ಹೊಸ ಶಿಕ್ಷಣ ನೀತಿ

ಚರ್ಚೆ

ಕಠಿಣ ಕಾಯಿದೆ ಅತ್ಯಗತ್ಯ

ಡಿ.ಎಸ್.ರಾಮಸ್ವಾಮಿ

ಮೆಕಾಲೆ ಪ್ರಣೀತ ಶಿಕ್ಷಣ ವ್ಯವಸ್ಥೆಯನ್ನು ಅಷ್ಟು ಸುಲಭದಲ್ಲಿ ಬದಲಿಸುವುದು ಅಸಾಧ್ಯದ ಕೆಲಸ. ಮೂಲತಃ ವರ್ಣವ್ಯವಸ್ಥೆಯೇ ಪುರಾತನ ಭಾರತೀಯ ಸಮಾಜದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸೇತುವಾಗಿತ್ತು. ಬ್ರಿಟಿಷರ ಅಪಭ್ರಂಶ ಅರ್ಥಾಂತರವೇ ಇವತ್ತಿನ ಜಾತಿ ಪದ್ಧತಿಯಾಗಿ ಬದಲಾಗಿ ಶ್ರೇಣೀಕೃತ ಸಮಾಜವನ್ನು ಜಾತಿ ಮೂಲಕ ಕಾಣಹೊರಟದ್ದೇ ಸದ್ಯದ ದುರಂತ.

ಪುರಾತನ ಶಿಕ್ಷಣ ಗುರುಕುಲಗಳಲ್ಲಿ ಆಯಾ ವರ್ಣದ ಕಸುಬು ಮತ್ತು ಜೀವನ ನಿರ್ವಹಣೆಯ ಗುರಿಯಾಗಿ ರೂಪುಗೊಳ್ಳುತ್ತಿತ್ತು. ಪರಸ್ಪರ ಅವಲಂಬನೆ ಇದ್ದ ಕಾಲದಲ್ಲಿ ಪರಸ್ಪರ ಗೌರವ ಮತ್ತು ಕೊಡು ಕೊಳ್ಳುವಿಕೆ ಇರಲಿಕ್ಕೇ ಬೇಕು.

ಆದರೆ ಮೆಕಾಲೆ ಸೃಷ್ಟಿಸಿದ್ದು ಕ್ಲೆರಿಕಲ್ ಶಿಕ್ಷಣ ವ್ಯವಸ್ಥೆಯನ್ನು. ಎಲ್ಲಕ್ಕೂ ಲೆಕ್ಕ ವರದಿ ಮತ್ತು ಉಸ್ತುವಾರಿ ಕಲಿಸಿತೇ ವಿನಾ ಕಸುಬನ್ನಲ್ಲ. ಜೊತೆಗೆ ಆಸಕ್ತ ವಿಷಯದ ಅಧ್ಯಯ‌ನವನ್ನು ಕೂಡ ನಿಷೇದ ಮಾಡಿತು. ವಿಜ್ಞಾನ ಮತ್ತು ಕಲೆ ಎರಡರಲ್ಲೂ ಆಸಕ್ತಿ ಇರುವವರನ್ನು ದೂರ ಇಟ್ಟಿತು. ಆನರ್ಸ್ ಇಲ್ಲದ ಬರಿಯ ತಿಳುವಳಿಕೆಯನ್ನೇ ಜ್ಞಾನ ಎಂದು ಬಿಂಬಿಸಿದ ಕಾರಣಕ್ಕೇ ಇವತ್ತು ಪರಸ್ಪರ ಅವಲಂಬನೆಗಿಂತ ಪರಸ್ಪರ ದ್ವೇಷ ಅಸೂಯೆ ತುಂಬಿಕೊಂಡಿದೆ. ಪಠ್ಯಪುಸ್ತಕ ಆಯ್ಕೆ ಸಮಿತಿಯು ಆಯಾ ಆಳುವ ಸರ್ಕಾರದ ಹುಕುಂಗಳನ್ನು ಅಂತಃ ಪಠ್ಯವಾಗಿ ಆರಿಸುವುದು ಕೂಡ ನಿಜದ ಚರಿತೆಯನ್ನು ಮುಚ್ಚಿಟ್ಟು ತಿದ್ದಿದ ಇತಿಹಾಸವನ್ನು ಕಲಿಸುವ ಮೂಲಕ ಪರಂಪರೆಯನ್ನು ದೂರ ಇರಿಸಿ ಆವಾಹಿತ ತಿಳುವಳಿಕೆಯನ್ನು ಜ್ಞಾನವೆಂದು ಬಿಂಬಿಸಲಾಯಿತು.

ಈ ಕುರಿತು ಸಾದ್ಯಂತವಾದ ಅಧ್ಯಯನ ಮತ್ತು ಕಠಿಣ ಕಾಯಿದೆ ಅತ್ಯಗತ್ಯ

*******************

3 thoughts on “ಹೊಸ ಶಿಕ್ಷಣ ನೀತಿ

  1. ಮೆಕಾಲೆ ನೀತಿ ಗುಲಾಮರನ್ನು ಸ್ರಷ್ಟಿಸುವ ಉದ್ದೇಶದಿಂದ ಕೂಡಿತ್ತು ನಿಜ. ಆದರೆ ಅದನ್ನು ವ್ಯಾಪಾರೀಕರಣಗೊಳಿಸಿ ಇಂದಿನ ದುರವಸ್ಥೆಗೆ ನೂಕಿದ್ದು ನಮ್ಮ ನೆಲದ ಜನರೇ.. ಸಾಮಾಜಿಕ ತಾರತಮ್ಯಕ್ಕೂ ಇದು ಕಾರಣ.

    ಇನ್ನು ಗುರುಕುಲ ಮಾದರಿಯಲ್ಲಿ ಶಿಕ್ಷಣ ದೊರೆತದ್ದು ಉಳ್ಳವರಿಗೆ ಮಾತ್ರ.
    ಜಾತಿ ಪದ್ಧತಿಯನ್ನು ಸ್ಥಿರಗೊಳಿಸಿದಾಗಿಂದಲೂ ಕೊಡು ಕೊಳ್ಳುವಿಕೆಯಲ್ಲಿ ಅಗತ್ಯ ಗಳ ಪೂರೈಕೆ ಇತ್ತೇ ಹೊರತು ಅವಲಂಬನೆ ಇರಲಿಲ್ಲ.

    1. ಈಗಾಗಲೇ ಪ್ರಕಟವಾಗಿರುವ ಲೇಖನಕ್ಕೆ ಬರೆದ ಪ್ರತಿಕ್ರಿಯೆ ಇದು. ವಿಸ್ತ್ರುತ ಲೇಖನ ಬರೆಯುವ ಉದ್ದೇಶ ಇದೆ.

Leave a Reply

Back To Top