ಕಾವ್ಯಯಾನ

ಕೊರತೆ

जानें- किन मुद्दों पर अंबेडकर और ...

ಜ್ಯೋತಿ ಡಿ.ಬೊಮ್ಮಾ

ಧರ್ಮ ದೇವರುಗಳೆಲ್ಲ ಕಿರುಚಾಟದ
ಸರಕುಗಳಾದವು..
ಒಬ್ಬರ ಮೇಲೊಬ್ಬರು ಆರೋಪಿಸಿಕೊಳ್ಳಲಿರುವ
ಕಚ್ಚಾ ವಸ್ತುಗಳಾದವು..
ಜಾತಿಯ ಹೆಸರಲ್ಲಿ ರಂಪಾಟವೆಬ್ಬಿಸುವ
ಕ್ಷುಲ್ಲಕ ಕಾರಣಗಳಾಗಿರುವವು..
ಈ ವಿಷಯಗಳೆ ಈಗ ಪ್ರಚಲಿತ
ವಿದ್ಯಾಮಾನವಾಗಿರುವವು..

ಮನುಷ್ಯರ ಮನಸ್ಸುಗಳ ಮದ್ಯ ಗೋಡೆಗಳೆದ್ದವು
ಬಣ್ಣಗಳು ಹಗೆ ಸಾಧಿಸುವ ಸಾಧನಗಳಾದವು
ದೇಶ ಗಡಿಗಳು ಇವುಗಳಡಿ ನರಳಾಡಿದವು
ಮನುಷ್ಯರೆಲ್ಲ ಮುಖವಾಡಗಳಡಿ ಬಳಲುವ
ಚಮರಗೀತೆಗಳಾದರು..

ಆರಂಭ ಎಲ್ಲಿಂದ. .ಅಂತ್ಯ ಯಾವದು..
ಗೊತು ಗುರಿಯಿಲ್ಲದ ವಿಚಾರ ಧಾರೆಗಳು..
ಒಬ್ಬರ ವಾದ ಮತ್ತೊಬ್ಬರು ಒಪ್ಪಬಾರದೆಂಬ
ಹಠ ಪ್ರತಿಯೊಬ್ಬರಲ್ಲೂ.‌.

ಈಗ ಮಂದಿರ ಮಜ್ಜಿದ ಎರಡರ ಗೋಡೆಗಳು
ಮೌನವಾಗಿ ಆಲಿಸುತ್ತಿರುವವು..ಎರಡರಲ್ಲೂ
ಬೆರೆಯುವದು ಕಲ್ಲು ಮಣ್ಣೆ
ಮತ್ತೆಕೆ ಕಚ್ಚಾಡುತ್ತಿರುವರವರು..!

ದೂರದ ಪ್ರತಿಮೆಗಳಲ್ಲಿ ಗಾಂಧಿ ,ಅಂಬೇಡ್ಕರ್
ನಿಶ್ಯಬ್ದ ವಾಗಿ ನಿಂತಿರುವರು..
ತಾವು ಸಾರಿದ ತತ್ವಗಳು ಇವರು
ಬಳಸಿಕೊಳ್ಳುತ್ತಿರುವ ಪರಿ ಕಂಡು..

ಬುದ್ದ ಬಸವಣ್ಣರು ಅಚ್ಚರಿಗೊಂಡಿರುವರು
ತಾವು ಜಗಕ್ಕೆ ಸಾರಿದ ಸಮಾನತೆ ಮಂತ್ರವೆ
ನಶಿಸಿ ಅಸಮಾನತೆ ಹೋಗೆ ಎಲ್ಲೆಲ್ಲೂ
ಹರಡಿರುವದು ಕಂಡು..

ಮಹಾನುಭಾವರ ತತ್ವಗಳೆಲ್ಲ
ಪುಸ್ತಕದಲ್ಲೆ ಉಳಿದುಹೋದವು..
ಅವರ ಹೆಸರುಗಳು ಮಾತ್ರ
ನಮ್ಮ ಸ್ವಂತದ್ದಾದವು..

ಬುಧ್ದ ಬಸವ ಅಂಬೇಡ್ಕರ್ ಮುಖದಲ್ಲಿ
ಈಗಲೂ ಮಂದಹಾಸವಿದೆ..
ಮನುಜ ಕುಲವೊಂದೆ ವಲಂ. ಎಂದು
ಕಾಣುವ ಉತ್ಕಟ ಬಯಕೆ ಇದೆ.

ಆದರೆ…ಆಚರಿಸುವ ನಮ್ಮಲೆ
ಎನೋ ಕೊರತೆ ಇದೆ.

*******

Leave a Reply

Back To Top