ಮನದಮೂಲೆಯಲೆಲ್ಲೊ ಹುಟ್ಟಿ ಚಿಮ್ಮುವ ಪ್ರೀತಿ
ಅದಕೆ,,,,,,,
ಕತ್ತಲೆಯ ಕಡಗದ ಬಂಧಬೆೇಕೆ
ಕಡಲ ಅಲೆಯಂತೆ
ಅಪ್ಪಳಿಸಿ ಅಂತರಂಗದಲಿ
ಸುಖದ ಬುಗ್ಗೆಯ ಉಕ್ಕಿಸುವ ಪ್ರೀತಿ
ಇಟ್ಟಿಗೆಯ ಬಟ್ಟಿಯಲಿ ಬೇಯಬೇಕೆ? ಪರದೆಯ
ಮರೆಯಲ್ಲಿ ಪಿಸುಗುಟ್ಟಬೇಕೆ?
ಕತ್ತಲೆಗೆ ಬೆಳಕಾಗಿ
ಬೆಳಗ ಬೆಳಗಿಸಿ
ಉಸಿರಏರಿಳಿತಕೆ
ದನಿಯಾಗುವ ಪ್ರೀತಿ
ಧನಿಕ ಡಂಭಾಚಾರದಲಿ
ನಲುಗಬೇಕೆ?

ಕಾಣುವರ ಕೇಳುವರ
ಮಂದಿ ಮುಖವಾಡದ
ಮದ್ಯೆಮುದುಡಿ
ಮಂಕಾಗ ಬೇಕೆ?
ಮಿಂಚಂತೆ ಮುಗುಳ್
ನಗಿಸಿ ನೆನಪಲ್ಲೆ ಮೈ ಮರೆಸವ
ಪ್ರೀತಿ ಮುದುಡಿ
ಮರೀಚಿಕೆ ಯಾಗಬೇಕೆ?

ಪ್ರೀತಿ ಪ್ರೀತಿಯ ಸೊತ್ತು
ಅಂತರಂಗದ ಆಸ್ತಿ
ಅನುಭವಿಸಿ ಆಧರಿಸಲು
ಆತ್ಮದನುಸಂಧಾನ


Leave a Reply

Back To Top