ಕರಿನೆರಳು
ಪ್ಯಾರಿಸುತ
ಕರಿನೆರಳು
ಕರಿಯ ನೆರಳು ಕಾಡುತಿತ್ತು ರಾತ್ರಿ ಹಗಲಿನಲ್ಲಿ
ಹಗಲಿನಲ್ಲಿ ಸುಡು ನೆಲದ ಮೇಲೆ
ರಾತ್ರಿಯಲ್ಲಿ ಕಪ್ಪು ನೆಲದಮೇಲೆ
ಹೆಜ್ಜೆಗೊಂದು ಹಜ್ಜೆ ಹಾಕಿ
ಅಷ್ಟು ಬೈದರೂ ಲಜ್ಜೆ ಹೊಸಕಿ
ಇಣುಕುತಿತ್ತು,ಕೆಣಕುತಿತ್ತು ಬೆನ್ನ ಹಿಂದೆ
ದೂಡಿದಷ್ಟು ಕಾಡುತ್ತಿತ್ತು ,ಬಾಗಿದಷ್ಟು ಬಳಕುತಿತ್ತು
ಎತ್ತ ಹೋದರು ಭೂತದಂತೆ..!
ದೇಗುಲಕೂ, ಆಶ್ರಮಕೂ ಬರುತಲಿತ್ತು
ಕೇಳುತ್ತಿತ್ತು ಹೇಳುತ್ತಿತ್ತು ದೇವರೆದರು
ನಾನು ಏಕೆ ಇವರಿಗೆ ಅಂಟು…?
ನನಗೂ ಇವರಿಗೂ ಯಾವ ನಂಟು…?
ಜೀವ ಇರುವ ನೀನು
ಭಾವ ಮೆರೆವ ನಾನು
ಜೀವಕೊಂದು ಜೀವವಿರಲು
ನನಗೂ ನಿನಗೂ ಯಾಕೆ ಈ ಮಾಯದ ಗಂಟು
ಊರುಕೇರಿ ಓಡುತ್ತಿತ್ತು,ನಿಲ್ಲುತ್ತಿತ್ತು
ಕೇಳುತ್ತಿತ್ತು ಹೇಳುತ್ತಿತ್ತು ಜನರೆದುರು
ಯಾರು ಇವನ ಗೆಳೆಯರು…?
ಯಾರು ಇವನ ಬೆನ್ನು ಬಿದ್ದವರು..?
ಯಾಕೆ ಇಲ್ಲ, ಇವನ ಸಲುಗೆ..?
ಯಾರು ಹಾಕಿದರು ನನ್ನ ಇವನ ಬೆನ್ನಿಗೆ
ಅದಕೂ ಸಾಕಾಯಿತು ಅನಿಸಿತು ನನ್ನ ಒಲುಮೆ
-*******