ಸರಣಿ ಬರಹ

ಅಂಬೇಡ್ಕರ್ ಓದು

ಭಾಗ-7

“ಅಸ್ಪೃಶ್ಯತೆಯ ವಿರುದ್ದ ಹೋರಾಟದ ಆರಂಭ

ಅಸ್ಪೃಶ್ಯತೆಯ ಭೀಕರತೆಯಿಂದಾಗಿ ಬರೋಡಾ ಸಂಸ್ಥಾನದಲ್ಲಿ ಹಣಕಾಸು ಸಚಿವರಾಗುವ ಅವಕಾಶ ತಪ್ಪಿ ಹೊಗುತ್ತದೆ. ಅಸ್ಪೃಶ್ಯತೆಯ ಕಳಂಕ ಅವಮಾನ ಅಸಹಕಾರದಿಂದಾಗಿ ವಾಸಿಸಲು ಮನೆಯು ಸಿಗದೆ 1917ರ ನವೆಂಬ್ಹರ ತಿಂಗಳಲ್ಲಿ ಬರೋಡಾದಿಂದ ಮುಂಬಯಿಗೆ ಮರಳಿ ಬಂದ ಅಂಬೇಡ್ಕರರು ಕೆಲವು ದಿನ ಅಂತರ್ಮುಖಿಯಾಗಿ ಉಳಿಯುತ್ತಾರೆ. ಅದೇ ವೇಳೆ ದೀರ್ಘಕಾಲದ ಅನಾರೋಗ್ಯದಿಂದ ಹಾಸಿಗೆ ಹಿಡಿದು ಮಲಗಿದ್ದ ಮಲತಾಯಿ ತೀರಿಕೊಂಡರು. ತೀರಿಕೊಂಡ ಮಲತಾಯಿಯ ವಿಧಿ ವಿಧಾನ ಕರ್ಮಗಳನ್ನು ಅಂಬೇಡ್ಕರರು ತಾವೇ ಖುದ್ದಾಗಿ ಮಾಡಿ ಮುಗಿಸುವರು.

             1918 ರ ಮಾರ್ಚ ತಿಂಗಳಲ್ಲಿ ಅಖಿಲ ಭಾರತ ನಿಮ್ನವರ್ಗದ ಮೊದಲ ಮಹಾ ಸಮ್ಮೆಳನವು ಮುಂಬಯಿಯಲ್ಲಿ ಆಯೋಜನೆ ಗೊಂಡಿತು. ಆ ಮಹಾ ಸಮಾವೇಶದ ಅದ್ಯಕ್ಷತೆ ವಹಿಸಿದ್ದ ಬರೋಡಾ ಮಹಾರಾಜರು ಮಾತನಾಡುತ್ತಾ “ವೈಜ್ಞಾನಿಕ ಗಾಳಿ ಬೀಸತೊಡಗಿದೆ, ಜನರು ವೈಜ್ಞಾನಿಕ ತಿಳುವಳಿಕೆ ಹೊಂದುತ್ತಿದ್ದಾರೆ, ಇನ್ನು ಮುಂದೆ ಮೂಢ ನಂಬಿಕೆಗಳು, ಗೊಡ್ಡು ಸಂಪ್ರದಾಯಗಳು ವೈಜ್ಞಾನಿಕತೆ ಮುಂದೆ ನಿಲ್ಲಲಾರವು “ ಎಂಬುದಾಗಿ ಅಭಿಪ್ರಾಯ ಪಡುತ್ತಾರೆ ಪ್ರಗತಿಪರ ಚಿಂತಕರು ಜಾಗೃತರಾಗಬೇಕೆಂದು ಬರೋಡಾ ಮಹಾರಾಜರು ಕರೆಕೊಟ್ಟರು. ಎರಡನೇ ದಿನ ಬಾಲಗಂಗಾಧರ ತಿಲಕರು ಸಮ್ಮೇಳನದಲ್ಲಿ ಭಾಗ ವಹಿಸಿ “ಅಸ್ಪೃಶ್ಯತೆಯನ್ನು ದೇವರು ಒಪ್ಪುವುದಾದರೆ ಆ ದೇವರನ್ನೆ ನಾನು ಒಪ್ಪುವುದಿಲ್ಲ, ಅಸ್ಪೃಶ್ಯತೆ ಹಿಂದೂ ಸಮಾಜಕ್ಕೆ ಅಂಟಿದ ರೋಗ, ಈ ರೋಗ ಬ್ರಾಹ್ಮಣರಿಂದ  ಬಂದದ್ದು ಗುಣಪಡಿಸಲೇಬೇಕು ಎಂದು ಭಾಷಣ ಮಾಡುವರು. ಆದರೆ ದೈನಂದಿನ ಜೀವನದಲ್ಲಿ ಅಸ್ಪೃಶ್ಯತೆ ಆಚರಿಸುವುದಿಲ್ಲ ಎಂಬ ಸಂಕಲ್ಪ ಮಾಡಿದ ಪತ್ರಕ್ಕೆ ರುಜು ಹಾಕಲು ತಿಳಕರು ನಿರಾಕರಿಸುವರು. ಇದು ಹಿಂದೂ ಸಮಾಜದ ಮನಃಸ್ಥಿತಿಗೆ ಹಿಡಿದ ಕನ್ನಡಿ ಎಂದು ಅಂಬೇಡ್ಕರರು ಅರ್ಥೈಸುತ್ತಾ ಹಿಂದೂ ಸಮಾಜದ ನಾಯಕರು ಅಸ್ಪೃಶ್ಯತೆಯನ್ನು ಹೋಲಾಡಿಸಬೇಕೆಂದು ಸಭೆಗಳಲ್ಲಿ ಕರೆ ಕೊಡುವರೆ ವಿನಃ ದಿನ ನಿತ್ಯ ಜಿವನದಲ್ಲಿ  ಅದನ್ನು ಅವರು ಆಚರಣೆಗೆ ತರುವುದಿಲ್ಲವೆಂದು ಇಂಥಹ ಭೂಟಾಟಿಕೆಗೆ ಸಭೆಗಳಿಂದ ತಾವು ದೂರ ವಿರುವುದಾಗಿ ತಿಳಿಸುವರು.

