ಪ್ರೇಮಿಗಳಿಗೂ ಒಂದು ದಿನವಂತೆ
ನಿಜವಾದ ಪ್ರೀತಿಗೆ ಫೆಬ್ರವರಿ
ಹದಿನಾಲ್ಕೇ ಯಾಕಂತೆ?
ವರುಷದ ಎಲ್ಲಾ ದಿನಗಳೂ
ಪ್ರೀತಿ ಹರಿಯುತಿರಲಿ ಹೊಳೆಯಂತೆ!
ಪ್ರೀತಿಯಿಂದಲೇ ಜೀವನ
ಪ್ರೀತಿಯಿಲ್ಲದೇ ಬದುಕಿದ್ದೂ ಸತ್ತಂತೆ!!
ಮನುಜ ಮನುಜರೆಡೆಗಿನ ಪ್ರೀತಿ
ಪ್ರಾಣಿಪಕ್ಷಿಗಳೆಡೆಗಿನ ಪ್ರೀತಿ
ಸರ್ವರೆಡೆಗಿನ ಪ್ರೀತಿ
ಹರಿಯಬಿಡಿ ಭೋರ್ಗರೆದು
ತಾಳ ತಪ್ಪದಂತೆ!
ಆಗ ನೋಡಿ,ಬದುಕೇ ವಿಸ್ಮಯ!
ಜಗವೇ ಪ್ರೀತಿಯೊಳು ಒಂದಾದಂತೆ!!
ಹೃದಯ ಹಗುರ,ಮನಸು ಮಧುರ
ಝೇಂಕರಿಸುವ ದುಂಬಿಯಂತೆ!
ಒಲವೇ,ನೀನಾರಿಗಾದೆ?
ಅಪ್ಪಿಕೋ..ಮರವ ತಬ್ಬುವ ಬಳ್ಳಿಯಂತೆ!
ವರುಷವೆಲ್ಲವೂ ಹಂಚಿಕೋ..ಪ್ರೀತಿಯ,
ಸರ್ವರ ಮನೆ ಮನ ಬೆಳಗಿಸುವಂತೆ!
ಆಗ ನಿನ್ನೊಲವೇ ಪರಿಶುದ್ಧ ಚಿನ್ನದಂತೆ!


3 thoughts on “

  1. ಪ್ರೀತಿ ಎನ್ನುವ ಟಾನಿಕ್ ಇರಬೇಕು ಸುಂದರ ಬದುಕಿಗೆ

  2. ಪ್ರೀತಿ ಬರೀ ಪದವಲ್ಲ, ಜೀವನ ಶೈಲಿ, ಬದುಕಿನ ಅದಮ್ಯ ಚೇತನ

Leave a Reply

Back To Top