ಕಾವ್ಯಯಾನ

ತುಮುಲ

White Horse Running on Green Field

ಬಿ.ಎಸ್.ಶ್ರೀನಿವಾಸ್

ಬಿಟ್ಟು ಬಿಡಬೇಕು ಬಗ್ಗಡದ ನೀರನ್ನು

ತನ್ನಷ್ಟಕ್ಕೆ ತಾನೇ ತಿಳಿಯಾಗಿ

ಪ್ರತಿಬಿಂಬ ತೋರಿಸುವವರೆಗೂ

ಹರಿಯಬಿಡಬೇಕು  ಯೋಚನೆಗಳ

ಕಡಿವಾಣವಿಲ್ಲದ ಕುದುರೆಯನ್ನು

ಓಡಲಾಗದೆ ತಾನೇ ನಿಲ್ಲುವವರೆಗೂ

ಸುರಿಸಿಬಿಡಬೇಕು ಕಂಬನಿ

ಮನದ ಬೇಗುದಿಯೆಲ್ಲ ಕರಗಿ

ಶಾಂತಿ ನೆಲೆಸುವವರೆಗೂ

ನಡೆದು ಹೋಗಲಿ ಪ್ರಳಯ

ಪರಶಿವನ ತಾಂಡವ ನೃತ್ಯ

ಭ್ರಮೆಗಳೆಲ್ಲ ಭಸ್ಮವಾಗುವವರೆಗೂ

ಕರಗಿದಾ ಕತ್ತಲಲಿ

ಬಸವಳಿದ ಮೈಮನಕೆ

ಗಾಢನಿದ್ರೆಯು ಆವರಿಸಬೇಕು

ಮುಂಜಾನೆ ಹಕ್ಕಿ ಚಿಲಿಪಿಲಿ

ಅರುಣೋದಯ ರಾಗದಲಿ

ಹೊಸಬೆಳಕು ಮೂಡಬೇಕು

********

4 thoughts on “ಕಾವ್ಯಯಾನ

  1. ಧನ್ಯವಾದ ಮಧುಸೂದನ್ ಅವರೇ.
    ಧನ್ಯವಾದ ಸಂಗಾತಿ ಬಳಗ

  2. ಪದ್ಯ ಬದುಕಿನ ಪಾಠ ಕಲಿಸುವುದಲ್ಲದೆ ಚೆನ್ನಾಗಿ ಮೂಡಿ ಬಂದಿದೆ

Leave a Reply

Back To Top