Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

“ಭೀಮ” ರಾಮಾಂಜಿನಯ್ಯ ವಿ. ನನ್ನೆದೆಯ ಸಾಕ್ಷರ ಪ್ರೀತಿ ದಯೆಯ ಮರ ಹಕ್ಕಿ ಪಿಕ್ಕಿಗಳ ಆಸರೆಯ ಬಾಳ್ ಪಸರಿಸಿದೆ ಬಾನಗಲ ಕೇಳು. ಖಂಡ ಅಖಂಡ ಎದೆಗೂಡುಗಳ ನುಲಿಯುತ ಹರಿಯುತಿದೆ ನೆಲದಗಲ ಅರಿಯುತಿದೆ ಮನದಗಲ ಹೆಣ್ಮನಸ್ಸಿನ ಆ ಜೀವಜಲ “ಭೀಮ-ನನ್ನೆದೆಯ ಸಾಕ್ಷರ ಪ್ರೀತಿ ದಯೆಯ ಮರ”. ನಿನ್ನಡಿಯ ಕುಡಿಗಳು ನಿನ್ನರಿದ ಪಡೆಗಳು, ಸಾಲು ಸಾಲು ಈ ಜಗದ ಎಲ್ಲೆ ಎಲ್ಲೂ. ಗಡಿದಾಟಿದೆ ಮನವೊಕ್ಕಿದೆ ನೀ ಸುರಿಸಿದ ಪ್ರೀತಿ ಗುಂಡು! “ಭೀಮ-ನನ್ನೆದೆಯ ಸಾಕ್ಷರ ಪ್ರೀತಿಯ ಮರ”. ಬಿಳಿಯಕ್ಕಿ ಹಾರುತಿದೆ ಹಸಿರ ಹೆಳ್ಗೆಯ […]

ಕಾವ್ಯಯಾನ

ಅಂಬೇಡ್ಕರ್ ನೀ ಅಮರ ಎಚ್. ಶೌಕತ್ ಆಲಿ ಭಾರತದ ಸಂವಿಧಾನ ಶಿಲ್ಪಿ ಡಾ||ಭೀಮರಾವ್ ಅಂಬೇಡ್ಕರ್ ಮಹಾಮಾನವವಾದಿ ಬಾಬಾ ಸಾಹೇಬ್ ಅಂಬೇಡ್ಕರ್ ಅಪರಿಮಿತ ಜ್ಞಾನ ಭಾರತ ದೇಶದ ಮಹಾನ್ ಮೇಧಾವಿ ಭಾರತೀಯ ಬೌದ್ಧ ಮಹಾಸಭಾದ ಸಂಸ್ಥಾಪಕ ಅಂಬೇಡ್ಕರ್ ಸಮಾನತೆಗಾಗಿ ಶಿಕ್ಷಣಕ್ಕಾಗಿ ಸಂಘಟನೆಗಾಗಿ ನಿಂತ ಶಕ್ತಿ ಶೋಷಣೆಗೆ ಒಳಗಾಗಿ ವರ್ಗಗಳ ದೀನ-ದಲಿತರ ದೇವಮಾನವ ದೌರ್ಜನ್ಯ ದಬ್ಬಾಳಿಕೆ ಅವಮಾನಗಳ ವಿರುದ್ಧ ಸಿಡಿದೆದ್ದ ಭೂಪ ನವ ಸಮಾಜದೊಂದಿಗೆ ನವಭಾರತ ನಿರ್ಮಾತೃ ವಾದ ಅಂಬೇಡ್ಕರ್ ತಿರಸ್ಕರಿಸಲ್ಪಟ್ಟ ಬಹಿಷ್ಕರಿಸಲ್ಪಟ್ಟ ಜನರ ನೋವಿಗೆ ಸ್ಪಂದಿಸಿ ಸಮಾಜದಲ್ಲಿ ಕಳಂಕಿತರ […]

