ಕೊಟ್ಟ ಮಾತು, ವಾಗ್ದಾನ, ವಚನ, ಆಣೆ, ಮಾತುಕೊಡು ಇವೆಲ್ಲಾ ಪ್ರತಿಜ್ಞೆ ಪದದ ಸಮಾನಾರ್ಥಕಗಳು. ಆದರೆ ಎಲ್ಲವೂ ಪ್ರತಿಜ್ಞೆಯೇ ಆಗುವುದಿಲ್ಲ. ಹರಕೆ, ವ್ರತ, ಅಂದುಕೊಳ್ಳುವುದು, ಇಚ್ಛೆ, ಶಪಥ, ಆಸೆ, ಬಯಕೆ ಎಂಬಿತ್ಯಾದಿ ನಾನಾರ್ಥಗಳನ್ನು ಆರೋಪಿಸಬಹುದಾದರೂ ಪ್ರತಿಜ್ಞೆಯ ತೂಕವೇ ಬೇರೆ. ಅಂದುಕೊಂಡಂತೆ ನಡೆದುಕೊಂಡರೆ!! ವಾಗ್ದಾನ ಮುರಿದವರೆಷ್ಟು ಮಂದಿಯಿಲ್ಲ? ಯಾವುದೋ ಆವೇಶ, ಉದ್ವೇಗ, ಚಿತಾವಣೆಗೆ ಒಳಗಾಗಿ ಪ್ರತಿಜ್ಞೆ ಮಾಡಿ ಮುಂದೆ ಪೇಚಿಗೆ ಸಿಲುಕಿ ಪಜೀತಿ ಪಟ್ಟವರು ಹಲವಾರು ಮಂದಿ ಇರುತ್ತಾರೆ.
ಪೂರ್ಣಚಂದ್ರ ತೇಜಸ್ವಿ ಅವರು ‘ಮರವೆನ್ನುವ ಕಾರ್ಖಾನೆ’ ಎಂಬ ಬರಹದಲ್ಲಿ “ಮರಗಳು ತಮ್ಮ ಜಟಿಲವಾದ ಬೇರಿನ ಜಾಲದಿಂದ ನೂರಾರು ಅಡಿ ಎತ್ತರಕ್ಕೆ ನೆಲದಿಂದ ನೀರನ್ನೆತ್ತುತ್ತವೆ. ಒಂದು ಸಾಧಾರಣ ಮರ ಎಲೆಗಳ ಮುಖಾಂತರ ಜೈವಿಕ ಕ್ರಿಯೆಯಲ್ಲಿ ಆವಿಯಾಗಿ ಬಿಡುಗಡೆ ಮಾಡುವ ನೀರಿನ ಪ್ರಮಾಣ ದಿನಕ್ಕೆ ಐವತ್ತು ಲೀಟರ್! ಈ ಕ್ರಿಯೆಯಲ್ಲಿ ಒಂದು ಮರ ತಿಂಗಳಿಗೆ ಸರಾಸರಿ ಹದಿನಾಲ್ಕು ಟನ್ ನೀರನ್ನು ನೆಲದಾಳದಿಂದ ಮೇಲಕ್ಕೆತ್ತಿ ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ”
ಕೆಲವೇ ದಿನಗಳಲ್ಲಿ ಒಂದು ದಿನ “ನಾಗಮ್ಮತ್ತೆ ರಾತ್ರಿ ಮಲಗಿದವಳು ಮುಂಜಾನೆ ನಾಪತ್ತೆಯಾಗಿದ್ದಾಳೆ” ಎಂಬ ಆತಂಕದ ಸುದ್ದಿ ತಂದರು. ಅಪ್ಪ ನಮ್ಮ ದಾಯಾದಿ ಇಬ್ಬರು ಚಿಕ್ಕಪ್ಪಂದಿರೊಂದಿಗೆ ಹಿಲ್ಲೂರಿಗೆ ಹೋದರು. ಅಲ್ಲಿ ಮತ್ತೆರಡು ದಿನಗಳವರೆಗೆ ಬೆಟ್ಟ, ಗುಡ್ಡ, ನದಿ, ಕೆರೆ, ಬಾವಿ ಇತ್ಯಾದಿ ಎಲ್ಲ ಕಡೆಗಳಲ್ಲಿಯೂ ಹುಡುಕಾಟ ಮಾಡಿದ್ದಾರೆ. ಆಗಲೂ ಮಂತ್ರವಾದಿಗಳು “ಅವಳು ಬದುಕಿದ್ದಾಳೆ… ಉತ್ತರ ದಿಕ್ಕಿನಲ್ಲಿ ಇದ್ದಾಳೆ…” ಇತ್ಯಾದಿ ಭವಿಷ್ಯ ನುಡಿದು ಹುಡುಕಾಟದ ತಂಡವನ್ನು ಅಲೆದಾಡಿಸಿ ನೋಡಿದರಲ್ಲದೆ ಅತ್ತೆಯು ಎಲ್ಲಿಯೂ ಕಾಣಸಿಗಲಿಲ್ಲ.
