ಅಂಬೇಡ್ಕರ್ ನೀ ಅಮರ
ಎಚ್. ಶೌಕತ್ ಆಲಿ
ಭಾರತದ ಸಂವಿಧಾನ ಶಿಲ್ಪಿ ಡಾ||ಭೀಮರಾವ್ ಅಂಬೇಡ್ಕರ್
ಮಹಾಮಾನವವಾದಿ ಬಾಬಾ ಸಾಹೇಬ್ ಅಂಬೇಡ್ಕರ್
ಅಪರಿಮಿತ ಜ್ಞಾನ ಭಾರತ ದೇಶದ ಮಹಾನ್ ಮೇಧಾವಿ
ಭಾರತೀಯ ಬೌದ್ಧ ಮಹಾಸಭಾದ ಸಂಸ್ಥಾಪಕ ಅಂಬೇಡ್ಕರ್
ಸಮಾನತೆಗಾಗಿ ಶಿಕ್ಷಣಕ್ಕಾಗಿ ಸಂಘಟನೆಗಾಗಿ ನಿಂತ ಶಕ್ತಿ
ಶೋಷಣೆಗೆ ಒಳಗಾಗಿ ವರ್ಗಗಳ ದೀನ-ದಲಿತರ ದೇವಮಾನವ
ದೌರ್ಜನ್ಯ ದಬ್ಬಾಳಿಕೆ ಅವಮಾನಗಳ ವಿರುದ್ಧ ಸಿಡಿದೆದ್ದ ಭೂಪ
ನವ ಸಮಾಜದೊಂದಿಗೆ ನವಭಾರತ ನಿರ್ಮಾತೃ ವಾದ ಅಂಬೇಡ್ಕರ್
ತಿರಸ್ಕರಿಸಲ್ಪಟ್ಟ ಬಹಿಷ್ಕರಿಸಲ್ಪಟ್ಟ ಜನರ ನೋವಿಗೆ ಸ್ಪಂದಿಸಿ
ಸಮಾಜದಲ್ಲಿ ಕಳಂಕಿತರ ಕಳಿಸಿ ಮಾನವೀಯತೆ ನೀಡಿದ
ಮೌಢ್ಯ ಅಜ್ಞಾನ ಅಂಧಾನುಕರಣೆಯ ಬಾಳಿಗೆ ಅರಿವಿನ ಬೆಳಕಾಗಿ ನಿಂತ
ರಾಷ್ಟ್ರೀಯ ನಾಯಕನಾಗಿ ವಿಶ್ವದ ಜನತೆಗೆ ದಾರಿದೀಪವಾದ
ಅಲ್ಪಸಂಖ್ಯಾತರ ಅಸ್ಪೃಶ್ಯರ ಜಾತಿಗಳ ಸಮನ್ವಯಗೊಳಿಸಿದ
ಹಕ್ಕು ಮತ್ತು ಸ್ವಾತಂತ್ರ್ಯದ ಬದುಕಿಗಾಗಿ ನಿರಂತರ ಹೋರಾಡಿದ
ದೇಶ ಮತ್ತು ಸ್ವಾತಂತ್ರ್ಯದ ನಿಮ್ನ ವರ್ಗಗಳಿಗೆ ಪ್ರಾತಿನಿಧ್ಯ ಕಲ್ಪಿಸಿದ
ಜಾತಿ ಧರ್ಮ ನೀತಿ ಕರ್ತವ್ಯಗಳಲ್ಲಿ ಸೌಹಾರ್ದ ಬಾವ ಸಮರ್ಪಿಸಿದ
ಚಿಂತನೆ ಆಲೋಚನೆಯ ಮನಸ್ಸಿಗೆ ಭಾವನೆಗಳನ್ನೆಲ್ಲಾ ರಾಷ್ಟ್ರ ಪ್ರೇಮಕ್ಕಾಗಿ
ಸಿದ್ಧಾಂತ ವಿಚಾರಲಹರಿ ಭಾಷಣ ಗಳೆಲ್ಲವೂ ಜನರ ಪ್ರಗತಿಗಾಗಿ
ನೊಂದರು ಬೆಂದರು ಹಿಂಸೆ ಸಹಿಸಿದರು ಭಾರತೀಯರ ಭವಿಷ್ಯಕ್ಕಾಗಿ
ಹೋರಾಟದ ಬದುಕು ಸಾರ್ಥಕತೆ ಕಂಡಿತು ದಲಿತರ ಏಳಿಗೆಗಾಗಿ
ಸಮಗ್ರ ರಾಷ್ಟ್ರೀಯ ನಾಯಕರೆಲ್ಲರ ಜನಸಾಮಾನ್ಯರ ಹಿತ ನೀನು
ಕೋಟ್ಯಂತರ ಭಾರತೀಯರ ಮನದಾಳದ ಮೌನದ ಭಾಷೆ ನೀನು
ಸೋದರತೆ ಸಮಾನತೆ ಸೌಹಾರ್ದತೆಯ ವಿಶ್ವಾಸ ಗಳೆಲ್ಲವೂ ಇನ್ನೂ ನಿರಂತರ
ಅಂಬೇಡ್ಕರ್ ನಿನ್ನ ಸಿದ್ಧಾಂತ ನೀ ತೋರಿದ ದಾರಿ ಎಂದು ಎಂದೆಂದಿಗೂ ಅಮರ
ಮತ್ತೊಮ್ಮೆ ಹುಟ್ಟಿ ಬಾ ಈ ದೇಶದ ಅಂಬೇಡ್ಕರ್ ವಿಶ್ವಶಾಂತಿಗಾಗಿ
ದೇಶ-ವಿದೇಶಗಳಲ್ಲಿ ದ್ವೇಷದ ಜ್ವಾಲೆ ಆರಿಸಿ ಪ್ರೀತಿಯ ಬೆಸುಗೆಗಾಗಿ
ಮಾನವಕುಲದ ಮಹಾನ್ ಚೇತನವಾಗಿ ಸ್ನೇಹದ ಸೆಲೆಯಾಗಿ
ಅವತರಿಸು ಮತ್ತೊಮ್ಮೆ ಅಂಬೇಡ್ಕರ್ ವಸುಂಧರೆಯ ಮಗುವಾಗಿ
*****