Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ಎಲ್ಲೆಲ್ಲೋ ನುಗ್ಗುತ್ತ ಸರಿಯಾದ ಹಾದಿ ಮರೆತುಹೋಗಿದೆಬಳಸುದಾರಿಗಳ ಬಳಸುತ್ತ ನೇರದ ಹಾದಿ ಮರೆತುಹೋಗಿದೆ ಒಂದೋ ಓಲೈಕೆ,ಹಲ್ಲುಕಿರಿತ ಅಥವಾ ಕತ್ತಿಮಸೆತಮಾತು ಚರ್ಚೆಗಳಲ್ಲಿ ಸಹಜದ ಹಾದಿ ಮರೆತುಹೋಗಿದೆ ಮತಿ ಕೃತಿಗಳ ನಡುವೆ ಎಷ್ಟು ಅಂತರ ಗೆಳೆಯಎಲ್ಲವೂ ಇವೆ ಇಲ್ಲಿ, ಆತ್ಮದ ಹಾದಿ ಮರೆತುಹೋಗಿದೆ ಮಾತು ಮನಸುಗಳಲ್ಲಿ ಪೇರಿಸಿದೆ ಪೆಡಸುತನಬದುಕಿನ ಓಟದಲ್ಲಿ ಪ್ರೇಮದ ಹಾದಿ ಮರೆತುಹೋಗಿದೆ ಎದೆಯ ಪಿಸುಮಾತುಗಳಿಗೆ ಜಾಗವೆಲ್ಲಿದೆ ಗೆಳತಿನೋವಿನಲೆಗೆ ಕಿವಿಯಾದ ಹಾದಿ ಮರೆತುಹೋಗಿದೆ ವ್ಯಕ್ತದ ಮೂಲಕ ಹಾದು ಅವ್ಯಕ್ತವ ಸೇರುವುದಿತ್ತುಎಲ್ಲಿ ಆ ದನಿ,ಅದು ತೋರಿದ ಹಾದಿ […]

ಕಾವ್ಯಯಾನ

ಶಪಿತೆ ಜಯಲಕ್ಷ್ಮೀ ಎನ್ ಎಸ್ ಅವನೋ ಗಡ್ಡ ಬಿಟ್ಟ ಕಾವಿ ತೊಟ್ಟಕಾವಿರದ ಕಸುವಿರದ ತಾಪಸಿ…ಇವಳೋ ಕಾನನದ ಕಣಕಣವಕ್ಷಣ ಕ್ಷಣದ ಚಮತ್ಕಾರಗಳಆಸ್ವಾದಿಸಿ ಆನಂದಿಸುವ ಚಿರಯೌವನೆ…! ಹಾರುವ ಪತಂಗಗಳ ಚಲ್ಲಾಟಕಂಡು ಒಳಗೊಳಗೇ ಕುತೂಹಲ..ಕಣ್ಣು ಹೊರಳಿಸಲು ಜೋಡಿ ಜೋಡಿಚಿಗರೆಗಳ ಚಿನ್ನಾಟಕೆ ಮರುಳು… ಕೊಳದೊಳಗೆ ಕೊಕ್ಕಿಗೆ ಕೊಕ್ಕನಿಟ್ಟುಮುತ್ತಿಕ್ಕುವ ಜೋಡಿ ಅಂಚೆಗಳ ಸಲ್ಲಾಪ…ರೆಂಬೆ ಕೊಂಬೆಗಳಲ್ಲಿ ಜಕ್ಕವಕ್ಕಿಗಳಸ್ವಯಂ ಭಾಷೆಯ ಚಿಲಿ ಪಿಲಿ ಮಾತುಕತೆ…! ಸಂಗಾತಿಯ ಸೆಳೆವ ಮಯೂರ ನರ್ತನಕೆಮೈಮರೆವ ಮಾಯಾಂಗನೆ…ಗೋಶಾಲೆಯೊಳಗಿನ ಖರಪುಟದಸದ್ದಿಗೆ ಕಲ್ಪನೆಯ ಕಾವು……! ದುಂಬಿಗಳ ಝೇಂಕಾರಕೂಕಿವಿ ನಿಮಿರಿಸುವಳು…ಅರಗಿಳಿಗಳ ಪ್ರಣಯ ಸಂಭಾಷಣೆಯಅರಿತವಳಂತೆ ನಾಚುವಳು……! ಅವನೋ ಸಾಧನೆಯಲಿ […]

ಕಾವ್ಯಯಾನ

ಆ ಹನಿಯೊಂದು ಒಡೆದು.. ಬಿದಲೋಟಿ ರಂಗನಾಥ್ ತಣ್ಣನೆಯ ಗಾಳಿಗೆ ಮೈ ಬಿಟ್ಟು ಕೂತೆಬಿದ್ದ ಹನಿಯೊಂದು ಒಡೆದು ಮುತ್ತಾಯ್ತುಕಚಗುಳಿಯಿಟ್ಟ ಆ ಹನಿಯನ್ನು ಮತ್ತೆ ಮತ್ತೆ ಹುಡುಕಿದೆ…ಇಲ್ಲ, ಸಿಗಲೇ ಇಲ್ಲ ಇದಾದ ಮೇಲೆ ಅದೆಷ್ಟೋ ಹನಿಗಳುನನ್ನ ಮೈ ಮುಟ್ಟಿರಬಹುದುಆ ಹನಿ ಕೊಟ್ಟ ಸ್ಪರ್ಶದ ಅಮಲುನನ್ನ ಮನಸನು ಮುಟ್ಟಲೇ ಇಲ್ಲ ಮತ್ತೆ ಬೇಸಿಗೆಬಿರು ಬಿಸಿಲ ಝಳಆದರೂ ಕಾಯುವುದ ಮಾತ್ರ ಮರೆಯಲಿಲ್ಲಬರುವ ಮಳೆ ಗಾಲದ ಹೆಜ್ಜೆ ಮೂಡುವವರೆಗೆ…ಪ್ರತಿಸಲ ಮೋಡ ಗರ್ಭಕಟ್ಟಿದಾಗೆಲ್ಲಏನೋ ಪುಳಕಿತ ಕಾತರ ರೋಮಾಂಚನಆ ಹನಿಯ ಸ್ಪರ್ಶಕ್ಕಾಗಿ. ಯಾವುದಾ ಹನಿ ?ಪ್ರಶ್ನೆಯ ಬಟ್ಟೆಯಲಿ […]

ಕಾವ್ಯಯಾನ

ಗೆಳೆಯನೊಬ್ಬನ ಸ್ವಗತ ನಟರಾಜು ಎಸ್. ಎಂ. ಊರ ಮಾರಿ ಗುಡಿಯ ಮುಂದೆಆಡುತ್ತಿದ್ದ ಗೆಳೆಯರ ಜೊತೆಗೂಡಿಆಟದ ಮಧ್ಯೆ ಟೈಂ ಪಾಸ್ ಎಂದಾಗಬಸವೇಶ್ವರ ಗುಡಿಯ ಜಗುಲಿಯ ಮೇಲೆಗೆಳೆಯರ ಮಧ್ಯೆ ಕಾಲು ಇಳಿಬಿಟ್ಟು ಕುಳಿತ್ತಿದ್ದ ತಮ್ಮ ಹುಡುಗರ ಜೊತೆ ಕುಳಿತಆ ಹುಡುಗನ ನೋಡಿ‘ಯಾರ್ ಮಗಾನ್ಲಾ ನೀನುನೋಡ್ದಾ ನಿನ್ ದೈರ್ಯಾನಾ?’ಗದರಿದ್ದರು ಅವನ ಗೆಳೆಯನೊಬ್ಬನ ತಾಯಿತನ್ನ ಗೆಳೆಯರ ಜೊತೆ ಆಟವಾಡೋದು ತಪ್ಪಾ?ಅವರ ಪಕ್ಕ ಕುಳಿತುಕೊಳ್ಳೋದು ತಪ್ಪಾ?ಎಂದೆಣಿಸುತಾ ಎದ್ದು ಮೌನವಾಗಿಆ ಹುಡುಗ ಮನೆ ಕಡೆಗೆ ನಡೆದಿದ್ದ ಸ್ಕೂಲಿನಲಿ ಮಧ್ಯಾಹ್ನದ ಬಿಸಿಯೂಟಕೆಗೆಳೆಯರೊಡಗೂಡಿ ಮಿಲ್ಲಿನಲಿಗೋಧಿ ನುಚ್ಚು ಮಾಡಿಸಿದಗೋಧಿ ನುಚ್ಚಿನ […]

