ಕಾವ್ಯಯಾನ

ಬದುಕುವ ರೀತಿಗೆ!

ಲೋಕೇಶ್ ಮನ್ವಿತ್

ಬದುಕುವ ರೀತಿಗೆ

ಬುದ್ದನನ್ನಿರಿಸಿಕೊಂಡರೆ
ಬುದ್ದಿಯಲ್ಲಿ
ಅಂಗುಲಿಮಾಲ
ಹೆಜ್ಜೆ ಇರಿಸುವವನೇನು?
ನಿನ್ನ ಹಾದಿಯಲ್ಲಿ.

ದಯೆಯಿರಲು ದೀನನಲ್ಲಿ
ದಿನವೆಲ್ಲಾ ಸಂತಸವಷ್ಟೇ
ಮನಸ್ಸಿಗೆ
ಬೇಕಾದರೊಮ್ಮೆ
ಅಂಗೈಯನ್ನೊಮ್ಮೆ
ತಿರುಗಿಸಿವುದು
ರೂಡಿಯಾಗಿಸಿಕೋ

ಜಾತಿ ಮತಗಳ
ಚೂರಾಗಿಸಿ
ಎದೆಯ ಗುಡಿಯಲ್ಲೊಮ್ಮೆ
ದೀಪವಿರಿಸು
ಬೆಳಕು ಚಿಕ್ಕದಿರಬಹುದು
ಜೀವವಿರುವವರೆಗೂ
ನೀನು ಕಾಣುವೆ
ಪ್ರತಿ ಜೀವಕ್ಕೂ ಬೆಳಕಾಗಿ

ಬದುಕುವುದು ಸುಲಭ
ಬೇಲಿಗಿಡಗಳು ತಾಕಿದವೆಂದು,
ರಕ್ತ ಹರಿಯಿತೆಂದು,
ನಿಲ್ಲದೆ ಅಲ್ಲಿ, ನೋವನ್ನೇ
ನೆಪವಾಗಿಸಿಕೊಂಡು
ಸಾಗಿಬಿಡು ತಡೆದು.
ಮುಂದೆ ಹೂಗಳು
ಅರಳಿ ನಿಂತಿವೆ ಸ್ವಾಗತವ ಕೋರಿ .

********

Leave a Reply

Back To Top