ಕಾವ್ಯಯಾನ

“ಭೀಮ”

PDF] 21 Volumes of Dr Ambedkar Books in Hindi - Velivada

ರಾಮಾಂಜಿನಯ್ಯ ವಿ.

ನನ್ನೆದೆಯ ಸಾಕ್ಷರ
ಪ್ರೀತಿ ದಯೆಯ ಮರ
ಹಕ್ಕಿ ಪಿಕ್ಕಿಗಳ ಆಸರೆಯ ಬಾಳ್
ಪಸರಿಸಿದೆ ಬಾನಗಲ ಕೇಳು.

ಖಂಡ ಅಖಂಡ
ಎದೆಗೂಡುಗಳ ನುಲಿಯುತ
ಹರಿಯುತಿದೆ ನೆಲದಗಲ
ಅರಿಯುತಿದೆ ಮನದಗಲ
ಹೆಣ್ಮನಸ್ಸಿನ ಆ ಜೀವಜಲ
“ಭೀಮ-ನನ್ನೆದೆಯ ಸಾಕ್ಷರ
ಪ್ರೀತಿ ದಯೆಯ ಮರ”.

ನಿನ್ನಡಿಯ ಕುಡಿಗಳು
ನಿನ್ನರಿದ ಪಡೆಗಳು,
ಸಾಲು ಸಾಲು ಈ ಜಗದ
ಎಲ್ಲೆ ಎಲ್ಲೂ.
ಗಡಿದಾಟಿದೆ ಮನವೊಕ್ಕಿದೆ
ನೀ ಸುರಿಸಿದ ಪ್ರೀತಿ ಗುಂಡು!
“ಭೀಮ-ನನ್ನೆದೆಯ ಸಾಕ್ಷರ
ಪ್ರೀತಿಯ ಮರ”.

ಬಿಳಿಯಕ್ಕಿ ಹಾರುತಿದೆ
ಹಸಿರ ಹೆಳ್ಗೆಯ ಹೊತ್ತು
ಶಾಂತಿ ಮಂತ್ರವ ಬಿತ್ತಿ.
ಕೇಳರಿಯೆ ಈ ಲೋಕದಲ್ಲಿ
ಭೀಮನಾದದ ಬಳ್ಳಿ
ಪಸರಿಸಲಿ ಎಲ್ಲೆಲ್ಲೂ..
“ಭೀಮ-ನನ್ನೆದೆಯ ಸಾಕ್ಷರ
ಪ್ರೀತಿ ದಯೆಯ ಮರ”.

******

Leave a Reply

Back To Top