ದೇವನೂರುಮಹಾದೇವರ
ಜನ್ಮದಿನದಶುಭಾಶಯಗಳು

ಶುಭಾಶಯಗಳು

ಪಿ.ನಂದಕುಮಾರ್

ದೇವನೂರುಮಹಾದೇವರ


ಜನ್ಮದಿನದಶುಭಾಶಯಗಳು

ಸಂಬಂಜಾ ಅನ್ನೋದು ದೊಡ್ಡದು ಕನಾ

ನಾನು ಆಗತಾನೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಎಂ ಎ ಪ್ರವೇಶ ಪಡೆದಿದ್ದೆ. ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ನಡೆಯುವ ಸಾಹಿತ್ಯಕ ಚಟುವಟಿಕೆ ಮತ್ತು ಸೈದ್ಧಾಂತಿಕ ಚರ್ಚೆಗಳು ನನ್ನನ್ನು ಗೊಂದಲಕ್ಕೆ ತಳ್ಳುತ್ತಿದ್ದವವೂ. ನನ್ನೇಲ್ಲಾ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳಲು ಎಲ್ಲ ಪ್ರಾಧ್ಯಾಪಕರ ಜೊತೆ ಒಂದಿಷ್ಟು ಹೊತ್ತು ಕಾಲ ಕಳೆದು. ನಮ್ಮ ವಿಭಾಗದ ಹಿರಿಯ ಸಂಶೋಧನ ಮಿತ್ರರಾದ ನೂರೊಂದಪ್ಪ, ರಂಗನಾಥ್, ಪ್ರವೀಣ್, ಪತ್ರೆಪ್ಪ, ಬಸಯ್ಯ, ನಿರಂಜನ್, ಮಧು ಬಿರಾದಾರ್, ರಾಜೇಂದ್ರ ಸಂಗಣಗೌಡ ಹೀಗೆ ಇನ್ನ ತುಂಬಾ ಜನ ಇದ್ದಾರೆ ಆದ್ರೆ ಇವರೊಟ್ಟಿಗೆ ಮಾತ್ರ ನನ್ನ ಸಲುಗೆ ಜಾಸ್ತಿ ಇದ್ದದರಿಂದ ಇವರುಗಳನ್ನು ಉಲ್ಲೇಖ ಮಾಡಿರುವೆ. ಅದೆಷ್ಟು ಸಲುಗೆ ಎಂದರೆ ನಾನು ಎಂ ಎ ವಿದ್ಯಾರ್ಥಿ ಎನ್ನುವುದನ್ನೇ ಮರೆತು ವರ್ತಿಸುವಷ್ಟು,
ನಮ್ಮ ಹಿರಿಯ ಮಿತ್ರರು ನನ್ನೆಲ್ಲಾ ತಪ್ಪುಗಳನ್ನು ಹೊಟ್ಟೇಲಿ ಹಾಕೊಂಡು ಹೋಗ್ತಾ ಇದ್ದರು. ಹೀಗುರುವಾಗ ಒಂದು ದಿನ ಎಲ್ಲರೂ ಶಿವಮೊಗ್ಗಕ್ಕೆ ಹೋಗೋಣ ಎಂದು ವಿಭಾದ ಎಲ್ಲ ಪ್ರಾಧ್ಯಾಪಕರು ಮತ್ತೆ ಸಂಶೋಧನಾ ವಿದ್ಯಾರ್ಥಿಗಳು ಸಿದ್ಧರಾದರು, ನಂಗ್ ಒಂದು ಧೈರ್ಯ ಏನು ಅಂದ್ರೆ ನನ್ನ ಬಿಟ್ಟು ಇವರುಗಳು ಹೋಗೋಲ್ಲ ಅನ್ನೊ ಒಂದ ನಂಬಿಕೆ. ನಾನು ಎಲ್ಲಾರಿಗೂ ಕೇಳಿದೆ ಯಾಕೆ ಶಿವಮೊಗ್ಗಕ್ಕೆ. ದಕ್ಷಿಣಯಾನ ಕಾರ್ಯಕ್ರಮ ಇದೆ ಅದ್ಕೆ ಎಂದು ಪತ್ರೆಪ್ಪ ಹೇಳಿದ. ಅಲ್ಲಿಗೆ ಹೋಗೋದ್ರಿಂದ ಏನ್ ಉಪಯೋಗ ಎಂದು ಕೇಳಿದ್ದಕ್ಕೆ, ನೂರೊಂದಪ್ಪ ಅಲ್ಲಿ ಎಲ್ಲ ದೊಡ್ಡ ದೊಡ್ಡ ಸಾಹಿತಿಗಳು ಬರ್ತಾರ ನಡಿ ಎಂದ.


