ಕಾವ್ಯಯಾನ
ಕರಿನೆರಳು ಪ್ಯಾರಿಸುತ ಕರಿನೆರಳು ಕರಿಯ ನೆರಳು ಕಾಡುತಿತ್ತು ರಾತ್ರಿ ಹಗಲಿನಲ್ಲಿ ಹಗಲಿನಲ್ಲಿ ಸುಡು ನೆಲದ ಮೇಲೆ ರಾತ್ರಿಯಲ್ಲಿ ಕಪ್ಪು ನೆಲದಮೇಲೆ ಹೆಜ್ಜೆಗೊಂದು ಹಜ್ಜೆ ಹಾಕಿ ಅಷ್ಟು ಬೈದರೂ ಲಜ್ಜೆ ಹೊಸಕಿ ಇಣುಕುತಿತ್ತು,ಕೆಣಕುತಿತ್ತು ಬೆನ್ನ ಹಿಂದೆ ದೂಡಿದಷ್ಟು ಕಾಡುತ್ತಿತ್ತು ,ಬಾಗಿದಷ್ಟು ಬಳಕುತಿತ್ತು ಎತ್ತ ಹೋದರು ಭೂತದಂತೆ..! ದೇಗುಲಕೂ, ಆಶ್ರಮಕೂ ಬರುತಲಿತ್ತು ಕೇಳುತ್ತಿತ್ತು ಹೇಳುತ್ತಿತ್ತು ದೇವರೆದರು ನಾನು ಏಕೆ ಇವರಿಗೆ ಅಂಟು…? ನನಗೂ ಇವರಿಗೂ ಯಾವ ನಂಟು…? ಜೀವ ಇರುವ ನೀನು ಭಾವ ಮೆರೆವ ನಾನು ಜೀವಕೊಂದು ಜೀವವಿರಲು ನನಗೂ […]
ಕಾವ್ಯಯಾನ
ಬಂದು ಹೋಗು ಡಾ.ಗೋವಿಂದ ಹೆಗಡೆ ಬಾ ಶಂಭು, ಬಾ ಕುಳಿತುಕೋ ಕ್ಷಣ ಸಾವರಿಸಿಕೋ ಹುಷಾರು! ನಿನ್ನ ಆ ಹಳೆಯ ಹುಲಿಯದೋ ಆನೆಯದೋ ಚರ್ಮ ಹರಿದುಹೋದೀತು! ಹೊಸದು ಸಿಗುವುದು ಸುಲಭವಲ್ಲ ಮಾರಾಯ! ನಮ್ಮ ಮಂಗಮಾಯ ಕಲೆ ನಿನಗೂ ತಿಳಿಯದೇನೋ ಮತ್ತೆ ಅರಣ್ಯ ಇಲಾಖೆಯವರ ಕೈಯಲ್ಲಿ ಸಿಕ್ಕೆಯೋ ನಿನ್ನ ಕತೆ -ಅಷ್ಟೇ! ಆ ಕೊರಳ ಹಾವು ಆ ಜಟೆ ಅದಕ್ಕೊಂದು ಚಂದ್ರ ಸಾಲದ್ದಕ್ಕೆ ಗೌರಿ! ಕೈಯ ಭಿಕ್ಷಾಪಾತ್ರೆ ತ್ರಿಶೂಲ ಕಪಾಲ ಮಾಲೆ ಯಾಕಯ್ಯ ನಿನಗೆ ಈ ಯುಗದಲ್ಲೂ ಅದೆಲ್ಲ?! ನರಮನುಷ್ಯರಂತೆ […]
ಕಾವ್ಯಯಾನ
ನಿರೀಕ್ಷೆ ಅಪೇಕ್ಷೆ ರೇಖಾ ವಿ.ಕಂಪ್ಲಿ ಗೇಣಗಲ ಗಭ೯ದಲ್ಲಿ ಅದೆಷ್ಟು ಸುರಕ್ಷಿತ… ಅಮ್ಮ ನಿನ್ನಿಂದ ಬೇಪ೯ಟ್ಟು ನಾನೆಷ್ಟು ಅರಕ್ಷಿತ…. ಬರುತಲಿವೇ ಕಷ್ಟಗಳು ಅನಿರೀಕ್ಷಿತ… ಆದರೂ ಕಾದಿರುವೆ ಒಳಿತನು ನಿರೀಕ್ಷಸುತ…. ಯಾರಿಗೂ ಆಗಲು ಬಯಸುವುದಿಲ್ಲ ಆಕಷಿ೯ತ…. ಆದರೂ ಏಕೆ ನಾನು ಎಲ್ಲರಿಂದಲೂ ಅಲಕ್ಷಿತ…. ದೈವವು ನಿಂತಿದೆ ನನ್ನ ಸದಾ ಪರೀಕ್ಷಿಸುತ ಆದರೂ ಅಮ್ಮ ಸದಾ ನಿನ್ನ ಪ್ರೇಮ ಅಪೇಕ್ಷಿಸುತ.. *******
