Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಅಂಬೇಡ್ಕರ್ ಕೆಂಪಗೆ ಕಣ್ಣು ಬಿಟ್ಟಿದ್ದಾರೆ ! ಬಿದಲೋಟಿ ರಂಗನಾಥ್ ನಮ್ಮ ನಾಡಿಮಿಡಿತದಲ್ಲಿರುವ ಅಂಬೇಡ್ಕರ್ ಕೆಂಪಗೆ ಕಣ್ಣು ಬಿಟ್ಟಿದ್ದಾರೆ ಅವರೇ ಜನ್ಮವಿತ್ತ ಸಂವಿಧಾನದ ಕೂಸು ಅವರದಲ್ಲವೆಂದವರ ವಿರುದ್ಧ. ಅಲ್ಪತಿಳಿದವರ ಕುತಂತ್ರ ಬೆಳೆಯುವ ಮಕ್ಕಳ ಮನಸುಗಳ ನೆಲದ ಮೇಲೆ ವಿಷ ಬೀಜ ಕುದಿಯುವ ರಕ್ತದಲಿ ಅಂಬೇಡ್ಕರ್ ಕಣ್ಣೀರು.! ಸುಡುತ್ತದೆ ಕೋಮುವಾದಿಗಳ ಲೇಖನಿಯನ್ನು ಹೊಲಸು ಮನಸನ್ನು ನೀವೆ ತೋಡುವ ಖೆಡ್ಡಕ್ಕೆ ನೀವೆ ಮುಗ್ಗರಿಸುವಿರಿ ಭೀಮನು ನಡೆದ ನೆಲ ಬೆವರುತ್ತಿದೆ ಅಪಮಾನ ಅವಮಾನದ ಕರುಳು ಸುಡುತ್ತ ಮನದಲಿ ಕುಂತ ಶಾಂತಿಯ ಪಾರಿವಾಳಕ್ಕೆ ರಕ್ತಪಾತದ […]

ಕಾವ್ಯಯಾನ

ಪಯಣ ಶಂಭುಗೌಡ.ಆರ್.ಗಂಟೆಪ್ಪಗೌಡ್ರ) ಬೆವರ ಬಸಿಯಬಹುದೇ ಹೇಳು ನೀನು ಶ್ರಮದ ಕವಾಟ ತಟ್ಟದೇ “ಬೆಳಕು” ಕತ್ತಲ ಸಮಾದಿಯ ಮೇಲೊಬ್ಬ ಗೊತ್ತಿಲ್ಲದೇ ಇಟ್ಟು ಹೋದ ಮೊಗ್ಗಲ್ಲದ ಹೂ “ಪ್ರೀತಿ” ಮುಚ್ಚಿದ ಕಣ್ಣೊಡಲೊಳಗಿನ ದಿವ್ಯ ಚೇತನ ಬೆಳಕು ಮತ್ತೆ ಪ್ರೀತಿ ಸಂಗತಿ ಎರಡಾದರೂ ಬೆಳಗುವ ತತ್ವವೊಂದೇ, ಬದುಕೊಂದು ಎರಡು ಬಾಗಿಲು ತೆರೆದರೊಂದು ಮುಚ್ಚುವುದು ಮತ್ತೊಂದು ತೆಗೆದು ಮುಚ್ಚುವ ಮಧ್ಯೆ ತನ್ನ ತನವ ಬಚ್ಚಿಟ್ಟು ಪರರ ಮೆಚ್ಚಿಸುವ ಬಣ್ಣದಾಟವೇನು ಬದುಕು ಹೇಳು ನೀನು ; ಕಾಣದವನ ಸೂತ್ರಗಳ ಬೀಜಾಕ್ಷರಗಳು ನಾವು ಒಬ್ಬರನ್ನೊಬ್ಬರು ಕೂಡಲೂ […]

ಕಾವ್ಯಯಾನ

ಬಿಕರಿ ಡಾ.ಗೋವಿಂದ ಹೆಗಡೆ ಇಲ್ಲಿ ಪ್ರೀತಿ ಸಿಗುತ್ತದೆ’ ಬೋರ್ಡು ಹಾಕಿ ಕುಳಿತಿದ್ದೇನೆ ಯಾರೊಬ್ಬರೂ ಸುಳಿಯುತ್ತಿಲ್ಲ.. ಅದೇನು, ಕೋವಿಯಂಗಡಿ ಮುಂದೆ ಅಷ್ಟೊಂದು ಸರತಿಯ ಸಾಲು!