ಕಾವ್ಯಯಾನ

ಮೂಕ ನಾಯಕ ಬಸವರಾಜ ಕಾಸೆ ಎತ್ತ ನೋಡಿದರತ್ತ ಅಸಮಾನತೆ ಅಸಹಕಾರ ಶೋಷಣೆ ಅಸ್ಪೃಶ್ಯತೆಗಳ ಮೆಟ್ಟಿದವನೊಬ್ಬನು ನೇತಾರ ಪ್ರತಿ ಹೆಜ್ಜೆಗಳ ಗುರುತು ಎಷ್ಟೋ ಹೊಣೆಗಳ ಹೆಗಲು ಎಲ್ಲವೂ ಎಲ್ಲರಿಗಾಗಿ ಆದರೂ ನಾಳೆಗಳ ಹೊನಲು ಕುಡಿಯಲು ಕೊಡದ ತೊಟ್ಟು ನೀರು ಹುಟ್ಟು ಹಾಕಿದ ಛಲವು ಜೋರು ಲಗ್ಗೆ ಹಾಕದೆ ಬಿಡಲಿಲ್ಲ ನಿಷೇಧಿತ ಕೆರೆ ಕಟ್ಟೆಗಳಿಗೆ ಹಕ್ಕುಗಳ ಜಾಗೃತಿ ಮೊಳಗಿಸಿದರು ಮುಗಿಲಿಗೆ ಗುಡಿ ಗುಂಡಾರಗಳಿಗೆ ಪ್ರವೇಶಿಸಿ ಚಳುವಳಿ ಹುರಿದುಂಬಿಸಿ ತುಂಬಿದ ಆತ್ಮವಿಶ್ವಾಸವೇ ಬಳುವಳಿ ಶ್ರೇಣಿ ಪದ್ಧತಿಗಳ ಜಾತಿ ಸ್ತ್ರೀ ಧಮನಗಳ ನೀತಿ […]

ಕಾವ್ಯಯಾನ

ಅವತಾರ ಪುರುಷ ಸಂಮ್ಮೋದ ವಾಡಪ್ಪಿ ಕಡುಕಷ್ಟದಲಿ ಕುದ್ದು ನೊಂದು ಬೆಂದು ಹೀಯಾಳಿಸುವವರ ಮಧ್ಯೆ ಎದ್ದು ತಾ ನಿಂದು ಮೇಲೆದ್ದು, ಕುಕ್ಕುವ ಕಂಗಳ ನೇರದಿ ನೋಡಿ ಅಧ್ಯಯನ ದಾರಿಯಲಿ ಬರೆದ ಭಾರತದ ಮುನ್ನುಡಿ ಅರಿತರು ಅನೇಕ, ಅನೇಕರು ಮರೆಮಾಚಿದರು ಬಿಡದ ಹಠಯೋಗಿ ಸದಾ ತಪದಿ ಮಿಂದು ದಾರಿಗುಂಟ‌ ಮುಳ್ಳುಗಳು ಬದಿಗೊತ್ತುತ ನಡೆ ಭೀಮನ ಸಾಹಸ, ಸಂವೇದನೆ ದೇಶ ಏಳಿಗೆಯಡೆ ಅಸ್ಪೃಶ್ಯತೆಯ ನೂಕಿ ಮಹಾಸಮರವ ಸಾರಿ ದೀನರ ಬಂಧು ಮಾತೃಭೂಮಿಯ ಮೇಲೆತ್ತುವ ಗುರಿ ಸತತ ಚಲನೆ, ಹೊಟ್ಟೆ ಬಟ್ಟೆ ಕಟ್ಟಿ […]

ಕಾವ್ಯಯಾನ

ಅಂಬೇಡ್ಕರ್ ಮೂಗಪ್ಪ ಗಾಳೇರ ನಾವು ಹುಟ್ಟಿದಂತೆ ಆತನು ಹುಟ್ಟಿದ್ದ ಯಾಕೋ ಗೊತ್ತಿಲ್ಲ ನಮ್ಮಲ್ಲಿ ಇರದ ಬೆಳಕು ಆತನಲ್ಲಿತ್ತು ಬುದ್ಧನೋ, ಬಸವಣ್ಣನೋ ಯಾರ ತದ್ಭವವೋ ಗೊತ್ತಿಲ್ಲ ಅವರ ಮುಖ ಚರಿತ್ರೆ ಇತನಲ್ಲಿ ಅಡಗಿತ್ತು ಚಮ್ಮಾರನ ಕೈಯಲ್ಲಿ ಲೇಖನಿ ನರ್ತಿಸಿದಾಗ ಪ್ರಳಯವಾದಿತೆಂದು ಕಾದು ಕುಳಿತ ಕೆಲವರಿಗೆ ಭೂಮಿ ಕಂಪಿಸಿದಂತೆ ನಡುಕ ಹುಟ್ಟಿತು ಹೌದು ಆತ ಸೃಷ್ಟಿಸಿದ್ದು ಪ್ರಳಯವೆ ಯಂತಹ ಪ್ರಳಯ ಕಪ್ಪು ಮೋಡಗಳೆಲ್ಲ ಬಿಳಿಯ ಮೋಡಗಳೊಂದಿಗೆ ಮಿಲನ ನಡೆಸಿ ಭೂ ಗರ್ಭದೊಳಗೆ ಮಾನವೀಯ ಕೂಸುಗಳ ಜನನದ ಪ್ರಳಯ ಆ ಪ್ರಳಯಗಳಿಗಾ […]

