Category: ಇತರೆ

ಇತರೆ

“ಬಾಲ್ಯ ಕಾಪಿಡುವ ಅತ್ತಿ ಹಣ್ಣು”ಭಾರತಿ ಅಶೋಕ್ ಅವರ ಬಾಲ್ಯದ ನೆನಪುಗಳು

“ಬಾಲ್ಯ ಕಾಪಿಡುವ ಅತ್ತಿ ಹಣ್ಣು”ಭಾರತಿ ಅಶೋಕ್ ಅವರ ಬಾಲ್ಯದ ನೆನಪುಗಳು

ಇವತ್ತಿಗೆ ಅತ್ತಿ ಹಣ್ಣು ಮಾಯವಾಗಿ ಅದರ ಸ್ಥಾನದಲ್ಲಿ ಅಂಜೂರತ್ತಿ ಹಣ್ಣು ವಿರಾಜಿಸುತ್ತಿದೆ.
ವಿಶೇಷವೆಂದರೆ ನಮ್ಮ ಮನೆಯ ಪಕ್ಕದಲ್ಲಿ ಹಾಳು ಮನೆಯಲ್ಲಿ ಅತ್ತಿ ಮರ ಬೆಳೆದಿದೆ, (ಪಟದಲ್ಲಿರುವುದು ಅದೇ)  ವರುಷಪೂರ್ತಿ ಹಣ್ಣು, ಕಾಯಿ,ಚಿಗುರು ಇಲ್ಲಾ ಹೂವಿನಿಂದ ಕಂಗೊಳಿಸುತ್ತದೆ. ನಾನು ನೊಡಿದಂತೆ ಒಂದು ವರ್ಷದಲ್ಲಿ ನಾಲ್ಕೈದು ಬಾರಿ ಹಣ್ಣು ಆಗಿದೆ.

ಅಂಬಿಗ ಚೌಡಯ್ಯನವರ ವಚನಗಳಲ್ಲಿ ಗಣಾಚಾರ ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಅಂಬಿಗ ಚೌಡಯ್ಯನವರ ವಚನಗಳಲ್ಲಿ ಗಣಾಚಾರ ಡಾ ಶಶಿಕಾಂತ ಪಟ್ಟಣ ರಾಮದುರ್ಗ

“ಭಾಷೆ ಜನಸ್ನೇಹಿಯಾಗಿರಬೇಕು”ಲೋಹಿತೇಶ್ವರಿ ಎಸ್ ಪಿ ಅವರ ವಿಶೇಷ ಲೇಖನ

ಜಗತ್ತಿನ ಎಲ್ಲಾ ಭಾಷೆಗಳ ಪದಕೋಶದಲ್ಲಿ ಅನೇಕ ಭಾಷೆಗಳ ಪದಗಳು ಎರವಲಾಗಿ ಸಹಜರೀತಿಯಲ್ಲಿ ಬಳಕೆಗೊಳ್ಳುತ್ತಿರುತ್ತವೆ. ಅದು ಕನ್ನಡದ ಸಂದರ್ಭವಾಗಿರಬಹುದು, ಇಲ್ಲವೆ ಸಂಸ್ಕೃತ ಹಾಗೂ ಯಾವುದೇ ಭಾಷೆಯ ಸಂದರ್ಭವೂ ಆಗಿರಬಹುದು. ಕನ್ನಡ ಪದಕೋಶ ಸಂಸ್ಕೃತ, ಇಂಗ್ಲಿಶ್, ಗ್ರೀಕ್, ಲ್ಯಾಟೀನ್, ಪೋರ್ಚುಗೀಸ್, ಮರಾಠಿ, ಹಿಂದಿ, ಉರ್ದು, ಅರೇಬಿಕ್ ಮೊದಲಾದ ಭಾಷೆಗಳ ಪದಗಳನ್ನು ತನ್ನದಾಗಿಸಿಕೊಂಡಿದೆ. ಉದಾಹರಣೆಗೆ ಇಂಗ್ಲಿಶಿನ ಸ್ಕೂಲ್, ಬಸ್, ಕಾರ್, ಬುಕ್ ಎಂಬ ಪದಗಳು ಕನ್ನಡದಲ್ಲಿ ಇಸ್ಕೂಲ್, ಬಸ್ಸು, ಕಾರು, ಬುಕ್ಕು ಎಂದು ಆದಿಸ್ವರಾಗಮ ಹಾಗೂ ಸ್ವರಾಂತ್ಯ ಪ್ರಕ್ರಿಯೆಗೆ ಒಳಪಟ್ಟು ಬದಲಾವಣೆಗೊಂಡು ಕನ್ನಡ ಸಮಾಜದಲ್ಲಿ ಬಳಕೆಗೊಳ್ಳುತ್ತಿವೆ. ಚೌಕಾಸಿ, ಅಭಿಯಂತರ, ಆರಕ್ಷಕ, ಸಾಬೂನು, ಜಬರ‍್ದಸ್ತ್, ಗುಲಾಮ, ಅಲಮಾರು, ಕಛೇರಿ, ಅಸಲಿ, ನಕಲಿ, ರಸ್ತೆ ಮೊದಲಾದ ಪದಗಳು ಸಹ ಅದೇರೀತಿಯಲ್ಲಿ ಬಳಕೆಗೊಳ್ಳುತ್ತಿವೆ.

