ಕಾವ್ಯಯಾನ

ಅವತಾರ ಪುರುಷ

अंबेडकर की दूसरी शादी को क्यों ...

ಸಂಮ್ಮೋದ ವಾಡಪ್ಪಿ

ಕಡುಕಷ್ಟದಲಿ ಕುದ್ದು ನೊಂದು ಬೆಂದು
ಹೀಯಾಳಿಸುವವರ ಮಧ್ಯೆ ಎದ್ದು ತಾ ನಿಂದು
ಮೇಲೆದ್ದು, ಕುಕ್ಕುವ ಕಂಗಳ ನೇರದಿ ನೋಡಿ
ಅಧ್ಯಯನ ದಾರಿಯಲಿ ಬರೆದ ಭಾರತದ ಮುನ್ನುಡಿ

ಅರಿತರು ಅನೇಕ, ಅನೇಕರು ಮರೆಮಾಚಿದರು
ಬಿಡದ ಹಠಯೋಗಿ ಸದಾ ತಪದಿ ಮಿಂದು
ದಾರಿಗುಂಟ‌ ಮುಳ್ಳುಗಳು ಬದಿಗೊತ್ತುತ ನಡೆ
ಭೀಮನ ಸಾಹಸ, ಸಂವೇದನೆ ದೇಶ ಏಳಿಗೆಯಡೆ

ಅಸ್ಪೃಶ್ಯತೆಯ ನೂಕಿ ಮಹಾಸಮರವ ಸಾರಿ
ದೀನರ ಬಂಧು ಮಾತೃಭೂಮಿಯ ಮೇಲೆತ್ತುವ ಗುರಿ
ಸತತ ಚಲನೆ, ಹೊಟ್ಟೆ ಬಟ್ಟೆ ಕಟ್ಟಿ ಸಿದ್ಧಿಸಿದ ತಪವು
ಕೈಯಲಿ ಪುಸ್ತಕ, ಮಸ್ತಿಷ್ಕದಿ ಅಪಾರ ಜ್ವಾನ ಸದಾ ಏಳಿಗೆಯ ಜಪವು

ಸಂವಿಧಾನದ ಶಿಲ್ಪಿ, ರೂಪುರೇಷೆಗಳನು ರಚಿಸಿ
ಜಗದ ಮೂಲೆಗೂ ತಲುಪಿ ರಾಷ್ಟ್ರವನು‌ ಬಿಂಬಿಸಿ
ಸದಾ ಸಹಾಯಕೆ ಕೈನೀಡುತ ಜನಾಂಗವ ಮೇಲೆತ್ತಿದ ಸಿದ್ಧಿ‌ ಪುರುಷ
ಬುದ್ಧಂ‌ ಶರಣಂ ಎನ್ನುತ ಶಾಂತಿಯ ದೂತ ಇವನೇ ಅವತಾರ ಪುರುಷ

*********

Leave a Reply

Back To Top