ಆಗಂತುಕ ಮಳೆ ಬಾಲಕೃಷ್ಣ ದೇವನಮನೆ ಧೋ… ಧೋ… ಸುರಿವಇಂಥದೇ ಧಾರಾಕಾರ ಮಳೆ ಬಂದಾಗಹೃದಯದಲಿ ನೋವು ಹೆಪ್ಪುಗಟ್ಟಿಹನಿಯುವ ಕಂಬನಿ ಮಳೆಯ ಜೊತೆ ತೋಯ್ದು ಮರೆಯಾಗುತ್ತದೆ. ಕಳೆದ ಸಲಮಳೆ ಸುರಿದು ನದಿ ಉಕ್ಕಿ,ನುಗ್ಗಿದ ಪ್ರವಾಹ ಮನೆ ಹೊಸಿಲು ದಾಟಿಹಿಂಬಾಗಿಲಲಿ ಹೊರಟಾಗಮನೆಯೊಳಗಿನ ದವಸ-ಧಾನ್ಯ,ದುಡ್ಡು-ಬಂಗಾರ, ಪಾತ್ರೆ-ಪಗಡೆ,ಅರಿವೆಯಷ್ಟೇ ಅಲ್ಲಕೊಟ್ಟಿಗೆಯ ದನಕರುಅಂಗಳದಲ್ಲಿ ಮಲಗುತ್ತಿದ್ದ ನಾಯಿಮನೆಯೊಳಗೆ ಆಡುತ್ತಿದ್ದ ಬೆಕ್ಕುಮುಂಜಾವದಲಿ ಎಬ್ಬಿಸುತ್ತಿದ್ದ ಕೋಳಿಆಸೆ ಕನಸುಗಳೆಲ್ಲವೂರಾತ್ರೋರಾತ್ರಿತೇಲಿ ಹೋಗುವಾಗ ಉಳಿದದ್ದುಗಂಜಿಕೇಂದ್ರದಲ್ಲಿದ್ದ ಜೀವ ಮಾತ್ರ! ಮೇಲ್ಛಾವಣಿ ಕುಸಿದುಅಡ್ಡಡ್ಡ ಮಲಗಿದ ಗೋಡೆಗಳ ನಡುವೆಕ್ಷಣಮಾತ್ರದಲಿ ಕೊಚ್ಚಿಹೋದ ಕನಸುವಿಲವಲ ಒದ್ದಾಡುವಾಗಭಾವನೆಗಳು ಮಡುವುಗಟ್ಟಿಉಮ್ಮಳಿಸುವ ದುಃಖಮುರಿದ ಬದುಕುಕಂಬನಿಯಾಗಿ ಮಳೆಯೊಂದಿಗೆ ಹರಿದದ್ದುಯಾರಿಗೂ […]

ಕನಸು ಪ್ರೊ.ಸುಧಾ ಹುಚ್ಚಣ್ಣವರ ಕಾಣುವ ಕನಸುಗಳಿಗೆಲ್ಲಾದಾರಿ ತೋರಿದವರು ಯಾರೋ!ಬಂದೆ ಬಿಡುವವುನಮ್ಮ ಭಾವನೆಗಳ ಅರಸಿ. ಇತಿಮಿತಿಗಳ ಅರಿವಿಲ್ಲ ಸಾಗಿದಷ್ಟು ದೂರಬಹುದೂರ ಚಲಿಸುವವು ಪ್ರಯಾಸವಿಲ್ಲದ….ಪಯಣಿಗನಂತೆ. ಹೊತ್ತು ಸಾಗುವವು ಸುಂದರ ಅತಿ ಸುಂದರ…ಕಲ್ಪನೆಗಳ ಹೂರಣವ ಪರಿಮಿತಿಯೆ ಇರದ ಬಜಾರಿನಲ್ಲಿ . ಬಯಕೆಗಳ ಭಾರವ ಹಗುರಗೊಳಿಸಲೆ೦ದೆ….. ಕಲ್ಪನಾ ಲೋಕದಲ್ಲಿ ವಿಹರಿಸುತಿಹವು ಬಂಧನದಿ ಹೊರಬಂದ ಪಕ್ಷಿಗಳಂತೆ. ಕೆಲವೊಂದು ವಾಸ್ತವಕ್ಕೆ ಹತ್ತಿರವಾಗುತ್ತಾ ಮತ್ತೆ ಕೆಲವು ಭ್ರಮೆಯಲ್ಲಿಯೇ ಉಳಿದು ಭಾವನೆಗಳ ಅರಳಿಸಿ.. ಕೆರಳಿಸಿ.. ಕನಸಿನ ಸಾಮ್ರಾಜ್ಯಕ್ಕೆ ಅಧಿಪತಿಯಾಗಿಹವು. ********

