Category: ಇತರೆ

ಇತರೆ

ಬಡವರ ಮನೆ ಆತಿಥ್ಯ ಯಾವಾಗಲೂ ಚೆಂದ

ಸುಡು ಧಗೆಯ ಬಿಸಿಲ  ದಿನದಲ್ಲೂ ಅದು ಹೇಗೋ ನನಗೆ ನೆಗಡಿ ಕೆಮ್ಮು  ಒಂದು ನಾಲ್ಕು ದಿನ ಮೊದಲೇ ಆರಂಭವಾಗಿತ್ತು. ರಾತ್ರಿ ಸುಮ್ಮನೆ ಯಾರಿಗೂ ನಿದ್ದೆ ಇರುವುದಿವಲ್ಲ ಎಂಬ ಬೇಸರ ನನಗೆ .ತಡರಾತ್ರಿ  ಒಂದು ಗಂಟೆ ಆಗುತ್ತಿದ್ದಂತೆ ಒಣ ಕೆಮ್ಮಿನ ಪ್ರತಾಪ ಶುರುವಾಯಿತು! ನನಗೆ ಇವರ ಮನೆಯವರು, ಜೊತೆಯಲ್ಲಿರುವ  ಸಂಗಡಿಗರಿಗೂ ನಿದ್ದೆ ಇಲ್ಲವಲ್ಲ ಎಂಬ ಬೇಸರ

ಸುಧಾ ಹಡಿನಬಾಳ

ಗಂಡಸರಿಗೆ ಮಾತ್ರ !ಭಾರತಿ ಆದೇಶ್ ಹೆಂಬಾ-ಲಲಿತ ಪ್ರಬಂಧ

ಪ್ರಬಂಧ ಸಂಗಾತಿ

ಭಾರತಿ ಆದೇಶ್ ಹೆಂಬಾ

ಗಂಡಸರಿಗೆ ಮಾತ್ರ

ಬಾಲಕಾರ್ಮಿಕ ಪದ್ದತಿ ತೊಲಗಲಿ..!ಶ್ರೀನಿವಾಸ್ ಎನ್.ದೇಸಾಯಿ

ಇವತ್ತು ಅಂದರೆ ಜೂನ್‌ 12 ರಂದು ಆಚರಿಸಲ್ಪಡುವ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆಯ ನಿಮಿತ್ತವಾಗಿ ಈ ಲೇಖನ..

ಶ್ರೀನಿವಾಸ್ ಎನ್. ದೇಸಾಯಿ

ಬಾಲಕಾರ್ಮಿಕ ಪದ್ದತಿ ತೊಲಗಲಿ..!