ಕಾವ್ಯಯಾನ

ಸುತ್ತ ಸುಳಿವ ಗಾಳಿಯಲ್ಲೇ ಪುಳಕ
ಗಂಧಕ್ಕಾಗಿ ಕಾದ ಮೂಗು
ಬಂಡುಣಲು ದುಂಬಿ
ಜೇನ್ನೊಣಗಳ ಪೈಪೋಟಿ
ಎರಗಿ ದಳದಳ ಕಿತ್ತು
ಹೊಸಕಲು ತಯಾರಾಗುವ ಕೈಗಳೂ

ಕಾವ್ಯಯಾನ

ಮಗಳು ಲಕ್ಷ್ಮಿಕಾಂತ್ ಮಿರಜಕರ ಮಗಳು ಹುಟ್ಟಿದ್ದಾಳೆ ತಂದಿದ್ದಾಳೆ ಜೊತೆಯಲ್ಲಿಯೇ ಹೆಡೆಮುರುಗಿ ಕಟ್ಟಿ ವಸಂತನನ್ನು ಮನೆಯಲ್ಲೀಗ ನಿತ್ಯ ದೀಪಾವಳಿ ಮನ ತುಂಬಾ ಬೆಳದಿಂಗಳ ಓಕುಳಿ ಮಗಳು ಮುಗುಳ್ನಗುತ್ತಿದ್ದಾಳೆ ಮಾಯವಾಗುತ್ತಿವೆ ಜಗದ ಜಂಜಡಗಳು ಒಂದೇ ಗುಕ್ಕಿಗೆ ಕರಗಿ ಅವಳ ನಿಷ್ಕಲ್ಮಶ ನಗುವಿನ ಮೋಡಿಗೆ ಬಂದು ಬೀಳುತ್ತಿವೆ ಗಗನದ ನಕ್ಷತ್ರಗಳೆಲ್ಲಾ ಅವಳ ಸುಕೋಮಲ ಮೃದು ಪಾದದ ಅಡಿಯಲ್ಲಿ ಮಗಳು ಅಂಬೆಗಾಲಿಡುತ್ತಿದ್ದಾಳೆ ಅವಳ ಎಳೆದೇಹದ ಸ್ಪರ್ಷ ಸಂಚಾರವಾಗುತ್ತಲೇ ಅರ್ಥ ಕಳೆದುಕೊಳ್ಳುತ್ತಿವೆ ದೊಡ್ಡವರ ಸಿನಿಕತನದ ಮಾತುಗಳು ಮಗಳು ಮಾತನಾಡುತ್ತಿದ್ದಾಳೆ ಕಪಟವರಿಯದ ಮಗಳ ತೊದಲುಮಾತುಗಳಿಗಿಂತ ಶ್ರೇಷ್ಟವೇನಲ್ಲ […]

ಕಾವ್ಯಯಾನ

ಇರಬಹುದೆ? ಪ್ರಮೀಳಾ ಎಸ್.ಪಿ. ನಿತ್ಯ ನಿರಂತರ ನೆರಳು ನೀಡುವ ಎಲೆ ಯುದುರದ ಮರವಾದರೂ ಇರಲಹುದೇ! ಮುಂಗಾರೂ ಮೂರೇ ದಿನ ಮಲ್ಲಿಗೆಯ ಪರಿಮಳವೂ ಸಪ್ತದಿನಗಳೇ! ಚಂದಿರನು ಬೆಳದಿಂಗಳ ತಿಂಗಳಿಡೀ ಹೊಳಪಾಗಿ ಹರವಲಹುದೇ! ತುಂಬೆಯ ರಸ ಸವಿದ ದುಂಬಿಯೊಂದು ಮತ್ತದರತ್ತ ಇರಲುಬಹುದೇ! ಅದರದರ ಕಾಲಕ್ಕೆ ಭಾವ ಬಕುತಿಯ ತಾಳಕ್ಕೆ ಸಿಕ್ಕಷ್ಟು ದಕ್ಕಿಸುವುದು ನೇಮವಲ್ಲವೇ! ಇಷ್ಟಾದರೂ ಹುಡುಕುತ್ತಲೇ ಇರುವೆ ನಿತ್ಯವೂ ಹಸಿರಾದ ಪ್ರೀತಿಯನು ನಾನು ಮೂರ್ಖಳಾದೆನೆ ಗೆಳೆಯ!