ವಿರಹಾಂತರಂಗ ಸಂತೋಷಕುಮಾರ ಅತ್ತಿವೇರಿ ನಿನ್ನ ಕಾಣದೆ ಮಾತನಾಡದೆಕ್ಷಣವೇ ಯುಗವು ಅನುದಿನಕಡಲೇ ಇರದ ಬರಿಯ ಮರಳುಬೆಂಗಾಡು ಬದುಕು ಪ್ರತಿಕ್ಷಣ ಆಲಿಸುವ ದನಿಗಳಲೆಲ್ಲ ಬರಿನಿನದೆ ಸೊಲ್ಲಿನ ಹೊಳಲಿದೆಎಲ್ಲ ಲೋಹದ ಝಣಕೃತಿಯಲುನಿನದೆ ನೂಪುರ ದನಿಯಿದೆ ‌‌‌‌‌‌‌ಕೊರಳ ಕಾರ್ಮೋಡ ಬಿಗಿದಿದೆಹೊತ್ತು ಕಂಬನಿಯಾಗರನಿನ್ನವಜ್ಞೆಯ ತಂಪು ತಾಗಿಹನಿಗೂಡಿತೆಂಬುದೆ ಬೇಸರ ಸುರಿದ ಮೇಲಿನ್ನೇನಿದೆಖಾಲಿ ಆಗಸ ಈ ಮನನಿನ್ನ ಪ್ರೀತಿಯ ಮಳೆಯಬಿಲ್ಲಿಗೆಕಾದು ಗುನುಗಿದೆ ತಾನನ ***********

ಕಾವ್ಯಯಾನ

ಅವಳು ನೆನಪಾದಾಗ ಎಂ.ಜಿ.ತಿಲೋತ್ತಮೆ ಹೀಗೆ ಕಾಡುವುದಾದರೆ ನಿತ್ಯನಿನ್ನ ಸ್ವರಗಳು ಮೊದಲುನನ್ನ ಎದೆಗೆ ಇಳಿದ ದಿನದ ಕ್ಷಣದಾಚೆಪರಿಪೂರ್ಣವಾಗಿದ್ದುಪರಿತಪಿಸುತ್ತಿದ್ದ ಸಂಗಾತಿ ನಿನ್ನ ಬಿಂಬ ಬಿಗಿದ ತಂತಿಗೆ ಬೆರಳುಗಮನಿಸದೆ ತಗುಲಿ ನುಡಿಸಿದ ರಾಗಕ್ಕೆಯಾವ ಭಾಯಾನದ ಹೋಲಿಕೆ?ಸಾಟಿಯಿಲ್ಲದ ಹಂಬಲವು ಹೆಮ್ಮರವಾಗಿನುಗ್ಗುವ ಪರಿಗೆ ಕೊನೆಯೆಲ್ಲಿ?ಅಧೃಶ್ಯವಾದ ನಿನ್ನ ಚಿತ್ತಾರಹುಡುಕುತ್ತಾ ಹೊರಟ ನಯನದ ಹಟಕ್ಕೆಕಡಿವಾಣವೇ ಬೇಡ ಮರಳೇ ಸೂಸಿ ಹಾಸಿರಲಿವರುಣನು ನಿನ್ನ ಹೆಜ್ಜೆಗೆ ಸುತ್ತುಗಟ್ಟಲಿಪಾದ ಮೂಡಿದಲೆಲ್ಲಾ ನಾ ಓಡಿ ಬರುವೆನಿನ್ನಲಿ ಸೆರೆಯಾಗುವೆ ಎಂದರೆಹುಸಿಯಾಗಿ ನಗುವುದು ಹೂ ಗಿಡ ಬಳ್ಳಿ ಮುಖಾಮುಖಿಯಾದರೆ ನಿನ್ನ ನೆರಳು ನಾನುನನ್ನ ಕಣ್ಣೊಳಗೆ ನಿನ್ನ […]