ನಾನು ಡಿ ಆರ್ ನಾಗರಾಜ , ಚಂಪಾ, ರಾಜೇಂದ್ರ ಚನ್ನಿ, ಹೀಗೆ ಎಲ್ಲನ್ನು ನೋಡಬಹುದು ಎಂದು ಪ್ರಯಣಕ್ಕೆ ಸಿದ್ದವಾದೆ. ಶಿವಮೊಗ್ಗಕ್ಕೆ ಹೋದ ತಕ್ಷಣ ಕಾರ್ಯಕ್ರಮದ ಸ್ಥಳವನ್ನು ತಿಳಿದುಕೊಂಡು ಎಲ್ಲರೂ ಅಲ್ಲಿಗೆ ದೌಡಾಸಿದೆವು. ಕಾರ್ಯಕ್ರಮ ನಡೆಯಬೇಕಿದ್ದ ಹಾಲ್ ಕೆಳಗಡೆ ಟಿಪಿನ್ ಮಾಡಿ ಕಾರ್ಯಕ್ರಮದಲ್ಲಿ ಬಾಗಿಯಾದೆವು. ಕಾರ್ಯಕ್ರಮದ ಮಾತುಗಳನ್ನು ಆಲಿಸದೆ ನಾನು ಸುತ್ತ ಮುತ್ತ ನೋಡತೊಡಗಿದೆ. ನನ್ನ ಹಿಂದೆಯೇ ಚಂಪಾ ದೇವನೂರು ಮಹಾದೇವ ಮತ್ತೆ ಹೀಗೆ ಹಿರಿಯರೆಲ್ಲ ಕುಂತಿದ್ದು ನೋಡಿ ತುಂಬಾ ಖುಷಿನು ಆಯ್ತು ಮತ್ತೆ ಸ್ವಲ್ಪ ಭಯ ಕೂಡ ಇತ್ತು ಇವರ ಮುಂದೆ ಕುಂತಿನಲ್ಲ ಅಂತ. ಅಷ್ಟು ದೊಡ್ಡ ದೊಡ್ಡ ಸಾಹಿತಿಗಳು ಹಿಂಗ್ ಇರ್ತಾರ ಅಂತ ನೋಡಿ ಕಣ್ಣು ತುಂಬಿಕೊಂಡು ಹೊರಬಂದೆ. ಆ ನಮ್ಮ ಎಲ್ಲ ಸಂಶೋಧನಾ ಮಿತ್ರರು ಊಟಕ್ಕೆ ಹೋಗೋಣ ರೆಸ್ಟ್ ರೋಮಿಗಿ ಹೋಗಿ ಬಾ ಅಂದ್ರು.
ಆಗ ನಾನು ರೆಸ್ಟ್ ರೂಮಿಗಿ ಹೋದೆ, ಅಲ್ಲೇ ಪಕ್ಕದಲ್ಲಿದ್ದ ಶೌಚಾಲಯದಲ್ಲಿ ಉದ್ದನೆಯ ಬಿಳಿ ಗಡ್ಡ ಬಿಟ್ಟ ವ್ಯಕ್ತಿಯ ಪರಿಚಯ ಮಾಡಿಕೊಂಡೆ ಅವರು ವೇದಿಕೆಯಲ್ಲಿ ಇದ್ದರು ಅದ್ಕೆ. ಅವರ ಹೆಸರು ಕೇಳಿದ ತಕ್ಷಣವೇ ನಾನು ಶೌಚಾಲಯದಿಂದ ಅತೀ ಸಂಭ್ರಮದಿಂದ ಅವಸರವಾಗಿ ಹೊರಗಡೆ ಬಂದು ನಮ್ಮ ಎಲ್ಲ ಸಂಶೋಧನಾ ಮಿತ್ರರಿಗೆ ಅಣ್ಣ ಅಲ್ಲಿ ಶೌಚಾಲಯದಲ್ಲಿ ಡಿ ಆರ್ ನಾಗರಾಜ್ ಸರ್ ಭೇಟಿಯಾದ್ರು ಅವರ ಜೊತೆ ಮಾತಾಡಿದೆ ಎಂದು ಹೇಳ್ದೆ. ಅವರಿಗೆ ಉರಿಚಮ್ಮಾಳಿಗೆ ಕೃತಿ ಬಗ್ಗೆ ಕೇಳೋಣ ಎನ್ನುವಷ್ಟರಲ್ಲಿ ಎಲ್ಲರೂ, ಗೊಳ್ ಎಂದು ಜೋರ್ ಜೋರಾಗಿ ನಗೊದಕ್ಕೆ ಶುರು ಮಾಡಿದ್ರು. ಆಗ ನಾನು ಯಾಕ್ ಅಣ್ಣ..!?ಯಾಕ್..!? ಎಂದು ಕೇಳಿದೆ. ಅವ್ರು ಡಿ ನಾಗರಾಜ್ ಅಲ್ಲಾ ಜಿ ಎನ್ ನಾಗರಾಜ್. ಹೀಗೆ ನಗುತ್ತಲೇ ಕೆಳ ಬಂದ ನಮಗೆ ಕಂಡಿದ್ದೆ ದೇವನೂರು ಮಹಾದೇವ ರವರು.
ಆಗ ನಾವುಗಳು ದೇವನೂರ ಸರ್ ಬರೆದ ಎದೆಗೆ ಬಿದ್ದ ಅಕ್ಷರ ಪುಸ್ತಕದ ಚರ್ಚೆಯಲ್ಲಿ ತೊಡಗಿಕೊಂಡೆವು. ಆ ಚರ್ಚೆ ಸಂದರ್ಭದಲ್ಲಿ ತೆಗೆದ ಪಟವಿದು. ಈ ಪಟ ʼ ಸಂಬಂಜ ಅನ್ನೋದು ದೊಡ್ಡದು ಕನಾ ʼ ಎಂದೇಳುವ ರೀತಿಯಲ್ಲಿದೆ. ಈ ನೆನಪುಗಳು ಮೇಲುಕಿನ ಮೂಲಕ ಕನ್ನಡದ ಸಾಕ್ಷಿ ಪ್ರಜ್ಞೆ ದೇವನೂರು ಮಹಾದೇವ ಸರ್ ಅವರಿಗೆ ಜನ್ಮದಿನದ ಶುಭಾಶಯಗಳು

———————————[

ಪಿ.ನಂದಕುಮಾರ್

Leave a Reply

Back To Top