ಕೆಲವು ಸಂಶೋಧನಾರ್ಥಿಗಳು ಬೇರೆ ಭಾಷೆಯ ಅನೇಕ ಪದಗಳ ಬದಲಿಗೆ (ಅಭಿಯಂತರ, ಆರಕ್ಷಕ )ಕನ್ನಡ ಪದಗಳನ್ನೆ ರಚಿಸಬೇಕು. ಸೂರ್ಯ ಎಂಬುದು ಸಂಸ್ಕೃತ ಪದ ಅದಕ್ಕೆ ಪರಿಯಾಯವಾಗಿ ಕನ್ನಡದ್ದೇ ಪದದ ರಚನೆಯಾಗಿ ಜನರಿಗೆ ಪರಿಚಯವಾಗಬೇಕು ಎಂಬಂತಹ ಅಭಿಪ್ರಾಯವನ್ನು ಅಧ್ಯಯನದ ಸಂದರ್ಭದಲ್ಲಿ ಪ್ರಸ್ತುತ ಪಡಿಸುತ್ತಾರೆ. ಈ ರೀತಿ ಅಭಿಪ್ರಾಯ ಹೊಂದಿರುವ ಅಧ್ಯಯನಕಾರರು ಬೇರೆ ಭಾಷೆಯ ಪದಗಳ ವಿಚಾರದಲ್ಲಿ ಅಪಕಲ್ಪನೆಗೆ ಒಳಗಾಗಿ ಬೇರೆ ಭಾಷೆಯ ಪದಗಳ ಬಳಕೆ ಸಮಸ್ಯಾತ್ಮಕ ಎಂದೇ ಅಭಿಪ್ರಾಯಿಸುತ್ತಾರೆ.
ಮೊದಲೇ ಹೇಳಿದಂತೆ ಜಗತ್ತಿನೆಲ್ಲಾ ಭಾಷೆಯ ಪದಕೋಶದಲ್ಲಿ ಬೇರೆ ಬೇರೆ ಭಾಷೆಗಳ ಪದಗಳು ಒಳಗಾಗಿರುವಾಗ ಅಂತಹ ಪ್ರಕ್ರಿಯೆ ಕನ್ನಡದಲ್ಲಿ ನಡೆದರೆ ತಪ್ಪೇನು? ಅವು ಅರ್ಥದ ನೆಲೆಯಲ್ಲಾಗಲಿ, ಬಳಕೆಯ ನೆಲೆಯಲ್ಲಾಗಲಿ ತೊಂದರೆ ಉಂಟು ಮಾಡುತ್ತಿದ್ದರೆ ಅದರ ಬಳಕೆ ತನ್ನಷ್ಟಕ್ಕೆ ನಿಂತು ಹೋಗುತ್ತದೆ. ಉದಾಹರಣೆಗೆ ಸಂಸ್ಕೃತದ ಅಭಿಯಂತರ, ಆರಕ್ಷಕ ಎಂಬ ಪದಗಳ ಬಳಕೆ ಜನಬಳಕೆಯಲ್ಲಿ ಇಲ್ಲವಾಗಿ ಇಂಗ್ಲಿಶಿನ ಇಂಜಿನಿಯರ್ ಹಾಗೂ ಪೋಲೀಸ್ ಎಂಬ ಪದಗಳ ಬಳಕೆಯಾಗುತ್ತಿರುವುದನ್ನು ಗಮನಿಸಬಹುದು.
ಭಾಷಿಕರು ಸೌಲಭ್ಯಾಕಾಂಕ್ಷಿಗಳು. ಭಾಷಾಬಳಕೆಯನ್ನು ಸುಲಭವಾಗಿಸಿಕೊಳ್ಳುವಲ್ಲಿ ನಿಪುಣರು. ಅದರ ಪರಿಣಾಮವೇ ಕನ್ನಡ ವರ್ಣಮಾಲೆಯಲ್ಲಿನ ಋ ೠ ವರ್ಣಗಳ ಬಳಕೆ ನಿಂತುಹೋಗಿರುವುದು. ಆರಂಭದಲ್ಲಿ ೠ ಕಾರ ಸಂಪೂರ್ಣವಾಗಿ ಕೈಬಿಟ್ಟ ಭಾಷಿಕರು ಇತ್ತೀಚಿನ ದಿನಮಾನದಲ್ಲಿ ಋ ಕಾರವನ್ನು ಸಹ ೯೦% ಬಳಕೆಯಿಂದ ಕೈಬಿಟ್ಟಿರುವ ಉದಾಹರಣೆಯಿದೆ. ಋ ಕಾರದ ಕೆಲಸ ರ ಕಾರವೇ ನಿರ್ವಹಿಸುತ್ತಿದೆ. ಇದು ಅಕ್ಷರಗಳ ವಿಚಾರದಲ್ಲಿ ಮಾತ್ರವಲ್ಲದೇ ಅನೇಕ ಪದಗಳ ಸಂದರ್ಭದಲ್ಲಿಯೂ ನಡೆದಿದೆ.
ಇಲ್ಲಿ ನನ್ನ ಮಾತಿನ ಉದ್ದೇಶ ಹೊಸಪದಗಳ ರಚನೆ ತಪ್ಪು ಎಂದೊ, ಸರಿ ಎಂದೊ ಅಥವಾ ಬೇರೆ ನುಡಿಯ ಪದಗಳ ಎರವಲು ಪ್ರಕ್ರಿಯೆ ಸರಿ, ತಪ್ಪು ಎಂದು ಹೇಳುವುದಲ್ಲ . ಕನ್ನಡ ಪದಗಳು ಇದ್ದಾಗ ಅವುಗಳನ್ನೇ ಬಳಸೋಣ. ಹೊಸಪದಗಳನ್ನು ರಚಿಸುವ ಸಾಧ್ಯತೆಯಿದ್ದು, ಅವು ಬಳಕೆಗೆ ಯುಕ್ತವಾಗಿದ್ದರೆ ಹೊಸಪದಗಳನ್ನೂ ರಚಿಸಿಕೊಳ್ಳೋಣ. ಆದರೆ, ಕನ್ನಡದಲ್ಲಿ ಪದಗಳಿಲ್ಲದಿದ್ದರೂ, ಕನ್ನಡ ಪದರಚನೆಗೆ ಅವಕಾಶಗಳಿಲ್ಲದಿದ್ದರೂ, ಜನಬಳಕೆಗೆ ಕಷ್ಟವಾಗುತ್ತದೆ ಎಂದು ತಿಳಿದಿದ್ದರೂ ಕನ್ನಡ ಪದಗಳನ್ನೇ ರಚಿಸಬೇಕು ಎಂದು ವಾದಿಸುವುದು ಸರಿಯಲ್ಲ. ಈ ರೀತಿ ವಾದಿಸುತ್ತಾ ಹೋದರೆ ಜಗತ್ತಿನ ಯಾವ ನುಡಿಗಳ ನಡುವೆಯೂ ಕೋಡುಕೊಳ್ಳುವಿಕೆಯ ಸಂಬಂಧ ಏರ್ಪಡುವುದಿಲ್ಲ. ಭಾಷೆ ಜನಸ್ನೇಹಿಯಾಗಿರಬೇಕು. ಇಲ್ಲದಿದ್ದರೆ ಅಳಿವು ಉಳಿವಿನ ವಿಚಾರಗಳ ಬಗೆಗಿನ ಚರ್ಚೆಗಳು ಮುನ್ನೆಲೆಗೆ ಬರುತ್ತವೆ.