                 ಒಂದು ನಿಶ್ಚಿತ ಉದ್ಯೋಗವಿಲ್ಲದೆ ಅಂಬೇಡ್ಕರರ ಜೀವನ ಅತಂತ್ರವಾಗಿತ್ತು, ಅಲ್ಲದೆ ಅರ್ಧಕ್ಕೆ ನಿಂತ ಶಿಕ್ಷಣವನ್ನು ಪೂರ್ಣಗೊಳಿಸಲು ಲಂಡನಗೆ ಹೋಗಲು ಒಂದಿಷ್ಟು ದುಡ್ಡು ಸಂಪಾದಿಸುವುದು ಅನಿವಾರ್ಯವಾಗಿತ್ತು. ಮಕ್ಕಳಿಗೆ ಮನೆ ಪಾಠ ಹೇಳಿಕೊಡಲು ಪ್ರಾರಂಭಿಸುತ್ತಾರೆ. ಇದರೊಂದಿಗೆ ಷೇರು ಮಾರುಕಟ್ಟೆಯ ವ್ಯವಹಾರದ ಸಲಹಾಕೇಂದ್ರವನ್ನು ತೆರೆಯುತ್ತಾರೆ. ಆರಂಭದಲ್ಲಿ ಇವೆರುಡು ಸ್ವಉದ್ಯೋಗ ಲಾಭವಾಯುಕವಾಗಿದ್ದರೂ ಅಂಬೇಡ್ಕರರು ಅಸ್ಪೃಶ್ಯರೆಂದು ಗೊತ್ತಾದಾಗ ಅವು ನಿಂತು ಹೊಗುತ್ತವೆ. ಕೆಲದಿನಗಳ ನಂತರ ಸಿಡೆನ್ ಹ್ಯಾಂ ಕಾಲೇಜಿನಲ್ಲಿ ಪ್ರೋಪೆಸರ್ ಹುದ್ದೆ ಖಾಲಿ ಇರುವುದು ತಿಳಿದು ಅರ್ಜಿ ಹಾಕುವರು. ಪ್ರೋಪೆಸರ್ ಹುದ್ದೆಗೆ ಅಂಬೇಡ್ಕರರು ಆಯ್ಕೆಯಾಗಿ ನವ್ಹೆಂಬರ 1918 ರಲ್ಲಿ ನೇಮಕ ಗೊಳ್ಳುವರು. ಯಾವ ಸಮಾಜ ಅಸ್ಪೃಶ್ಯನೆಂಬ ಕಾರಣದಿಂದಾಗಿ ಅಕ್ಷರ ಜ್ಞಾನ ಶಿಕ್ಷಣ ಕೊಡಲು ನಿರಾಕರಿಸಿತ್ತೊ ಅದೇ ಸಮಾಜಕ್ಕೆ ಜ್ಞಾನ ನೀಡುವ ಶಿಕ್ಷಣ ಕಲಿಸುವ ಗುರುವಾಗುತ್ತಾರೆ. ಜ್ಞಾನಾರ್ಜನೆಯ ಬಲದಿಂದ ಅಸ್ಪೃಶ್ಯ ನೊಬ್ಬ ಪ್ರೋಪೇಸರ ಆಗಿ ಇತಿಹಾಸ ಸೃಷ್ಟಿಸುತ್ತಾರೆ.

