ಕಾವ್ಯಯಾನ

ನಿರೀಕ್ಷೆ ಅಪೇಕ್ಷೆ

Person Holding Baby's Hand

ರೇಖಾ ವಿ.ಕಂಪ್ಲಿ

ಗೇಣಗಲ ಗಭ೯ದಲ್ಲಿ ಅದೆಷ್ಟು ಸುರಕ್ಷಿತ…
ಅಮ್ಮ ನಿನ್ನಿಂದ ಬೇಪ೯ಟ್ಟು ನಾನೆಷ್ಟು ಅರಕ್ಷಿತ….
ಬರುತಲಿವೇ ಕಷ್ಟಗಳು ಅನಿರೀಕ್ಷಿತ…
ಆದರೂ ಕಾದಿರುವೆ ಒಳಿತನು ನಿರೀಕ್ಷಸುತ….

ಯಾರಿಗೂ ಆಗಲು ಬಯಸುವುದಿಲ್ಲ ಆಕಷಿ೯ತ….
ಆದರೂ ಏಕೆ ನಾನು ಎಲ್ಲರಿಂದಲೂ ಅಲಕ್ಷಿತ….
ದೈವವು ನಿಂತಿದೆ ನನ್ನ ಸದಾ ಪರೀಕ್ಷಿಸುತ
ಆದರೂ ಅಮ್ಮ ಸದಾ ನಿನ್ನ ಪ್ರೇಮ ಅಪೇಕ್ಷಿಸುತ..

*******

Leave a Reply

Back To Top