ಕಾವ್ಯಯಾನ
ಕೊಡುವುದಾದರೂ ಯಾರಿಗೆ? ವಿಜಯಶ್ರೀ ಹಾಲಾಡಿ ಹೌದು ಈ ಪ್ರೀತಿಯನ್ನು ಮೊಗೆಮೊಗೆದು ಕೊಡುವುದಾದರೂ ಯಾರಿಗೆ ? ನೇರಳೆಮರಕ್ಕೆ ಅಳಿಲಿಗೆ ಬೆಚ್ಚನೆ ಗೂಡಿನ ಹಕ್ಕಿಗೆ ? ಹೆಣ್ತನದ ಪರಿಧಿಗೆ ಎಂದೂ ದಕ್ಕದ ಮುಖ –ಮುಖವಾಡಗಳು … ರಾತ್ರಿ -ಹಗಲುಗಳನ್ನು ಗೆಜ್ಜೆಕಾಲಿನಲ್ಲಿ ನೋಯಿಸಲೆ … ಯಾತನೆಯನ್ನು ನುಂಗುತ್ತಿರುವೆ ಸಂಜೆಯ ಏಕಾಂತಗಳಲ್ಲಿ ಹೆಪ್ಪುಗಟ್ಟಿದ ಇರುಳುಗಳಲ್ಲಿ .. ಬೊಗಸೆಯೊಡ್ಡಿದ್ದೇನೆ ಮಂಡಿಯೂರಿದ್ದೇನೆ ಹಟಮಾರಿ ಕಡಲಾಗಿದ್ದೇನೆ.. ತರ್ಕಕ್ಕೆ ನಿಲುಕದ ಗಳಿಗೆ -ಗಳಲ್ಲಿ ಒಂಟಿಹೂವಂತೆ ನಿಂತುಬಿಟ್ಟಿದ್ದೇನೆ .. ಲೆಕ್ಕವಿಟ್ಟಿಲ್ಲ ಕೋಗಿಲೆ ಹಾಡಿದ ಹಾಡುಗಳನ್ನು… ಉದುರಿಬಿದ್ದ ಗರಿಗಳನ್ನು ಮತ್ತೆ ಹುಟ್ಟಿಸಿಕೊಳ್ಳಲು […]
ಕಾವ್ಯಯಾನ
ತುಮುಲ ಬಿ.ಎಸ್.ಶ್ರೀನಿವಾಸ್ ಬಿಟ್ಟು ಬಿಡಬೇಕು ಬಗ್ಗಡದ ನೀರನ್ನು ತನ್ನಷ್ಟಕ್ಕೆ ತಾನೇ ತಿಳಿಯಾಗಿ ಪ್ರತಿಬಿಂಬ ತೋರಿಸುವವರೆಗೂ ಹರಿಯಬಿಡಬೇಕು ಯೋಚನೆಗಳ ಕಡಿವಾಣವಿಲ್ಲದ ಕುದುರೆಯನ್ನು ಓಡಲಾಗದೆ ತಾನೇ ನಿಲ್ಲುವವರೆಗೂ ಸುರಿಸಿಬಿಡಬೇಕು ಕಂಬನಿ ಮನದ ಬೇಗುದಿಯೆಲ್ಲ ಕರಗಿ ಶಾಂತಿ ನೆಲೆಸುವವರೆಗೂ ನಡೆದು ಹೋಗಲಿ ಪ್ರಳಯ ಪರಶಿವನ ತಾಂಡವ ನೃತ್ಯ ಭ್ರಮೆಗಳೆಲ್ಲ ಭಸ್ಮವಾಗುವವರೆಗೂ ಕರಗಿದಾ ಕತ್ತಲಲಿ ಬಸವಳಿದ ಮೈಮನಕೆ ಗಾಢನಿದ್ರೆಯು ಆವರಿಸಬೇಕು ಮುಂಜಾನೆ ಹಕ್ಕಿ ಚಿಲಿಪಿಲಿ ಅರುಣೋದಯ ರಾಗದಲಿ ಹೊಸಬೆಳಕು ಮೂಡಬೇಕು ********
ಕಾವ್ಯಯಾನ