          ಪ್ರತಿದಿನ ಪೂರ್ವ ಸಿದ್ದತೆಯೊಂದಿಗೆ ಸಿಡೆನ್ ಹ್ಯಾಂ ಕಾಲೇಜಿಗೆ ಭೋದಿಸಲು ಹೋಗುವರು, ಅಂಬೇಡ್ಕರರು ಅಸ್ಪೃಶ್ಯ ಜಾತಿಯವ ಎಂದು ತಿಳಿದಿದ್ದ ವಿದ್ಯಾರ್ಥಿಗಳು ಅವರ ಭೋದನೆಗೆ ಅಸಡ್ಡೆ ತೋರುವರು.  ಅಸ್ಪೃಶ್ಯನೊಬ್ಬನಿಂದ  ಪಾಠ ಭೋದನೆ ಮಾಡಸಿಕೊಳ್ಳಬೇಕಾಗಿ ಬಂದಿದೆ ಎಂದು ಭಾವಿಸುವರು. ಆಳವಾದ ಅಧ್ಯಾಯನ ಸ್ಪಷ್ಟ ಉಚ್ಚಾರ, ನಿರ್ಘಳ ಮಾತು ಬಾಷೆಯ ಹಿಡಿತ ವಿಷಯ ಸಂಗ್ರಹ ಪಾಂಡಿತ್ಯದಿಂದ ಅಂಬೇಡ್ಕರರು ಪರಿಪೂರ್ಣರಾಗಿದ್ದರು. ತುಂಬಿದ ಜ್ಞಾನಾರ್ಜನೆಯಿಂದ ರಾಜಕಿಯ ಅರ್ಥ ಶಾಸ್ತ್ರವನ್ನು ಬೋದಿಸುವರು. ವಿದ್ಯಾರ್ಥಿಗಳಿಗೆ ಅಬೇಡ್ಕರರ ಭೋದನೆ ಮನತಟ್ಟುತ್ತದೆ. ಅವರ ಬೋದನೆಗೆ ಮೂಕ ವಿಸ್ಮಿತರಾಗುವರು ವಲ್ಲದ ಮನಸ್ಸಿನ ವಿದ್ಯಾರ್ಥಿಗಳು ಅಬೇಡ್ಕರರ ವಿದ್ವತ್ತಿನ ಭೋಧನೆಯಿಂದಾಗಿ ಅವರ ಪಾಠ ಕೇಳಲು ಹಾತೊರೆಯುತ್ತಾರೆ, ಟಿಪ್ಪಣಿ ಮಾಡಿಕೊಳ್ಳಲು ಮುಗಿಬಿಳುತ್ತಾರೆ.  ಕಲವೇ ದಿನಗಳಲ್ಲಿ ಅಂಬೇಡ್ಕರರು ಕಾಲೇಜಿನಲ್ಲಿಯೇ ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಪ್ರೋಪೆಸರ ಆಗುವರು.

ಜಾತಿ ಮತ್ತೆ ಅವರ ವರ್ಚಸ್ಸಿಗೆ ಅಡ್ಡಗಾಲ ಹಾಕುವುದು. ಕಾಲೇಜಿನಲ್ಲಿಟ್ಟಿದ್ದ ಹೂಜೆಯಿಂದ ನೀರು ಕುಡಿಯಲು ಅಲ್ಲಿನ ಸವರ್ಣೀಯ ಉಪನ್ಯಾಸಕರು ಅಡ್ಡಿ ಪಡಿಸುವರು. ಹೂಜಿ ಮುಟ್ಟಿ ನೀರು ತೆಗೆದುಕೊಂಡು ಕುಡಿಯುವುದರಿಂದ ಮೈಲಿಗೆ ಯಾಗುವುದೆಂದು ಅಬೇಡ್ಕರರಿಗೆ ನೀರು ತೆಗೆದುಕೊಳ್ಳಲು ವಿರೋದಿಸುತ್ತಾರೆ. ಓದಿಕೊಂಡಿರುವ ವಿದ್ಯಾವಂತ ಉಪನ್ಯಸಕರಲ್ಲಿಯೇ ಅಸ್ಪೃಶ್ಯತೆಯ ವಿಷ ತುಂಬಿಕೊಂಡಿದ್ದು ಅಬೇಡ್ಕರರಿಗೆ ನೋವುಂಟು ಮಾಡುವುದು. ಅಸ್ಪೃಶ್ಯತೆಯ ನಿರ್ಮೂಲನೆ ಮಾಡಲೆಬೆಕೆಂಬ ಸಂಕಲ್ಪ ಮಾಡಿ ಪ್ರೊಪೆಸರ ಹುದ್ದೆಗೆ ರಾಜಿನಾಮೆ ಕೊಟ್ಟು ಹೊರ ಬರುವರು. ಅಸ್ಪೃಶ್ಯರ ಪಾಲಿಗೆ  ಸೂರ್ಯನೊಬ್ಬ ಉದಯಿಸುತ್ತಿರುವ ಹೊಂಗಿರಣಗಳು ಅಬೇಡ್ಕರರಲ್ಲಿ ಕಾಣಿಸಿಕೊಳ್ಳುತ್ತವೆ.