ಲೋಹಿತೇಶ್ವರಿ ಎಸ್ ಪಿ

ತತ್ವ ಪದಗಳ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ ಶಿಶುನಾಳ ಷರೀಫರ ಜೀವನ ಗಾಥೆ-ಗೊರೂರು ಅನಂತರಾಜು

ಹಾಸನ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಇನ್ನೊಂದು ನಾಟಕ ಭಗವದ್ದಜ್ಜುಕೀಯಂ. ರಚನೆ ಬೋಧಯಾನ.
ಗೊರೂರು ಅನಂತರಾಜು

ಊರು ಕೇರಿ ನಗರದೆಲ್ಲೆಡೆ ಗಿಡ ನೆಡುವುದು ಕಡ್ಡಾಯವಾಗಲಿ -ಗಂಗಾಧರ ಬಿ ಎಲ್ ನಿಟ್ಟೂರ್

ಊರು ಕೇರಿ ನಗರದೆಲ್ಲೆಡೆ ಗಿಡ ನೆಡುವುದು ಕಡ್ಡಾಯವಾಗಲಿ -ಗಂಗಾಧರ ಬಿ ಎಲ್ ನಿಟ್ಟೂರ್

ಅದ್ಭುತ ಕಂಠದ ರಂಗನಾಯಕಿ…. ಬಿ ಜಯಶ್ರೀ-ವೀಣಾ ಹೇಮಂತ್ ಗೌಡ ಪಾಟೀಲ್.