ಕಾವ್ಯಯಾನ

ಅಂಬೇಡ್ಕರ್ ಜಯಂತಿಗೆ ರಾಮಾನುಜ ನೆನಪು ಡಾ.ನಾ.ಗೀತಾಚಾರ್ಯ ದಲಿತರನ್ನು ಬಲಿತರು ಹೆಗಲಲಿ ಹೊತ್ತು ದೇವಾಲಯದರ್ಶನ ಮಾಡಿಸುವ ಹೊತ್ತು ಎಂದು ಬರುವುದೊ ಎಂದು ಕಾಯುತಿಹೆ ನಾನಂತು. ಜಾತ್ಯತೀತ ಭಾರತದ ಸಮಾನತೆಯ ಈ ಹೊತ್ತು. ಇದು ಕನಸಲ್ಲ, ಹುಚ್ಚಲ್ಲ ,ನಡೆದಿದೆ ಸತ್ಯಕಥೆ. ತಿರುಪ್ಪಾಣರೆಂಬ ದಲಿತ ಆಳ್ವಾರರ ಜೀವನಗಾಥೆ. ಮುನಿಯೆ ವಾಹನನಾಗಿ ಗರ್ಭಗುಡಿಗೇ ಹೊತ್ತೊಯ್ದ ಕಥೆ.ಸಾವಿರವರ್ಷದ ಇತಿಹಾಸ ಮರುಕಳಿಸಬಾರದೇಕೆ. ಅಂಬೇಡ್ಕರ್ ಗಾಂಧಿ ಬಸವರಿಗೂ ಮೊದಲೆ. ರಾಮಾನುಜರಿತ್ತಿದ್ದರು ದಲಿತರಿಗೆ ಹೆಗಲೆ. ದಲಿತರ ಕಾಲ್ತೊಳೆದ ಕೆರೆನೀರ ಕುಡಿದಿದ್ದರಾಗಲೆ. ‘ತಿರುಕುಲ’ರೆಂದು ಕೂರಿಸಿದ್ದರು ದೇವರ ಬಗಲೆ. ಅಂಬೇಡ್ಕರರೆ ನೀವೇನೋ […]

ಕಾವ್ಯಯಾನ

ಒಳದನಿ                                                    ಶಹನಾಜ್ ಬಿ. ಸಿರಿವ್ಯಾಲ ಒಳದನಿ ಅಂದು ನೀನು ನೆಟ್ಟಿದ್ದ ಜಾತ್ಯತೀತತೆಯ ವೃಕ್ಷ ಇಂದು ರಾಜಕೀಯ ವಿಷ ಗಾಳಿಗೆ ಸಿಲುಕಿ ನಿತ್ಯವೂ ನರಳುತ್ತಿದೆ. ನೀಲಿ , ಕೆಂಪು ಕ್ರಾಂತಿಗಳ ನಡುವೆಯೂ ದಮನಿತರ ಕಣ್ಣುಗಳಲ್ಲಿ ನೋವು ಮಡುಗಟ್ಟಿದೆ. ಅದ್ಯಾಕೋ ನಿನ್ನ  ಬುದ್ಧನಿಂದಲೂ ಈ ಸಮಾಜವನ್ನು ತಿದ್ದಲಾಗಲಿಲ್ಲ. ವೇಮುಲನ ಮುಖ ಪ್ರತಿ ಬಾರಿ ನೆನೆದಾಗಲೂ , ಎಲ್ಲೋ ಬಾಪುವಿನ ನಾಡಲ್ಲಿ ಕೃಶ ದೇಹಗಳಿಂದ ರಕ್ತ ಒಸರಿದಾಗಲೂ , ಮತ್ತೆಲ್ಲೋ ಅವಳ ತಿಂದುಂಡ ದೇಹಕ್ಕೆ ಬಲವಂತದ ಬೆಂಕಿ ಹಚ್ಚಿದಾಗಲೂ […]