ಕೋಟಿ ಕೋಟಿ ನಿಮ್ನ ಜನರ ಬದುಕು ಬೇಳಕಾಗಬೇಕು, ಅಸ್ಪೃಶ್ಯತೆಯ ಅಂಕೋಲೆಯಿಂದ  ತನ್ನ ಜನರನ್ನು ಮುಕ್ತಿ ಗೊಳಿಸಲೆಬೆಕೆಂಬ  ಸಂಕಲ್ಪ ಅವರಲ್ಲಿ ದೃಡವಾಯಿತು. ಪ್ರೋಪೇಸರ್ ಹುದ್ದೇಯ ರಾಜೀನಾಮೆಯಿಂದ ಹೊರಬಂದ ಅಂಬೇಡ್ಕರರು ಅಸ್ಪ್ರ ಶೃತೆಯ ವಿರುದ್ಧ ಹೋರಾಟ ಆರಂಭಿಸುವರು. ಅದೇ ವೇಳೆಗೆ 1919ರ ಮಾಂಟೆಗು ಜೇಮ್ಸ್ ಪೋರ್ಡ ವರದಿ ಅನ್ವಯ ಸುಧಾರಣೆಗಳನ್ನು ಜಾರಿಗೆ ತರಲು ಸೌತಬರೋ ಕಮಿಟಿಯ ಸದಸ್ಯರು ಅಹವಾಲುಗಳನ್ನು ಸ್ವಿಕರಿದಲು ಭಾರತಕ್ಕೆ ಬರುತ್ತಾರೆ. ನಿಮ್ನವರ್ಗದ ಜನರ ಅಭಿಪ್ರಾಯವನ್ನು ಕೇಳಲು ಕರ್ಮವೀರ ಸಿಂಧೆಯವರಿಗೂ ಮತ್ತು ಅಬೇಡ್ಕರವರಿಗೂ ಅಹ್ವಾನಿಸಲಾಗಿರುತ್ತದೆ.  ಅಂಬೇಡ್ಕರವರು ಸೌತ ಬರೋ ಕಮೀಟಿ ಮುಂದೆ ಹಾಜರಾಗಿ, ನಿಮ್ನವರ್ಗದ ಜನರ ಪ್ರತಿನಿಧಿಗಳನ್ನು ಅವರೆ ಆಯ್ಕೆ ಮಾಡಿಕೊಳ್ಳುವಂತಿರಬೇಕು ಮತ್ತು ನಿಮ್ನ ಜನಾಂಗದ      ಜನಸಂಖ್ಯಾನುಗುಣವಾಗಿ ಮೀಸಲಾತಿ ಸಂಖ್ಯೆ ಇರಬೆಕೆಂದು ಪ್ರತಿಪಾದಿಸುತ್ತಾರೆ. ಸೌತಬರೋ ಸಮಿತಿಗೆ ತನ್ನ ಜನ ಪ್ರತಿನಿದಿಗಳ ಆಯ್ಕೆ ನಿಮ್ನವರ್ಗದ ಜನರಿಂದಲೆ ಆಗಬೇಕು, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಜಾರಿಗೆ ತರಬೇಕೆಂದು ಆಗ್ರಹಿಸುತ್ತಾರೆ. ಅಂಬೇಡ್ಕರರ ಹೋರಾಟ ಇಲ್ಲಿಂದಲೆ ಆರಂಭಗೋಳ್ಳವುದು.

                             (ಮುಂದುವರೆಯುವುದು)                  

—————————–

                                                                       

         ಸೋಮಲಿಂಗ ಗೆಣ್ಣೂರ.

Leave a Reply

Back To Top