ವಾಸ್ತವ
ದೀಪಿಕಾ ಬಾಬು
ವಾಸ್ತವ
ಜೀವ ಇರುವ ಅವನನ್ನು
ನಾನು ಪ್ರೀತಿಸಿದೆ,
ಪ್ರೀತಿಯ ಮುಖವಾಡ ಧರಿಸಿದ
ನನ್ನ ನಂಬಿಕಯೇ ಮೋಸವಾಯಿತು..!
ಚಿಕ್ಕ ಪುಟ್ಟ ಹಕ್ಕಿ ಪಕ್ಷಿಗಳ ತಂದು
ನಾನು ಪ್ರೀತಿಸಿದೆ,
ನಿನ್ನ ಸ್ವಾರ್ಥಕ್ಕೆ,ನನ್ನ ಬಂಧಿಸಿದೆಯಾ
ಎಂದು ಹಾರಿ ಹೋಯಿತು..!
ಬಾಲ್ಯದಲ್ಲೇ ಸಾವಿರಾರು ಕನಸನ್ನು
ನಾನು ಪ್ರೀತಿಸಿದೆ,
ನನಸಾಗದ ಬದುಕಿನ ನೈಜತೆಯ ಅರಿತು
ಬಾಲ್ಯದಲ್ಲಿಯೇ ನುಚ್ಚು ನೂರಾಯಿತು…!!
ಗುರು ಹಿರಿಯರನ್ನು, ಹೆತ್ತವರನ್ನು
ನಾನು ಪ್ರೀತಿಸಿದೆ,
ನೀನು ಹೆಣ್ಣು ಇಷ್ಟೇ ನಿನ್ನ ಬದುಕೆಂದು
ಮದುವೆಯ ಬಂಧನದಲ್ಲಿಟ್ಟರು..!!
ಗಂಡನನ್ನು, ಮಕ್ಕಳನ್ನು, ಮನೆಯನ್ನು
ನಾನು ಪ್ರೀತಿಸಿದೆ,
ನಮ್ಮ ಸೇವೆಯೇ ನಿನ್ನ ಕರ್ತವ್ಯ ಎಂದೆಳಿ
ಸಂಸಾರದ ಜವಾಬ್ದಾರಿ ಹೊರಿಸಿದರು…!!
ನಾನು ಈಗ ಯಾರನ್ನು ಪ್ರೀತಿಸಲಿ,
ಆಸಕ್ತಳು ನಾನೀಗ,
ಹುಟ್ಟು ಸಾವಿನ ಮಧ್ಯದಲ್ಲಿ ಸಾಗುವ
ಈ ಜೀವನವನ್ನು,
ನಾನು ಪ್ರೀತಿಸಲೇಬೇಕು……
ಇದೇ ಹೆಣ್ಣಿನ ವಾಸ್ತವದ ಪ್ರತಿರೂಪ….!!
***********