ಡಾ.ಮೀನಾಕ್ಷಿ ಪಾಟೀಲ ಲೇಖನ-ಜನನಿ ಜೊತೆ ಎರಡು ಮಾತು

” ಮನೆಯೇ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರು ಜನನಿಯಿಂದ ಪಾಠ ಕಲಿತ ಜನರು ಧನ್ಯರು “ಎಂಬ ಕವಿವಾಣಿಯಂತೆ— ಯಾವ ಮಗು ಜನನಿಯಿಂದ ಶಿಕ್ಷಣ ಸಂಸ್ಕಾರ ಸಂಸ್ಕೃತಿಯನ್ನು ಪಡೆಯುತ್ತದೆಯೋ ಅದೇ ಮಗು ಮುಂದೆ ಸತ್ಪ್ರಜೆ ಎನಿಸಿಕೊಳ್ಳುತ್ತಾನೆ. ರೂಪಿತ ವ್ಯಕ್ತಿತ್ವದ ನೆಪದಲ್ಲಿ ತಾಯಿಯೊಬ್ಬಳ ಪಾತ್ರ ಬಹುಮುಖ್ಯ ವಾಗಿರುತ್ತದೆ. ಮಗುವಿನ ಪ್ರತಿ ವರ್ತನೆಯ ಹಿಂದೆ ತಂದೆ-ತಾಯಿ ಮನೆಯ ಪರಿಸರ ಕಾರಣೀಭೂತವಾಗುತ್ತವೆ. ಕುಟುಂಬದ ವಾತಾವರಣ ಸದಸ್ಯರುಗಳ ವರ್ತನೆಯನ್ನು ಹೆತ್ತವರು ಬಹು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ, ಅದರಲ್ಲೂ ಮಗುವಿನ ಪ್ರಾರಂಭಿಕ ಬೆಳವಣಿಗೆ ಹಂತದಲ್ಲಿ ಅವರು ಸ್ವತಹ ಮಗುವಿನ ಜೊತೆಗೆ ಜಾಗರೂಕತೆಯಿಂದ ವರ್ತಿಸುವುದು ಅಗತ್ಯವಾಗಿದೆ. ಆದರೆ ವಿಷಾದದ ಸಂಗತಿಯೇನೆಂದರೆ ನಮ್ಮಲ್ಲಿ ಬಹುತೇಕರು ಈ ಮೂಲ ವಿಚಾರಗಳ ಕಡೆ ಲಕ್ಷ ಹರಿಸದೇ ಇರುವುದು. ಈ ಹಿನ್ನೆಲೆಯಲ್ಲಿ ಇಂದಿನ ಪಾಲಕರು ಮಕ್ಕಳ ವಿಷಯದಲ್ಲಿ ಮೊದಲಿನಿಂದಲೇ ದೂರದೃಷ್ಟಿ ಬೆಳೆಸಿಕೊಳ್ಳಬೇಕು.
ಇಂದಿನ ದಿನಮಾನಗಳಲ್ಲಿ ಬಹುತೇಕ ಶ್ರೀಮಂತರು ತಮ್ಮ ಮಕ್ಕಳ ಭವಿಷ್ಯವನ್ನು ಹಣದಿಂದ ರೂಪಿಸಿಕೊಳ್ಳಲು ನೋಡುತ್ತಾರೆ. ಮಧ್ಯಮವರ್ಗದ ಜನರಲ್ಲಿ ಮಕ್ಕಳ ಭವಿಷ್ಯದ ವಿಷಯ ಪ್ರತಿಷ್ಠೆಯಾಗಿ ಬೆಳೆಯುತ್ತಿದೆ.ಬೇರೆ ಮನೆಯ ಮಕ್ಕಳು ದುಬಾರಿ ಶಾಲೆಗೆ ಹೋಗುವುದನ್ನು ನೋಡಿ ತನ್ನ ಮಗು ಕೂಡ ಅದೇ ಶಾಲೆಗೆ ಹೋಗಬೇಕೆನ್ನುವ ಹುಚ್ಚುಹಂಬಲ ಹಠವಾದಿತನ ಬೆಳೆದು ಹಣ ಗುಣ ಎರಡನ್ನು ಕಳೆದುಕೊಳ್ಳುವ ಪ್ರಸಂಗಗಳನ್ನು ನಾವು ನೋಡುತ್ತಿದ್ದೇವೆ. ಮನೆಯಲ್ಲಿ ಮೊಂಡು ವಾದಮಾಡಿ, ತಾನು ಮಾತ್ರ ನಿರಕ್ಷರಿಯಾಗಿದ್ದರೂ ಸಹ ಮನೆಪಾಠ ಹೇಳಿಸಿದರಾಯಿತು ಎಂಬ ಹುಂಬತನವನ್ನು ಪ್ರದರ್ಶಿಸುತ್ತಾರೆ. ಆದರೆ ಮಗುವಿಗೆ ಅಂತಹ ಶಾಲೆ ಹೊರೆಯಾಗಿ ತನ್ನ ಸಹಜ ಸ್ವಭಾವದ ಕಲಿಕೆಯನ್ನು ಕುಗ್ಗಿಸಿಕೊಳ್ಳುವ ಪ್ರಸಂಗಗಳೇ ಹೆಚ್ಚು ಸಂಭವನೀಯ. ಇಂಥ ಸಾಮಾನ್ಯ ವಿಷಯಗಳನ್ನು ನಮ್ಮ ತಾಯಂದಿರು ಗಮನಿಸುತ್ತಿಲ್ಲ. ತಾಯಿನುಡಿಯಲ್ಲಿ ಪ್ರಾಥಮಿಕ ಶಿಕ್ಷಣ ಕೊಡಿಸಿ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಅನುವು ಮಾಡಿಕೊಡುತ್ತಿಲ್ಲ. ಮಗುವಿಗೆ ಶಾಲೆಯಲ್ಲಿ ಹೇಳಿಕೊಡುವುದಕ್ಕಿಂತಲೂ ಮನೆಯಲ್ಲಿ ಕಲಿಸಿಕೊಡುವ ಆಟ-ಪಾಠಗಳು ಪದ- ಪುಂಜಗಳು ಕಥೆಗಳಿಗೆ ಮಗು ಬಹುಬೇಗ ಸ್ಪಂದಿಸುತ್ತದೆ. ಇಂತಹ ಹಲವು ವಾಸ್ತವ ಸಂಗತಿಗಳಲ್ಲಿ ಪ್ರತಿಷ್ಠೆಗೆ ಜೋತು ಬೀಳದೆ ಅಂಧಾನುಕರಣೆಯಿಂದ ಎಚ್ಚೆತ್ತುಕೊಳ್ಳಬೇಕಾಗಿದೆ.ಮಗುವಿಗೆ ತಾಯಿ ಆಡು ನುಡಿಯಲ್ಲಿ ಪೂರ್ವ ಶಿಕ್ಷಣ ಪ್ರಾರಂಭಿಸುವುದರಿಂದ ಕಂದನಿಗೆ ಪುಸ್ತಕದ ಪಾಠಗಳನ್ನು ಹೇಳಿ ಕೊಡಬಹುದಾಗಿದೆ.
ಕೇವಲ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕಲಿತು ಬಂದರೇನು ಕಲಿಕೆ ಉಂಟಾದ ಹಾಗಲ್ಲ. ಶಾಲೆ ಜ್ಞಾನ ಅನುಭವ ಹೊಂದಿರುವ ಸಮಚಿತ್ತ ಸ್ಥಳ . ಮನೆಯೇ ಶಾಲೆ ಆಗುವುದು ಇನ್ನು ಆರೋಗ್ಯಕರ. ಈ ಸಾಮಾನ್ಯ ತಿಳುವಳಿಕೆ ಎಲ್ಲ ತಾಯಂದಿರಿಗೂ ಇರುವುದು ಈಗಂತೂ ಅತಿ ಅಗತ್ಯವಾಗಿದೆ. ಮಮತೆ ವಾತ್ಸಲ್ಯಗಳ ಜೊತೆಗೆ ಮಾನಸಿಕ ರಕ್ಷಣೆ ಹಾಗೂ ಪ್ರಗತಿಗಳು ಮೊದಲ ಪಾಠಶಾಲೆ ಎಂಬ ಮನೆಯಿಂದ ಓದುವುದು ಅಪೇಕ್ಷಣೀಯ. ಇದನ್ನು ಪರಿಭಾವಿಸಿ ಪ್ರಾಥಮಿಕ ಹಂತದ ಬೋಧನೆಗೆ ಎಂದು ಗುರು ಮಾತೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ಉಂಟು.
ಕಾರಣ ಮಕ್ಕಳನ್ನು ಕಠಿಣ ಬಾಲವಾಡಿ ಗಳಿಗೆ ಕಳಿಸಿ ಹೆಚ್ಚು ವಂತಿಗೆ ವಸೂಲಿ ಮಾಡುವ ವ್ಯವಸ್ಥೆಗೆ ಬಲಿಯಾಗುವ ಪ್ರವೃತ್ತಿಗಳಿಗೆ ಕೊನೆ ಹೇಳಬೇಕು. ಕಲಿಕೆಗೆ ಬೇಕಾದ ಸನ್ನಿವೇಶವನ್ನು ನಿರ್ಮಿಸಬೇಕು.ಅಥವಾ ಸರಳ ಸಹಜ ಶಿಶುವಿಹಾರ ಗಳಿಗೆ ಕಳುಹಿಸಿ ಕೊಡುವುದು ಒಳ್ಳೆಯದು.
ಒಟ್ಟಿನಲ್ಲಿ ಮಕ್ಕಳಲ್ಲಿ ಶೈಕ್ಷಣಿಕ ವಾತಾವರಣವನ್ನು ರೂಪಿಸುವಲ್ಲಿ ತಾಯಂದಿರ ಶ್ರಮಿಸಬೇಕಾಗುತ್ತದೆ.ಅಂದಾಗ ಮಾತ್ರ ಅಪೇಕ್ಷಿಸಿದ ಬೆಳೆಯ ಫಲವನ್ನು ಪಡೆಯಲು ಸಾಧ್ಯವಾಗುತ್ತದೆ