ಗಝಲ್ ಡಾ.ಗೋವಿಂದ ಹೆಗಡೆ ಅವಳ ತನ್ಮಯತೆಗೆ ಸ್ವಲ್ಪವೂ ಭಂಗ ಬಾರದಿರಲಿ ಕಡಲು ಅಷ್ಟೊಂದು ಜೋರಾಗಿ ಮೊರೆಯದಿರಲಿ ಚರಿತ್ರೆಯಲಿ ಕಾಲು ಹೂತು ಕೂತಿದ್ದಾಳೆ ಅವಳು ವಿವಶತೆಯಲ್ಲೂ ಮುಂಗುರುಳು ನಲುಗದೆ ಇರಲಿ ಮಧುಶಾಲೆಯೇಕೆ ಹೀಗೆ ಪಾಳು ಬಿದ್ದಿದೆ ಗೆಳೆಯ ಒಡಲ ತಣಿಸುವ ಮಧುಭಾಂಡ ಬರಿದಾಗದಿರಲಿ ಅದೆಂಥ ಕ್ಷುಬ್ಧತೆಯಲ್ಲಿ ದಾರಿ ಸವೆಸುವೆ ನೀನು ಸೈರಿಸಿ ಪಾಲಿಸುವ ಮಡಿಲು ಮುಕ್ಕಾಗದಿರಲಿ ಎದೆಗುದಿಗೇಕೆ ಬಿಡದೆ ತುಪ್ಪ ಸುರಿಯುವೆ ‘ಜಂಗಮ’ ತಡೆ,ಕಾಪಿಡುವ ರೆಪ್ಪೆ ನಡುವೆ ಬದುಕು ವಿಶ್ರಮಿಸಲಿ ********
ಕಾವ್ಯಯಾನ
ಬದುಕುವ ರೀತಿಗೆ! ಲೋಕೇಶ್ ಮನ್ವಿತ್ ಬದುಕುವ ರೀತಿಗೆ ಬುದ್ದನನ್ನಿರಿಸಿಕೊಂಡರೆ ಬುದ್ದಿಯಲ್ಲಿ ಅಂಗುಲಿಮಾಲ ಹೆಜ್ಜೆ ಇರಿಸುವವನೇನು? ನಿನ್ನ ಹಾದಿಯಲ್ಲಿ. ದಯೆಯಿರಲು ದೀನನಲ್ಲಿ ದಿನವೆಲ್ಲಾ ಸಂತಸವಷ್ಟೇ ಮನಸ್ಸಿಗೆ ಬೇಕಾದರೊಮ್ಮೆ ಅಂಗೈಯನ್ನೊಮ್ಮೆ ತಿರುಗಿಸಿವುದು ರೂಡಿಯಾಗಿಸಿಕೋ ಜಾತಿ ಮತಗಳ ಚೂರಾಗಿಸಿ ಎದೆಯ ಗುಡಿಯಲ್ಲೊಮ್ಮೆ ದೀಪವಿರಿಸು ಬೆಳಕು ಚಿಕ್ಕದಿರಬಹುದು ಜೀವವಿರುವವರೆಗೂ ನೀನು ಕಾಣುವೆ ಪ್ರತಿ ಜೀವಕ್ಕೂ ಬೆಳಕಾಗಿ ಬದುಕುವುದು ಸುಲಭ ಬೇಲಿಗಿಡಗಳು ತಾಕಿದವೆಂದು, ರಕ್ತ ಹರಿಯಿತೆಂದು, ನಿಲ್ಲದೆ ಅಲ್ಲಿ, ನೋವನ್ನೇ ನೆಪವಾಗಿಸಿಕೊಂಡು ಸಾಗಿಬಿಡು ತಡೆದು. ಮುಂದೆ ಹೂಗಳು ಅರಳಿ ನಿಂತಿವೆ ಸ್ವಾಗತವ ಕೋರಿ . […]
ಕಾವ್ಯಯಾನ
ವಾಸ್ತವ ದೀಪಿಕಾ ಬಾಬು ವಾಸ್ತವ ಜೀವ ಇರುವ ಅವನನ್ನು ನಾನು ಪ್ರೀತಿಸಿದೆ, ಪ್ರೀತಿಯ ಮುಖವಾಡ ಧರಿಸಿದ ನನ್ನ ನಂಬಿಕಯೇ ಮೋಸವಾಯಿತು..! ಚಿಕ್ಕ ಪುಟ್ಟ ಹಕ್ಕಿ ಪಕ್ಷಿಗಳ ತಂದು ನಾನು ಪ್ರೀತಿಸಿದೆ, ನಿನ್ನ ಸ್ವಾರ್ಥಕ್ಕೆ,ನನ್ನ ಬಂಧಿಸಿದೆಯಾ ಎಂದು ಹಾರಿ ಹೋಯಿತು..! ಬಾಲ್ಯದಲ್ಲೇ ಸಾವಿರಾರು