ಧಾರಾವಾಹಿ ಆವರ್ತನ ಅದ್ಯಾಯ-49 ಗುರೂಜಿಯವರ ತಂಡದ ಹಲವರ ಮೇಲೆ ಚಿಟ್ಟೆಹುಲಿಗಳು ಭೀಕರ ದಾಳಿ ನಡೆಸಿದ ಪರಿಣಾಮವಾಗಿ ಮೂವರು ಮಾರಣಾಂತಿಕವಾಗಿ ಗಾಯಗೊಂಡರು. ಹೆಣ್ಣು ಚಿಟ್ಟೆಹುಲಿಯ ಕೈಗೆ ಮೊದಲು ಸಿಲುಕಿದವನು ತಂಗವೇಲು. ಅದು ಅವನ ಮುಖವನ್ನೂ, ಕೆಳತುಟಿಯನ್ನೂ ಹರಿದು ಬಲಗೈಯ ಮಾಂಸಖಂಡವನ್ನು ಸೀಳಿ ಹಾಕಿತ್ತು. ಅದನ್ನು ಕಂಡರೆ ಅವನು ಮುಂದೆಂದೂ ಬಂಡೆ ಒಡೆಯುವ ಕೆಲಸಕ್ಕೆ ನಾಲಾಯಕ್ಕು ಎಂಬಂತೆ ತೋರುತ್ತಿತ್ತು. ಗಂಡು ಚಿರತೆಯ ಬಲವಾದ ಪಂಜದ ಹೊಡೆತವೊಂದು ಶಿಲ್ಪಿಗಳ ಮುಖಂಡ ಶರವಣನ ಹಿಂತಲೆಗೆ ಅಪ್ಪಳಿಸಿತ್ತು. ಅದರಿಂದ ಅವನ ಬುರುಡೆಯ ಮೇಲ್ಪದರವು ಆಮೆಯ […]
“ಅಸ್ಪೃಶ್ಯತೆಯ ವಿರುದ್ದ ಹೋರಾಟದ ಆರಂಭ
ಒಟ್ಟಾaaರೆ ನಿದ್ರೆ ನಿದ್ರಾದೇವತೆಯಾಗಿ ಎಲ್ಲರ ಮನೆಗೆ ಬಂದು ಅವರ ಆಯಾಸ ತೊರೆದು ಮನಶಾಂತಿ ಕರುಣಿಸಿ ಅವರ ಬದುಕು ಹಸನಾಗಿಸಲಿ . ಅದರ ಹೊರತು ನಿದ್ರೆ ರಾಕ್ಷಸ ರೂಪದಲ್ಲಿ ಪ್ರವೇಶಿಸಿ ಯಾರ ಬದುಕನ್ನು ಸಾಧನೆ ರಹಿತವಾಗಿ ಮಾಡದಿರಲಿ ಎಂದು ಆಶಿಸೋಣ
ಧಾರಾವಾಹಿ ಆವರ್ತನ ಅದ್ಯಾಯ-48 ಇತ್ತ ಚೂರೂ ಶ್ರಮವಿಲ್ಲದೆ ಪ್ರಥಮ ಪ್ರಯತ್ನದಲ್ಲಿಯೇ ದೊಡ್ಡ ಏಕಶಿಲೆಯೊಂದು ದೊರೆತ ಸಂತೋಷದ ಸುದ್ದಿಯನ್ನು ಶಂಕರ ಕೂಡಲೇ ಹೋಗಿ ಗುರೂಜಿಯವರಿಗೆ ತಿಳಿಸಿದ. ಒಂದು ಲಕ್ಷ ಬೆಲೆಯ ತನ್ನ‘ಆಪಲ್’ ಮೊಬೈಲ್‍ನಲ್ಲಿ ಕ್ಲಿಕ್ಕಿಸಿ ತಂದಿದ್ದ ಬಂಡೆಯ ಕೆಲವು ಫೋಟೋಗಳನ್ನೂ ಬೆರಳಿನಿಂದ ಗೀಚಿ ಗೀಚಿ ತೋರಿಸುತ್ತ ತಾನು ಹಿಡಿದ ಕೆಲಸದಲ್ಲಿ ತನ್ನ ಬದ್ಧತೆ ಮತ್ತು ಕೌಶಲ್ಯವೆಂಥದ್ದು ಎಂಬುದನ್ನು ಅವರಿಗೆ ಮನವರಿಕೆ ಮಾಡಿಸತೊಡಗಿದ. ಬಂಡೆಯ ಚಿತ್ರಗಳನ್ನೂ ಶಂಕರನ ಕೆಲಸದ ಉತ್ಸಾಹವನ್ನೂ ಕಂಡ ಗುರೂಜಿಯವರಿಗೆ ಅವನ ಮೇಲಿನ ಅಭಿಮಾನವು ದುಪ್ಪಟ್ಟಾಗಿದ್ದರೊಂದಿಗೆ ತಮ್ಮ ಬಹುದೊಡ್ಡ ಕನಸೊಂದು ಸದ್ಯದಲ್ಲೇ ನನಸಾಗಲಿದ್ದುದನ್ನೂ ನೆನೆದವರ ಆನಂದವು ಇಮ್ಮಡಿಯಾಯಿತು. ಆದ್ದರಿಂದ ಅವರು,‘ಶಂಕರಾ, ಈ ಕೆಲಸದಲ್ಲಿ ನಾವು ಗೆದ್ದುಬಿಟ್ಟೆವು ಮಾರಾಯಾ! ಇದೊಂದು ಮಹತ್ಕಾರ್ಯ ನಮ್ಮಿಂದ ನಡೆದುಬಿಟ್ಟಿತೆಂದರೆ ಮುಂದೆ ನಮ್ಮನ್ನ್ಯಾರೂ ಹಿಡಿಯುವಂತಿಲ್ಲ ನೋಡು. ಆಮೇಲೆ ಜೀವನಪರ್ಯಾಂತ ನಿಶ್ಚಿಂತೆಯಿಂದ ಬಾಳಬಹುದು. ದೇವಸ್ಥಾನ ಕಟ್ಟುವ ಮತ್ತು ಬನದ ಜೀರ್ಣೋದ್ಧಾರಕ್ಕೆ ತಗುಲುವ ಖರ್ಚುವೆಚ್ಚವನ್ನೆಲ್ಲ ನಮ್ಮ ದುಬೈ ಮತ್ತು ಮುಂಬೈಯ ಭಕ್ತಾದಿಗಳೇ ಪೂರೈಸುವ ಭರವಸೆಯನ್ನು ಕೊಟ್ಟಿದ್ದಾರೆ. ಹಾಗಾಗಿ ಆ ಕೆಲಸವನ್ನು ಯಶಸ್ವಿಯಾಗಿ ನೆರವೇರಿಸುವುದಷ್ಟೇ ನಮಗುಳಿದಿರುವ ಜವಾಬ್ದಾರಿ!’ಎಂದು ಹೆಮ್ಮೆಯಿಂದ ಹೇಳಿದರು. ಆದರೆ ಅತ್ತ ಶಂಕರನಲ್ಲೂ ಅಂಥದ್ದೇ ಲೆಕ್ಕಾಚಾರವೊಂದು ನಡೆಯುತ್ತಿತ್ತು. ಗುರೂಜಿಯವರ ಈ ಪ್ರಾಜೆಕ್ಟಿನಿಂದ ಒಂದೈದು ಕೋಟಿಯಾನ್ನಾದರೂ ತನ್ನ ಶ್ರಮಕ್ಕೆ ತಾನು ಹೊಡೆಯಲೇಬೇಕು! ಎಂದು ಅವನು ಯೋಚಿಸುತ್ತಿದ್ದ. ಆದುದರಿಂದ ಗುರೂಜಿಯ ಮಾತಿಗೆ, ‘ಹೌದು ಹೌದು ಗುರೂಜಿ, ನಿಮ್ಮ ಆಶೀರ್ವಾದ ಇರುವವರೆಗೆ ನಿಮ್ಮೊಂದಿಗೆ ನಾನೂ ಗೆದ್ದಂತೆಯೇ ಸರಿ!’ ಎಂದು ನಮ್ರನಾಗಿ ಹೇಳಿದ. ‘ಆ ವಿಷಯದಲ್ಲಿ ನಿನಗೆ ಯಾವತ್ತಿಗೂ ಸಂಶಯ ಬೇಡ ಶಂಕರ. ನಮ್ಮ ಕಷ್ಟಕಾಲದಲ್ಲಿ ನೀನೂ ನಮ್ಮ ಕೈಹಿಡಿದು ನಡೆಸಿದವನು ಎನ್ನುವುದನ್ನು ನಾವಿನ್ನೂ ಮರೆತಿಲ್ಲ!’ ಎಂದು ಅವನನ್ನು ಪ್ರೀತಿಯಿಂದ ದಿಟ್ಟಿಸಿದರು. ‘ಅಯ್ಯೋ, ಅದೆಲ್ಲ ದೇವರಿಚ್ಛೆಯಿರಬೇಕು ಗುರೂಜಿ. ಆವತ್ತು ನನ್ನ ಶೀಂಬ್ರಗುಡ್ಡೆಯ ಜಾಗದ ಆ ಒಂದು ಸನ್ನಿವೇಶದಲ್ಲಿ ನೀವಲ್ಲದಿದ್ದರೆ ನನ್ನ ಅವಸ್ಥೆ ದೇವರೇ ಗತಿ ಎಂಬಂತಾಗುತ್ತಿತ್ತು! ಹಾಗಾಗಿ ಇನ್ನು ಮುಂದೆಯೂ ನಾನು ನೀವು ಹೀಗೆಯೇ ಇರಬೇಕೆಂದು ನನ್ನಾಸೆ!’ಎಂದು ಶಂಕರ ಕೈಮುಗಿದು ಹೇಳಿದ. ಆಗ ಗುರೂಜಿಯವರು ಕಿರುನಗುತ್ತ ತಮ್ಮ ಬಲ ಹಸ್ತವನ್ನೆತ್ತಿ,‘ತಥಾಸ್ತು’ಎಂಬಂತೆ ಅವನನ್ನು ಹರಸಿದರು. ಬಳಿಕ ಶಂಕರ ಅವರಿಂದ ಬೀಳ್ಗೊಂಡು ಹಿಂದಿರುಗಿದ. *** ಬಂಡೆ ಕಡಿಯಲು ಮತ್ತದರ ಕೆತ್ತನೆಯ ಕೆಲಸಕ್ಕೆ ಶಿಲ್ಪಿಗಳನ್ನು ತಮಿಳುನಾಡಿನಿಂದಲೇ ಕರೆದು ತರಲು ಶಂಕರ ನಿರ್ಧರಿಸಿದ. ಗುರೂಜಿಯವರು ತಿಳಿಸಿದ ಶುಭಗಳಿಗೆಯಲ್ಲಿ ತಂಗವೇಲುವಿನೊಂದಿಗೆ ತನ್ನ ಕಾರಿನಲ್ಲೇ ಮದ್ರಾಸಿಗೆ ಪ್ರಯಾಣ ಬೆಳೆಸಿದ. ಅಲ್ಲಿ ತಂಗವೇಲುವಿನ ಸಂಬಂಧಿಕ ಶಿಲ್ಪಿಗಳ ತಂಡವೊಂದನ್ನು ಭೇಟಿಯಾದ. ಕೆಲವು ಹೊತ್ತಿನ ಮಾತುಕಥೆಯ ನಂತರ ಅವರಿಂದ ವ್ಯವಹಾರವನ್ನು ಕುದುರಿಸಿದ ಮತ್ತು ಸ್ವಲ್ಪ ಹಣವನ್ನು ಮುಂಗಡ ಕೊಟ್ಟು ಮುಂದಿನ ವಾರದೊಳಗೆ ತನ್ನೂರಿಗೆ ಬರುವಂತೆ ಸೂಚಿಸಿ ಹಿಂದಿರುಗಿದ. ಊರಿಗೆ ಬಂದವನು ಆ ಕೆಲಸಗಾರರಿಗೆ ತಮ್ಮ ವಠಾರದಲ್ಲೇ ವಸತಿ ಸೌಲಭ್ಯವನ್ನು ಕಲ್ಪಿಸಲು ಸುರೇಂದ್ರಯ್ಯನಿಗೆ ಸೂಚಿಸಿದ. ಶಂಕರನ ಆಣತಿಯಂತೆ ಕೂಡಲೇ ಹಿರಿಯ ಶಿಲ್ಪಿಗಳ ಮತ್ತು ಯುವ ಕೆಲಸಗಾರರ ಮೂವತ್ತು ಮಂದಿಯಿಂದ ಕೂಡಿದ ದೊಡ್ಡ ತಂಡವೊಂದು ತಮಿಳುನಾಡಿನಿಂದ ಈಶ್ವರಪುರಕ್ಕೆ ಬಂದಿಳಿಯಿತು. ತಂಗವೇಲು ಅವರನ್ನು ಕರೆದುಕೊಂಡು ಹೋಗಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಿದ. ಇತ್ತ ಗುರೂಜಿಯವರು ತಮ್ಮ ಪಂಚಾಂಗದ ಪ್ರಕಾರ ಆ ಬಂಡೆಗಳನ್ನು ಒಡೆಯಲು ಶುಭದಿನವೊಂದನ್ನು ಗೊತ್ತುಪಡಿಸಿದರು. ಅದೊಂದು ಹುಣ್ಣಿಮೆಯ ದಿನ ಬೆಳಿಗ್ಗೆ ಗುರೂಜಿಯವರು ತಮ್ಮ ಕೆಲವು ಸಹಾಯಕರನ್ನೂ ಮತ್ತು ಬಂಡೆ ತೆರವಿನ ನಾಂದಿಯ ಪೂಜಾ ಸಾಮಾಗ್ರಿಗಳನ್ನೂ ಹಾಗೂ ಬುಕ್ಕಿಗುಡ್ಡೆಯ ಜೀರ್ಣೋದ್ಧಾರ ಸಮಿತಿಯ ಕೆಲವು ಪ್ರಮುಖರನ್ನೂ, ಶಂಕರನನ್ನೂ ಕರೆದುಕೊಂಡು ತಮ್ಮ ಐಷಾರಾಮಿ ಕಾರುಗಳಲ್ಲಿ ಹೊರಟು ಸುರೇಂದ್ರಯ್ಯನ ಮನೆಗೆ ಆಗಮಿಸಿದರು. ಅಲ್ಲಿಂದ ಅವರನ್ನು ಕೂಡಿಕೊಂಡು ದೊಡ್ಡ ಗುಂಪಾಗಿ ಬಂಡೆಗಳತ್ತ ಕಾಲು ನಡಿಗೆಯಲ್ಲಿ ಹೊರಟರು. ಅವರು ಹೋಗುತ್ತಿದ್ದ ಸುಮಾರು ಅಗಲದ ಕಾಲುದಾರಿಯ ಇಕ್ಕೆಲಗಳಲ್ಲೂ ಕಿಲೋಮೀಟರ್ ದೂರದವರೆಗೆ ದಟ್ಟ ಕಾಡು ಬಾನೆತ್ತರಕ್ಕೆ ಬೆಳೆದು ನಿಂತಿತ್ತು. ಗುರೂಜಿಯವರು ಗಂಭೀರವಾಗಿ ನಡೆಯುತ್ತಿದ್ದರು. ಸ್ವಲ್ಪದೂರ ಬಂದ ನಂತರ ಆಯಾಸ ಪರಿಹರಿಸಿಕೊಳ್ಳಲು ಒಂದುಕಡೆ ಕೆಲವುಕ್ಷಣ ನಿಂತುಕೊಂಡರು. ಅಷ್ಟರಲ್ಲಿ ಅವರ ಎಡ ಮಗ್ಗುಲಿನ ದಟ್ಟ ಪೊದೆಯೊಂದು ಇದ್ದಕ್ಕಿದ್ದಂತೆ ಧರಧರನೇ ಕಂಪಿಸತೊಡಗಿತು. ಅದನ್ನು ಕಂಡ ಎಲ್ಲರಿಗೂ ಅಳುಕೆದ್ದಿತು. ಮುಂದಿನ ಕ್ಷಣ ಆ ಪೊದರು ಇನ್ನೂ ಜೋರಾಗಿ ಕುಣಿಯತೊಡಗಿತು. ಯಾವುದೋ ಕ್ರೂರ ಪ್ರಾಣಿಗಳು ತೀಕ್ಷ್ಣವಾಗಿ ಹೋರಾಡುವಂತೆ ಅದು ನಜ್ಜುಗುಜ್ಜಾಗತೊಡಗಿತು. ಆದರೆ ಆ ಪೊದೆಯೊಳಗೆ ಯಾವುದೇ ಪ್ರಾಣಿಗಳು ಇರುವ ಸುಳಿವು, ಸೂಚನೆ ಯಾರೀಗೂ ಕಾಣಿಸಲಿಲ್ಲ! ಆದ್ದರಿಂದ ಎಲ್ಲರೂ ತಟ್ಟನೆ ಭಯದಿಂದ ಓಡಲನುವಾದರು. ಅಷ್ಟರಲ್ಲಿ ಸುರೇಂದ್ರಯ್ಯ ಎಚ್ಚೆತ್ತವರು,‘ಹೇ, ಹೇ…ಯಾರೂ ಹೆದರಬೇಡಿ ನಿಲ್ಲಿ ನಿಲ್ಲೀ…!’ ಎಂದು ಏರುಧ್ವನಿಯಲ್ಲಿ ಅರಚಿದವರು,‘ಆ ಪೊದೆಯೊಳಗೆ ಬಹುಶಃ ಕಾಟಿ (ಕಾಡುಕೋಣ)ಗಳೋ, ಕಾಡುಹಂದಿಗಳೋ ಇರಬೇಕು. ಅವು ನಮ್ಮನ್ನು ಕಂಡು ಹೆದರಿ ಓಡಿ ಹೋಗುವ ರಭಸಕ್ಕೆ ಪೊದೆ ಪುಡಿಯಾಗಿರಬೇಕಷ್ಟೆ. ಅವುಗಳಿಂದ ನಮಗೇನೂ ತೊಂದರೆಯಿಲ್ಲ!’ ಎಂದು ಧೈರ್ಯ ಹೇಳಿದರು. ಆಗ ಎಲ್ಲರೂ ನೆಮ್ಮದಿಯ ಉಸಿರುಬಿಟ್ಟರು. ಆದರೆ ಗುರೂಜಿಯವರ ಪರಿಸ್ಥಿತಿ ಹದಗೆಟ್ಟಿತ್ತು. ಇತ್ತೀಚೆಗೆ ಕೆಲವು ಕಾಲದಿಂದ ಅವರನ್ನು ಆಗಾಗ ಸುಖಾಸುಮ್ಮನೆ ಕಾಡುತ್ತಿದ್ದಂಥ ‘ಫೋಬಿಯಾ’ ಎಂಬ ಅಸಹಜ ಭಯವೊಂದು ಈಗ ಇದ್ದಕ್ಕಿದ್ದಂತೆ ಅವರನ್ನು ಆವರಿಸಿಕೊಂಡಿತು! ಹಾಗಾಗಿ ಅವರು ಸುರೇಂದ್ರಯ್ಯನ ಮಾತನ್ನು ಲೆಕ್ಕಿಸದೆ ಒಂದೇ ಉಸಿರಿಗೆ ದಾಪುಗಾಲಿಕ್ಕುತ್ತ ಮುಂದೆ ಓಡತೊಡಗಿದರು. ಇತ್ತ ತಮ್ಮ ಗುರೂಜಿಯವರು ಮುಂದೆ ಧಾವಿಸುತ್ತಿದ್ದುದನ್ನು ಕಂಡ ಅವರ ಸಹಾಯಕರೂ, ಶಂಕರನೂ ಮತ್ತಿತರರೆಲ್ಲ ಅವರಿಗಿಂತ ದುಪ್ಪಟ್ಟು ವೇಗದಲ್ಲಿ ಮುಂದುವರೆಯತೊಡಗಿದರು. ಸುಮಾರು ದೂರ ನಡೆದು ಬಂದ ಗುರೂಜಿಯವರ ಬೊಜ್ಜು ಮೈಯಲ್ಲಿ ಬೆವರು ಧಾರೆಯಾಗಿ ಹರಿದು ಮೈಯೆಲ್ಲ ತೊಯ್ದುಬಿಟ್ಟಿತು. ಆದರೂ ನಿಲ್ಲಲ್ಲು ಧೈರ್ಯವಿಲ್ಲದೆ ಮತ್ತಷ್ಟು ದೂರ ಸಾಗಿದರು. ಕಾಡು ಕಳೆದು ಶುಭ್ರಾಕಾಶ ಕಾಣತೊಡಗಿದ ಮೇಲೆ ಸ್ವಲ್ಪ ಸ್ಥಿಮಿತಕ್ಕೆ ಬಂದರು. ಅಲ್ಲೊಂದು ಕಡೆ ದಾರಿಯ ಪಕ್ಕದಲ್ಲಿದ್ದ ಇಳಿಜಾರಾದ ಪಾದೆಯ ಮೇಲೆ ಕಣ್ಣುಮುಚ್ಚಿ ಕುಳಿತು ನಾಲ್ಕೈದು ಬಾರಿ ದೀರ್ಘ ಶ್ವಾಸೋಚ್ಛ್ವಾಸ ಮಾಡುತ್ತ ಸುಧಾರಿಸಿಕೊಳ್ಳಲು ಹೆಣಗಿದರು. ಬಳಿಕ ಸಹಜಸ್ಥಿತಿಗೆ ಬಂದರು. ಆಗ ಅವರಿಗೆ ತಮ್ಮ ಭಯವನ್ನು ನೆನೆದು ಅವಮಾನವೆನಿಸಿತು. ಆದ್ದರಿಂದ ಅದನ್ನು ಮರೆಮಾಚುವುದಕ್ಕಾಗಿ ತಮ್ಮ ಹಿಂಬಾಲಕರನ್ನುದ್ದೇಶಿಸಿ ಮಾತಾಡತೊಡಗಿದರು. ‘ಇಲ್ಲಿ ನೋಡಿ, ಎಲ್ಲರೂ ತಾಳ್ಮೆಯಿಂದ ನಮ್ಮ ಮಾತನ್ನು ಕೇಳಿಸಿಕೊಳ್ಳಿ!’ ಎಂದು ಆತಂಕದಿಂದ ಹೇಳಿದರು. ಆಗ ಎಲ್ಲರೂ ಅವರತ್ತ ಗಮನ ಹರಿಸಿದರು. ‘ನಾವೀಗ ನಡೆದು ಬರುತ್ತಿದ್ದಾಗ ಆ ಪೊದೆಯೊಳಗೆ ಇದ್ದದ್ದು ಕಾಡು ಮೃಗಗಳಲ್ಲ!’ ಎಂದು ಮಾತು ನಿಲ್ಲಿಸಿದರು. ಅಷ್ಟರಲ್ಲಿ ಸ್ವಲ್ಪ ಹತೋಟಿಗೆ ಬಂದಿದ್ದ ಜನರು ಕೂಡಾ ಅವರ ಮಾತು ಕೇಳಿ ಮತ್ತೆ ಭಯಗೊಂಡು,‘ಮುಂದೇನು…!?’ಎಂಬಂತೆ ಅವರನ್ನು ದಿಟ್ಟಿಸಿದರು.‘ಅಲ್ಲಿದ್ದುದು ದುಷ್ಟಶಕ್ತಿಗಳು ಅಂತ ನಮ್ಮ ಗಮನಕ್ಕೆ ಬಂದಿದೆ! ಆದ್ದರಿಂದಲೇ ಅವುಗಳಿಂದ ಯಾರೀಗೂ ತೊಂದರೆಯಾಗಬಾರದು ಅಂತ ನಾವು ಸ್ವಲ್ಪ ಜೋರಾಗಿ ನಡೆದು ಬಂದೆವಷ್ಟೆ!’ ಎಂದರು ಗಂಭೀರವಾಗಿ. ಅಷ್ಟು ಕೇಳಿದ ಎಲ್ಲರೂ ಬಿಳಿಚಿಕೊಂಡರು. ‘ಆದರೂ ಯಾರು ಕೂಡಾ ಹೆದರುವ ಅಗತ್ಯವಿಲ್ಲ! ಅವುಗಳನ್ನು ಈ ಪ್ರದೇಶದಿಂದಲೇ ದೂರ ಓಡಿಸುವಂಥ ವಿಶೇಷ ಪೂಜೆಯೊಂದನ್ನು ನಾವು ಪ್ರಥಮವಾಗಿ ನೆರವೇರಿಸುತ್ತೇವೆ. ಆ ನಂತರ ನೀವೆಲ್ಲರೂ ಈ ಪರಿಸರದಲ್ಲಿ ನಿರ್ಭಯವಾಗಿ ಓಡಾಡಬಹುದು!’ ಎಂದರು ಗತ್ತಿನಿಂದ. ಆಗ ಎಲ್ಲರೂ ಗೆಲುವಾದರು. ನಂತರ ಗುರೂಜಿಯವರು ಅಲ್ಲಿಂದೆದ್ದು ನಡೆದವರು ತುಸುಹೊತ್ತಲ್ಲಿ ಬಂಡೆ ಸಮೂಹದ ಹತ್ತಿರ ಬಂದರು. ಶಂಕರನ ಸೂಚನೆಯಂತೆ ಸುರೇಂದ್ರಯ್ಯ ಹಿಂದಿನ ದಿನವೇ ಅಲ್ಲಿ ವಿಶಾಲವಾದ ಮಡಲಿನ ಚಪ್ಪರವನ್ನು ಹಾಕಿಸಿದ್ದರು. ಗುರೂಜಿಯವರ ಸಹಾಯಕರು ಅಲ್ಲೊಂದು ಕಡೆ ಬಂಡೆಯ ಮೇಲೆ ಹೋಮ ಕುಂಡವನ್ನು ಸ್ಥಾಪಿಸಿದರು. ಪೂಜಾ ಸಾಮಾಗ್ರಿಗಳನ್ನು ಜೋಡಿಸಿ ಹೋಮಕ್ಕೆ ಅಣಿಗೊಳಿಸಿದರು. ಗುರೂಜಿಯವರು ಅಲ್ಲಿ ಹತ್ತಿರವಿದ್ದ ಕೊಳವೊಂದಕ್ಕೆ ಹೋಗಿ ಸ್ನಾನ ಮುಗಿಸಿ ಮಡಿಯುಟ್ಟು ಬಂದು ಹೋಮಕ್ಕೆ ಕುಳಿತರು. ವಿಶೇಷ ಮಂತ್ರದ ಮೂಲಕ ಕುಂಡಕ್ಕೆ ಅಗ್ನಿಸ್ಪರ್ಶ ಮಾಡಿ ತಮ್ಮ ಗೊಗ್ಗರು ಕಂಠದಿಂದ ಮಂತ್ರೋಚ್ಛಾರಣೆಗೆ ತೊಡಗಿದರು. ವಿವಿಧ ಸಮಿಧೆಗಳು ಮತ್ತು ನಾಟಿ ದನದ ತುಪ್ಪವೂ ಅಗ್ನಿದೇವನಿಗೆ ಯಥೇಚ್ಛವಾಗಿ ಆಹುತಿಯಾಗತೊಡಗಿದವು. ಅಗ್ನಿದೇವನು ಹೋಮಾರಂಭದಲ್ಲಿ ಸಣ್ಣದಾಗಿ ಕಾಣಿಸಿಕೊಂಡವನು ಗುರೂಜಿಯವರು ಎಡೆಬಿಡದೆ ಅರ್ಪಿಸುತ್ತಿದ್ದ ಪ್ರಿಯವಸ್ತುಗಳನ್ನೆಲ್ಲ ಆಪೋಷನಗೈಯ್ಯುತ್ತ ಎತ್ತರೆತ್ತರಕ್ಕೆ ಮೈದಳೆದು ಕೋಮಲವಾಗಿ ನರ್ತಿಸತೊಡಗಿದ. ಕ್ರಮೇಣ ತನ್ನ ಶುಭ್ರ ವಿರಾಟರೂಪವನ್ನೂ ಪ್ರದರ್ಶಿಸತೊಡಗಿದ. ಅಗ್ನಿಯ ವೈಭೋಗವನ್ನು ಕಂಡ ಗುರೂಜಿಯವರ ಹುಮ್ಮಸ್ಸು ಹೆಚ್ಚಿತು. ಹಾಗಾಗಿ ಅವರಿಂದ ಇನ್ನಷ್ಟು ಉನ್ಮತ್ತ ಮಂತ್ರೋಚ್ಛಾರಗಳು ಧಾರೆಧಾರೆಯಾಗಿ ಹರಿಯತೊಡಗಿದವು. ಆದರೆ ಅಷ್ಟರಲ್ಲಿ ಅಗ್ನಿಯು ತಟ್ಟನೆ ತನ್ನ ಜ್ವಾಲೆಯನ್ನು ಅಡಗಿಸಿಬಿಟ್ಟ! ಮರುಕ್ಷಣ ಹೋಮಕುಂಡದಲ್ಲಿ ದಟ್ಟ ಹೊಗೆ ಏಳಲಾರಂಭಿಸಿತು. ಅದು ಆಕಾಶದೆತ್ತರಕ್ಕೆ ಹರಡಿ ಸುತ್ತಲಿನ ಪರಿಸರವನ್ನು ಆವರಿಸಿಬಿಟ್ಟಿತು. ಅ ದರಿಂದ ಗುರೂಜಿಯವರು ತುಸು ವಿಚಲಿತರಾದರಾದರೂ, ಮಂತ್ರೋಚ್ಚಾರಣೆಯ ಧ್ಯಾನದಲ್ಲಿ ತಾವು ತುಪ್ಪವನ್ನು ತುಸು ಹೆಚ್ಚು ಸುರಿದುದೇ ಬೆಂಕಿ ನಂದಲು ಕಾರಣವೆಂದು ಭಾವಿಸಿದರು. ಹಾಗಾಗಿ ಮರಳಿ ಮಂತ್ರೋಚ್ಛರಿಸುತ್ತ ಸಮಿಧೆಯನ್ನು ಎಸೆಯತೊಡಗಿದರು. ಆಗ ಅಗ್ನಿಯು ಮತ್ತೆ ಉರಿಯತೊಡಗಿದ. ಆದರೆ ಸ್ವಲ್ಪಹೊತ್ತಿನಲ್ಲಿ ಮರಳಿ ಕಣ್ಣುಮುಚ್ಚಾಲೆಯಾಡಿದ. ಮತ್ತೆ ಹೊಗೆ ತುಂಬಿಕೊಂಡಿತು. ಈಗಲೂ ಗುರೂಜಿಯವರು ತಮ್ಮ ಹಿಂದಿನ ಪ್ರಕ್ರಿಯೆಯನ್ನೇ ಪುನಾರಾವರ್ತಿಸಿದರು. ಆದರೂ ಮಬ್ಬು ಕಳೆಯಲಿಲ್ಲ. ಸ್ವಲ್ಪಹೊತ್ತಿನಲ್ಲಿ ಅಲ್ಲಿ ಎಲ್ಲರಿಗೂ ಉಸಿರುಗಟ್ಟುವಂಥ ವಾತಾವರಣವೊಂದು ಸೃಷ್ಟಿಯಾಯಿತು. ಆದರೆ ಅತ್ತ ಅಗ್ನಿದೇವನ ಆ ಬಗೆಯ ವರ್ತನೆಯ ಉದ್ದೇಶವನ್ನು ತಟ್ಟನೆ ಅರ್ಥೈಸಿಕೊಂಡ ನಿಸರ್ಗದತ್ತವಾದ ಮೃಗೀಯಶಕ್ತಿಯೊಂದು ರಪ್ಪನೆ ಎಚ್ಚೆತ್ತುಕೊಂಡಿತು. ಮರುಕ್ಷಣ ಆ ದೈತ್ಯ ಬಂಡೆಗಳೆಡೆಯಿಂದ ಮೈನಡುಗಿಸುವಂಥ ಭೀಕರ ಘರ್ಜನೆಯೊಂದು ಮೊಳಗಿತು. ಆ ಆರ್ಭಟಕ್ಕೆ ಎಲ್ಲರೂ ಹೌಹಾರಿಬಿಟ್ಟರು. ಅಷ್ಟೊತ್ತಿಗೆ ಹೊಗೆಯೂ ಮಾಯವಾಗಿ ಹೋಮಕುಂಡದಲ್ಲಿ ಮತ್ತೆ ಶುಭ್ರಾಗ್ನಿ ಪ್ರತ್ಯಕ್ಷವಾದ. ಆದರೆ ಈಗ ಅವನು ತನ್ನ ವಕ್ರವಕ್ರವಾದ ಭಂಗಿಯಲ್ಲಿ ವ್ಯಂಗ್ಯವಾಗಿ ಕುಣಿಯತೊಡಗಿದ. ಆದರೂ ಸುತ್ತಲಿನ ಪರಿಸರವು ನಿಚ್ಚಳವಾಗಿ ಕಾಣತೊಡಗಿತು. ಅದರ ಬೆನ್ನಿಗೆ ಬಂಡೆಗಳ ಕಮರಿನಿಂದ ಮರಳಿ ಜೋಡಿ ಆರ್ಭಟಗಳು ಮೊಳಗಿದವು. ಮತ್ತೆ ಎಲ್ಲರೂ ಭೀತಿಯಿಂದ ಓಡಲನುವಾದರು. ಆದರೆ ಕಾಲ ಮಿಂಚಿತ್ತು. ಸುಮಾರು ಒಂದು ಮೀಟರ್ ಎತ್ತರದ, ಆರು ಅಡಿಗಿಂತಲೂ ನೀಳ ಮತ್ತು ಬಲಿಷ್ಠವಾದ ಎರಡು ಚಿಟ್ಟೆಹುಲಿಗಳು ಬಂಡೆಯೆಡೆಯಿಂದ ತಮ್ಮ ಮರಿಗಳೊಂದಿಗೆ ಧಾವಿಸಿ ಹೊರಗೆ ಬಂದವು ಹಾಗೂ ತಮ್ಮ ವಲಯಕ್ಕೆ ಅಕ್ರಮವಾಗಿ ಪ್ರವೇಶಿಸಿದ ಮಾನವಜೀವಿಗಳನ್ನು ಕಂಡು ತೀವ್ರ ಕೋಪಗೊಂಡು ಕ್ಷೀಣಸ್ವರದಲ್ಲಿ ಅರಚಿ ತಮ್ಮ ಮರಿಗಳಿಗೇನೋ ಸಂಜ್ಞೆ ಮಾಡಿದವು. ಅದನ್ನು ಅರಿತ ಅವು ತಟ್ಟನೆ ಕಣ್ಮರೆಯಾದವು. ಮುಂದಿನಕ್ಷಣ ಆ ಮೃಗಗಳು ಮಿಂಚಿನ ವೇಗದಲ್ಲಿ ಹೋಮ ಕುಂಡದತ್ತ ನುಗ್ಗಿದವು ಸಿಕ್ಕಸಿಕ್ಕವರನ್ನು ಕಚ್ಚಿ ಸಿಗಿದು ಸೀಳುತ್ತ ಮುಂದುವರೆದುವು. ಅವುಗಳ ಮಾರಣಾಂತಿಕ ದಾಳಿಗೆ ಸಿಲುಕಿದವರ ಬೊಬ್ಬೆ, ಆರ್ತನಾದಗಳು ಮುಗಿಲು ಮುಟ್ಟಿದವು. ಸುಮಾರು ಹೊತ್ತು ಅದೇ ಬಗೆಯಿಂದ ದಾಂಧಲೆಯೆಬ್ಬಿಸಿದ ಆ ಪ್ರಾಣಿಗಳು ಬಳಿಕ ಹಠತ್ತಾಗಿ ಕಣ್ಮರೆಯಾಗಿಬಿಟ್ಟವು! (ಮುಂದುವರೆಯುವುದು) ಗುರುರಾಜ್ ಸನಿಲ್
ಸರಣಿ ಬರಹ ಅಂಬೇಡ್ಕರ್ ಓದು ಭಾಗ-6 ಜಾತಿಯತೆಯ ಕರಾಳ ಸ್ಪರ್ಶ ಪುಸ್ತಕಗಳೆಂದರೆ ಅಂಬೇಡ್ಕರರಿಗೆ ಅದಮ್ಯ ಪ್ರೀತಿ, ನ್ಯೂಯಾರ್ಕ ನಗರದಲ್ಲಿನ ಪುಸ್ತಕ ಅಂಗಡಿಗಳಿಗೆ ಭೇಟಿಕೊಟ್ಟು ಸಾವಿರಾರು ಪುಸ್ತಕಗಳನ್ನು ಖರಿದಿಸಿ ಮುಂಬಯಿಗೆ ಕಳುಹಿಸಿ ಕೊಡುತ್ತಾರೆ. ಅಮೇರಿಕಾದ ನಿಗ್ರೋ ಜನರಿಗೆ ಸ್ವಾತಂತ್ರ್ಯ ಕಲ್ಪಿಸಿದ 14ನೇ ತಿದ್ದುಪಡಿ ಅಂಬೇಡ್ಕರರ ಮೇಲೆ ಅಗಾದ ಪ್ರಭಾವ ಬಿರಿತ್ತು. ಭೂಕರ .ಟಿ. ವಾಸಿಂಗ್ಟನ್ ರವರು 1915ರಲ್ಲಿ ನಿಧನರಾದಾಗ ಅಂಬೇಡ್ಕರರು ಅಮೇರಿಕಾದಲ್ಲಿಯೇ ಇದ್ದರು. ಅವರು ನಿಗ್ರೋ ಜನರಿಗೆ ಸ್ವಾತಂತ್ರ್ಯ, ಶಿಕ್ಷಣ ಹಾಗೂ ಉದ್ಯೋಗವನ್ನು ಕಲ್ಪಿಸಿಕೊಟ್ಟಿದ್ದರು. ಅಂಬೇಡ್ಕರರಿಗೆ ಭಾರತದಲ್ಲಿನ ಕೋಟಿ […]
ಬೆವರು
ನಮ್ಮ ದೈನಂದಿನ ಬದುಕಿನಲ್ಲಿ ಬೆವರುವುದು ಅತ್ಯಂತ ಸಾಮಾನ್ಯ ಕ್ರಿಯೆ. ಆದರೆ ಕೆಲವು ವಿಶೇಷ ಸಂದರ್ಭಗಳಲ್ಲಿ ಅದು ಉದ್ದೀಪನಗೊಂಡು ಹೆಚ್ಚಾಗುತ್ತದೆ
ಲೇಖನ ಓಡುತ್ತಿರುವ ಜೀವನಕ್ಕೆ ಜಯಶ್ರೀ.ಜೆ. ಅಬ್ಬಿಗೇರಿ ಇಂದು ನಾವು ನಡೆಸುತ್ತಿರುವ ಜೀವನದ ಕ್ರಮದ ಕುರಿತು ಕೊಂಚ ಯೋಚಿಸಿದರೆ ಭಯ ಹುಟ್ಟುತ್ತದೆ. ಹಾಗೆ ನೋಡಿದರೆ ಹಾವು ಏಣಿಯಾಟದ ಚರಿತ್ರೆ ನಮ್ಮ ಹಿಂದಿದೆ. ಹೀಗಿದ್ದಾಗ್ಯೂ ದೈವಸೃಷ್ಟಿಯಲ್ಲಿ ನಾವೇ ಶ್ರೇಷ್ಠವೆಂದು ಕೊಚ್ಚಿಕೊಳ್ಳುತ್ತೇವೆ. ನಮ್ಮ ಬುದ್ಧಿವಂತಿಕೆಗೆ ಶಹಬ್ಬಾಸಗಿರಿ ಕೊಟ್ಟುಕೊಳ್ಳುತ್ತೇವೆ. ಎಲ್ಲ ಕೆಲಸಗಳಿಗೂ ಯಂತ್ರಗಳನ್ನು ಕಂಡು