ಪ್ರೀತಿ ಹುಟ್ಟಿದ ಮ್ಯಾಲ
ಜಾತಿಯೆಂಬ ಹೊಲಸು
ಬೆನ್ನಟ್ಟಿದೆ ಗೆಳತಿ
ದಾರಿಯುದ್ದಕ್ಕೂ! ನನ್ನ
ಕೀಳೆಂಬ ಹಣೆಬರಹ
ಅಣಕಿಸುತಿದೆ| ಬಾಳೆಂಬ
ಬೆಂಕಿಯ ಜ್ವಾಲೆಯಲಿ||

ನಿನ್ನ ಪ್ರೀತಿಯ ಕುಸುಮ
ಜಾತಿಯ ಧಗೆಗೆ ಸುಡುತಿದೆ
ಕಣ್ಣೀರಿನ ಕೊಳದಲಿ
ನೀನಿಲ್ಲದೆ ಇಂದು||

ನೀನ ಜಾತಿ ಮೇಲಂತ
ನನ ಜಾತಿ ಕೀಳಂತ
ಊರಾಗ ಹಬ್ಬೈತಿ
ಜಾತಿಯ ಒಡೆತಾನ
ಮುರಿದೈತೆ ಮನೆತನ,
ಪ್ರೀತಿಯ ಸೀಉಂಡು
ಕ್ವಾಣ್ಯಾಗ ಕುಂತಲ್ಲೆ
ಹೊರ ಬಂದು ನೋಡೆ
ನನ್ನೆದೆಯ ಗೇಣೆತಾನ||

ಚಿತ್ತಾರವ ಬಿಡಿಸಿದೆ
ಹೊತ್ತಾರೆ ಎದ್ದು,
ಮುತ್ತನ್ನುಂಡೆ, ಕೈತುತ್ತನ್ನುಂಡೆ
ಮರಿಬ್ಯಾಡ ಕೊನೆತನಕ
ನಾ ನಿನಗ ಜೋಡ,
ಬರದ್ಹಾನ ದೇವ್ರ,
ಬಾಳ ಪಯಣಕ್ಕೆ
ನೀ ಬಂದು ಕೂಡ
ಈ ಬಡವನ ಗೂಡ. ||


One thought on “

Leave a Reply

Back To Top