಮ ಮನೋರೋಗ ಕೇವಲ ನಿಮಗೆ ಮಾತ್ರ ಸಂಬಂಧಿಸುವುದಿಲ್ಲ. ಸಮಾಜಕ್ಕೂ ಅನ್ವಯಿಸುತ್ತದೆ. ಅಂಧ ವಿಶ್ವಾಸದಿಂದ ಆಗುವ ಪರಿಣಾಮಗಳು ಬಹಳ. ಆದ್ದರಿಂದ ಜನರು ಹೆಚ್ಚಾಗಿ ಯುವಕರು ಎದ್ದೇಳಬೇಕು. ಯಾವುದಾದರೂ ಮೇಲೆ ಉದ್ದರಿಸಿದ ರೋಗ ಲಕ್ಷಣ ನಿಮಗೆ ಅನುಭವವಾದರೆ ಅದನ್ನು ತಕ್ಷಣ ವಿಳಂಬಿಸದೇ ದಕ್ಷ ವೈದ್ಯರ ಹತ್ತಿರ ಸಲಹೆ ಕೇಳಬೇಕು. ಮನೋರೋಗವು, ಮನುಷ್ಯನ ಇನ್ನಿತರ ರೋಗದಂತೆ ಎಂದು ತಿಳಿದು, ನಾಚಿಕೆ, ಹೆದರಿಕೆ, ಅಂಜಿಕೆ, ಸೊಮಾರಿತನ ತೊರೆದು ಅದನ್ನು ಎದುರಿಸಲು ಮನಸ್ಸು ತಯಾರು ಮಾಡಬೇಕು..ಆಗ ಮನಸ್ಸು, ದೇಹ, ಭಾವನೆ ಎಲ್ಲವನ್ನು ನಿಮಗೆ ಬೇಕಾದ ಹಾಗೆ ರೂಪಿಸಬಲ್ಲಿರಿ. ನಿಮ್ಮ ಆರೋಗ್ಯವಂತ ಮನಸ್ಸು, ನಿಮ್ಮ ಕೆಲಸದಲ್ಲಿ ,ವ್ಯಕ್ತಿತ್ವದಲ್ಲಿ ಮತ್ತು ಸವಾಲನ್ನು ಎದುರಿಸುವಲ್ಲಿ ಅಗತ್ಯ. ಅದಕ್ಕಾಗಿ ಮನಸ್ಸು ಎಂದರೆ ಮನುಷ್ಯ. ಆರೋಗ್ಯವಂತ ಮನಸ್ಸು, ಆರೋಗ್ಯವಂತ ಮನುಷ್ಯ. ಒಂದು ಮಾತು ನೆನಪಿನಲ್ಲಿಡಬೇಕು.
ಕೇವಲ ಚಿಂತೆ ಅಥವಾ ಹೆದರಿಕೆ ಅಥವಾ ಇನ್ಯಾವುದೋ ವಿವರ ಮನಸ್ಸಿನ ಅಸ್ವಸ್ಥತೆಗೆ ಕಾರಣವಾದರೆ ಅದನ್ನು ನಾವೇ ಧೈರ್ಯದಿಂದ ಎದುರಿಸುವ ಪ್ರಯತ್ನ ಮಾಡಬೇಕು. ಈ ಮಾನಸಿಕ ತಲ್ಲಣ, ತಳಮಳ ಮುಂದುವರೆದರೆ ಆಗ ಮನೋತಜ್ಞರ ಸಹಾಯವನ್ನು ತೆಗೆದುಕೊಳ್ಳುವುದರಲ್ಲಿ ಹಿಂಜರಿಯಬಾರದು. ಆದರೆ ಕೆಲವೊಮ್ಮೆ ದೇಹಕ್ಕೆ ತಗಲುವ ರೋಗದ ಶುಶ್ರೂಷೆಯಲ್ಲಿ ಮಾನಸಿಕ ರೋಗದ ಶುಶ್ರೂಷೆಯಿಂದ ಹಿಂದೆ ಸರಿಯುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ದೇಹಕ್ಕೆ ತಗಲುವ ರೋಗಕ್ಕೆ ಔಷಧ ಕೊಡುವಾಗ ಆ ರೋಗಿಯ ಮಾನಸಿಕ ರೋಗಕ್ಕಾಗಿ ಸೇವಿಸುತ್ತಿರುವ ಔಷಧಿಗಳನ್ನು ತೋರಿಸಿ, ನೆನಪಿಸುವ ಕೆಲಸ ಮಾಡಬೇಕು. ಮನಸ್ಸು ಗ್ಲಾನಿಯಿಂದ ಇದ್ದು ಶರೀರ ಆರೋಗ್ಯವಾಗಿದ್ದರೂÉ ಮನುಷ್ಯ ‘ಆಕಾರ’ ಮಾತ್ರ. ಮನೋ ರೋಗಿ ಕೇವಲ ತರಕಾರಿಯಂತೆ ನಿಸ್ತೇಜ ಆಗಿ ಸಮಸ್ಯೆಯ ಇನ್ನೊಂದು ಸಂಗತಿಯಾಗದಿರಲಿ ಎನ್ನುವುದೇ ಈ ಲೇಖನದ ಹಿಂದಿನ ಉದ್ದೇಶ. ಕೆಲವು ಪ್ರಸಿದ್ಧ ಜನರ ಹೇಳಿಕೆಗಳನ್ನು ನೋಡಿ.