ಕಾವ್ಯಯಾನ

ಮಳೆಯ ಹಾಡು ಚೈತ್ರಾ ಶಿವಯೋಗಿಮಠ ನೆಲದ ಮೇಲೆ ಪುಟಿದುಚಿಮ್ಮುವ ಸ್ಫಟಿಕದ ಮಣಿಗಳೋ?ಬಾನು ಉಲಿಯುವ ಪ್ರೀತಿಪ್ರೇಮದ ದನಿಗಳೋ! ಹನಿ ಹನಿಯ ಪೋಣಿಸಿಹೆಣೆದ ರತ್ನ ಖಚಿತ ಹಾರವೋ?ಭುವಿಯ ಒಡಲ ಹಸಿವತಣಿಸುವ ಆಹಾರವೋ? ಮೇಘ ಮಾಲೆಯ ಒಡಲತುಂಬಿ ತುಳುಕುವ ಜೀವಕಳೆಯೋ?ಭೂರಮೆಯ ಗರ್ಭಕ್ಕಿಳಿದು ಜೀವಚಿಗುರಿಸೊ ಜೀವನ ಸೆಲೆಯೋ? ಕವಿಯ ಮನದಿ ಭಾವಸ್ಫುರಿಸುವ ದಿವ್ಯ ಸಿಂಚನವೋ?ಜೀವ-ಭಾವಗಳೆರಡು ತಣಿಸಲುಮಳೆಯ ಹಾಡಿನ ರಿಂಗಣವು ******

ಕಾವ್ಯಯಾನ

ಆವರ್ತನ ಎನ್ ಆರ್ ರೂಪಶ್ರೀ ಬದುಕೆಂದರೆ ಕನಸುಗಳ ಸಂತೆಮನಸಿನ ಭಾವನೆಗಳ ಒರತೆಕನಸಿನೂರಿನ ಪಯಣಸುಖದುಃಖಗಳ ಸಮ್ಮಿಶ್ರಣ. ಅತ್ತ ಬಂದರೂ ಬರಲಾಗದೆನಿಂತರೂ ನಿಲ್ಲಲಾಗದೆತವಕ ತಲ್ಲಣಗಳ ಮಹಾಪೂರಅಲೆಗಳ ನಡುವಿನ ಸಾಗರ. ಜೀವ ಜೀವದ ಜೀವಸೆಲೆಯಿದುನಿಲ್ಲದ ನಿರಂತರ ಪಯಣವಿದುಸಾಗುತ್ತಲೇ ಸಾಗುವ ಜಿನುಗುತ್ತಲೇ ಜಿನುಗುವ ತುಂತುರು ಮಳೆ ಹನಿಯಿದು. ಕಡಿದಂತೆ ಚಿಗುರು ಕಾಂತಿಯ ಬೆರಗುಸವಿನಯ ಭಾವದ ಸೆರಗುಮತ್ತೆ ಮತ್ತೆ ಮರುಕಳಿಸುವ ಮೆರಗು ಮೌನದಿ ಜೊತೆಗೆನ್ನ ಹುದುಗು. ಹರಿವ ಸಾಗರದಿ ಅಲೆಗಳ ನಡುವೆಪ್ರೀತಿಯ ಸಂಚಲನಬಾಳಹಾದಿಯಲ್ಲಿ ಸಾಗುತ್ತಲಿರುವಆವತ೯ನ. *****

Back To Top