ಅದ್ಭುತ ಕಂಠದ ರಂಗನಾಯಕಿ…. ಬಿ ಜಯಶ್ರೀ-ವೀಣಾ ಹೇಮಂತ್ ಗೌಡ ಪಾಟೀಲ್.
1976 ರಿಂದ ಇಲ್ಲಿಯವರೆಗೂ ಸ್ಪಂದನ ಎಂಬ ಸ್ವಂತ ತಂಡವನ್ನು ಕಟ್ಟಿರುವ ಇವರು ನೂರಾರು ರಂಗನಟರನ್ನು ತರಬೇತಿಗೊಳಿಸಿದ್ದಾರೆ. ಎಲ್ಲಾ ತಾಲೀಮುಗಳಲ್ಲಿಯೂ ಕಡ್ಡಾಯವಾಗಿ ಭಾಗವಹಿಸಿ ತರಬೇತಿ ನೀಡುವ ಇವರ ತಂಡದಲ್ಲಿ ಎಲ್ಲರೂ ಅಸಾಮಾನ್ಯ ನಟರು. ಕರಿಮಾಯಿತಾಯಿ ಹಾಡನ್ನು ಅವರ ತಂಡದವರೆಲ್ಲ ಸೇರಿ ಹಾಡ ತೊಡಗಿದರೆ ಮೈ ರೋಮಾಂಚನಗೊಳ್ಳುತ್ತದೆ

ವಿಭಿನ್ನ ರಂಗ ಪ್ರಯೋಗ ವಿಗಡ ವಿಕ್ರಮರಾಯ ರಂಜಿಸಿದ ಸುಣ್ಣದ ಸುತ್ತ ಕಾಲೇಜು ವಿದ್ಯಾರ್ಥಿಗಳ ನಾಟಕಗಳು- ಗೊರೂರು ಅನಂತರಾಜು

ವಿಭಿನ್ನ ರಂಗ ಪ್ರಯೋಗ ವಿಗಡ ವಿಕ್ರಮರಾಯ ರಂಜಿಸಿದ ಸುಣ್ಣದ ಸುತ್ತ ಕಾಲೇಜು ವಿದ್ಯಾರ್ಥಿಗಳ ನಾಟಕಗಳು- ಗೊರೂರು ಅನಂತರಾಜು

ಬಿದಿರು ಕಾಯಕದಲ್ಲಿ ಮಹಿಳಾ ಸ್ವಾವಲಂಬನೆಭಾರತಿ ಅಶೋಕ್ ಅವರ ಲೇಖನ

ವಿಶೇಷ ಲೇಖನ ಬಿದಿರು ಕಾಯಕದಲ್ಲಿ ಮಹಿಳಾ ಸ್ವಾವಲಂಬನೆ ಭಾರತಿ ಅಶೋಕ್  ದುಡಿಯದವರಿಗೆ ಉಣ್ಣುವ ಹಕ್ಕಿಲ್ಲ” ಎನ್ನುವ ಮಾತನ್ನು ಅಕ್ಷರಶಃ ಪಾಲಿಸುವ, ಕಾಯಕದ ಮಹತ್ವ ಅರಿತಿರುವ ಮತ್ತು ಅದನ್ನೇ ಬದುಕುತ್ತಿರುವ ಸಮುದಾಯಗಳಲ್ಲಿ ಮೇದಾರ ಸಮುದಾಯವೂ ಒಂದು. ದುಡಿದೇ ಉಣ್ಣುವ ಕಾಯಕ ಕಲ್ಪನೆಯನ್ನು ಕೊಟ್ಟ ಶರಣರನ್ನುಬದುಕುತ್ತಿರುವ ಈ ಸಮುದಾಯದಲ್ಲಿ “ಬಿದಿರು’ ಮಹತ್ವದ ಪಾತ್ರ ವಹಿಸಿದೆ. ತಮ್ಮ ಕಾಯಕಕ್ಕೆ ಬೇಕಾದ ಬಿದಿರು ಮೆಳೆಯನ್ನು ಪೂಜಿಸಿಕೊಂಡು ಅದನ್ನೇ ಹಾಸಿ ಹೊದ್ದು ಮಲಗುವಷ್ಟು ಅದು ಬದುಕನ್ನು ಆವರಿಸಿದೆ. ಪ್ರತಿ ವರ್ಷ ಭರತ ಹುಣ್ಣಿಮೆ […]

Back To Top