ಅಂಕಣ ಬರಹ ತೊರೆಯ ಹರಿವು ಅಕ್ಷಯ ವಸ್ತ್ರವೂ.. ಅಕ್ಷೋಹಿಣಿ ಸೈನ್ಯವೂ… ತಂದೆ ಕೊಡಿಸೋ ಸೀರೆ; ಮದುವೆ ಆಗೋವರೆಗೆ. ತಾಯಿ ಕೊಡಿಸೋ ಸೀರೆ; ತಾಯಿ ಆಗೋವರೆಗೆ, ಬಂಧು ಕೊಡಿಸೋ ಸೀರೇ ಬಣ್ಣ ಹೋಗೋವರೆಗೆ, ಗಂಡಾ ಕೊಡಿಸೋ ಸೀರೇೇೇ… ಕುಂಕುಮ ಇರುವವರೆಗೆ, ಹೆಣ್ಣಿನ ಜನುಮ ಕಳೆಯುವವರೆಗೆ, ಮಣ್ಣಿನ ಮಮತೆ ಮರೆಯೋವರೆಗೆ…’ ಹೆಣ್ಣು ಮನಸ್ಸುಗಳನ್ನು ಕಲಕಿ ಬಿಡುವ ಅಣ್ಣಾವ್ರ ದನಿಯಲ್ಲಿ ಬಂದ ಈ ಹಾಡಿಗಿರುವ ವೈಟೇಜೇ ಬೇರೆ… ಸ್ತ್ರೀವಾದ, ಸ್ವಾಭಿಮಾನ ಮುಂತಾದವೆಲ್ಲಾ ಅರ್ಥವಾಗದ ಮುಗ್ಧೆಯರಿಂದ […]
ಒಮ್ಮೆ ಕಾರವಾರದಲ್ಲಿ ‘ಗಂಡಭೇರುಂಡ’ ಚಲನ ಚಿತ್ರದ ಚಿತ್ರೀಕರಣ ನಡೆಯುತ್ತಿರುವಾಗ ನನ್ನನ್ನು ಕರೆಸಿಕೊಂಡ ಕೃಷ್ಣಮೂರ್ತಿ ಚಿತ್ರತಂಡದ ಭೇಟಿಗೆ ಅವಕಾಶ ಪಡೆದುಕೊಂಡಿದ್ದ. ಅಂದು ಕಾರವಾರದ ಪ್ರತಿಷ್ಠಿತ ಗೋವರ್ಧನ ಹೋಟೆಲಿನಲ್ಲಿ ನಾಯಕ ನಟರಾದ ಶ್ರೀನಾಥ, ಶಂಕರನಾಗ್, ಖಳನಟ ವಜ್ರಮುನಿ ಮತ್ತು ನಾಯಕಿ ಜಯಮಾಲಾ ಅವರ ಜೊತೆಯಲ್ಲಿ ಒಂದೆರಡು ಗಂಟೆಗಳ ಕಾಲ ಸಮಯ ಕಳೆದದ್ದು ಒಂದು ಅವಿಸ್ಮರಣೀಯ ಸಂದರ್ಭವೇ ಆಗಿತ್ತು
‘ಕುರಿಗಳು ಸಾರ್ ಕುರಿಗಳು..’ ಎಂಬಂತಹ ನಾವು ನೀವು ಅವರು ಇವರು…ತಲೆತಗ್ಗಿಸಿಯೇ ಮುನ್ನಡೆಯುವವರಾಗಿರುವುದರಿಂದ ಎದುರಿರುವ ಸತ್ಯ ಕಾಣುವುದು ಹೇಗೆ? ಮರೆ ಮಾಚಿದನ್ನೇ ಮುಂದುವರೆಸಿಕೊಂಡು ಹೋಗುವುದರಲ್ಲಿ ಮಾತ್ರ ಕ್ರಿಯಾಶೀಲರಾಗಿರುತ್ತೇವೆ.