ಡಾ. ಮೀನಾಕ್ಷಿ ಪಾಟೀಲ್

ಹನಿಬಿಂದು ಅವರಿಗೆ ಶಿಕ್ಷ ರತ್ನ ಪ್ರಶಸ್ತಿ (ಅವಾರ್ಡ್‌) ಪ್ರಶಸ್ತಿ ಪ್ರಧಾನ

ಹನಿಬಿಂದು ಅವರಿಗೆವ್ಯಾಲ್ಯೂ ಅವಾರ್ಡ್‌ ಪ್ರಶಸ್ತಿ ಪ್ರಧಾನ

ದೇವನೂರುಮಹಾದೇವರ
ಜನ್ಮದಿನದಶುಭಾಶಯಗಳು

ದೇವನೂರುಮಹಾದೇವರ

ಜನ್ಮದಿನದಶುಭಾಶಯಗಳು
ಸಂಬಜಾ ಅನ್ನೋದು ದೊಡ್ಡದು ಕನಾ

ಶಶಿಕಾಂತ ಪಟ್ಟಣ ರಾಮದುರ್ಗ-ಲಿಂಗೈಕ್ಯನೇ ಬಲ್ಲ

ಕಾಣಬಹುದೆ ನಿರಾಕಾರ?
ಕಾಣಬಹುದೆ ಮಹಾಘನವು?
ಕಂಡು ಭ್ರಮೆಗೊಂಡು ಹೋದರೆಲ್ಲರು
ಕೂಡಲಚೆನ್ನಸಂಗನ ಅನುಭಾವವ
ಲಿಂಗೈಕ್ಯನೇ ಬಲ್ಲ
ಚೆನ್ನಬಸವಣ್ಣ

ಚೆನ್ನ ಬಸವಣ್ಣ ಶರಣ ಸಂಕುಲದ ಅತ್ಯಂತ ಸಣ್ಣ ವಯಸ್ಸಿನ ಮಹಾಜ್ಞಾನಿ .
ಶರಣರ ವಚನಗಳಲ್ಲಿ ಷಟಸ್ಥಲ
ಸಿದ್ಧಾಂತ ಗಟ್ಟಿಗೊಳಿಸಿದ ವೈಚಾರಿಕ ಪುರುಷ .

ಕಾಣಬಹುದೆ ನಿರಾಕಾರ?
————————————–

ಶರಣರು ವಚನಕಾರರು ಶೂನ್ಯ ಬಯಲು ನಿರಾಕಾರ ನಿರ್ಗುಣ ತತ್ವವನ್ನು ಸಾದರ ಪಡಿಸಿದವರು. ನಿರಾಕಾರವನ್ನು ಅನುಭವಿಸಿ ಅನುಸಂಧಾನ ಮಾಡ ಬಹುದಲ್ಲದೆ ಅದನ್ನು ಯಾರಾದರೂ ಕಾನ ಬಲ್ಲರೆ ಎಂಬುದು ಚೆನ್ನಬಸವಣ್ಣನ ಪ್ರಶ್ನೆ .
ನಿರಾಕಾರ ನಿರುಪಾದಿತ ಭಾವ ನಿರ್ಮಲ ಮನಸ್ಸಿಗೆ ಗೋಚರವಾಗುವ ಸೃಷ್ಟಿಯ ಮಹಾ ಪ್ರಜ್ಞೆ ಹೊರತು ಅದನ್ನು ಯಾರೂ ಕಾಣಲಾಗುವದಿಲ್ಲ.

ಕಾಣಬಹುದೆ ಮಹಾಘನವು?
————————————-

ಶರೀರ ಆತ್ಮ ಪ್ರಾಣ ಸಂಗಮದ
ಮಹಾ ಚೇತನ ವ್ಯಕ್ತಿಯ ಘನತೆ ಅಸ್ಮಿತೆ.
ಸೃಷ್ಟಿಯ ಸತ್ಯ ಶೋಧ ಮಹಾ ಘನದ ಹುಡುಕಾಟ ಸಾಧಕರ ಆದ್ಯ ಉದ್ದೇಶ. ಜೀವ ಸೃಷ್ಟಿಯ ವ್ಯಕ್ತಿ ಸಮಷ್ಟಿ ಇವುಗಳ ಬಂಧನದ ಮಹಾಘನವನ್ನು ಯಾರಾದರೂ ಕಂಡರೆ ಎಂಬುದು ಚೆನ್ನಬಸವಣ್ಣನ ಪ್ರಶ್ನೆ . ನಿರಾಕರವನ್ನು ಮತ್ತು ಮಹಾ ಘನವನ್ನು ಕಾಣಲಾಗದು ಕೇವಲ ಅನುಭವಿಸಬಹುದು.

