ವ್ಯಾಲಂಟೈನ್ ವಿಶೇಷ
ನಾಗರತ್ನ ಎಚ್ ಗಂಗಾವತಿ
ಮರೆಯದ ಒಲವು
ನಾ ಬರೆಯಲು ಪ್ರೇಮ ಪತ್ರ ಸದಾ ಇರುವೆ ನೀ ಹೃದಯದ ಹತ್ತಿರ.
ವರ್ಷಕ್ಕೊಂದು ಪ್ರೇಮಿಗಳ ದಿನ
ಎದೆಯ ಗೂಡಿನಲ್ಲಿ ಬಚ್ಚಿಟ್ಟ ಎಷ್ಟೋ ಮಾತುಗಳನ್ನು ಹಂಚಿಕೊಳ್ಳುವ ಸುದಿನ
ನಿದ್ದೆಯಲ್ಲಿ ಎದ್ದು ಕುಳಿತೆ ನಿನ್ನ ನೆನೆದು
ಮನವು ನಿನ್ನ ಹೆಸರನ್ನು ಸ್ಮರಿಸಿತು ಇಂದು
ಆಡಿ ಕೂಡಿ ಬೆಳೆದ ನಂಟು
ನಿನ್ನ ಜೊತೆ ಕೀಟಲೆಯ ನೆನಪು ಉಂಟು.
ಕಳೆದ ದಿನಗಳ ನೆನೆದು
ಮತ್ತೆ ನಿನ್ನ ಬಯಸಿದೆ ಇಂದು.
ಓ ಮನವೇ ಮೌನವ ಮುರಿದು
ಪ್ರೀತಿಯು ಬಯಸಿದೆ ಇಂದು
ಪ್ರೀತಿ ನಡುವೆ ಬಾರದಿರಲಿ ಬಿರುಕು
ನಾವಿಬ್ಬರ ಒಂದಾಗಿ ಬಾಳೋಣ ಸುಂದರ ಬದುಕು.
ನಾಗರತ್ನ ಎಚ್ ಗಂಗಾವತಿ