ಹಿಡಿದು ಯಂತ್ರ ನಾಗರಿಕತೆಯಲ್ಲಿ ಬದುಕುತ್ತಿದ್ದೇವೆ. ಆಧುನಿಕ ಜೀವನಶೈಲಿ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನಗರ ಕೇಂದ್ರೀಕೃತ ಬದುಕಿಗೆ ಆಕರ್ಷಿತರಾಗಿದ್ದೇವೆ. ದೋಚುವ ಉಪಭೋಗಿಸುವ ಕೊಳ್ಳುಬಾಕ ಸಂಸ್ಕೃತಿಯನ್ನು ಬಾಚಿ ತಬ್ಬಿಕೊಂಡಿದ್ದೇವೆ. ಭೂಮಿಯ […]
ಲೇಖನ ಗೃಹಿಣಿ ಮತ್ತು ಸಾಹಿತ್ಯ ಜ್ಯೋತಿ ಡಿ.ಬೊಮ್ಮಾ ಪ್ರಾಚೀನಕಾಲದಿಂದಲೂ ಸ್ತ್ರೀ ಎರಡನೆ ದರ್ಜೆಯ ಪ್ರಜೆ ಎಂದು ಗುರುತಿಸಲ್ಪಟ್ಟವಳು. ಪುರುಷ ಮೇಲು ಸ್ತ್ರೀ ಕೀಳು ಎಂಬ ಭಾವನೆಯಿಂದ ಸ್ತ್ರೀ ಯು ಶಿಕ್ಷಣದಿಂದ ವಂಚಿತಳಾಗಿದ್ದಳು. ಹಾಗಾಗಿ ಸ್ತ್ರೀ ಯು ಸಾಹಿತ್ಯ ರಚನೆಯಲ್ಲಿ ಹಿಂದೆ ಬಿದ್ದಳು. ಮೊಟ್ಟಮೊದಲ ಸಾಹಿತ್ಯ ರಚಿಸಿರುವದು ಹನ್ನೆರಡನೆ ಶತಮಾನದ ವಚನಗಾರ್ತಿಯರು . ಎರಡನೆಯ ಹಂತ ದೇಶದ ಸ್ವತಂತ್ರ ಚಳುವಳಿಗಳ ಸಂದರ್ಭದಲ್ಲಿ. ಹನ್ನೆರಡನೆಯ ಶತಮಾನದ ವಚನಗಾರ್ತಿಯರು ತಮ್ಮ ವಚನಗಳ ಮೂಲಕ ಸಮಾಜದ ಬದಲಾವಣೆಗೆ ಪ್ರಯತ್ನಿಸಿದರು.ಸಾಮಾಜಿಕ ಸ್ವಾತಂತ್ರ್ಯ ಅಂದೋಲನ ರಚಿಸಿದರು. […]
೨೦೨೦ ರಲ್ಲಿ ಪ್ರಕಟವಾದ ಸಿದ್ದರಾಮಹೊನ್ಕಲ್ ವಿರಚಿತ ಹೊನ್ನಮಹಲ್ ಗಜಲ್ ಸಂಕಲನಕ್ಕೆ ಕಲ್ಯಾಣ ಕರ್ನಾಟಕದ ಕನ್ನಡನಾಡು ಲೇಖಕ ಓದುಗರ ಸಹಕಾರ ಸಂಘ ಕೊಡಮಾಡುವ ಸಹಸ್ರಾರು ವಿದ್ಯಾರ್ಥಿಗಳ ನೆಚ್ಚಿನ ಪ್ರಾಂಶುಪಾಲರಾಗಿ ಕಲಬುರ್ಗಿ ಭಾಗದಲ್ಲಿ ಜನಜನಿತರಾಗಿದ್ದ ಪ್ರೊ.ಎಸ್.ವಿ. ಮೇಳಕುಂದಿ ಸ್ಮಾರಕ ಕಾವ್ಯ ಪ್ರಶಸ್ತಿ
ಧಾರಾವಾಹಿ ಆವರ್ತನ ಅದ್ಯಾಯ-47 ತಂಗವೇಲುವಿನೊಂದಿಗೆ ಬಂಡೆಯ ಸಮೂಹವನ್ನು ನೋಡುತ್ತ ಕೊರಕಲು ದಾರಿಯಲ್ಲಿ ಫರ್ಲಾಂಗು ಮುಂದೆ ಸಾಗಿದ ಶಂಕರನಿಗೆ ಆ ರಸ್ತೆಯ ಅಂತ್ಯದಿಂದ ಸುಮಾರು ನೂರು ಗಜ ದೂರದಲ್ಲಿ ಎರಡು, ಮೂರು ಶತಮಾನಗಳಷ್ಟು ಹಳೆಯದಾದ ತುಂಡುಪ್ಪರಿಗೆಯ ಮನೆಯೊಂದು ಕಾಣಿಸಿತು. ಅದನ್ನು ಕಂಡ ತಂಗವೇಲು, ‘ಸಂಗರಣ್ಣ ಅದೇ ಮನೆ ಸುಘೇಂದ್ರಯ್ಯನವರ್ದು…!’ ಎಂದು ಗೆಲುವಿನಿಂದ ತೋರಿಸಿದ. ಆದ್ದರಿಂದ ಶಂಕರ ಅಲ್ಲೇ ಒಂದು ಕಡೆ ಕಾರು ನಿಲ್ಲಿಸಿ ಇಳಿದವನು ಕಾರನ್ನೊಮ್ಮೆ ಬೇಸರದಿಂದ ದಿಟ್ಟಸಿದ. ತನ್ನ ಹೊಚ್ಚ ಹೊಸ ಕಾರು ಆ ಕೊರಕಲು ರಸ್ತೆಯ […]