ಕನಸನ್ನು ನಾನು ಪ್ರೀತಿಸಿದೆ, ನನಸಾಗದ ಬದುಕಿನ ನೈಜತೆಯ ಅರಿತು ಬಾಲ್ಯದಲ್ಲಿಯೇ ನುಚ್ಚು ನೂರಾಯಿತು…!! ಗುರು ಹಿರಿಯರನ್ನು, ಹೆತ್ತವರನ್ನು ನಾನು ಪ್ರೀತಿಸಿದೆ, ನೀನು ಹೆಣ್ಣು ಇಷ್ಟೇ ನಿನ್ನ ಬದುಕೆಂದು ಮದುವೆಯ ಬಂಧನದಲ್ಲಿಟ್ಟರು..!! ಗಂಡನನ್ನು, ಮಕ್ಕಳನ್ನು, ಮನೆಯನ್ನು […]
ಕಾವ್ಯಯಾನ
ಬಾಲ್ಯ ವಿವಾಹ. ಜ್ಯೋತಿ ಡಿ.ಬೊಮ್ಮಾ ಬಾಲ್ಯ ವಿವಾಹ . ಮರುಗಲಾಗದೆ ಮತ್ತೆನು ಮಾಡಲಾಗದು ಮಗು ನಿನ್ನ ವಿಧಿ ಬರಹಕ್ಕೆ ಹೆತ್ತವರ ಆಶಾಢಭೂತಿತನದಿಂದ ಬಾಲ್ಯದ ಬಾಳಿಗೆ ಮದುವೆ ಬಂಧನ ವಿಧಿಸಿದ್ದಕ್ಕೆ… ಮದುವೆ ಮಾಡಿ ಜವಾಬ್ದಾರಿಯಿಂದ ಕಳಚಿಕೊಳ್ಳುವದೊಂದೆ ಅವರ ಪರಮೋದ್ದೇಶ. ಮಗಳ ಚಿಕ್ಕ ವಯಸ್ಸು ಲೆಕ್ಕಿಸದೆ ಧಾರೆ ಎರೆದು ಕೈ ತೊಳೆದುಕೊಳ್ಳುವ ಧಾವಂತ.. ಆಡುತ್ತ ಓದುತ್ತ ನಲಿಯಬೇಕಾದ ಮಗು ಹೊತ್ತುಕೊಂಡಿತು ಸಂಸಾರದ ನೋಗ ಸರೀಕರೆಲ್ಲ ನಕ್ಕು ನಲಿವಾಗ ಆಕೆ ಧರಿಸಿದಳಾಗಲೆ ಗ್ರಹಿಣಿಯ ಗಂಭಿರ ಮೊಗ.. ವಯಸ್ಸಿಗೆ ಮೀರಿದ ಜವಾಬ್ದಾರಿಯಿಂದ ನಲುಗಿತು […]
ಕಾವ್ಯಯಾನ
ಸಗ್ಗದ ಬಾಗಿಲು ನಿರ್ಮಲ ಆರ್. ವಸಂತಕೆ ಹೊಸ ಚಿಗುರು,ಹೊಸ ಯೌವ್ವನ ನಿಸರ್ಗ ಸೌಂದರ್ಯಕೆ ಮನ ತಾಳಿತು ಮೌನ ನಭದಲಿ ನಗುತಿಹನು ರವಿ ಹಸಿರಿನಿಂದ ಕಂಗೊಳಿಸುತಿಹುದು ಭುವಿ ಅಲ್ಲಲ್ಲಿ ಹಕ್ಕಿಗಳ ಇಂಚರ ಸೃಷ್ಟಿಯೊಂದು ಬನದೇವಿಯ ಭವ್ಯ ಮಂದಿರ ಇರುಳಲಿ ಉಲ್ಲಸಿತನಾದ ಚಂದಿರ ತಾಯ ಕಂಕುಳಲಿರುವ ಕಂದನಿಗವನೇ ಸುಂದರ ಕಪ್ಪು ಮೋಡವ ಹೊತ್ತುತರುವ ಮಳೆರಾಯ ದುಯ್ ಎನ್ನುತ ತೊಳೆವ ಇಳೆಯ ಮೇಲಿನ ಕೊಳೆಯ ಮಳೆಯ ಜಿನುಗಿಗೆ ನವಿಲ ನರ್ತನ ಕಂಡೆಯ ಮನ ಅಚ್ಚರಿಗೊಂಡಿತು ಕಂಡು ಬನಸಿರಿಯ ಪ್ರಕೃತಿ ಸೌಂದರ್ಯ ನೋಡುತಿರೆ […]