ದೀಪಿಕಾ ಪಡುಕೋಣೆ: ಖ್ಯಾತ ನಟಿ
ನನ್ನ ಕುಟುಂಬ ಯಾವಾಗಲೂ ನನ್ನೊಡನಿದ್ದು ನನ್ನ ಮನಸ್ಸಿನ ಖಿನ್ನತೆಯು ಸಹಜವೆಂದು ಅದು ಔಷಧಿಯಿಂದ ಗುಣಪಡಿಸಲಾಗುವುದು ಎನ್ನುವ ನಂಬಿಕೆ ಒಂದು ದೊಡ್ಡ ಶಕ್ತಿ.
ಶಮಾ ಸಿಕಂದರ್: ಬಾಲಿವುಡ್ ನಟಿ
ನನಗೆ ಮನೋರೋಗವಿದೆಯೆಂದು ತಿಳಿಯಲು ಒಂದು ವರ್ಷ ತೆಗೆದುಕೊಂಡಿತು.
ಯೋ ಯೋ ಹನಿ ಸಿಂಗ್: ಗಾಯಕ
ಮನೋರೋಗ ಸುಮಾರು ಒಂದುವರೆ ವರ್ಷದಿಂದ ನನಗೆ ಇದೆ. ಸುಮಾರು ಮೂರು ವೈದ್ಯರನ್ನು ಬದಲಿಸಿದ್ದೇನೆ. ನನ್ನ ಅಭಿಮಾನಿಗಳು ನನ್ನನ್ನು ರೂಪಿಸಿದವರು. ನಾನು ನಟಿ ಅಥವಾ ಗಾಯಕನಾಗಿ ತನ್ನ ತಾರಾ ಜೀವನವನ್ನು ಉಳಿಸಿಕೊಳ್ಳಲು ಹೋದರೆ ನಾನೇ ಕಳೆದುಹೋಗುವ ಪರಿಸ್ಥಿತಿ ಬರಬಹುದು.
ಅನುಷ್ಕಾ ಶರ್ಮ: ಬಾಲಿವುಡ್ ನಟಿ
ನನಗೆ ಚಿತ್ತ ಕ್ಲೇಷವಿದೆ ಮತ್ತು ಅದಕ್ಕಾಗಿ ತಜ್ಞರಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ. ಈಗ ಇದು ಸಾಮಾನ್ಯ ಸಂಗತಿ. ನಾನು ಈ ಮಾನಸಿಕ ರೋಗದ ಬಗ್ಗೆ ಮುಂದಿನ ಭವಿಷ್ಯವನ್ನು ವಿನಾ ಕಾರಣ ಯೋಚಿಸಿ, ನನ್ನವರನ್ನು ಚಿಂತೆಗೀಡು ಮಾಡುವುದು.
ಲೇಖನ ಬಹಳ ಚೆನ್ನಾಗಿದೆ. ಮಾಹಿತಿಪೂರ್ಣ
thank you madam.nimma abhiprayakke dhanyavadagalu
v.s.shanbhag
9892165658
ತುಂಬಾ ಸಮಾಧಾನದಿಂದ ವಿಶ್ಲೇಷಣೆಯೊಂದಿಗೆ ಮಾನಸಿಕ ಒತ್ತಡ, ಅದರಿಂದ ಪಾರಾಗುವ ಬಗೆಗಳನ್ನು ವಿವರಿಸಿದ್ದೀರಿ. ಬಹಳ ಒಳ್ಳೆಯ ಸಂಗ್ರಹಯೋಗ್ಯ ಬರಹ.
nimma abhipraya tumba khushi kottide.vandanegalui
v.s.shanbhag
9892165658
nimma abhipraya nanage khushi tandide,vandanegalu
v.s.shanbhag
9892165658
nimma abhiprayakke manasu tumbi bantu vandanegalu
v.s.shanbhag
9892165658
Very very informative and helpful article..
nimma pratikriye nanage khushi tandide.vandanegalu
v.s.shanbhag
9892165658