ಅನುದಿನವೂ ಹೊಸ ಹುರುಪಿನಲಿ
ತೀರ ಸೇರುವ ತವಕದಲಿ
ಸಾಗರದ ಅಲೆಗಳು..
ತೀರ ಮುಟ್ಟಿ ಮತ್ತೆ ಹಿಂತಿರುಗುವ
ಕಡಲ ಹನಿಗೆ
ಎಂದೂ ತಳಮಳವಿಲ್ಲ!

ಅದ್ಯಾವುದೋ ಮೂಲೆಯಿಂದ ಸಂಚರಿಸಿ
ತಂಪರೆವ ತಂಗಾಳಿ
ಸುತ್ತಲಿನ ಕಲ್ಮಶ ಹೊತ್ತು ಮಲಿನವಾದರೂ
ಬಿಡದೇ ಕಾರ್ಯನಿರ್ವಹಿಸುವ ಗಾಳಿಗೆ
ಸೃಷ್ಟಿಯ ಕಡೆಗೆ
ಎಂದೂ ಕೋಪವಿಲ್ಲ!

ಹದಿನೈದು ದಿನಗಳಿಗೊಮ್ಮೆ
ಸಡಗರಿಸುವ ಬೆಳದಿಂಗಳು
ಪ್ರತಿದಿನ ಭುವಿಯ ಮೇಲೆ
ಹರಿದಾಡಲಿಲ್ಲವೆಂದು
ಬಾನೆಡೆಗೆ
ಎಂದೂ ಬೇಸರವಿಲ್ಲ!

ನಿನಗಾಗಿಯೇ ನಾನೆನ್ನುವ
ಹೃದಯದ ಬಡಿತ
ಕಣ್ಮುಚ್ಚಿದರೂ ಕಣ್ಣೊಳಗೆ ನೀನಿರುವ ಸೆಳೆತ
ಹಗಲು-ರಾತ್ರಿ ಭೇಧವಿರದ ನೆನಪಿನ ಹಿಡಿತ
ತಳಮಳಿಸದೆ, ಕೋಪಗೊಳ್ಳದೆ,
ಬೇಸರಿಸದೆ , ತಿಳಿ ಹೇಳಿದೆ
ನೀ ನನ್ನೊಂದಿಗೆ ಕೊನತನಕ!


2 thoughts on “

Leave a Reply

Back To Top