ಕಾವ್ಯಯಾನ

ಕೊರತೆ ಜ್ಯೋತಿ ಡಿ.ಬೊಮ್ಮಾ ಧರ್ಮ ದೇವರುಗಳೆಲ್ಲ ಕಿರುಚಾಟದ ಸರಕುಗಳಾದವು.. ಒಬ್ಬರ ಮೇಲೊಬ್ಬರು ಆರೋಪಿಸಿಕೊಳ್ಳಲಿರುವ ಕಚ್ಚಾ ವಸ್ತುಗಳಾದವು.. ಜಾತಿಯ ಹೆಸರಲ್ಲಿ ರಂಪಾಟವೆಬ್ಬಿಸುವ ಕ್ಷುಲ್ಲಕ ಕಾರಣಗಳಾಗಿರುವವು.. ಈ ವಿಷಯಗಳೆ ಈಗ ಪ್ರಚಲಿತ ವಿದ್ಯಾಮಾನವಾಗಿರುವವು.. ಮನುಷ್ಯರ ಮನಸ್ಸುಗಳ ಮದ್ಯ ಗೋಡೆಗಳೆದ್ದವು ಬಣ್ಣಗಳು ಹಗೆ ಸಾಧಿಸುವ ಸಾಧನಗಳಾದವು ದೇಶ ಗಡಿಗಳು ಇವುಗಳಡಿ ನರಳಾಡಿದವು ಮನುಷ್ಯರೆಲ್ಲ ಮುಖವಾಡಗಳಡಿ ಬಳಲುವ ಚಮರಗೀತೆಗಳಾದರು.. ಆರಂಭ ಎಲ್ಲಿಂದ. .ಅಂತ್ಯ ಯಾವದು.. ಗೊತು ಗುರಿಯಿಲ್ಲದ ವಿಚಾರ ಧಾರೆಗಳು.. ಒಬ್ಬರ ವಾದ ಮತ್ತೊಬ್ಬರು ಒಪ್ಪಬಾರದೆಂಬ ಹಠ ಪ್ರತಿಯೊಬ್ಬರಲ್ಲೂ.‌. ಈಗ ಮಂದಿರ ಮಜ್ಜಿದ […]

ಕಾವ್ಯಯಾನ

ನೀನಿಲ್ಲದ ಈ ಹೊತ್ತು ಬಿದಲೋಟಿ ರಂಗನಾಥ್ ದೇಶ ಸುಡುವ ಕಣ್ಣುಗಳ ನಡುವೆ ನಿನ್ನ ಹೆಜ್ಜೆಗಳ ಸವಾರಿ ಹೋಗುತ್ತಲೇ ಇದೆ ಬಿಸಿಲು ಬೇಗೆಗೆ ಸೊಪ್ಪಾಕದೆ ಬರೆದ ಸಂವಿಧಾನ ಕರುಳು ನೋಯುತ್ತಿದೆ ಸೂಜಿಗೆ ದಾರ ಸೇರಿಸಿ ನಾಟಾಕುವ ಕೈಗಳಿಗೆ ಹೆದರಿ ನಿನ್ನುಸಿರನು ಸೇರಿಸಿ ಬರೆದ ಬೇರು ಸಂವಿಧಾನದಲಿ ನಿನ್ನ ನಿನ್ನವರ ಕನಸುಗಳು ಆಯಾಸವಿಲ್ಲದೆ ಆಡುತ್ತಿದ್ದವು ಆದರೇ ಕತ್ತರಿ ತೋರಿಸುತ್ತಲೇ ಇವೆ ಹಿಡಿಗಾತ್ರದ ಮನಸುಗಳು ಬರೆದ ಸಂವಿಧಾನದ ಪುಟಗಳ ಚೂರು ಮಾಡಲು ಬೆವರಲೇ ಬೆಂದ ನಿನ್ನ ಜನರ ಆಶಾಗೋಪುರಕೆ ನೀನೆ ಬೇಲುದಾರ […]

ಕಾವ್ಯಯಾನ

ಮೂಕ ಭಾರತದ ನಾಯಕ ನಾಗರಾಜ ಹರಪನಹಳ್ಳಿ ಅಂಬೇಡ್ಕರ ಅಂಬೇಡ್ಕರ ದುಡಿವ ಜನಗಳ ಧ್ವನಿಯು ನೀನೋ || ಪಲ್ಲವಿ|| ನನ್ನ ಅವ್ವಂದಿರ ಅಕ್ಷರದ ಬೆಳಕು ನೀನೋ ಬಡ ಭಾರತದ ಬಾಬಾ ಸಾಹೇಬ ನೀನೋ ಜಾತಿವಾದಿಗಳ ಕೈಯ ಬೊಗಸೆ ಕೆಂಡ ನೀನೋ ಮನುಷ್ಯವಾದಿಗಳ ಬದುಕ ಬೆಳದಿಂಗಳೊ ನೀನೋ || ಅಂಬೇಡ್ಕರ ಅಂಬೇಡ್ಕರ ದುಡಿವ ಜನಗಳ ಧ್ವನಿಯು‌‌ ನೀನೋ|| ಬಡವರ ಪಾಲಿನ ಬೆಳಕು ನೀನೋ ಬಹುತ್ವ ಭಾರತವನ್ನು ತಿಳಿದವ ನೀನೋ ಮನುವಾದಿಗಳ ಕಣ್ಣು ತೆರೆಸಿದವ‌ ನೀನೋ ಬ್ರಿಟಿಷರ ಮನಮನ‌ ಗೆದ್ದವ ನೀನೋ […]

Back To Top