ಕಂಡು ಭ್ರಮೆಗೊಂಡು ಹೋದರೆಲ್ಲರು
———————————-

ನಿರಾಕಾರ ಮತ್ತು ಮಹಾ ಘಣವನ್ನು ಕಂಡೆನು ಎಂಬುದು ಭ್ರಮೆ ಭ್ರಾಂತಿ ಮಾತ್ರ.
ಅನೇಕ ಸಾಧಕರು ತಪಸ್ವಿಗಳು ಸಾಧುಗಳು ಇಂತಹ ಮಹಾ ಘನವ ನಿರಾಕರವನ್ನ ಕಂಡೆ ಎಂದು ಹೇಳುವುದು ಒಂದು ವ್ಯರ್ಥ ಪ್ರಯತ್ನ .
ಇದನ್ನು ಅಲ್ಲಮರು ಕೂಡಾ ಕಾಣಬಾರದ ಲಿಂಗವೆಂದಿದ್ದಾರೆ.
ಲಿಂಗ ಸಮಷ್ಟಿಯ ಸಂಕೇತ.
ಲಿಂಗವು ನಿರಾಕಾರದ ಚಿತ್ಕಳೆಯ ಕುರುಹು. ಹೀಗಾಗಿ ಜೀವ ಜಗತ್ತಿನ ಅನೇಕ ಸಂಗತಿಗಳು ಗೋಚರ ಗೊಂಡರೂ ಕಾಣಲಾಗದು.
ಎಂದಿದ್ದಾರೆ ಚೆನ್ನ ಬಸವಣ್ಣ.

ಕೂಡಲಚೆನ್ನಸಂಗನ ಅನುಭಾವವ
ಲಿಂಗೈಕ್ಯನೇ ಬಲ್ಲ
—————————————-
ಕೂಡಲ ಚೆನ್ನಸಂಗನ ಅನುಭಾವವ ಲಿಂಗೈಕ್ಯನೇ ಬಲ್ಲ
ಇದು ಚೆನ್ನ ಬಸವಣ್ಣನವರ ಮತ್ತು ಸಮಗ್ರ ಶರಣರ ಒಮ್ಮತದ ಅಭಿಪ್ರಾಯ.
ಪರಮಾತ್ಮ ದೇವರು ಎಂಬ ನಂಬಿಕೆ ಇಟ್ಟ ಜಗತ್ತಿನ ಎಲ್ಲಾ ಧರ್ಮಗಳು .ದೈವ ಎಂಬ ಭಾವ ನಂಬಿಕೆಯನ್ನು ದೇಹ ಬಿಟ್ಟು ಹೊರಗೆ ಕಾಣಲು ಯತ್ನಿಸುತ್ತಾರೆ.
ಆದರೆ ಶರಣರು ತನ್ನ ಕಾಯದೊಳಗೆ ದೇವನಿರುವನು
ಇನ್ನೂ ಮುಂದೆ ಹೋಗಿ ಅಲ್ಲಮರು ನಾ ದೇವನಾಗಬಹುದಲ್ಲದೆ ನೀ ದೇವನಾಗಬಹುದೆ ಎಂದಿದ್ದಾರೆ.ಸಮಚಿತ್ತ ಸಮ ಭಾವ ಸಮಕಳೇ ಹೊಂದಿದ ನಿಜೈಕ್ಯನು ಮಾತ್ರ ಲಿಂಗದ ಅನುಭಾವವನ್ನು ತಿಳಿಯಬಲ್ಲ.
ಕೂಡಲ ಚೆನ್ನ ಸಂಗನ ಅನುಭಾವ ಎಂದರೆ ಅದು ಸೃಷ್ಟಿಯ ಮಹಾ ಪ್ರಜ್ಞೆ.ಸತ್ಯ ಮಹಾ ಘನ ಜೀವನದ ಅನನ್ಯತೆ ಮತ್ತು ಅಸ್ಮಿತೆ. ಇಂತಹ ಅನುಭವವನ್ನು ಲಿಂಗೈಕ್ಯ ಬಲ್ಲ. ಆರನ್ನು ಅಳಿದು ಅರಿಷಡ್ ವರ್ಗಗಳ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಮುಂತಾದ ವಿಷಯಗಳನ್ನು ಅಲ್ಲ ಗಳೆದು ಮೂರನ್ನು ಶರೀರ ಪ್ರಾಣ ಮತ್ತು ಆತ್ಮ ಭಾವವನ್ನು ಮೀರಿದ ಶರಣರು ಅರೂಡರು ನಿಜ ಲಿಂಗೈಕ್ಯರು ಮಾತ್ರ ಇಂತಹ ಅನುಭವವನ್ನು ಹೊಂದುವರು. ಇದು ಶಿಶು ಕಂಡ ಕನಸು ನೆಲದ ಮರೆಯ ನಿಧಾನ ಉರಿ ಉಂಡ ಕರ್ಪೂರದಂತೆ ಎಂಬ ಅನೇಕ ಪ್ರತಿಮೆಗಳ ಮೂಲಕ ಶರಣರು ಜೀವನದ ಅನನ್ಯತೆ ಸಾರ್ಥಕತೆಯನ್ನು ವ್ಯಕ್ತಗೊಳಿಸಿದ್ದಾರೆ
—————————————-
ಡಾ ಶಶಿಕಾಂತ ಪಟ್ಟಣ ರಾಮದುರ್ಗ

Back To Top