ಅಂಬೇಡ್ಕರ್
ಮೂಗಪ್ಪ ಗಾಳೇರ
ನಾವು ಹುಟ್ಟಿದಂತೆ
ಆತನು ಹುಟ್ಟಿದ್ದ
ಯಾಕೋ ಗೊತ್ತಿಲ್ಲ
ನಮ್ಮಲ್ಲಿ ಇರದ ಬೆಳಕು
ಆತನಲ್ಲಿತ್ತು
ಬುದ್ಧನೋ, ಬಸವಣ್ಣನೋ
ಯಾರ ತದ್ಭವವೋ ಗೊತ್ತಿಲ್ಲ
ಅವರ ಮುಖ ಚರಿತ್ರೆ
ಇತನಲ್ಲಿ ಅಡಗಿತ್ತು
ಚಮ್ಮಾರನ ಕೈಯಲ್ಲಿ
ಲೇಖನಿ ನರ್ತಿಸಿದಾಗ
ಪ್ರಳಯವಾದಿತೆಂದು
ಕಾದು ಕುಳಿತ ಕೆಲವರಿಗೆ
ಭೂಮಿ ಕಂಪಿಸಿದಂತೆ ನಡುಕ ಹುಟ್ಟಿತು
ಹೌದು
ಆತ ಸೃಷ್ಟಿಸಿದ್ದು ಪ್ರಳಯವೆ
ಯಂತಹ ಪ್ರಳಯ
ಕಪ್ಪು ಮೋಡಗಳೆಲ್ಲ
ಬಿಳಿಯ ಮೋಡಗಳೊಂದಿಗೆ
ಮಿಲನ ನಡೆಸಿ
ಭೂ ಗರ್ಭದೊಳಗೆ
ಮಾನವೀಯ ಕೂಸುಗಳ ಜನನದ ಪ್ರಳಯ
ಆ ಪ್ರಳಯಗಳಿಗಾ
ಕಣ್ಣು ಮೂಗು ನಾಲಿಗೆ ಕಿವಿ ಚರ್ಮ
ಎಲ್ಲೆಂದರಲ್ಲಿ
ಉಸಿರಾಡುತ್ತಿವೆ ಹರಿದಾಡುತ್ತಿವೆ
ಎಲ್ಲೆಂದರಲ್ಲಿ ಬದುಕು ಕಟ್ಟಿಕೊಳ್ಳುತ್ತಿವೆ.
*********