ಈ ಅಸಹಾಯಕ ಸಂದರ್ಭದಲ್ಲಿ ನನ್ನ ಜೈಹಿಂದ್ ಹೈಸ್ಕೂಲು ಸಹಪಾಠಿ ಪ್ರಭು ಎಂಬಾತ ಸಹಾಯಕ್ಕೆ ನಿಂತ. (ಕ್ಷಮೆ ಇರಲಿ ಅವನ ಹೆಸರು ಮರೆತಿದ್ದೇನೆ). ಅಂಕೋಲೆಯ ಮಠಾಕೇರಿಯ ಜಿ.ಎಸ್.ಬಿ ಸಮುದಾಯದ ಪ್ರಭು ನನಗೆ ಹೈಸ್ಕೂಲು ದಿನಗಳಲ್ಲಿ ತುಂಬಾ ಆತ್ಮೀಯನಾಗಿದ್ದವನು. ಆತ ನನಗೆ ವಾಸ್ತವ್ಯದ ವ್ಯವಸ್ಥೆಯಾಗುವವರೆಗೆ ನಿಜಲಿಂಗಪ್ಪ ಹಾಸ್ಟೆಲ್ಲಿನ ತಮ್ಮ ಕೊಠಡಿಯಲ್ಲಿಯೇ ಉಳಿಯಲು ಅವಕಾಶ ನೀಡಿದ. ಇದಕ್ಕೆ ಅವನ ರೂಮ್‌ಮೇಟ್ ಕೂಡ ಆಕ್ಷೇಪವೆತ್ತದೆ ಸಹಕರಿಸಿದ. ಇಬ್ಬರ ಉಪಕಾರ ಬಹು ದೊಡ್ಡದು
ನಮ್ಮ ನಡುವಿನ ಜೀವಪರ ಕಾಳಜಿಯ ಕವಯಿತ್ರಿ ವಿಜಯಶ್ರೀ ಹಾಲಾಡಿಯವರು ಸಂಗಾತಿಗಾಗಿ ಬರೆಯುತ್ತಿದ್ದಾರೆ. ಅಂಕಣದ ಮೊದಲ ಕಂತು ನಿಮ್ಮ ಮುಂದಿದೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಈ ಅಂಕಣ ಪ್ರಕಟವಾಗಲಿದೆ
ಕೃಷ್ಣಮೂರ್ತಿ ಹೆಗಡೆ ಪ್ರತಿಷ್ಠಿತ “ಶಿಂತ್ರಿ ಬಿಲ್ಡಿಂಗ್” ನಲ್ಲಿ ಬಾಡಿಗೆ ರೂಮು ಮಾಡಿಕೊಂಡಿದ್ದ. ಇತರ ಬ್ರಾಹ್ಮಣ ಹುಡುಗರು ಸಪ್ತಾಪುರ ಇತ್ಯಾದಿ ಕಡೆಗಳಲ್ಲಿ ರೂಮು ಪಡೆದಿದ್ದರು. ಒಮ್ಮೆಯಂತೂ ಅವರಲ್ಲಿ ಯಾರೋ ತನ್ನ ಕುರಿತು ಸಲ್ಲದ ಮಾತನಾಡಿದರೆಂದು ಕೋಪಗೊಂಡ ಕೃಷ್ಣಮೂರ್ತಿ ಹೆಗಡೆ ರಾತ್ರಿ ವೇಳೆ ಅವರ ರೂಮಿಗೆ ಹೋಗಿ ರಂಪ ಮಾಡಿದ ಸಂಗತಿ ಮರುದಿನ ಕನ್ನಡ ವಿಭಾಗದಲ್ಲಿಯೇ ಚರ್ಚೆಯ ಸಂಗತಿಯಾಗಿತ್ತು!
ಯಾರ ಬದುಕೂ ಮತ್ತೊಬ್ಬರದರಂತೆ ಇರಲು ಸಾಧ್ಯವಿಲ್ಲ. ನಾವು ಅವರಂತಾಗಬೇಕು, ಇವರಂತಿರಬೇಕೆಂದು ಒದ್ದಾಡುವುದು ಏಕೆ? ನಮಗೆ ದೊರೆತ ಬದುಕನ್ನು ಚೆಂದ ಮಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇರುತ್ತದೆ.