ವ್ಯಾಲಂಟೈನ್ ವಿಶೇಷ
ಇಮಾಮ್ ಮದ್ಗಾರ್
ನಂಗೇನೂ ಬೇಡ
ನಿನ್ನ ಕಣ್ಣ ಕಂದೀಲಿಗೆ ನಾ
ಬೆಳಕಾದರೆ ಸಾಕು
ನಿನ್ನೆದೆಯ ಒಳದನಿಯ
ಮಿಡಿತ ನಾನಾದರೆ ಸಾಕು
ನೀ ಹೆಜ್ಜೆಇಟ್ಟಲ್ಲೆಲ್ಲಾ ನಾ
ಹೂವಾಗಿದ್ದರೆ ಸಾಕು
ನೀ ನಡೆವ ಹಾದಿಯಗುಂಟ
ನಾ ಘಮಘಮಿಸುವ ಹೂವಿನ ಪೊದೆಯಾದರೆ ಸಾಕು
ನಿನ್ನ ಕನಸಿನ ಮನೆಗೆ ನಾ
ಮೆಟ್ಟಿಲಾದರೆ ಸಾಕು
ನಿನ್ನ ಕಣ್ಣೀರು ದೂರಾಗಿ
ನನಸೆಂಬ ಬೆಳಕಿನಲಿ ನೀ
ನಗುವದ ನಾ ಕಂಡರೆ ಸಾಕು
ನನ್ನೆದೆಯ ಮಿದುವಿನಲಿ
ನೀ ತಲೆಯಿಟ್ಟು ಮಗುವಾಗಿ
ಮಲಗಿದಾಗ ನಿನ್ನ
ತಲೆಯ ಬೈತಲೆಯಲಿ ಕೈ..ಯಾಡಿಸುತ್ತಾ
ನಾ ಕೊನೆಯುಸಿರೇಳೆದರೆ ಸಾಕು
ನನಗೇ…. ಮತ್ತೇನೂ ಬೇಡ
ಇಮಾಮ್ ಮದ್ಗಾರ್