ಕಾವ್ಯಯಾನ

ಖಾಲಿ ದೀಪ ಮತ್ತು ಕತ್ತಲು ಬಿದಲೋಟಿ ರಂಗನಾಥ್ ಕಟ್ಟಿದ ಮಣ್ಣಗೋಡೆಯು ತಪ ತಪನೆ ಬೀಳುತ್ತಿದೆ ನಿದ್ದೆಯಿಲ್ಲದ ರಾತ್ರಿಗಳ ಕನಸು ಆ ಮನೆ  ಪ್ರತಿ ಇಟ್ಟಿಗೆಯ ಮೇಲೂ  ನಿನ್ನ ಶ್ರಮದ ಬೆವರ ವಾಸನೆ ನೀನು ಮಲಗೆದ್ದ ಜಾಗದ ನಿಟ್ಟುಸಿರು ಕಣ್ಣೀರಾಕುತ್ತಿದೆ ನೀನೆ ನೆಟ್ಟ ನಂಬಿಕೆಯ ಗಿಡದ ಬುಡಕ್ಕೆ ಪಾದರಸ ಸುರಿದ ಅವಳು  ಇವತ್ತು ಬೀದಿ ನಾಯಿಯ ಬಾಲ ಅವಮಾನದ ಗಾಯ ನಂಜಾಗಿ ನಸಿರಾಡಿ ಬದುಕುವ ಭರವಸೆಯು ಕುಂದಿ ನೆಲದ ಮೇಲಿಟ್ಟ ಅಷ್ಟೂ ಹೆಜ್ಜೆಗಳು ಕೆಂಡಗಳಾಗಿ ಧಗ ಧಗಿಸಿ ಉರಿದು […]

ಕಾವ್ಯಯಾನ

ಗುಳಿಗೆ ಮಾರುವ ಹುಡುಗ ಅರುಣ್ ಕೊಪ್ಪ ಇವನು ಬ್ಯಾಗ್ ಹೊತ್ತು ಬೆವರು ಬಿತ್ತಿ ಜಿಪ್ಪು ಸರಿಸುತ್ತಾ ಸ್ಯಾಂಪಲ್ ಹಂಚುವ ಡಾಕ್ಟರ್ ಛೆಂಬರ್ ಲಿ ದಿನವೂ ಜ್ಞಾನಾರ್ಜನೆಯಂತೆ! ಸರತಿ ಸಾಲಿನಲ್ಲಿ ಮಾತು ಬರದವ ಹೊಡೆಯಲು ಹೋಗುತ್ತಲೇ… ಕಾಲು ಕಿತ್ತು ಬೇರೆ ವೈದ್ಯರ ಭೇಟಿಗೆ ಗೀಳಿಡುತ್ತಾನೆ ಇವ ಗುಳಿಗೆ ಮಾರುವ ಹುಡುಗನಂತೆ ಒಳ ಸೇರಿಸಿದ ಅಂಗಿ, ಕಪ್ಪು ಸೊಂಟದ ಪಟ್ಟಿ ಶೂ ಕೂಡ ಹೊಳೆವ ಹಾಗೇ ರೋಗಿಗಳು ಮತ್ತಷ್ಟು ಹಿಡಿ ಶಾಪ ಹಾಕುವ ಉತ್ತೇಜನ ನೀಡುವ ಹಾಗೇ ಅವನ ಡ್ರೆಸ್ […]

ಕಾವ್ಯಯಾನ

ಜೀವಾತ್ಮ ಕೊಟ್ರೇಶ್ ಅರಸೀಕೆರೆ ಯಾವುದೋ ಹಕ್ಕಿ ಹಾಕಿರುವ ಈ ಹಿಕ್ಕೆ ಈಗ ಸಸಿಯಾಗಿದೆ! ಉದರಾಂಬರದ ಕಾರಣ ನುಂಗಿ,ನೀರು ಕುಡಿದುದೆಲ್ಲಾ ಏನೆಲ್ಲಾ ಸಕಾರಣಗಳಿಗೆ ಕಾರಣ!! ಜಗಕ್ಕೆ ಬಿದ್ದ ಕಿರಣ,ಮೇಲಿಂದ ಬಿದ್ದ ನೀರ ಬಿಂದು,ಸುಯ್ಯನೇ ಬೀಸುವ ಗಾಳಿ…… ಯಾವ ಯಾವುದಕ್ಕೆ ಸಂಬಂಧ!! ಅಲ್ಲೊಂದು ಜೋಡಿ ಹಕ್ಕಿ, ಇಲ್ಲೊಂದು ಮಿಲನ, ನಳ ನಳಿಸುತ್ತಿರುವ ಹೂ… ಒಂಟಿಯಾಗಿ ಯಾವುದೋ ಶಿಖರ ತೇಲಿ ಹೋಗುತ್ತಿರುವ ಮೋಡಗಳು ಯಾವ ದಂಡಯಾತ್ರೆಗೆ……. ಜೀವ ಇರಲೇಬೇಕಿಲ್ಲ ಚಲನೆಗೆ ಸೃಷ್ಟಿಯ ಸಾರ ಯಾರು ಹೀರಿದ್ದಾರೆ? ಯಾರೋ ಮೇಲೋ ಯಾರ ವಿಜಯ? […]

Back To Top